9 ದಿನ ಉಪವಾಸ ಸತ್ಯಾಗ್ರಹ, ಜಾರಂಗೆ ಕಿಡ್ನಿ ಸಮಸ್ಯೆ ಆರೋಗ್ಯ ಕ್ಷೀಣ
ಮರಾಠರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಪೂರ್ಣ ಪ್ರಮಾಣದ ಮೀಸಲು ನೀಡುವಂತೆ ಒತ್ತಾಯಿಸಿ 9 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಮನೋಜ್ ಜಾರಂಗೆಯ ಆರೋಗ್ಯ ಸ್ಥಿತಿ ಹದಗೆಟ್ಟಿದೆ.

ಸಂಭಾಜಿನಗರ (ಅ.4): ಮರಾಠರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಪೂರ್ಣ ಪ್ರಮಾಣದ ಮೀಸಲು ನೀಡುವಂತೆ ಒತ್ತಾಯಿಸಿ 9 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಮನೋಜ್ ಜಾರಂಗೆಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು ಇಲ್ಲಿನ ಉಲ್ಕಣಗಿರಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ‘ಜಾರಂಗೆಯವರ ಮೂತ್ರಪಿಂಡ ಹಾಗೂ ಯಕೃತ್ತು ಬೃಹದಾಕಾರಗೊಂಡಿದ್ದು, ಅವರ ದೇಹ ನೀರು ಮತ್ತು ಆಹಾರವಿಲ್ಲದೆ ನಿರ್ಜಲೀಕರಣಗೊಂಡಿದೆ. ಅವರಿಗೆ ತೀವ್ರ ನಿಘಾ ಘಟಕದ ರೀತಿ ಕೊಠಡಿಯೊಂದರಲ್ಲಿ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಂಗಾಂಗಗಳು ಹತೋಟಿಗೆ ಬರಲು ಸ್ವಲ್ಪ ಸಮಯ ಬೇಕಾಗುತ್ತದೆ’ ಎಂದು ವೈದ್ಯರು ತಿಳಿಸಿದ್ದಾರೆ.
ಸಿಎಂ, ಸಚಿವರ್ಯಾರೆಂದು ಹೈಕಮಾಂಡ್ ನಿರ್ಧರಿಸುತ್ತದೆ: ಸಚಿವ ಮಧು ಬಂಗಾರಪ್ಪ
ತನ್ನ ಉಪವಾಸವನ್ನು ಮುರಿಯುವ ಮೊದಲು ಎರಡು ತಿಂಗಳಲ್ಲಿ ಎಲ್ಲಾ ಮರಾಠರಿಗೆ ಮೀಸಲಾತಿ ನೀಡಲು ಸರ್ಕಾರ ವಿಫಲವಾದರೆ ಮುಂಬೈಯನ್ನು ಸ್ಥಬ್ಧಗೊಳಿಸುವ ಎಚ್ಚರಿಕೆ ನೀಡಿದರು.
ಕಳೆದ ವಾರದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಶಾಸಕರ ಮನೆಗಳಿಗೆ ಬೆಂಕಿ ಹಚ್ಚಿ ಸರ್ಕಾರಿ ಆಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ಜಲ್ನಾ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದ ಪ್ರಕರಣಗಳನ್ನು 15 ದಿನಗಳಲ್ಲಿ ಹಿಂಪಡೆಯಲು ಮತ್ತು ರಾಜ್ಯದ ಉಳಿದ ಭಾಗಗಳಲ್ಲಿ ಒಂದು ತಿಂಗಳಲ್ಲಿ ಹಿಂಪಡೆಯಲು ಗುರುವಾರ ನಿರ್ಧರಿಸಲಾಯಿತು.
ಚುನಾವಣೆ ಉದ್ದೇಶಕ್ಕೆ ಪಠ್ಯದಿಂದ ‘ಇಂಡಿಯಾ’ ಪದಕ್ಕೆ ಕೊಕ್: ಸಚಿವ ಮಧು ಬಂಗಾರಪ್ಪ
ಧನಂಜಯ್ ಮುಂಡೆ, ಉದಯ್ ಸಾಮಂತ್, ಸಂದೀಪನ್ ಭೂಮ್ರೆ ಮತ್ತು ಅತುಲ್ ಸೇವ್ ಸೇರಿದಂತೆ ನಾಲ್ವರು ರಾಜ್ಯ ಸಚಿವರ ನಿಯೋಗ ಮತ್ತು ಇಬ್ಬರು ನಿವೃತ್ತ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಮರೋತಿ ಗಾಯಕ್ವಾಡ್ ಮತ್ತು ಸುನೀಲ್ ಶುಕ್ರೆ ನಿಯೋಗದೊಂದಿಗೆ ಅಂತರವಾಲಿಯಲ್ಲಿ ಪ್ರತಿಭಟನಾ ಸ್ಥಳಕ್ಕೆ ತೆರಳಿ ಎರಡು ಗಂಟೆಗಳ ಕಾಲ ಪಾಟೀಲ್ ಜೊತೆಗೆ ಸಭೆ ನಡೆಸಿದ ನಂತರ ಉಪವಾಸ ಮುರಿಯಲು ನಿರ್ಧಾರ ತೆಗೆದುಕೊಳ್ಳಲಾಯಿತು.
ಬುಧವಾರದಿಂದ ಜಲ್ನಾ ಜಿಲ್ಲೆಯ ಜಾರಂಗೆ ಪಾಟೀಲ್ ಅವರ ಸಾರತಿ ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದ ಮರಾಠಾ ಮುಖಂಡರೂ ಆದ ಸ್ವತಂತ್ರ ಶಾಸಕ ಬಚ್ಚು ಕಾಡು ಕೂಡ ಪಾಟೀಲ್ ಅವರ ಮನವೊಲಿಸುವ ಪ್ರಯತ್ನದಲ್ಲಿದ್ದರು. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ರಾಯಭಾರಿಯಾಗಿ ಕಾಡು ಅಲ್ಲಿಗೆ ಹೋಗಿದ್ದರು.
ಇದು ಮುಗಿದಿಲ್ಲ ಮತ್ತು ಆಂದೋಲನ ನಿಲ್ಲುವುದಿಲ್ಲ. ಆಮರಣಾಂತ ಉಪವಾಸವನ್ನು ಮಾತ್ರ ಕೈಬಿಡಲಾಗಿದೆ. ನಾವು ಈ ಹಿಂದೆ ಸರ್ಕಾರಕ್ಕೆ 50 ದಿನಗಳನ್ನು ನೀಡಿದ್ದೆವು ಮತ್ತು ಹೆಚ್ಚುವರಿಯಾಗಿ ಎರಡು ತಿಂಗಳು ನೀಡಬಹುದು. ಇಂದು ಮರಾಠವಾಡದ ಮರಾಠಿಗರಷ್ಟೇ ಅಲ್ಲ, ರಾಜ್ಯದ ಯಾವುದೇ ಮರಾಠಿಗರು ಅಗತ್ಯ ದಾಖಲೆಗಳನ್ನು ನೀಡಿದರೆ ಕುಂಬಿ ಪ್ರಮಾಣಪತ್ರವನ್ನು ಒದಗಿಸಲಾಗುವುದು ಎಂದು ಒಪ್ಪಿಗೆ ನೀಡಲಾಗಿದೆ ಎಂದು ಸತ್ಯಾಗ್ರಹ ಮುರಿದ ಮೇಲೆ ಪಾಟೀಲ ಹೇಳಿದರು.