ದೆಹಲಿ ಅಬಕಾರಿ ನೀತಿ ಹಗರಣ, ಮನೀಶ್ ಸಿಸೋಡಿಯಾ ಇತರ ಆರೋಪಿಗಳ 52 ಕೋಟಿ ರೂ ಆಸ್ತಿ ಜಪ್ತಿ!
ದೆಹಲಿ ಅಕ್ರಮ ಅಬಕಾರಿ ನೀತಿಯಿಂದ ಜೈಲು ಪಾಲಾಗಿರುವ ಮಾಜಿ ಮುಖ್ಯಮಂತ್ರಿ, ಆಪ್ ನಾಯಕ ಮನೀಶ್ ಸಿಸೋಡಿಯಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇದೀಗ ಇಡಿ ಅಧಿಕಾರಿಗಳು ಸಿಸೋಡಿಯಾ ಸೇರಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಿಗಳ ಒಟ್ಟು 52 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ.
ನವದೆಹಲಿ(ಜು.07) ದೆಹಲಿ ಅಬಕಾರಿ ಹಗರಣ ಇದೀಗ ಆಪ್ ನಾಯಕ ಮನೀಶ್ ಸಿಸೋಡಿಯಾಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಜಾಮೀನಿಗಾಗಿ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲಗೊಂಡ ಬೆನ್ನಲ್ಲೇ ಮತ್ತೊಂದು ಶಾಕ್ ಎದುರಾಗಿದೆ. ಇದೀಗ ಇಡಿ ಅಧಿಕಾರಿಗಳು ಮನೀಶ್ ಸಿಸೋಡಿಯಾ ಹಾಗೂ ಅಬಕಾರಿ ನೀತಿ ಹಗರಣದ ಆರೋಪಿಗಳ ಒಟ್ಟು 52 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿದೆ. ಮನೀಶ್ ಸಿಸೋಡಿಯಾ, ಇತರ ಆರೋಪಿಗಳಾದ ಅಮನ್‌ದೀಪ್ ಸಿಂಗ್ ಧಾಲ್, ರಾಜೇಶ್ ಜೋಶಿ, ಗೌತಮ್ ಮಲ್ಹೋತ್ರ ಹಾಗೂ ಇತರರ ಆಸ್ತಿಯನ್ನು ಜಪ್ತಿಮಾಡಲಾಗಿದೆ. ಈ ಜಪ್ತಿಯಲ್ಲಿ ಮನೀಶ್ ಸಿಸೋಡಿಯಾ ಹಾಗೂ ಪತ್ನಿ ಸೀಮಾಗೆ ಸೇರಿದೆ 1 ಆಸ್ತಿ, ಬ್ಯಾಂಕ್ ಖಾತೆಯಲ್ಲಿದ್ದ 11 ಲಕ್ಷ ರೂಪಾಯಿ ಹಣ ಕೂಡ ಸೇರಿದೆ.
ದೆಹಲಿ ಅಬಕಾರಿ ನೀತಿ ಅಕ್ರಮ ಸಂಬಂಧ ಮನೀಶ್ ಸಿಸೋಡಿಯಾ ಆಪ್ತ ದಿನೇಶ ಆರೋರನನ್ನು ಇಡಿ ಅಧಿಕಾರಿಗಳು ದೆಹಲಿಯಲ್ಲಿ ಬಂಧಿಸಿದ್ದರು. ಈ ಬಂಧನ ಬಳಿಕ ಇಡಿ ಅಧಿಕಾರಿಗಳು ಆರೋಪಿಗಳ ಆಸ್ತಿ ಜಪ್ತಿ ಮಾಡಿದ್ದಾರೆ. ಇತ್ತ ಸಿಸೋಡಿಯಾ ಜಾಮೀನಿಗಾಗಿ ಪ್ರಯತ್ನ ಮುಂದುವರಿಸಿದ್ದಾರೆ. ಜಾಮೀನು ಕೇಳಿ ಸುಪ್ರೀಂ ಕೋರ್ಚ್ ಮೊರೆ ಹೋಗಿದ್ದಾರೆ. ದೆಹಲಿ ಹೈಕೋರ್ಟ್ ಸತತ ಜಾಮೀನು ನಿರಾಕರಿಸಿದ ಕಾರಣ ಇದೀಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಸುಪ್ರೀಂ ಬೆನ್ನಲ್ಲೇ ಹೈಕೋರ್ಟ್‌ನಿಂದಲೂ ಆಪ್‌ಗೆ ಶಾಕ್, ಮನೀಶ್ ಸಿಸೋಡಿಯಾಗೆ ಜಾಮೀನು ನಿರಾಕರಣೆ!
ದಿಲ್ಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೆ ಆಪ್ ಮುಖಂಡ ಮನೀಶ್ ಸಿಸೋಡಿಯಾ ಅವರ ಜಾಮೀನು ಕೋರಿಕೆಯನ್ನು ಇತ್ತೀಚೆಗೆ ದಿಲ್ಲಿ ಹೈಕೋರ್ಚ್ ತಿರಸ್ಕರಿಸಿತ್ತು. ಆರೋಪಿಯು ಪ್ರಭಾವಿಯಾಗಿರುವ ಕಾರಣ ತನಿಖಾ ಹಂತದಲ್ಲಿ ಅವರಿಗೆ ಜಾಮೀನು ನೀಡಲು ಆಗದು ಎಂದಿರುವ ಹೈಕೋರ್ಚ್, ಮನೀಶ್ ಅರ್ಜಿ ವಜಾ ಮಾಡಿತ್ತು. ಸಿಸೋಡಿಯಾ ಜಾಮೀನಿಗೆ ಇಡಿ ಮಾತ್ರವಲ್ಲ ಸಿಬಿಐ ಅಧಿಕಾರಿಗಳು ಕೂಡ ವಿರೋಧ ವ್ಯಕ್ತಪಡಿಸಿದ್ದರು.
ಮೇ ತಿಂಗಳ ಆರಂಭದಲ್ಲಿ ಇಡಿ ಅಧಿಕಾರಿಗಳು ದೆಹಲಿ ಅಬಕಾರಿ ನೀತಿ ಹಗರಣಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಈ ಪಟ್ಟಿಯಲ್ಲಿ ಮನೀಶ್ ಸಿಸೋಡಿಯಾ ಈ ಹಗರಣದ ಪ್ರಮುಖ ಸೂತ್ರಧಾರ ಎಂದಿತ್ತು. ಈ ದೋಷರೋಪ ಪಟ್ಟಿಯಲ್ಲಿ ಆಪ್‌ನ ರಾಜ್ಯಸಭಾ ಸಂಸದ ರಾಘವ್ ಛಡ್ಡಾ ಹೆಸರನ್ನು ಉಲ್ಲೇಖಿಸಿದೆ. ಜೈಲು ಸೇರಿರುವ ಆಪ್ ನಾಯಕ ಮನೀಶ್ ಸಿಸೋಡಿಯಾ ದೆಹಲಿ ಡಿಸಿಎಂ ಆಗಿದ್ದ ವೇಳೆ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ರಾಘವ ಛಡ್ಡಾ, ಅಬಕಾರಿ ಆಯುಕ್ತ ವರುಣ್ ರೂಜಮ್, ಪಂಜಾಬ್ ಅಬಕಾರಿ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ವಿಜಯ್ ನಾಯರ್ ಕೂಡ ಇದ್ದರು ಎಂಬ ಅಂಶದಲ್ಲಿ ಮಾತ್ರವೇ ಛಡ್ಡಾ ಹೆಸರನ್ನು ಚಾಜ್‌ರ್‍ಶೀಟ್‌ನಲ್ಲಿ ದಾಖಲಿಸಲಾಗಿದೆ. ಆದರ ಸದ್ಯ ಅವರನ್ನು ಆರೋಪಿ ಎಂದು ಪರಿಗಣಿಸಿಲ್ಲ. ಸಿಸೋಡಿಯಾ ಅವರನ್ನು ಕೂಡಾ ಮೊದಲ ಆರೋಪಪಟ್ಟಿಯಲ್ಲಿ ಆರೋಪಿ ಎಂದು ಹೆಸರಿಸಿರಲಿಲ್ಲ. ಆದರೆ ಹೆಚ್ಚುವರಿ ಆರೋಪ ಪಟ್ಟಿಯಲ್ಲಿ ಅವರನ್ನು ಆರೋಪಿಯನ್ನಾಗಿ ಪ್ರಸ್ತಾಪಿಸಲಾಗಿತ್ತು.
ಸಿಸೋಡಿಯಾ ನೆನೆದು ಕೇಜ್ರಿವಾಲ್ ಕಣ್ಣೀರು: 103 ದಿನದ ನಂತರ ಪತ್ನಿ ಭೇಟಿ ಮಾಡಿದ ಸಿಸೋಡಿಯಾ
ದೆಹಲಿ ಅಬಕಾರಿ ನೀತಿಯಡಿಯಲ್ಲಿ ಪರವಾನಗಿ ನೀಡಲು ಮದ್ಯ ವ್ಯಾಪಾರಿಗಳಿಂದ ಆಪ್ ನಾಯಕರು ಭಾರೀ ಪ್ರಮಾಣದಲ್ಲಿ ಲಂಚ ಸ್ವೀಕರಿಸಿದ್ದಾರೆ ಎಂಬ ಪ್ರಕರಣ ಇದಾಗಿದೆ. ಮನೀಶಿ ಸಿಸೋಡಿಯಾರನ್ನು ದೆಹಲಿ ಅಕ್ರಮ ಅಬಕಾರಿ ನೀತಿ ಹಾಗೂ ಅಕ್ರಮ ಹಣ ವರ್ಗಾವಣೆ ಸಂಬಂಧ,ಫೆ.26ರಂದು ಸಿಬಿಐ ಬಂಧಿಸಿತ್ತು. ಬಳಿಕ ಮಾ.9ರಂದು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿತ್ತು.