Asianet Suvarna News Asianet Suvarna News

ಭಾರತದಲ್ಲಿ ಕೋವಿಡ್ ಸ್ಫೋಟ, ಮತ್ತೊಂದು ರಾಜ್ಯದಲ್ಲಿ ಕಠಿಣ ಮಾರ್ಗಸೂಚಿ ಪ್ರಕಟ!

  • ದೇಶದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಏರಿಕೆ
  • ಕರ್ನಾಟಕದಲ್ಲಿ ಮಾಸ್ಕ್ ಜಾರಿ ಮಾಡಿರುವ ಸರ್ಕಾರ
  • ಇದೀಗ ಪಂಜಾಬ್‌ನಲ್ಲಿ ಕೋವಿಡ್ ಮಾರ್ಗಸೂಚಿ ಪ್ರಕಟ
Mask and Social Distance mandatory Chandigarh issues new covid 19 guidelines after dectect 46 fresh cases ckm
Author
Bengaluru, First Published Jun 13, 2022, 8:16 PM IST

ಪಂಜಾಬ್(ಜೂ.13): ಕೊರೋನಾ ಪ್ರಕರಣ ಏರಿಕೆಯಾಗುತ್ತಿದೆ. ಪ್ರತಿ ದಿನ 8 ಸಾವಿರ ಹೊಸ ಪ್ರಕರಣ ಪತ್ತೆಯಾಗುತ್ತಿದೆ. ಹೀಗಾಗಿ ಒಂದೊಂದು ರಾಜ್ಯಗಳಲ್ಲಿ ಕಠಿಣ ನಿರ್ಬಂಧ ಜಾರಿಯಾಗುತ್ತಿದೆ. ಕರ್ನಾಟಕದಲ್ಲಿ ಈಗಾಗಲೇ ಮಾಸ್ಕ್ ನಿಯಮ ಜಾರಿ ಮಾಡಲಾಗಿದೆ. ಇದೀಗ ಪಂಜಾಬ್‌ನಲ್ಲಿ ಕಠಿಣ ಕೋವಿಡ್ ಮಾರ್ಗಸೂಚಿ ಪ್ರಕಟಿಸಲಾಗಿದೆ.

ಚಂಡೀಘಡದಲ್ಲಿ 4 ತಿಂಗಳ ಬಳಿಕ 46 ಪ್ರಕರಣ ಪತ್ತೆಯಾಗಿದೆ. ಇದು ಕಳೆದ ನಾಲ್ಕು ತಿಂಗಳಲ್ಲಿ ದಾಖಲಾದ ಗರಿಷ್ಠ ಪ್ರಕರಣವಾಗಿದೆ. ಹೀಗಾಗಿ ಪಂಜಾಬ್ ಆರೋಗ್ಯ ಇಲಾಖೆ ಚಂಡೀಘಡದಲ್ಲಿ ಕಠಿಣ ಕೋವಿಡ್ ಮಾರ್ಗಸೂಚಿ ಪ್ರಕಟಿಸಿದೆ. ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಇನ್ನು ಮಾಸ್ಕ್ ಧರಿಸುವಾಗ ಮೂಗು ಹಾಗೂ ಬಾಯಿ ಮುಚ್ಚುವಂತಿರಬೇಕು ಎಂದಿದೆ.

ಕೋವಿಡ್‌ನಿಂದ ಆಸ್ಪತ್ರೆ ದಾಖಲಾಗುವ ಸಂಖ್ಯೆ ಏರಿಕೆ ಬೆನ್ನಲ್ಲೇ ಕೇಂದ್ರದಿಂದ ಮಹತ್ವದ ಸೂಚನೆ!

ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಓಡಾಡದಂತೆ ಸೂಚಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಅನಗತ್ಯ ಪ್ರಯಾಣ ಮಾಡದಂತೆ ಸೂಚಿಸಲಾಗಿದೆ.

ಸ್ಯಾನಿಟೈಸೇಶನ್ ಬಳಕೆ ಮಾಡಲು ಸೂಚಿಸಲಾಗಿದೆ. ಇನ್ನು ಕೈಗಳನ್ನು ಸೋಪ್‌ನಿಂದ ತೊಳೆಯಬೇಕು ಅಥವಾ ಸ್ಯಾನಿಟೈಸೇಶನ್ ಬಳಸಲು ಸೂಚಿಸಲಾಗಿದೆ. ಜ್ವರ, ಶೀತ, ಕೆಮ್ಮು, ನೆಗಡಿ, ಮೈಕೈ ನೋವು, ಅಸ್ವಸ್ಥತೆ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣ ವೈದ್ಯರ ಸಂಪರ್ಕಿಸಲು ಸೂಚಿಸಲಾಗಿದೆ.

ವಯಸ್ಕರಿಗೆ ಕೋವಿಡ್ ಬೂಸ್ಟರ್ ಡೂಸ್ ಹಾಗೂ ಶಾಲಾ ಮಕ್ಕಳಿಗೆ ಲಸಿಕೆ ಪಡೆಯಲು ಪಂಜಾಬ್ ಆರೋಗ್ಯ ಇಲಾಖೆ ಚಂಡೀಘಡ ನಿವಾಸಿಗಳಿಗೆ ಸೂಚಿಸಿದೆ

ದಿಲ್ಲಿಯಲ್ಲಿ 735 ಕೇಸು, ಪಾಸಿಟಿವಿಟಿ ಶೇ.4.35ಕ್ಕೆ ಏರಿಕೆ
ದೆಹಲಿಯಲ್ಲಿ ಭಾನುವಾರ 735 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ದೈನಂದಿನ ಪಾಸಿಟಿವಿಟಿ ದರವು ಶೇ.4.35ಕ್ಕೆ ಏರಿಕೆಯಾಗಿದೆ. ಇದೇ ವೇಳೆಯಲ್ಲಿ 3 ಸೋಂಕಿತರು ಸಾವಿಗೀಡಾಗಿದ್ದಾರೆ. ಕಳೆದ 3 ದಿನಗಳಿಂದ ಸತತವಾಗಿ ದೆಹಲಿಯಲ್ಲಿ 600ಕ್ಕೂ ಹೆಚ್ಚು ಕೇಸುಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆಯು 2,442ಕ್ಕೆ ಏರಿಕೆಯಾಗಿದೆ. ಶನಿವಾರ 795 ಪ್ರಕರಣಗಳು ದಾಖಲಾಗಿದ್ದವು.

Karnataka Covid Cases; ರಾಜ್ಯದಲ್ಲಿ ಕೋವಿಡ್‌ 4ನೇ ಅಲೆ ಲಕ್ಷಣ ಇಲ್ಲ

ಮಹಾರಾಷ್ಟ್ರದಲ್ಲಿ ಭಾನುವಾರ 2,946 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯು 16,370ಕ್ಕೆ ಏರಿಕೆಯಾಗಿದೆ. ಇದೇ ವೇಳೆಯಲ್ಲಿ 2 ಸೋಂಕಿತರು ಸಾವಿಗೀಡಾಗಿದ್ದಾರೆ. ರಾಜಧಾನಿ ಮುಂಬೈಯಲ್ಲೇ 1,803 ಕೇಸು ದಾಖಲಾಗಿದೆ. ಶನಿವಾರ 2,922 ಕೇಸುಗಳು, 1 ಸಾವು ದಾಖಲಾಗಿದ್ದವು.

ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಕೇವಲ 10 ದಿನಕ್ಕೆ ಮೂರು ಪಟ್ಟು ಹೆಚ್ಚಳವಾಗಿವೆ. ಅಲ್ಲದೆ, ರಾಜಧಾನಿ ಬೆಂಗಳೂರಲ್ಲಿ ಮೂರೂವರೆ ತಿಂಗಳ ಬಳಿಕ ಹೊಸ ಪ್ರಕರಣಗಳು 500 ಗಡಿದಾಟಿವೆ.

ಶನಿವಾರ 562 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 352 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 3,387 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 27 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇ.2.07ರಷ್ಟುದಾಖಲಾಗಿದೆ. ಶುಕ್ರವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 5 ಸಾವಿರ ಹೆಚ್ಚಾಗಿವೆ. ಹೀಗಾಗಿ, ಹೊಸ ಪ್ರಕರಣಗಳು 37 ಏರಿಕೆಯಾಗಿವೆ. (ಶುಕ್ರವಾರ 525, ಪ್ರಕರಣಗಳು, ಸಾವು ಶೂನ್ಯ).

ಜೂ.1 ರಂದು 178 ಇದ್ದ ಹೊಸ ಪ್ರಕರಣಗಳು ಸತತ ಐದು ದಿನಗಳ ಏರಿಕೆಯಾಗುತ್ತಾ ಸಾಗಿ 562ಕ್ಕೆ ಬಂದು ತಲುಪಿವೆ. ಈ ಮೂಲಕ ಕೇವಲ 10 ದಿನಗಳಲ್ಲಿ ಹೊಸ ಪ್ರಕರಣಗಳು ಮೂರು ಪಟ್ಟಾಗಿವೆ. ಇನ್ನೊಂದೆಡೆ ರಾಜ್ಯದ ಒಟ್ಟಾರೆ ಪ್ರಕರಣಗಳ ಪೈಕಿ 545(ಶೇ.97 ರಷ್ಟು) ಬೆಂಗಳೂರು ಒಂದರಲ್ಲಿಯೇ ಪತ್ತೆಯಾಗಿವೆ. 

Follow Us:
Download App:
  • android
  • ios