ಸಿಎಂ, ಸಚಿವರ್ಯಾರೆಂದು ಹೈಕಮಾಂಡ್ ನಿರ್ಧರಿಸುತ್ತದೆ: ಸಚಿವ ಮಧು ಬಂಗಾರಪ್ಪ
ಯಾವಾಗ ಯಾರು ಮುಖ್ಯಮಂತ್ರಿಗಳಾಗಬೇಕು,ಯಾರು ಸಚಿವರಾಗಬೇಕು ಎಂಬಿತ್ಯಾದಿ ವಿಷಯಗಳನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಈ ವಿಷಯದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ (ನ.04): ಯಾವಾಗ ಯಾರು ಮುಖ್ಯಮಂತ್ರಿಗಳಾಗಬೇಕು,ಯಾರು ಸಚಿವರಾಗಬೇಕು ಎಂಬಿತ್ಯಾದಿ ವಿಷಯಗಳನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಈ ವಿಷಯದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಐದು ವರ್ಷ ನಮ್ಮದೇ ಸಕಾರರ ಮತ್ತು ನಾನೇ ಮುಖ್ಯಮಂತ್ರಿ ಆಗಿರುವೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬೇರೆ ಯಾವ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು ನಮ್ಮ ಪಕ್ಷದಲ್ಲಿ ಹೈಕಮಾಂಡ್ ಇದೆ. ಎಲ್ಲವನ್ನೂ ಹೈಕಮಾಂಡ್ ನಿರ್ಧಸುತ್ತದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಕೇಂದ್ರಕ್ಕೆ ಪರಿಹಾರ ಕೇಳೋದು ಬಿಟ್ಟು ಬರ ಅಧ್ಯಯನ ಪ್ರವಾಸ ಯಾಕೆ ಬೇಕು: ಬಿಜೆಪಿ ಬರ ಅಧ್ಯಯನ ಪ್ರವಾಸ ವಿಚಾರ ಕುರಿತು ಪ್ರತಿಕ್ರಿಸಿದ ಅವರು, ಬರ ನಿರ್ವಹಣೆಗೆ ಹಣ ಬಿಡುಗಡೆ ಮಾಡಿ ಎಂದು ಕೇಂದ್ರ ಸರ್ಕಾರವನ್ನು ಹೋಗಿ ಕೇಳೋದು ಬಿಟ್ಟು, ಇಲ್ಲಿ ಇವರು ಏನು ಬರ ಅಧ್ಯಯನ ಮಾಡುವುದು ಎಂದು ಪ್ರತಿಕ್ರಿಯಿಸಿದರು. ತಮ್ಮ ವಿರುದ್ಧ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಅಸಮಾಧಾನದ ಹೇಳಿಕೆಗೆ ಉತ್ತರಿಸಿದ ಮಧು ಬಂಗಾರಪ್ಪ, ಇಂತಹ ವಿಚಾರವನ್ನೆಲ್ಲಾ ದೆಹಲಿ ನಾಯಕರು ನೋಡಿಕೊಳ್ಳುತ್ತಾರೆ ಮತ್ತು ಅವರೇ ಉತ್ತರಿಸುತ್ತಾರೆ. ನನ್ನ ಬಗ್ಗೆ ಅವರ ಅಸಮಾಧಾನ ಕುರಿತು ನನಗೆ ಏನೂ ಗೊತ್ತಿಲ್ಲ ಎಂದರು.
ಚುನಾವಣೆ ಉದ್ದೇಶಕ್ಕೆ ಪಠ್ಯದಿಂದ ‘ಇಂಡಿಯಾ’ ಪದಕ್ಕೆ ಕೊಕ್: ಸಚಿವ ಮಧು ಬಂಗಾರಪ್ಪ
ಇನ್ನು ತಾವು ಉತ್ತರ ಕನ್ನಡ ಶಾಸಕ ಭೀಮಣ್ಣನಾಯ್ಕ ಅವರನ್ನು ಕರೆದುಕೊಂಡು ಓಡಾಡುವ ಆರೋಪದ ಕುರಿತು ಆಕ್ರೋಶ ವ್ಯಕ್ತಪಡಿಸಿದ ಮಧು, ಇಲ್ಲದಿರುವ ವ್ಯಕ್ತಿಗಳ ಹೆಸರು ಹೇಳುವವರ ಯೋಗ್ಯತೆ ಏನು ಎಂಬುದು ಗೊತ್ತಾಗುತ್ತದೆ ಎಂದು ಟಾಂಗ್ ನೀಡಿದರು. ಕೆಇಎ ಪರೀಕ್ಷೆಯಲ್ಲಿ ಅಕ್ರಮ ಹಗರಣ ಕುರಿತು ಉತ್ತರಿಸಿ, ಯಾರೇ ತಪ್ಪು ಮಾಡಿದರೂ ಶಿಕ್ಷೆ ಅನುಭವಿಸುತ್ತದೆ. ಸರ್ಕಾರ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. ಪಂಚ ರಾಜ್ಯಗಳ ಚುನಾವಣೆಗೆ ನನಗೂ ಜವಾಬ್ದಾರಿ ವಹಿಸಿದ್ದು, ಆಂಧ್ರಪ್ರದೇಶ ರಾಜ್ಯದಲ್ಲಿ ಪ್ರಚಾರ ನಡೆಸಲು ಹೇಳಿದ್ದಾರೆ. ಇಲ್ಲಿನ ಕೆಲಸ ಕಾರ್ಯ ನೋಡಿಕೊಂಡು ಪ್ರಚಾರ ನಡೆಸುತ್ತೇನೆ ಎಂದರು.
ಇನ್ನು 3-4 ದಿನದಲ್ಲಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಪಟ್ಟಿ: ಡಿಕೆಶಿ
ಬಿಜೆಪಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಿ: ಬಿಜೆಪಿಯವರ ಯೋಗ್ಯತೆಗೆ ಸರ್ಕಾರ ಬೀಳಿಸುವುದು ಇರಲಿ, ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಲೇವಡಿ ಮಾಡಿದರು. ಸರ್ಕಾರ ಬೀಳಿಸುವುದಾಗಿ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವ್ಯಾವಹಾರಿಕವಾಗಿ ಏನಾದರೂ ಆಗುತ್ತದಾ ಎಂದು ಆಸೆ ಇಟ್ಟುಕೊಂಡಿದ್ದಾರೆ. ಬಿಜೆಪಿ ನಾಯಕರಿಗೆ ತಲೆ ಕೆಟ್ಟಿದೆ ಎಂದರೆ ಅವರ ಜೊತೆ ಹೋಗುವವರಿಗೂ ತಲೆ ಕೆಟ್ಟಿರುತ್ತದಾ ಎಂದು ಪ್ರಶ್ನಿಸಿದರು.