Asianet Suvarna News Asianet Suvarna News

ಸಾಯಿಬಾಬಾ ದರ್ಶನ ಪಡೆಯುತ್ತಲೇ ಹೃದಯಾಘಾತದಿಂದ ಮೃತಪಟ್ಟ ಭಕ್ತ..!

ಸಾಯಿಬಾಬಾ ಭಕ್ತರಾಗಿದ್ದ ರಾಜೇಶ್‌ ಮೆಹನಿ ಪ್ರತಿ ಗುರುವಾರ ಬಾಬಾ ದರ್ಶನಕ್ಕೆ ಹೋಗುತ್ತಿದ್ದರು. ಇದೇ ರೀತಿ, ಹೃದಯಾಘಾತವಾಗಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. 

man sits to pray at madhya pradesh saibaba temple dies of heart attack ash
Author
First Published Dec 4, 2022, 3:18 PM IST

ಗುರುವಾರ ಬಂತು ಅಂದ್ರೆ ಸಾಯಿಬಾಬಾ ದೇಗುಲದಲ್ಲಿ (Sai Baba Temple) ಭಕ್ತರ  (Devotee) ಸಂಖ್ಯೆ ಹೆಚ್ಚಿರುತ್ತದೆ. ಇದೇ ರೀತಿ, ಸಾಯಿಬಾಬಾ ದೇವಸ್ಥಾನಕ್ಕೆ ಹೋಗಿದ್ದ ಭಕ್ತರೊಬ್ಬರು ಸಾಯಿಬಾಬಾ (Sai Baba) ಪ್ರಾರ್ಥಿಸುತ್ತಲೇ ಸ್ಥಳದಲ್ಲೇ ಮೃತಪಟ್ಟಿರುವ ಆಘಾತಕಾರಿ ಘಟನೆ ಗುರುವಾರ ವರದಿಯಾಗಿದೆ. ಮಧ್ಯ ಪ್ರದೇಶದ (Madhya pradesh) ಕತ್ನಿಯಲ್ಲಿ (Katni) ಸಾಯಿಬಾಬಾ ದೇಗುಲವೊಂದರಲ್ಲಿ ಪ್ರಾರ್ಥಿಸುತ್ತಲೇ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತ ವ್ಯಕ್ತಿಯನ್ನು ರಾಜೇಶ್‌ ಮೆಹನಿ ಎಂದು ಗುರುತಿಸಲಾಗಿದೆ.

ಸಾಯಿಬಾಬಾ ಭಕ್ತರಾಗಿದ್ದ ರಾಜೇಶ್‌ ಮೆಹನಿ, ದೇಗುಲದಲ್ಲಿ ಪರಿಕ್ರಮ ಮಾಡಲು ಸಾಯಿಬಾಬಾ ವಿಗ್ರಹದ ಬಳಿ ಪ್ರಾರ್ಥನೆ ಮಾಡಲೆಂದು ನೆಲದ ಮೇಲೆ ಕುಳಿತುಕೊಳ್ಳುತ್ತಾರೆ.  ಆದರೆ, ಅವರಿಗೆ ಬಳಿಕ ಎದ್ದೇಳಲು ಆಗಲೇ ಇಲ್ಲ, ಇದಕ್ಕೆ ಕಾರಣ ಅವರಿಗೆ ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ ಆಗಿದೆ (Silent Heart Attack) ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. 

ಇದನ್ನು ಓದಿ: ಛೇ ಇದೆಂತಾ ದುರಂತ.. ಅಭ್ಯಾಸ ಮಾಡುವಾಗಲೇ ನಿಂತು ಹೋಯ್ತು 23 ವರ್ಷದ ಫುಟ್‌ಬಾಲ್‌ ತಾರೆಯ ಹೃದಯ!'

ವ್ಯಕ್ತಿ ಅದೇ ಸ್ಥಳದಲ್ಲಿ ಸ್ವಲ್ಪ ಸಮಯದಿಂದ ಕೂತಿದ್ದರಿಂದ ಇತರೆ ಭಕ್ತರು ಅನುಮಾನಗೊಂಡು ಅವರನ್ನು ಎಬ್ಬಿಸಲು ಹೋದರೂ 15 ನಿಮಿಷಗಳಾದರೂ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ಇತರೆ ಭಕ್ತರು ಅನುಮಾನಗೊಂಡು ಅಲ್ಲಿನ ಅರ್ಚಕರನ್ನು ಕರೆದರು. ನಂತರ, ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಅವರು ಅಲ್ಲಿಗೆ ಹೋಗುವಷ್ಟರಲ್ಲಿ ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದ್ದಾರೆ. 

 
ಮೆಹನಿ ಮೆಡಿಕಲ್‌ ಸ್ಟೋರ್‌ ಒಂದನ್ನು ನಡೆಸುತ್ತಿದ್ದರು ಹಾಗೂ ಪ್ರತಿ ಗುರುವಾರ ಅವರು ಆ ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಾಯಿಬಾಬಾ ದೇಗುಲದಲ್ಲಿ ಅವರು ಪ್ರಾರ್ಥನೆ ಸಲ್ಲಿಸುತ್ತಿರುವುದು ಹಾಗೂ ನಂತರ ಇತರೆ ಭಕ್ತರು ಎಬ್ಬಿಸಲು ಪ್ರಯತ್ನಿಸುತ್ತಿರುವುದು, ಹಾಗೂ ಅವರನ್ನು ಆಸ್ಪತ್ರೆಗೆ ದಾಖಲಿಸುತ್ತಿರುವ ಸಿಸಿಟಿವಿ ಕ್ಯಾಮೆರಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋಗೆ ಅನೇಕರು ವಿಭಿನ್ನ ಕಮೆಂಟ್‌ಗಳನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ: Vikram Kirloskar: ಟೊಯೋಟಾ ಕಿರ್ಲೋಸ್ಕರ್‌ ಮೋಟರ್‌ ಉಪಾಧ್ಯಕ್ಷ ಹೃದಯಾಘಾತದಿಂದ ನಿಧನ: ಸಿಎಂ ಸಂತಾಪ

ಇನ್ನು, ಇದೇ ರೀತಿ, ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಬಸ್‌ ಚಾಲಕರೊಬ್ಬರು ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇನ್ನು, ಈ ವೇಳೆ ಅವರು ಬಸ್‌ ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಈ ಕಾರಣದಿಂದ ಇತರೆ ವಾಹನಗಳಿಗೆ ಬಸ್‌ ಗುದ್ದಿಕೊಂಡು ಹೋಗಿದೆ ಎಂದೂ ಹೇಳಲಾಗಿದೆ. ಅಲ್ಲದೆ, ಈ ಅಪಘಾತದಲ್ಲಿ ಮತ್ತೊಬ್ಬರು ವ್ಯಕ್ತಿ ಸಹ ಬಲಿಯಾಗಿದ್ದು, ಹಲವರಿಗೆ ಗಾಯಗಳಾಗಿದೆ ಎಂದೂ ವರದಿಯಾಗಿದೆ. 

ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ ಅಂದರೇನು..?
 ಈ ರೀತಿ ಹೃದಯಘಾತ ಘಟನೆಗಳು ಇತ್ತೀಚೆಗೆ ಕೆಲ ವರ್ಷಗಳಿಂದ ಹೆಚ್ಚು ವರದಿಯಾಗುತ್ತಲೇ ಇದೆ. ಇದ್ದಕ್ಕಿದ್ದಂತೆ ಹೃದಯಾಘಾತವಾಗುವುದು, ಅವರಿಗೆ ಈ ಹಿಂದೆ ಯಾವುದೇ ಹೃದಯದ ತೊಂದರೆ ಇಲ್ಲದಿದ್ದರೂ, ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಮೃತಪಡುವಂತಹ ಘಟನೆಗಳು ವರದಿಯಾಗುತ್ತಿವೆ. ಈ ಹಿನ್ನೆಲೆ ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ ಅಥವಾ ಹೃದಯಾಘಾತದ ಬಗ್ಗೆ ಆರೋಗ್ಯ ತಜ್ಞರು ವಿವರಿಸಿದ್ದಾರೆ ನೋಡಿ.. ಸೈಲೆಂಟ್‌ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಅನ್ನು ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ ಎನ್ನಲಾಗುತ್ತದೆ. ಈ ವೇಳೆ ರೋಗ ಲಕ್ಷಣಗಳು ಸಹ ಸೈಲೆಂಟ್‌ ಆಗಿರುತ್ತದೆ. ಅಂದರೆ, ಹೆಚ್ಚು ಎದೆ ನೋಡು ಬರುವುದಿಲ್ಲ, ಹೃದಯದಲ್ಲಿ ಹೆಚ್ಚು ಒತ್ತಡ ಕಂಡುಬರುವುದಿಲ್ಲ, ಹಠಾತ್ ಉಸಿರಾಟದ ತೊಂದರೆ, ಮತ್ತು ತಲೆತಿರುಗುವಿಕೆ ಮುಂತಾದ ರೋಗಲಕ್ಷಣಗಳು ಕಂಡುಬರುತ್ತವೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಚಳಿಗಾಲದಲ್ಲಿ ಬೆಳಗ್ಗೆ ಹೃದಯಾಘಾತದ ಅಪಾಯ ಹೆಚ್ಚು, ತಪ್ಪಿಸಲು ಏನ್ ಮಾಡ್ಬೇಕು ?

Follow Us:
Download App:
  • android
  • ios