ಮನೀಷ್‌ ಸಿಸೋಡಿಯಾಗೆ ಸಿಗದ ಬೇಲ್‌, 338 ಕೋಟಿ ವರ್ಗಾವಣೆಯ ಬಗ್ಗೆ ಅನುಮಾನವಿದೆ ಎಂದ ಸುಪ್ರೀಂ !

ದೆಹಲಿ ಅಬಕಾರಿ ಹಗರಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಪಾತ್ರದ ಬಗ್ಗೆ ಸುಪ್ರೀಂ ಕೋರ್ಟ್‌ ಗಂಭೀರ ಕಳವಳ ವ್ಯಕ್ತಪಡಿಸಿದೆ. 338ಕೋಟಿ ವರ್ಗಾವಣೆ ಪ್ರಕರಣದಲ್ಲಿ ಸಿಸೋಡಿಯಾ ಪಾತ್ರ ಶಂಕಾಸ್ಪದವಾಗಿದೆ ಎಂದು ತಿಳಿಸಿದೆ.
 

Manish Sisodia liquor scam Supreme Court refused to grant bail to former Delhi Deputy CM san

ನವದೆಹಲಿ (ಅ.30):  247 ದಿನಗಳ ಕಾಲ ಜೈಲಿನಲ್ಲಿದ್ದ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಎಎಪಿ ನಾಯಕ ಸಿಸೋಡಿಯಾ ಅವರು ದೆಹಲಿ ಮದ್ಯ ನೀತಿಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತಿದ್ದಾರೆ. ಫೆಬ್ರವರಿ 26 ರಂದು ಅವರನ್ನು ತನಿಖಾಧಿಕಾರಿಗಳು ಬಂಧಿಸಿದ್ದರು. ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಎಸ್‌ವಿಎನ್ ಭಟ್ಟಿ ಅವರ ಪೀಠವು ಅಕ್ಟೋಬರ್ 30 ರಂದು ತೀರ್ಪು ನೀಡುವ ವೇಳೆ, ಹಗರಣಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ ಇನ್ನೂ ಉತ್ತರಗಳು ಬಂದಿಲ್ಲ. ಈ ಪೈಕಿ 338 ಕೋಟಿ ರೂಪಾಯಿ ವಹಿವಾಟು ನಡೆದಿದ್ದು, ಇದರಲ್ಲಿ ಸಿಸೋಡಿಯಾ ಪಾತ್ರ ಅನುಮಾನಾಸ್ಪದವಾಗಿದೆ. ಆದ್ದರಿಂದ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದೆ. 6 ರಿಂದ 8 ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ತನಿಖಾ ಸಂಸ್ಥೆಗಳಿಗೆ ನ್ಯಾಯಾಲಯ ಸೂಚಿಸಿದೆ. ವಿಚಾರಣೆಯಲ್ಲಿ ವಿಳಂಬವಾದರೆ, ಸಿಸೋಡಿಯಾ 3 ತಿಂಗಳೊಳಗೆ ಜಾಮೀನಿಗೆ ಮತ್ತೊಮ್ಮೆ ಮನವಿ ಮಾಡಬಹುದು. ಇದಕ್ಕೂ ಮುನ್ನ ಅಕ್ಟೋಬರ್ 17ರಂದು ಸರ್ವಪಕ್ಷಗಳ ವಾದವನ್ನು ಆಲಿಸಿದ ನ್ಯಾಯಾಲಯ ತೀರ್ಪನ್ನು ಅಕ್ಟೋಬರ್ 30ಕ್ಕೆ ಕಾಯ್ದಿರಿಸಿತ್ತು.

ಮನೀಷ್‌ ಸಿಸೋಡಿಯಾಗೆ ಇಲ್ಲಿಯವರೆಗೂ ಆಗಿದ್ದೇನು?
* ದೆಹಲಿ ಸರ್ಕಾರವು 2021ರ ನವೆಂಬರ್ 17 ರಂದು  ನೂತನ ಅಬಕಾರಿ ನೀತಿಯನ್ನು ಜಾರಿಗೆ ತಂದಿತು ಆದರೆ ಭ್ರಷ್ಟಾಚಾರದ ಆರೋಪಗಳ ನಡುವೆ ಸೆಪ್ಟೆಂಬರ್ 2022 ರ ಕೊನೆಯಲ್ಲಿ ಅದನ್ನು ರದ್ದುಗೊಳಿಸಿತು.

* ಫೆಬ್ರವರಿ 26 ರಂದು ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು. ಅಂದಿನಿಂದ ಅವರು ಜೈಲಿನಲ್ಲಿಯೇ ಇದ್ದಾರೆ. ಸಿಬಿಐ ಎಫ್‌ಐಆರ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ವಿಚಾರಣೆ ನಡೆಸಿದ ನಂತರ ಇಡಿ ಅವರನ್ನು ಮಾರ್ಚ್ 9 ರಂದು ಬಂಧಿಸಿತು. ಇದರ ನಂತರ, ಫೆಬ್ರವರಿ 28 ರಂದು, ಸಿಸೋಡಿಯಾ ಅವರು ದೆಹಲಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು.

*ಸಿಬಿಐ ಪ್ರಕರಣದಲ್ಲಿ ಸಿಸೋಡಿಯಾ ಅವರಿಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್ ಮೇ 30 ರಂದು ನಿರಾಕರಿಸಿತ್ತು, ಉಪಮುಖ್ಯಮಂತ್ರಿ ಮತ್ತು ಅಬಕಾರಿ ಸಚಿವರಾಗಿರುವ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿರುವ ಉನ್ನತ ವ್ಯಕ್ತಿ ಎಂದು ಹೇಳಿತ್ತು.

* ಜುಲೈ 3 ರಂದು, ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು, ಅವರ ವಿರುದ್ಧದ ಆರೋಪಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿವೆ ಎಂದು ಹೇಳಿದರು.

ಏನಿದು ಕೇಸ್?:  ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು 22 ಮಾರ್ಚ್ 2021 ರಂದು ಹೊಸ ಮದ್ಯ ನೀತಿಯನ್ನು ಘೋಷಿಸಿದರು. ಈ ನೀತಿಯಿಂದ ಮದ್ಯದ ಅಂಗಡಿಗಳು ಖಾಸಗಿಯವರ ಕೈಗೆ ಹೋಗುತ್ತವೆ ಎಂದು ಅವರು ತಿಳಿಸಿದ್ದರು. ಹೊಸ ನೀತಿಯನ್ನು ತರುವ ಉದ್ದೇಶವನ್ನು ಸಿಸೋಡಿಯಾ ಅವರನ್ನು ಕೇಳಿದಾಗ ಅವರು ಎರಡು ವಾದಗಳನ್ನು ನೀಡಿದರು. ಮೊದಲನೆಯದು, ಮಾಫಿಯಾ ಆಡಳಿತ ಕೊನೆಗೊಳ್ಳುತ್ತದೆ. ಎರಡನೆಯದು ಸರ್ಕಾರದ ಖಜಾನೆಗೆ ಹಣ ಹೆಚ್ಚಾಗುತ್ತದೆ ಎನ್ನುವುದು. ಹೊಸ ಮದ್ಯ ನೀತಿ 2021-22 ಅನ್ನು 17 ನವೆಂಬರ್ 2021 ರಂದು ಜಾರಿಗೆ ತರಲಾಯಿತು. ಇದರಿಂದಾಗಿ, ಸರ್ಕಾರವು ಮದ್ಯದ ವ್ಯವಹಾರದಿಂದ ಹೊರಬಂದಿತು ಮತ್ತು ಈ ವ್ಯವಹಾರವು ಖಾಸಗಿಯವರ ಕೈಗೆ ಹೋಯಿತು. ಹಲವು ರಿಯಾಯಿತಿಗಳಿಂದಾಗಿ ಮದ್ಯದ ಮಾರಾಟ ಭಾರಿ ಪ್ರಮಾಣದಲ್ಲಿ ನಡೆದಿದೆ. ಇದರಿಂದ ಸರ್ಕಾರದ ಖಜಾನೆಗೆ ಹಣ ಕೂಡ ಹೆಚ್ಚಾಯಿತು, ಆದರೆ ಈ ಹೊಸ ನೀತಿಗೆ ವಿರೋಧ ವ್ಯಕ್ತವಾಗಿತ್ತು.

ದೆಹಲಿ ಅಬಕಾರಿ ನೀತಿ ಹಗರಣ, ಮನೀಶ್ ಸಿಸೋಡಿಯಾ ಇತರ ಆರೋಪಿಗಳ 52 ಕೋಟಿ ರೂ ಆಸ್ತಿ ಜಪ್ತಿ!

2022ರ ಜುಲೈ 8 ರಂದು ದೆಹಲಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರು ಹೊಸ ಮದ್ಯ ನೀತಿಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿದರು. ಎಲ್ ಜಿ ವಿಕೆ ಸಕ್ಸೇನಾ ಅವರಿಗೆ ಈ ಸಂಬಂಧ ವರದಿ ಸಲ್ಲಿಸಿದರು. ಪರವಾನಗಿ ಪಡೆದ ಮದ್ಯ ವ್ಯಾಪಾರಿಗಳಿಗೆ ಸಿಸೋಡಿಯಾ ಅನಗತ್ಯ ಲಾಭಗಳನ್ನು ನೀಡಿದ್ದಾರೆ ಎಂದು ಹೇಳಲಾಗಿದೆ. ಮತ್ತೊಂದೆಡೆ, ತನ್ನ ಮತ್ತು ಸಂಪುಟದ ಅನುಮೋದನೆಯಿಲ್ಲದೆ ಮದ್ಯ ನೀತಿಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ವಿಕೆ ಸಕ್ಸೇನಾ ಹೇಳಿದ್ದರು.

ದಿಲ್ಲಿ ಮದ್ಯ ಹಗರಣ: ಇಬ್ಬರಿಗೆ ಜಾಮೀನು, ಮೇಲ್ನೋಟಕ್ಕೆ ಆರೋಪ ಸತ್ಯವಲ್ಲ ಎಂದ ದಿಲ್ಲಿ ಕೋರ್ಟ್‌

Latest Videos
Follow Us:
Download App:
  • android
  • ios