Asianet Suvarna News Asianet Suvarna News

ಮನೆಗೆ ನುಗ್ಗಿ ಗಲ್ವಾನ್ ಘರ್ಷಣೆಯಲ್ಲಿ ಹುತಾತ್ಮನಾದ ಯೋಧನ ತಂದೆಯನ್ನು ಧರಧರನೆ ಎಳೆದೊಯ್ದ ಪೊಲೀಸ್!

ಚೀನಾ ವಿರುದ್ಧ ಎರಡು ವರ್ಷಗಳ ಹಿಂದೆ ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆ ಯಾರೂ ಮರೆತಿಲ್ಲ. ಈ ಘರ್ಷಣೆಯಲ್ಲಿ ಮಡಿದ ಯೋಧನ ಕುಟುಂಬಕ್ಕೆ ಪೊಲೀಸರು ಕಿರುಕುಳ ನೀಡಿದ ಘಟನೆ ನಡೆದಿದೆ.ಮಧ್ಯ ರಾತ್ರಿ ಮನೆಗೆ ನುಗ್ಗಿ ಹುತಾತ್ಮ ಯೋಧನ ತಂದೆಯನ್ನು ಧರಧರನೆ ಎಳೆದೊಯ್ದಿದ್ದಾರೆ. 
 

Martyr Memorial Bihar police drag and abuse father of soldier who died in Galwan Valley clash against china at ladakh ckm
Author
First Published Feb 27, 2023, 4:23 PM IST

ಬಿಹಾರ(ಫೆ.27): ಗಲ್ವಾನ್ ಗರ್ಷಣೆಯಲ್ಲಿ ಹುತಾತ್ಮನಾದ ಯೋಧನ ಸ್ಮಾರಕವನ್ನು ಕುಟುಂಬಸ್ಥರೇ ನಿರ್ಮಾಣ ಮಾಡಿದ್ದಾರೆ.ಇದು ಭಾರಿ ವಿವಾದಕ್ಕೆ ಕಾರಣವಾಗಿದೆ. ಇಲ್ಲಸಲ್ಲದ ಸುಳ್ಳು ಕೇಸ್ ಹಾಕಿ ಹುತಾತ್ಮ ಯೋಧನ ತಂದೆಗೆ ಪೊಲೀಸರು ಕಿರುಕುಗಳ ನೀಡಿದ ಘಟನೆ ಬಿಹಾರದಲ್ಲಿ ನಡೆದಿದೆ. ಮಧ್ಯ ರಾತ್ರಿ ಹುತಾತ್ಮ ಯೋಧನ ಮನೆಗೆ ನುಗ್ಗಿದ ಬಿಹಾರ ಪೊಲೀಸರು ತಂದೆಯನ್ನು ಧರಧರನೆ ಎಳೆದೊಯ್ದಿದ್ದಾರೆ. ಇಷ್ಟೇ ಅಲ್ಲ ಜೈಲಿನಲ್ಲಿ ಕಳೆಯುವಂತೆ ಮಾಡಿದ್ದಾರೆ. ಈ ಘಟನೆಗೆ ಬಿಹಾರದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಜೂನ್ 15, 2022ರಲ್ಲಿ ಚೀನಾ ವಿರುದ್ಧ  ನಡೆದ ಗಲ್ವಾನ್ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಈ ಘರ್ಷಣೆಯಲ್ಲಿ ವೈಶಾಲಿ ಜಿಲ್ಲೆಯ ರಾಜ್ ಕಪೂರ್ ಸಿಂಗ್ ಅವರ ನಾಲ್ವರು ಪುತ್ರರ ಪೈಕಿ ಜೈ ಕಿಶೋರ್ ಸಿಂಗ್ ಹುತಾತ್ಮಾರಾಗಿದ್ದರು. ಯೋಧನ ಅಂತ್ಯಸಂಸ್ಕಾರದ ವೇಳೆ ಹಲವು ರಾಜಕಾರಣಿಗಳು ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಜೈ ಕಿಶೋರ್ ಸಿಂಗ್ ಸ್ಮಾರಕ ನಿರ್ಮಿಸುವುದಾಗಿ ಘೋಷಿಸಿದ್ದರು. ಬಳಿಕ ಎಲ್ಲರೂ ಮರೆತಿದ್ದಾರೆ. ಜಿಲ್ಲಾಡಳಿತ ಯಾವುದೇ ಆಸಕ್ತಿ ತೋರಲಿಲ್ಲ. ಹೀಗಾಗಿ ಸ್ಮಾರಕ ನಿರ್ಮಾಣ ಕನಸಾಗಿಯೇ ಉಳಿದಿತ್ತು.

 

ಗಲ್ವಾನ್ ಘರ್ಷೆಣೆಯಲ್ಲಿ ಭಾರತಕ್ಕೆ ನೆರವಾಗಿದ್ದು 1948ರಲ್ಲಿ ನಿರ್ಮಾಣವಾದ ಏರ್‌ಸ್ಟ್ರಿಪ್!

ಹುತಾತ್ಮ ಯೋಧನ ತಂದೆ ರಾಜ್ ಕಪೂರ್ ಸಿಂಗ್ ತಾವೇ ಹಣ ಹೊಂದಿಸಿ ಸ್ಮಾರಕ ನಿರ್ಮಾಣಕ್ಕೆ ಮುಂದಾದರು. ರಾಜ್ ಕಪೂರ್ ಸಿಂಗ್ ಮತ್ತೊರ್ವ ಪುತ್ರ ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಗ್ರಾಮಸ್ಥರು ಸ್ಮಾರಕ ನಿರ್ಮಾಣಕ್ಕೆ ನೆರವು ನೀಡಿದ್ದಾರೆ. ಗ್ರಾಮಸ್ಥರ ಸಲಹೆ ಮೇರೆ ಸರ್ಕಾರಿ ಜಾಗದಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ. ಇದಕ್ಕೆ ಬ್ಲಾಕ್ ಸರ್ಕಲ್ ಆಫೀಸರ್ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಪಂಚಾಯತ್ ಅಧಿಕಾರಿಗಳು ಸಮ್ಮತಿ ಸೂಚಿಸಿದ್ದಾರೆ. 

 ಇವರೆಲ್ಲರ ಆರ್ಥಿಕ ನೆರವಿನಿಂದ ತಮ್ಮ ಜಾಗಕ್ಕೆ ಹೊಂದಿಕೊಂಡಿದ್ದ ಸರ್ಕಾರಿ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಿದ್ದಾರೆ.ಆದರೆ ಇದು ನೆರಮನೆಯ ಹರಿನಾಥ್ ರಾಮ್ ಅವರ ಪಿತ್ತ ನೆತ್ತಿಗೇರಿಸಿದೆ. ಹರಿನಾಥ್ ರಾಮ್ ಅವರ ಸ್ಥಳದ ಮುಂಭಾಗದಲ್ಲಿ ಈ ಸ್ಮಾರಕ ನಿರ್ಮಾಣವಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೈಕಿಶೋರ್ ಸ್ಮಾರಕ ನಿರ್ಮಾಣ ಮಾಡಲಿ, ಆದರೆ ನಮ್ಮ ಸ್ಥಳಧ ಮುಂಭಾಗದಲ್ಲಿ ಬೇಡ ಎಂದು ತಮ್ಮ ಪ್ರಭಾವ ಬಳಸಿ ದೂರು ನೀಡಿದ್ದಾರೆ. SC/ST ಕಾಯ್ದಿ ಅಡಿ ದೂರು ನೀಡಿದ್ದಾರೆ. 

Galwan brave ಉನ್ನತ ಸೇನಾ ಹುದ್ದೆ ಏರಲು ಗಲ್ವಾನ್‌ ಹುತಾತ್ಮನ ಪತ್ನಿ ಸಜ್ಜು!

ತಂದೆ ವಿರುದ್ಧ ದೂರು ದಾಖಲಾಗಿರುವ ವಿಚಾರ ನಮಗೆ ತಿಳಿದಿಲ್ಲ. ಒಂದು ದಿನ ರಾತ್ರಿ ಮನೆಗೆ ನುಗ್ಗಿದ ಪೊಲೀಸರು ತಂದೆಯನ್ನು ಎಳೆದೊಯ್ದಿದ್ದಾರೆ. ಹಲ್ಲೆ ನಡೆಸಿದ್ದಾರೆ. ಪೊಲೀಸ್ ಠಾಣೆಗೆ ಕರೆದೊಯ್ದು ಕಿರುಕುಳ ನೀಡಿದ್ದಾರೆ. ಪ್ರತಿಮೆ ತೆರೆವುಗೊಳಿಸುವಂತೆ ಸೂಚಿಸಿ ಪೊಲೀಸರು ಈ ರೀತಿ ನಡೆದುಕೊಂಡಿದ್ದಾರೆ. ನಾನು ಕಾನೂನು ಗೌರವಿಸುವ ಹಾಗೂ ಅದರಂತೆ ನಡೆದುಕೊಳ್ಳುವ ನಾಗರೀಕರು. ನಾವು ದೇಶದ ಗಡಿಯನ್ನು ರಕ್ಷಿಸುವ ಸೇವೆಯಲ್ಲಿ ತೊಡಗಿದ್ದೇವೆ. ಇಲ್ಲಿ ನಮಗೆ ಯಾವುದೇ ಸುರಕ್ಷತೆ ಇಲ್ಲ. ಆದರೆ ನಮ್ಮ ಸೇವೆಯನ್ನು ನಾವು ಮಾಡುತ್ತಿದ್ದೇವೆ. ಆದರೆ ಮನೆಯಲ್ಲಿ ನಮ್ಮ ತಂದೆ ಹಾಗೂ ಕುಟುಂಬಸ್ಥರಿಗೂ ಇದೀಗ ರಕ್ಷಣೆ ಇಲ್ಲದಾಗಿದೆ ಎಂದು ಹುತಾತ್ಮ ಯೋಧರ ಸಹೋದರ ಭಾರತೀಯ ಸೇನೆ ಯೋಧ ನಂದಕಿಶೋರ್ ಸಿಂಗ್ ಏಷ್ಯಾನೆಟ್ ನ್ಯೂಸ್‌ಗೆ ಹೇಳಿದ್ದಾರೆ.

ಇದೊಂದು ಆಸ್ತಿ ಜಗಳ ಪ್ರಕರಣ. ಆದರೆ ತಂದೆ ವಿರುದ್ದ SC/ST ಕಾಯ್ದಿ ಅಡಿ ದೂರು ದಾಖಲಾಗಿದ್ದು ಹೇಗೆ? ಪ್ರತಿಮೆ ನಿರ್ಮಾಣಕ್ಕಾಗಿ ಪಂಚಾಯಿತಿ ನಡೆಸಿದ ಸಭೆಯಲ್ಲಿ ಎಲ್ಲೂ ತೀರ್ಮಾನವಾಗಿತ್ತು. ಇದೀಗ ಹೊಸ ವಿಚಾರ ಕೆದಕಿ ಯೋಧರ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ನಂದಕಿಶೋರ್ ಸಿಂಗ್ ಹೇಳಿದ್ದಾರೆ.

ಸ್ಮಾರಕವನ್ನು ಎಲ್ಲಿಬೇಕಾದರು ನಿರ್ಮಿಸಲಿ. ಆದರೆ ನಮ್ಮ ಸ್ಥಳದ ಮುಂಭಾಗದಲ್ಲಿ ಬೇಡ. ಗ್ರಾಮಸ್ಥರು ಎಲ್ಲರ ಒತ್ತಡ ಕಾರಣ ನಾವು ಅಂದು ಸ್ಮಾರಕ ನಿರ್ಮಾಣಕ್ಕೆ ಸಮ್ಮತಿ ನೀಡಿದ್ದೆವು. ಆದರೆ ಇದೀಗ ಸಾಧ್ಯವಿಲ್ಲ ಎಂದು ಹರಿನಾಥ್ ಪುತ್ರ ಮನೋಜ್ ಕುಮಾರ್ ಹೇಳಿದ್ದಾರೆ.

Follow Us:
Download App:
  • android
  • ios