Asianet Suvarna News Asianet Suvarna News

ಕೋವಿಡ್‌ನಿಂದ ಆಸ್ಪತ್ರೆ ದಾಖಲಾಗುವ ಸಂಖ್ಯೆ ಏರಿಕೆ ಬೆನ್ನಲ್ಲೇ ಕೇಂದ್ರದಿಂದ ಮಹತ್ವದ ಸೂಚನೆ!

  • ಕೊರೋನಾ ಪ್ರಕರಣ ಸಂಖ್ಯೆ ಏರಿಕೆ, ಕೇಂದ್ರದ ಖಡಕ್ ಸೂಚನೆ
  • ಕೋವಿಡ್ ಮುಗಿದಿಲ್ಲ, ಮಕ್ಕಳಿಗೆ ಲಸಿಕೆ ಹಾಕಿಸಿ ಎಂದ ಕೇಂದ್ರ
  • ಬೂಸ್ಟರ್ ಡೋಸ್ ಪಡೆದುಕೊಳ್ಳಲು ಆರೋಗ್ಯ ಸಚಿವರ ಸೂಚನೆ
Mumbai record 100 Covid 19 hospital admissions Union Health Minister Mansukh Mandaviya urge increase vaccination ckm
Author
Bengaluru, First Published Jun 13, 2022, 5:42 PM IST

ನವದೆಹಲಿ(ಜೂ.13): ಕೊರೋನಾ ವೈರಸ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಇದೀಗ ಪ್ರತಿ ದಿನ ಸರಾಸರಿ 8 ಸಾವಿರ ಕೋವಿಡ್ ಪ್ರಕರಣ ದಾಖಲಾಗುತ್ತಿದೆ. ಆದರೆ ಆತಂಕ ಹೆಚ್ಚಾಗಲು ಮತ್ತೊಂದು ಕಾರಣವಿದೆ. ಮುಂಬೈನಲ್ಲಿ ಕೋವಿಡ್‌ನಿಂದ ಆಸ್ಪತ್ರೆ ದಾಖಲಾಗುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಮಹತ್ವದ ಸೂಚನೆ ನೀಡಿದೆ. ಎಲ್ಲರೂ ಬೂಸ್ಟರ್ ಡೋಸ್ ಪಡೆದುಕೊಳ್ಳಲು ಸೂಚಿಸಿದ್ದಾರೆ.

ಮುಂಬೈನಲ್ಲಿ ಇದೀಗ ಕೋವಿಡ್ ಕಾರಣದಿಂದ ಪ್ರತಿ ದಿನ ಆಸ್ಪತ್ರೆ ದಾಖಲಾಗುವವರ ಸಂಖ್ಯೆ 100ರ ಗಡಿ ದಾಟಿದೆ. ಇದು ಆತಂಕ ಹೆಚ್ಚಾಗುವಂತೆ ಮಾಡಿದೆ. ಭಾರತದಲ್ಲಿ 2ನೇ ಅಲೆ ಬಳಿಕ 3ನೇ ಅಲೆಯಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗಿತ್ತು. ಆದರೆ ಆಸ್ಪತ್ರೆ ದಾಖಲಾಗುವವರ ಸಂಖ್ಯೆ ಏರಿಕೆಯಾಗಿರಲಿಲ್ಲ. ಹೀಗಾಗಿ ತಜ್ಞ ವೈದ್ಯರು ಯಾವುದೇ ಆತಂಕ ಪಡಬೇಕಿಲ್ಲ ಎಂದು ಅಭಯ ನೀಡಿದ್ದರು. ಆದರೆ ಇದೀಗ 4ನೇ ಅಲೆ ಭೀತಿ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆ ದಾಖಲಾಗುವ ಸಂಖ್ಯೆ ಗಣನೀಯ ಏರಿಕೆಯಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. 

ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ, ಇಂದಿನಿಂದ ಮಾಸ್ಕ್‌ ಕಡ್ಡಾಯ ಮಾಡಿದ ಸರ್ಕಾರ

4 ತಿಂಗಳ ಬಳಿಕ ಮುಂಬೈನಲ್ಲಿ 100ಕ್ಕಿಂತ ಹೆಚ್ಚು ಮಂದಿ ಕೋವಿಡ್ ಕಾರಣದಿಂದ ಒಂದೇ ದಿನ ಆಸ್ಪತ್ರೆ ದಾಖಲಾಗಿದ್ದಾರೆ. ಕೋವಿಡ್ ವಿಚಾರದಲ್ಲಿ ಮುಂಬೈ ಭಾರತಕ್ಕೆ ಏಚ್ಚರಿಕೆ ಗಂಟೆಯಾಗಿದೆ. ಕಾರಣ ಕಳೆದ ಎರಡು ಅಲೆಗಳಲ್ಲಿ ಮುಂಬೈನಲ್ಲೇ ಕೋವಿಡ್ ಸ್ಫೋಟಗೊಂಡು ಇತರೆಡೆ ಹಬ್ಬಿತ್ತು. ಮುಂಬೈನಲ್ಲಿ ಮತ್ತೆ ಕೋವಿಡ್ ಹೆಚ್ಚಳದಿಂದ ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 2,946 ಕೋವಿಡ್ ಪ್ರಕರಣ ಪತ್ತೆಯಾಗಿದೆ.

ಮುಂಬೈನಲ್ಲಿ ಆಸ್ಪತ್ರೆ ದಾಖಲಾಗುವವರ ಸಂಖ್ಯೆ, ಭಾರತದಲ್ಲಿ ಕೋವಿಡ್ ಪ್ರಕರಣ ಏರಿಕೆ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವಿಯಾ ಮಹತ್ವದ ಸೂಚನೆ ನೀಡಿದ್ದಾರೆ. ಕೊರೋನಾ ಇನ್ನೂ ಮುಗಿದಿಲ್ಲ, ಕೋವಿಡ್ ಮಾರ್ಗಸೂಚಿಗಳನ್ನು ಅಗತ್ಯವಾಗಿಯೂ ಪಾಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದಿದ್ದಾರೆ.

ಶಾಲಾ ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರಿಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ ವಯಸ್ಕರು ಬೂಸ್ಟರ್ ಡೋಸ್ ಪಡೆದುಕೊಳ್ಳಲು ಸೂಚಿಸಿದ್ದಾರೆ. 

ಕೋವಿಡ್‌ ಕೊಂಚ ಏರಿಕೆ: 8582 ಕೇಸು
ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಶನಿವಾರಕ್ಕೆ ಹೋಲಿಸಿದರೆ ಭಾನುವಾರ ಕೊಂಚ ಏರಿಕೆ ದಾಖಲಿಸಿದೆ. ಭಾನುವಾರ ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆ ಅವಧಿಯಲ್ಲಿ 8,582 ಕೋವಿಡ್‌ ಕೇಸು ದಾಖಲಾಗಿವೆ. ಆದರೆ ಸಾವಿನ ಪ್ರಮಾಣ ಕಡಿಮೆ ಇದ್ದು ಕೇವಲ 4 ಮಂದಿ ಮೃತಪಟ್ಟಿದ್ದಾರೆ.

ಮಾಸ್ಕ್‌ ಧರಿಸದ ಪ್ರಯಾಣಿಕರು ವಿಮಾನದಿಂದ ಔಟ್‌!

ಶನಿವಾರ 8329 ಪ್ರಕರಣ ದಾಖಲಾಗಿದ್ದವು. ಆದರೆ ಭಾನುವಾರ ಇದಮಕ್ಕಿಂತ ಸುಮಾರು 250ರಷ್ಟುಪ್ರಕರಣ ಮಾತ್ರ ಹೆಚ್ಚಿವೆ. ಆದರೆ ಗುಣಮುಖರ ಸಂಖ್ಯೆ ಕಡಿಮೆ ಇರುವ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆ 4,143ರಷ್ಟುಏರಿಕೆಯಾಗಿದ್ದು, ಒಟ್ಟಾರೆ ಸಕ್ರಿಯ ಕೇಸು ಸಂಖ್ಯೆ 44,513ಕ್ಕೆ ಹೆಚ್ಚಿದೆ.

ಪಾಸಿಟಿವಿಟಿ ಶೇ.2.71ಕ್ಕೇರಿಕೆ:
ಇದೇ ವೇಳೆ, ಶನಿವಾರ ಶೇ.2.41ರಷ್ಟಿದ್ದ ದೈನಂದಿನ ಪಾಸಿಟಿವಿಟಿ ದರ ಶೇ.2.71ಕ್ಕೆ ಏರಿದೆ. ವಾರದ ಪಾಟಿಟಿವಿಟಿ ಶೇ.2.02ಕ್ಕೆ ಹೆಚ್ಚಳವಾಗಿದೆ. ಇದು ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯನ್ನು ಸೂಚಿಸಿದೆ. ಚೇತರಿಕೆ ದರ 98.66ಕ್ಕೆ ಇಳಿದಿದೆ.

195 ಕೋಟಿ ಡೋಸ್‌:
ಭಾನುವಾರ ಲಸಿಕಾಕರಣ 195 ಕೋಟಿ ಡೋಸ್‌ ದಾಟಿದೆ. ದೇಶದಲ್ಲಿ ಈವರೆಗೆ ಒಟ್ಟು 195.07 ಕೋಟಿ ಡೋಸು ಕೋವಿಡ್‌ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Follow Us:
Download App:
  • android
  • ios