ಲಾಕ್ಡೌನ್ ರಹಸ್ಯ ಮದ್ವೆಗೆ ಪ್ರಮಾಣ ಪತ್ರ ಸಿಗೋಲ್ಲ
- ಕೊರೋನಾ ಲಾಕ್‌ಡೌನ್‌ನಲ್ಲಿ ಸೀಕ್ರೇಟ್ ಮ್ಯಾರೇಜ್
- ಕೊರೋನಾ ಲಾಕ್ಡೌನ್ ಉಲ್ಲಂಘಿಸಿ ಮದುವೆ ಆದ ದಂಪತಿಗೆ ವಿವಾಹ ಪ್ರಮಾಣ ಪತ್ರ ನೀಡಲ್ಲ
- ಮಧ್ಯ ಪ್ರದೇಶ ಸರ್ಕಾರದಿಂದ ಮಹತ್ವದ ಘೋಷಣೆ
ಭೋಪಾಲ್( ಮೇ.28): ಕೊರೋನಾ ಭೀತಿ ನಡುವೆಯೇ ದೇಶದಲ್ಲಿ ಮದುವೆ-ಮುಂಜಿಗಳಿಗೇನೂ ಕಮ್ಮಿಯಿಲ್ಲ. ಅನೇಕ ಕಡೆ ಮದುವೆಗಳು ನಡೆದಿವೆ.
ಆದರೆ ಇದಕ್ಕೆ ಪರಿಹಾರ ಕಂಡುಕೊಂಡ ಮಧ್ಯಪ್ರದೇಶದ ಕೆಲ ಜಿಲ್ಲಾಡಳಿತಗಳು, ಕೊರೋನಾ ಲಾಕ್ಡೌನ್ ಉಲ್ಲಂಘಿಸಿ ಮದುವೆ ಆದ ದಂಪತಿಗೆ ವಿವಾಹ ಪ್ರಮಾಣ ಪತ್ರ ನೀಡಲ್ಲ ಎಂದು ಘೋಷಣೆ ಮಾಡಿವೆ.
ಚಿಕ್ಕಮಗಳೂರು: ವಧುವನ್ನು ಸ್ಟೇಜ್ ಮೇಲೆ ಬಿಟ್ಟು ಎದ್ದನೋ ಬಿದ್ದನೋ ಓಡಿದ ವರ ...
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ರಾಜ್ಯ ಸರ್ಕಾರ ಸೋಂಕು ನಿಯಂತ್ರಣಕ್ಕಾಗಿ ವಿವಾಹ ಕಾರ್ಯಕ್ರಮಗಳನ್ನು ನಿಷೇಧಿಸಿದೆ.
ಜೊತೆಗೆ ಈ ನಿರ್ಬಂಧ ಗಾಳಿಗೆ ತೂರಿ ಮದುವೆಯಾದ ಪ್ರಕರಣಗಳಲ್ಲಿ ಈವರೆಗೆ 30 ಜನ ಜೈಲು ಪಾಲಾಗಿದ್ದಾರೆ.