ಪರೀಕ್ಷೆ ಹೆಚ್ಚಳದಿಂದಾಗಿ ಸೋಂಕು ಹೆಚ್ಚಳ ಸಾರ್ವಜನಿಕರು ಆತಂಕಪಡಬೇಕಿಲ್ಲ ರಾಜ್ಯದ ಕೊರೋನಾ ತಜ್ಞರು ಮತ್ತು ವೈದ್ಯರ ಅಭಿಪ್ರಾಯ.
ಬೆಂಗಳೂರು (ಜೂ.9:)‘ರಾಜ್ಯದಲ್ಲಿ ಕೊರೋನಾ ಸೋಂಕಿನ ಮತ್ತೊಂದು ಅಲೆಯ ಯಾವುದೇ ಲಕ್ಷಣಗಳೂ ಕಂಡುಬಂದಿಲ್ಲ. ಸೋಂಕು ಕೂಡ ತಟಸ್ಥವಾಗಿದ್ದು, ಪರೀಕ್ಷೆ ಹೆಚ್ಚಳದಿಂದಾಗಿ ಹೊಸ ಪ್ರಕರಣಗಳು ತುಸು ಹೆಚ್ಚಾಗಿವೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಒಂದಿಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಆತಂಕಪಡಬೇಕಿಲ್ಲ.’ಇದು ರಾಜ್ಯದ ಕೊರೋನಾ ತಜ್ಞರು ಮತ್ತು ವೈದ್ಯರ ಅಭಿಪ್ರಾಯ.
ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಿದ್ದು, ವರ್ಕ್ಫ್ರಂ ಹೋಂ ನೀತಿಯಿಂದ ಹೊರಬಂದು ಐಟಿ ಕಂಪನಿಗಳು ಕಚೇರಿ ಕೆಲಸ ಆರಂಭಿಸಿವೆ. ಕಳೆದ ಒಂದು ವಾರದಿಂದ ಕೊರೋನಾ ಹೊಸ ಪ್ರಕರಣಗಳು ಒಂದಿಷ್ಟುಹೆಚ್ಚಳವಾಗಿರುವುದು ಹಾಗೂ ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಜಾರಿಗೊಳಿಸಿರುವ ಕಡ್ಡಾಯ ಮಾಸ್‌್ಕ ನಿಯಮ ಜಾರಿ ಸಲಹೆಯಿಂದ ರಾಜ್ಯದಲ್ಲಿ ಮತ್ತೊಂದು ಅಲೆ ಆರಂಭವಾಯಿತು ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಆದರೆ, ತಜ್ಞರು ಮತ್ತೊಂದು ಅಲೆ, ಸೋಂಕು ಹೆಚ್ಚಳ ವಾತಾವರಣ ಇಲ್ಲ ಎಂದು ಸ್ಪಷ್ಟಪಡಿಸುತ್ತಾರೆ.
‘ಕೊರೋನಾ ಕೇಸ್, ಸೋಂಕಿತರ ಆಸ್ಪತ್ರೆ ದಾಖಲು ಪ್ರಮಾಣ, ಸೋಂಕಿತರ ಸಾವು, ಪ್ರಾಥಮಿಕ ಸಂಪರ್ಕಿತರ ಸಂಖ್ಯೆ, ಕ್ಲಸ್ಟರ್‌ಗಳ ಸಂಖ್ಯೆ ಎಲ್ಲವೂ ಒಂದೇ ಸಲ ಹೆಚ್ಚಳವಾದರೆ, ಹೊಸದೊಂದು ರೂಪಾಂತರಿ ಪತ್ತೆಯಾದಾಗ ಕೊರೋನಾ ಹೊಸ ಅಲೆ ಆರಂಭವಾಗಿದೆ ಎಂದು ಹೇಳಬಹುದು. ಆದರೆ, ರಾಜ್ಯದಲ್ಲಿ ಅಂತಹ ಪರಿಸ್ಥಿತಿ ಸದ್ಯ ಇಲ್ಲ. ಕಳೆದ ಎರಡೂವರೆ ತಿಂಗಳಿಂದ ವಂಶವಾಹಿ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಯಾವುದೇ ಹೊಸ ರೂಪಾಂತರಿ ಪತ್ತೆಯಾಗಿಲ್ಲ. ಸೋಂಕಿತರ ಸಾವು, ಆಸ್ಪತ್ರೆ ದಾಖಲಾತಿ ಕೂಡ ಕಳೆದ ಎರಡು ತಿಂಗಳಿಂದ ಬೆರಳೆಣಿಕೆಯಷ್ಟಿದೆ. ಈ ಮೂಲಕ ಮತ್ತೊಂದು ಅಲೆ ಆರಂಭವಾಗಿದೆ ಎಂದು ಹೇಳಲು ಆಗುವುದಿಲ್ಲ ಎಂದು ಹೇಳುತ್ತಾರೆ ರಾಜ್ಯ ಕೊರೋನಾ ತಾಂತ್ರಿಕ ಸಲಹಾ ತಜ್ಞರ ಸಮಿತಿ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್.
ಹೆದ್ದಾರಿ ಅಕ್ಕಪಕ್ಕ ಗಿಡ ನೆಡಿಸಿ: ಪ್ರಧಾನಿಗೆ ಮಕ್ಕಳ ಪತ್ರ
ಪರೀಕ್ಷೆ ಹೆಚ್ಚಳದಿಂದ ಸೋಂಕು ಏರಿಕೆ: ರಾಜ್ಯದಲ್ಲಿ ಏಪ್ರಿಲ್‌ನಲ್ಲಿ ಸೋಂಕು ಪರೀಕ್ಷೆಗಳು 7-8 ಸಾವಿರ ನಡೆಯುತ್ತಿದ್ದವು. ಹೊಸ ಪ್ರಕರಣಗಳು 100ಕ್ಕಿಂತ ಕಡಿಮೆ ಇದ್ದವು. ಮೇ ಕೊನೆಯ ವಾರ 16 ಸಾವಿರಕ್ಕೆ (ದುಪ್ಪಟ್ಟು ಹೆಚ್ಚಳ) ಏರಿಕೆಯಾದ ಹಿನ್ನೆಲೆ 200 ಆಸುಪಾಸಿಗೆ ಹೆಚ್ಚಳವಾದವು. ಇನ್ನು ಜೂನ್ ಮೊದಲ ವಾರ ಸರಾಸರಿ 20 ಸಾವಿರ ನಡೆಯುತ್ತಿದ್ದು, ಹೊಸ ಪ್ರಕರಣಗಳು ಕೂಡಾ 300 ಆಸುಪಾಸಿಗೆ ಏರಿಕೆಯಾಗಿವೆ. ಇನ್ನು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮುಂದಿನ ದಿನಗಳಲ್ಲಿ ಪರೀಕ್ಷೆಗಳು 30 ಸಾವಿರಕ್ಕೆ ಹೆಚ್ಚಲಿದ್ದು, ಹೊಸ ಪ್ರಕರಣ ಒಂದಿಷ್ಟುಹೆಚ್ಚಾಗಬಹುದು. ಹೀಗಾಗಿ, ಪ್ರಕರಣ ಹೆಚ್ಚಳ ಬಗ್ಗೆ ಆತಂಕ ಬೇಡ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರದ ಸೂಚನೆ ಹಿನ್ನೆಲೆ ಮುಂಜಾಗ್ರತಾ ಕ್ರಮ: ನೆರೆಯ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಹೊಸ ಪ್ರಕರಣ ದಿಢೀರ್ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರವು ಪರೀಕ್ಷೆ ಪ್ರಮಾಣ ಹೆಚ್ಚಳ ಸೇರಿದಂತೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ ನೀಡಿದೆ. ಈ ಹಿನ್ನೆಲೆ ಪರೀಕ್ಷೆ ಹೆಚ್ಚಿಸಲಾಗಿದ್ದು, ಮಾಸ್‌್ಕ ಕಡ್ಡಾಯ ನಿಯಮವನ್ನು ಕಟ್ಟುನಿಟ್ಟಿನಲ್ಲಿ ಜಾರಿಗೆ ತರಲಾಗುತ್ತಿದೆ. ಆದರೆ, ರೂಪಾಂತರಿ ಪತ್ತೆಯಾಗಿ, ಹೊಸ ಅಲೆಯ ಕಾರಣದಿಂದ ಸೋಂಕು ಹೆಚ್ಚಳವಾಗಿಲ್ಲ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
BANNERGHATTA ; ಹೋಟೆಲ್‌ನಲ್ಲಿ ರೈಲಿನ ಮೂಲಕ ಟೇಬಲ್‌ಗೆ ಊಟ!
ಸೋಂಕಿನ ತೀವ್ರತೆ ಇಲ್ಲ: ಅಂಕಿ- ಅಂಶಗಳು
- ಕಳೆದ ಒಂದು ತಿಂಗಳಲ್ಲಿ ಕೊರೋನಾ ಸಾವು - 4
- ಸಕ್ರಿಯ ಸೋಂಕಿತರು 2478. ಈ ಪೈಕಿ ಶೇ.95ರಷ್ಟು ಬೆಂಗಳೂರಿನಲ್ಲಿದ್ದಾರೆ.
- ಆಸ್ಪತ್ರೆ ದಾಖಲಾಗಿರುವ ಸೋಂಕಿತರು- 18 ಮಾತ್ರ. (ಐಸಿಯು 4 ಮಂದಿ ಮಾತ್ರ)
- ಶೂನ್ಯ ಸಕ್ರಿಯ ಪ್ರಕರಣಗಳಿರುವ ಜಿಲ್ಲೆಗಳು- 10
- ಬೆರಳೆಣಿಕೆಯಷ್ಟುಸಕ್ರಿಯ ಪ್ರಕರಣಗಳಿರುವ ಜಿಲ್ಲೆಗಳು- 13
- ಕಳೆದ ಒಂದು ತಿಂಗಳಲ್ಲಿ ಬೆಂಗಳೂರು ಹೊರತು ಪಡಿಸಿ ರಾಜ್ಯದ ಯಾವುದೇ ಜಿಲ್ಲೆಯಲ್ಲೂ 10ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿಲ್ಲ.
- ರಾಜ್ಯದಲ್ಲಿ ಮತ್ತೊಂದು ಅಲೆ ಅಥವಾ ಕೊರೋನಾ ವೈರಸ್ ರೂಪಾಂತರಿ ಕಾಣಿಸಿಕೊಂಡಿಲ್ಲ. ಪರೀಕ್ಷೆ ಹೆಚ್ಚಳದಿಂದ ಸೋಂಕು ಪ್ರಕರಣ ಹೆಚ್ಚಾಗಿವೆ. ನೆರೆಯ ರಾಜ್ಯದಲ್ಲಿ ಸೋಂಕು ಹೆಚ್ಚಳದಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಆತಂಕಕ್ಕೊಳಗಾಗುವ ಬದಲು ಸ್ವಯಂಪ್ರೇರಿತವಾಗಿ ಮಾಸ್‌್ಕ ಧರಿಸಬೇಕು.
- ಡಾ.ಎಂ.ಕೆ.ಸುದರ್ಶನ್, ಅಧ್ಯಕ್ಷ, ಕೊರೋನಾ ತಾಂತ್ರಿಕ ಸಲಹಾ ತಜ್ಞರ ಸಮಿತಿ
