ಇಂಫಾಲ್(ಏ.20): ಲಾಕ್‌ಡೌನ್ ನಿಯಮ, ಆರೋಗ್ಯ ಇಲಾಖೆ ಸೂಚನೆಯನ್ನು ಪಾಲಿಸಿದ ರಾಜ್ಯಗಳಿಗೆ ಏಪ್ರಿಲ್ 20 ರಿಂದ ಲಾಕ್‌ಡೌನ್ ನಿಯಮಗಳಲ್ಲಿ ವಿನಾಯಿತಿ ಸಿಗಲಿದೆ. ಆದರೆ ದೇಶದ ಬಹುತೇಕ ರಾಜ್ಯಗಳಲ್ಲಿ ಹಲವು ರೀತಿಯಲ್ಲಿ ನಿಯಮ ಉಲ್ಲಂಘನೆಯಾಗಿದೆ. ಹೀಗಾಗಿ ಕೊರೋನಾ ಸೋಂಕಿತರು ಹೆಚ್ಚಾಗಿದ್ದಾರೆ. ಆದರೆ ಕಟ್ಟುನಿಟ್ಟಿನ ಕ್ರಮಗಳಿಂದ ಗೋವಾ ರಾಜ್ಯ ಕೊರೋನಾ ವೈರಸ್‌ನಿಂದ ಮುಕ್ತವಾಗಿದೆ. ಇದರ ಬೆನ್ನಲ್ಲೇ ಮಣಿಪುರ ಕೂಡ ಕೊರೋನಾ ವೈರಸ್‌ನಿಂದ ಮುಕ್ತವಾಗಿದೆ.

ಕೊರೋನಾವನ್ನು ಸೋಲಿಸಿದ ಗೋವಾ - ಸೋಂಕು ಮುಕ್ತಿಯತ್ತ ರಾಜ್ಯ

ಗೋವಾದಲ್ಲಿ ಒಟ್ಟು 7 ಕೊರೋನಾ ಪ್ರಕರಣ ದೃಢವಾಗಿತ್ತು. ಇಗೀಗ 7 ಮಂದಿ ಗುಣಮುಖರಾಗಿದ್ದು, ನೆಗೆಟೀವ್ ರಿಪೋರ್ಟ್ ಬಂದಿದೆ. ಇಷ್ಟೇ ಅಲ್ಲ ಇನ್ಯಾವುದೇ ಕೊರೋನಾ ಪಾಸಿಟೀವ್ ಕೇಸ್ ದಾಖಲಾಗಿಲ್ಲ. ಹೀಗಾಗಿ ಗೋವಾ ಕೊರೋನಾ ಮುಕ್ತವಾದ ಮೊದಲ ರಾಜ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೊರೋನಾ ಮುಕ್ತವಾದ 2ನೇ ರಾಜ್ಯ ಮಣಿಪುರದಲ್ಲಿ 2 ಕೊರೋನಾ ಪಾಸಿಟೀವ್ ಕೇಸ್ ಇತ್ತು. ಇದೀಗ ಇಬ್ಬರೂ ಕೂಡ ಗುಣಮುಖರಾಗಿದ್ದಾರೆ. ಇಷ್ಟೇ ಅಲ್ಲ ರಿಪೋರ್ಟ್ ನೆಗಟೀವ್.

ಕೊರೋನಾ ಬಗ್ಗೆ ಸಾರ್ವಜನಿರಿಗೆ ಮಹತ್ವದ ಮಾಹಿತಿ ಕೊಟ್ಟ ಡಾ. ಸುಧಾಕರ್..!

ಮಣಿಪುರದಲ್ಲಿ ಕೊರೋನಾ ಸೋಂಕು ತಗುಲಿಸಿಕೊಂಡ 65 ವರ್ಷದ ವ್ಯಕ್ತಿ ಸಂಪೂರ್ಣ ಗುಣಮುಖರಾಗಿ ಮನೆಗೆ ವಾಪಸ್ ಆಗಿದ್ದಾರೆ. ತಬ್ಲೀಘಿ ಜಮಾತ್ ತೆರಳಿದ್ದ ಈ ವ್ಯಕ್ತಿ ಮಣಿಪುರಕ್ಕೆ ವಾಪಸ್ ಆದ ಬಳಿಕ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಸತತ ಚಿಕಿತ್ಸೆ ಹಾಗು ಮುಂಜಾಗ್ರತ ಕ್ರಮದಿಂದ ತಬ್ಲೀಘಿ ಜಮಾತ್ ತೆರಳಿದ ವ್ಯಕ್ತಿ ಗುಣಮುಖರಾಗಿದ್ದಾರೆ. 

ಇದಕ್ಕೂ ಮೊದಲು ಇಂಗ್ಲೆಂಡ್‌ನಿಂದ ಮರಳಿದ 23 ವರ್ಷದ ಯುವತಿ ಕೊರೋನಾ ಸೋಂಕಿನಿಂದ ಬಳಲಿದ್ದರು. ಇಷ್ಟೇ ಮಾರ್ಚ್ ಎಪ್ರಿಲ್ ಆರಂಭದಲ್ಲೇ ಯುವತಿ ಗುಣಮುಖಾಗಿದ್ದರು. ಇದೀಗ ಮಣಿಪುರ ಮುಖ್ಯಮಂತ್ರಿ ಎನ್.ಬಿರೆನ್ ಸಿಂಗ್ ಕೊರೋನಾ ಮುಕ್ತ ಸಂತಸವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.

 

98 ವರ್ಷದ ಅಜ್ಜಿಯಿಂದ ಬಡವರಿಗಾಗಿ ಮಾಸ್ಕ್ ತಯಾರಿಕೆ, ಎಲ್ಲರಿಗೂ ಮಾದರಿ!.

ಮಣಿಪುರ ಕೊರೋನಾ ಮುಕ್ತ ರಾಜ್ಯ ಅನ್ನೋದನ್ನು ಹೇಳಲು ಸಂತಸವಾಗುತ್ತಿದೆ. ಸೋಂಕಿತರ ಇಬ್ಬರೂ ಸಂಪೂರ್ಣ ಗುಣಮುಖರಾಗಿದ್ದಾರೆ. ಇಷ್ಟೇ ಅಲ್ಲ ಯಾವುದೇ ಕೊರೋನಾ ಕೇಸ್ ಪತ್ತೆಯಾಗಿಲ್ಲ. ಇದು ಸಾಧ್ಯವಾಗಿರುವುದು ಸಾರ್ವಜನಿಕರ ಸಹಕಾರ, ಆರೋಗ್ಯ ಸಿಬ್ಬಂದಿಗಳ ಪ್ರಯತ್ನ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್ ಎಂದು ಟ್ವೀಟ್ ಮಾಡಿದ್ದಾರೆ.

ಗೋವಾ ಹಾಗೂ ಮಣಿಪುರ ಕರೋನಾ ಮುಕ್ತವಾದ ಕಾರಣ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಲಾಕ್‌ಡೌನ್ ನಿಯಮ ಸಡಿಲಿಕೆ ಅರ್ಹವಾಗಿದೆ. ಇದೇ ಶಿಸ್ತನ್ನು ಕರ್ನಾಟಕ ಸೇರಿದಂತೆ ಇತರ ರಾಜ್ಯದ ಜನರು ಪಾಲಿಸಿದ್ದರೆ ಇಂದಿನಿಂದ(ಏ.20) ಲಾಕ್‌ಡೌನ್ ನಿಯಮ ಸಡಿಲಿಕೆಯಾಗುತ್ತಿತ್ತು. ಆದರೆ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ, ತಬ್ಲೀಘಿಗಳ ನಾಪತ್ತೆ, ರಂಪಾಟಗಳಿಂದ ಕರ್ನಾಟಕದಲ್ಲಿ ಕೊರೋನಾ ಕೇಸ್ ಹೆಚ್ಚಾಗಿದೆ. ಹೀಗಾಗಿ ಮೇ.3ರ ಬಳಿಕ ವಿಸ್ತರಣೆಯಾದರೂ ಅಚ್ಚರಿಯಿಲ್ಲ.