ಲಚಿತ್ ಬೋರ್ಫುಕನ್ 400ನೇ ಜಯಂತಿ ವರ್ಷಾಚರಣೆ ಸಮಾರೋಪ, ಪ್ರಧಾನಿ ಮೋದಿ ಭಾಷಣ!

ಲಚಿತ್ ಬೋರ್ಫುಕನ್ 400ನೇ ಜನ್ಮ ವಾರ್ಷಿಕೋತ್ಸವದ ವರ್ಷಾವಧಿಯ ಆಚರಣೆಗಳ ಸಮಾರೋಪ ಸಮಾರಂಭ ನಾಳೆ ದೆಹಲಿ ವಿಜ್ಞಾನ ಭವನದಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಲಿದ್ದಾರೆ.

PM Modi to address closing ceremony of Lachit Barphukan 400th Birth Anniversary year long celebrations on 25th November ckm

ನವದೆಹಲಿ(ನ.24): ಅಸ್ಸಾಂ ಮೇಲೆ ನಿರಂತರವಾಗಿ ನಡೆದ ಮೊಘಲ ದಾಳಿಯನ್ನು ಹಿಮ್ಮೆಟಿಸಿ ಗುವ್ಹಾಟಿ ಸೇರಿದಂತೆ ಬಹುತೇಕ ಅಸ್ಸಾಂ ಪ್ರದೇಶಗಳನ್ನು ಮತ್ತೆ ಅಹೋಮ್ ಸಾಮ್ರಾಜ್ಯ ಕಟ್ಟಿದ ವೀರ ಕಮಾಂಡರ್ ಲಚಿತ್ ಬೋರ್ಫುಕನ್. 1668ರಿಂದ 1672ರ ವರೆಗೆ ಸತತ ಯುದ್ಧದಲ್ಲಿ ಲಚಿತ್ ಹೋರಾಟದಿಂದ ಮೊಘಲರು ಅಹೋಮ್ ಸಾಮ್ರಾಜ್ಯ ವಶಪಡಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಲಚಿತ್ ಬೋರ್ಫುಕನ್ 400ನೇ ಜಯಂತಿ ಪ್ರಯುಕ್ತ ವರ್ಷವೀಡಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದೀಗ ನವೆಂಬರ್ 25 ರಂದು  ಬೋರ್ಫುಕನ್ 400ನೇ ಜಯಂತಿ ವರ್ಷಾವಧಿಯ ಆಚರಣೆಗಳ ಸಮಾರೋಪ ಕಾರ್ಯಕ್ರಮ ನಡೆಯಲಿದೆ. 11 ಗಂಟೆಗೆ ದೆಹಲಿಯ ವಿಜ್ಞಾನ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಲಿದ್ದಾರೆ. 

ಅಜ್ಞಾತವಾಗಿ ಉಳಿದ ಸಾಧಕರು, ಹೋರಾಟಗಾರರ ಕೊಡುಗೆಯನ್ನು ಸ್ಮರಿಸಿ ಗೌರವಿಸುವ ಕಾರ್ಯವನ್ನು ಪ್ರಧಾನ ಮಂತ್ರಿಯವರು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಅದರಂತೆ 2022ನೇ ಸಾಲಿನಲ್ಲಿ ದೇವು ಲಚಿತ್‌ ಬರ್ಫುಕನ್‌ ಅವರ 400ನೇ ಜನ್ಮ ದಿನವನ್ನು ವರ್ಷವಿಡೀ ಆಚರಿಸಲಾಗುತ್ತಿದೆ. ಈ ಜನ್ಮದಿನಾಚರಣೆಯ ವಾರ್ಷಿಕ ಆಚರಣೆಯನ್ನು ಕಳೆದ ಫೆಬ್ರವರಿಯಲ್ಲಿ ಅಂದಿನ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಗುವಾಹಟಿಯಲ್ಲಿ ಉದ್ಘಾಟಿಸಿದ್ದರು. 

 

G20 Summit -2022: ಜಿ20 ಶೃಂಗದ ಯಶಸ್ಸಿಗೆ ಮೋದಿ ಕಾರಣ : ಅಮೆರಿಕ

ಲಚಿತ್‌ ಬರ್ಫುಕನ್‌ (1622ರ ನ. 24ರಿಂದ 1672 ಏ. 25) ಅಸ್ಸಾಂನ ಅಹೋಮ್‌ ಸಾಮ್ರಾಜ್ಯದ ಜನಪ್ರಿಯ ಸೇನಾ ಮುಖ್ಯಸ್ಥರಾಗಿದ್ದರು. ಮುಘಲರನ್ನು ಸೋಲಿಸುವ ಮೂಲಕ ಮೊಘಲರ ಸಾಮ್ರಾಟ ಔರಂಗಜೇಬನ ಸಾಮ್ರಾಜ್ಯ ವಿಸ್ತರಣೆಗೆ ತಡೆಯೊಡ್ಡುವಲ್ಲಿ ಯಶಸ್ವಿಯಾದ ಮಹಾನ್‌ ಯೋಧ. 1671ರಲ್ಲಿ ನಡೆದ ಸರೈಘಾಟ್‌ ಯುದ್ದದಲ್ಲಿ ಅಸ್ಸಾಮಿ ಸೈನಿಕರಿಗೆ ಸ್ಫೂರ್ತಿ ತುಂಬಿ ಹೋರಾಟ ನಡೆಸಿದ ಲಚಿತ್‌ ಬರ್ಫುಕನ್‌ ಮೊಘಲರ ಹೀನಾಯ, ಅವಮಾನಕರ ಸೋಲಿಗೆ ಕಾರಣರಾಗಿದ್ದರು. ಲಚಿತ್‌ ಬರ್ಫುಕನ್‌ ಹಾಗೂ ಅವನ ಸೈನ್ಯದ ವಿರೋಚಿತ ಹೋರಾಟವು ದೇಶದ ಪ್ರತಿರೋಧದ ಹೋರಾಟದಲ್ಲಿ ಸ್ಫೂರ್ತಿದಾಯಕ ಸೇನಾ ಸಾಹಸಗಾಥೆಯಾಗಿ ಇತಿಹಾಸದಲ್ಲಿ ಉಳಿದಿದೆ.

ಲಚಿನ್ ಜನ್ಮದಿನದ ಪ್ರಯುಕ್ತ ಇಂದು ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದರು. ಟ್ವೀಟ್ ಮೂಲಕ ಲಚಿತ್ ಸಾಹಸ, ಪರಾಕ್ರಮವನ್ನು ಕೊಂಡಿದ್ದಾರೆ.  ಲಚಿತ್‌ ದಿನದ ಶುಭಾಶಯಗಳು. ಈ ಲಚಿತ್ ದಿವಸ್ ವಿಶೇಷವಾಗಿದೆ ಏಕೆಂದರೆ ನಾವು ಮಹಾನ್ ನಾಯಕ ಲಚಿತ್ ಬೋರ್ಫುಕನ್ ಅವರ 400 ನೇ ಜನ್ಮೋತ್ಸವವನ್ನು ಆಚರಿಸುತ್ತಿದ್ದೇವೆ. ಬೋರ್ಫುಕನ್‌ ಅವರು ಅಪ್ರತಿಮ ಧೈರ್ಯವಂತರಾಗಿದ್ದರು. ಅವರು ಎಲ್ಲಕ್ಕಿಂತ ಹೆಚ್ಚಾಗಿ ಜನರ ಯೋಗಕ್ಷೇಮಕ್ಕೆ ಒತ್ತು ನೀಡಿದ ಅತ್ಯುತ್ತಮ ದೂರದೃಷ್ಟಿಯ ನಾಯಕರಾಗಿದ್ದರು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

G 20 ಅಧ್ಯಕ್ಷರಾಗಿ ಭಾರತಕ್ಕಿರುವ ಅವಕಾಶ ಹಾಗೂ ಸವಾಲುಗಳೇನು..?
 

Latest Videos
Follow Us:
Download App:
  • android
  • ios