ಕೋಲಾರ, ಗದಗದಲ್ಲಿ ಮತ್ತೆ 5 ದಿನ ಕಠಿಣ ಲಾಕ್
- ಕೊರೋನಾ ನಿಯಂತ್ರಣಕ್ಕೆ ಹೋರಾಟ ಮಾಡುತ್ತಿರುವ ಜಿಲ್ಲಾಡಳಿತಗಳು
- ಕೋಲಾರ ಮತ್ತು ಗದಗದಲ್ಲಿ ಮತ್ತೆ ಮೇ 31ರ ವರೆಗೆ ಕಠಿಣ ಲಾಕ್‌ಡೌನ್ ವಿಸ್ತರಣೆ
- ಮೇ 27ರ ಬೆಳಗ್ಗೆ 10ರಿಂದ 31ರ ಬೆಳಗ್ಗೆ 6ರವರೆಗೆ ಕಠಿಣ ಲಾಕ್‌ಡೌನ್
ಕೋಲಾರ/ಗದಗ (ಮೇ.26): ಕೊರೋನಾ ನಿಯಂತ್ರಣಕ್ಕೆ ಹೋರಾಟ ಮಾಡುತ್ತಿರುವ ಜಿಲ್ಲಾಡಳಿತಗಳು ಕೋಲಾರ ಮತ್ತು ಗದಗದಲ್ಲಿ ಮತ್ತೆ ಮೇ 31ರ ವರೆಗೆ ಕಠಿಣ ಲಾಕ್‌ಡೌನ್ ವಿಸ್ತರಿಸಲಾಗಿದೆ.
ಈ ಜಿಲ್ಲೆಗಳಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಈ ಮೊದಲು 1 ವಾರ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು.
ಮೈಸೂರಿನ 35 ಗ್ರಾಮಗಳನ್ನು ಮುಟ್ಟದ ಕೊರೋನಾ : ಮುನ್ನೆಚ್ಚರಿಕೆಯೇ ಕಾರಣ
ಮೇ 27ರ ಬೆಳಗ್ಗೆ 10ರಿಂದ 31ರ ಬೆಳಗ್ಗೆ 6ರವರೆಗೆ ಕಠಿಣ ಲಾಕ್‌ಡೌನ್ ಇರಲಿದೆ. ಗದಗ ಜಿಲ್ಲೆಯಲ್ಲಿ 5 ದಿನ ಅಗತ್ಯ ವಸ್ತು ಸಹ ಸಿಗುವುದಿಲ್ಲ.
ರಾಜ್ಯದಲ್ಲಿಯೂ ಕೂಡ ಜೂನ್ 7ರವರೆಗೆ ಸೆಮಿ ಲಾಕ್‌ಡೌನ್ ವಿಸ್ತರಣೆಯಾಗಿದೆ. ಸದ್ಯ ಕೊರೋನಾ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿದ್ದು, ಇದೀಗ ಜಿಲ್ಲಾವಾರು ಲಾಕ್‌ಡೌನ್ ಕೂಡ ಮಾಡಲಾಗುತ್ತಿದೆ.