ಲಿಫ್ಟ್‌ನಲ್ಲಿ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕೃತ್ಯಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ.

ನಮ್ಮ ಜನ ಪಬ್ಲಿಕ್ ಟಾಯ್ಲೆಟ್‌ಗಳಿದ್ದರೂ ಬೇಕಾಬಿಟ್ಟಿ ರಸ್ತೆ ಬದಿಯೇ ಮೂತ್ರ ವಿಸರ್ಜನೆ ಮಾಡುವುದು ಭಾರತದ ರಸ್ತೆಗಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯವಾಗಿದೆ. ನಮ್ಮ ಊರು ನಮ್ಮ ಕೇರಿ, ನಮ್ಮ ರಾಜ್ಯ ನಮ್ಮ ದೇಶ ಚೆನ್ನಾಗಿರಬೇಕು, ನೈಮರ್ಲ್ಯದಿಂದ ಕೂಡಿರಬೇಕು ಎಂದು ಕೇಂದ್ರ ಸರ್ಕಾರವೂ ಸ್ವಚ್ಛ ಭಾರತ ಯೋಜನೆಯಡಿ ಲಕ್ಷ ಲಕ್ಷ ರೂಪಾಯಿ ವೆಚ್ಚ ಮಾಡುತ್ತದೆ. ಆದರೆ ಇದೆಲ್ಲವವೂ ಕೆಲ ವ್ಯಕ್ತಿಗಳ ಬೇಜಾವಾಬ್ದಾರಿ ವರ್ತನೆಯಿಂದಾಗಿ ನೀರ ಮೇಲಿನ ಹೋಮದಂತಾಗುತ್ತಿದೆ. ಅದೇ ರೀತಿ ಇಲ್ಲೊಂದು ಕಡೆ ವ್ಯಕ್ತಿಯೊಬ್ಬ ಲಿಫ್ಟ್‌ನಲ್ಲೇ ಮೂತ್ರ ವಿಸರ್ಜನೆ ಮಾಡಿದ್ದು, ಈ ದೃಶ್ಯವೂ ಲಿಫ್ಟ್ ಒಳಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಈ ವೀಡಿಯೋ ನೋಡಿದ ಜನ ಈ ರೀತಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡಿ ನಾರಿಕ ಪ್ರಜ್ಞೆ ಇಲ್ಲದಂತೆ ವರ್ತಿಸುತ್ತಿರುವ ವ್ಯಕ್ತಿಗೆ ತೀವ್ರತರವಾದ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. 

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ @gharkekalesh ಎಂಬ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದೆ. ವೀಡಿಯೋದಲ್ಲಿ 1 ನಿಮಿಷ 3 ಸೆಕೆಂಡ್‌ನ ಈ ವೀಡಿಯೋದಲ್ಲಿ, ಇಬ್ಬರು ನೀರಿನ ಕ್ಯಾನ್ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಗಳಿಬ್ಬರು ಲಿಫ್ಟ್‌ನಿಂದ ಹೊರಬರುತ್ತಿದ್ದಂತೆ, ಲಿಫ್ಟ್‌ ಒಳಗೆ ಪ್ರವೇಶಿಸುವ ಬಿಳಿ ಬಣ್ಣದ ಶರ್ಟ್ ಧರಿಸಿರುವ ವ್ಯಕ್ತಿಯೊಬ್ಬ ಲಿಫ್ಟ್ ಬಾಗಿಲು ಹಾಕಿಕೊಳ್ಳುತ್ತಿದ್ದಂತೆ ಲಿಫ್ಟ್‌ನ ಬಾಗಿಲು ಇರುವ ಕಡೆ ಮುಖ ಮಾಡಿ ಕಾರ್ನರ್‌ನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾನೆ. ಈತನ ಈ ಕೃತ್ಯ ಪೂರ್ಣಗೊಳ್ಳುವುದಕ್ಕು ಮೊದಲೇ ಲಿಫ್ಟ್ ತೆರೆದುಕೊಂಡಿದ್ದು, ಈ ವೇಳೆ ಯಾರಾದರು ಒಳಗಡೆ ಬಂದರೆ ಎಂಬ ಭಯದಲ್ಲಿ ಬಲವಂತವಾಗಿ ಲಿಫ್ಟ್‌ನ ಬಟನ್ ಒತ್ತಿ ಲಿಫ್ಟ್ ಬಾಗಿಲನ್ನು ಈತ ಮುಚ್ಚುತ್ತಾನೆ. ನಂತರ ಕಾಲಿನಲ್ಲಿ ಮೂತ್ರವನ್ನು ಲಿಫ್ಟ್‌ ಬಾಗಿಲಿನ ಮಧ್ಯೆ ಇರುವ ರಂಧ್ರಕ್ಕೆ ಹೋಗುವಂತೆ ಮೂತ್ರವನ್ನು ದೂಡುವುದನ್ನು ಕಾಣಬಹುದಾಗಿದೆ. ಇದೇ ವೇಳೆ ಮೂತ್ರದ ತೇವಾಂಶಕ್ಕೆ ಆತನ ಕಾಲು ಜಾರುವುದನ್ನು ಕೂಡ ಕಾಣಬಹುದಾಗಿದೆ. ಆದರೆ ಆತ ಕೆಳಗೆ ಬಿದ್ದಿಲ್ಲ. 

ಸೂಪ್ ರುಚಿ ಹೆಚ್ಚಿಸಲು ಮೂತ್ರ ಮಾಡಿದ ರೆಸ್ಟೋರೆಂಟ್ ಸಿಬ್ಬಂದಿ; 4 ಸಾವಿರ ಗ್ರಾಹಕರಿಗೆ ಪರಿಹಾರ ಕೊಟ್ಟ ಮಾಲೀಕ!

ಅಲ್ಲದೇ ಹೊರಗೆ ನಿಂತಿರುವ ಆತ ಹೊರಗಿನಿಂದಲೇ ಲಿಫ್ಟ್‌ನ ಕೆಲ ಬಟನ್‌ಗಳನ್ನು ಒತ್ತಿದ್ದು, ಲಿಫ್ಟ್ ಬಾಗಿಲು ಹಾಕಿಕೊಳ್ಳುವವರೆಗೂ ಅಲ್ಲೇ ತನ್ನ ಮೊಬೈಲ್ ಫೋನ್ ಹಿಡಿದುಕೊಂಡು ನಿಂತಿರುತ್ತಾನೆ. ಈ ವೀಡಿಯೋ ನೋಡಿದ ನೆಟ್ಟಿಗರು ಆತನಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಭಾರತೀಯರಾದ ನಾವು ಯಾವುದೇ ಪ್ರಗತಿಗೆ ಅರ್ಹರಲ್ಲ. ಇಂಕೆ ಹಾಥ್ ಮೇ ಸೂನೆ ಕಾ ಕಟೋರಾ ಭಿ ರಖ್ ದೋ, ಯೇ ಉಸ್ಸೆ ಭೀಕ್ ಹೈ ಮಾಂಗೇಂಗೆ., ನೀವು ಅವರ ಕೈಯಲ್ಲಿ ಚಿನ್ನದ ಬಟ್ಟಲನ್ನು ಇಟ್ಟರೂ, ಅವರು ಅದನ್ನು ಭಿಕ್ಷೆ ಬೇಡಲು ಬಳಸುತ್ತಾರೆ ಎಂದು ಒಬ್ಬರು ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಅಸಹ್ಯಕರ ಘಟನೆ ಅವನಿಗೆ ಶಿಕ್ಷೆಯಾಗಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವ್ಯಕ್ತಿಯನ್ನು ಬಂಧಿಸಿ ಒಂದು ವರ್ಷ ಜೈಲು ಶಿಕ್ಷೆ, 10,000 ರೂ. ದಂಡ ಮತ್ತು ಲಿಫ್ಟ್ ಮತ್ತು ಅವನು ಮೂತ್ರ ವಿಸರ್ಜಿಸಿದ ನೆಲವನ್ನು ಅವನೇ ಸ್ವಚ್ಛಗೊಳಿಸುವಂತೆ ಮಾಡಬೇಕು ಎಂದು ಇನ್ನೊಬ್ಬರು ಆಗ್ರಹಿಸಿದ್ದಾರೆ.

ರಸ್ತೆಯಲ್ಲಿ ಕಾರ್‌ ನಿಲ್ಲಿಸಿ ಮೂತ್ರ ಮಾಡಿದ, ಪ್ರಶ್ನಿಸಿದ್ದಕ್ಕೆ ಮರ್ಮಾಂಗ ತೋರಿಸಿದ; BMW ಬಾಯ್‌ಗೆ ಬಲೆ ಬೀಸಿದ ಪೊಲೀಸ್‌!

ಈ ವೀಡಿಯೊ ಸಾರ್ವಜನಿಕ ಸ್ವಚ್ಛತೆ ಮತ್ತು ನಾಗರಿಕ ಪ್ರಜ್ಞೆಯ ಬಗ್ಗೆ ಮತ್ತೆ ಚರ್ಚೆಯನ್ನು ಹುಟ್ಟುಹಾಕಿದೆ, ನಗರ ಮೂಲಸೌಕರ್ಯ ಮತ್ತು ಸ್ವಚ್ಛತಾ ಜಾಗೃತಿ ಅಭಿಯಾನಗಳು ಹೆಚ್ಚುತ್ತಿದ್ದರೂ ಇಂತಹ ನಡವಳಿಕೆ ಇನ್ನೂ ಏಕೆ ಮುಂದುವರೆದಿದೆ ಎಂದು ಅನೇಕರು ಪ್ರಶ್ನಿಸಿದ್ದಾರೆ. ಕೆಲವು ಈ ವೀಡಿಯೋ ಬಳಸಿಕೊಂಡು ಅಧಿಕಾರಿಗಳು ಆ ವ್ಯಕ್ತಿಯನ್ನು ಪತ್ತೆಹಚ್ಚಿ ಸಂಬಂಧಿತ ನೈರ್ಮಲ್ಯ ಮತ್ತು ಸಾರ್ವಜನಿಕ ಉಪದ್ರವ ಕಾನೂನುಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಈ ಕೃತ್ಯ ಎಲ್ಲಿ ನಡೆದಿದೆ ಹಾಗೂ ಈಕೃತ್ಯವೆಸಗಿದ ವ್ಯಕ್ತಿಯ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ, ಆದರೆ ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿ ಬರುತ್ತಿದೆ.