ಹೃದಯಾಘಾತದಿಂದ ಕೊನೆಯುಸಿರೆಳೆದ ಆಂಡ್ರೆಸ್ ಬಲಾಂಟಕೊಲಂಬಿಯಾದ ಯುವ ಆಟಗಾರನ ನಿಧನಕ್ಕೆ ಕಂಬನಿ ಮಿಡಿದ ಫುಟ್ಬಾಲ್ ಜಗತ್ತು22 ವರ್ಷದ ಆಂಡ್ರೆಸ್ ಬಲಾಂಟ ಅಭ್ಯಾಸ ನಡೆಸುತ್ತಿರುವಾಗಲೇ ದಿಢೀರ್ ಕುಸಿದು ಬಿದ್ದಿದ್ದಾರೆ

ಬೊಗೊಟಾ(ಡಿ.02): ಸಾವು ಯಾವಾಗ ಹೇಗೆ ಬೇಕಾದರೂ ಸಂಭವಿಸಬಹುದು. ಇದೀಗ ಅಂತಹದ್ದೇ ಒಂದು ಘಟನೆ ಕೊಲಂಬಿಯಾದಲ್ಲಿ ನಡೆದಿದ್ದು, ಕೊಲಂಬಿಯಾದ 22 ವರ್ಷದ ಪ್ರತಿಭಾನ್ವಿತ ಫುಟ್ಬಾಲಿಗ ಆಂಡ್ರೆಸ್ ಬಲಾಂಟ ಅಭ್ಯಾಸ ನಡೆಸುತ್ತಿರುವಾಗಲೇ ಕುಸಿದುಬಿದ್ದು ಹೃದಯಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ. ಇದೀಗ ಆಂಡ್ರೆಸ್ ಬಲಾಂಟ ಅವರ ನಿಧನಕ್ಕೆ ಇಡೀ ಫುಟ್ಬಾಲ್ ಜಗತ್ತು ಕಂಬನಿ ಮಿಡಿದಿದೆ.

'ದ ಸನ್' ವರದಿಯ ಪ್ರಕಾರ ಆಂಡ್ರೆಸ್ ಬಲಾಂಟ, ಕಳೆದ ಕೆಲ ತಿಂಗಳುಗಳಿಂದ ಅರ್ಜೆಂಟೀನಾ ಪರ್ಸ್ಟ್ ಡಿವಿಷನ್‌, ಅಥ್ಲೆಟಿಕೊ ಟುಕುಮನ್‌ ಪರ ಆಡುತ್ತಿದ್ದರು. ಇದೀಗ ಈ ವಿಚಾರವನ್ನು ಅಥ್ಲೆಟಿಕೊ ಟುಕುಮನ್‌ ಖಚಿತಪಡಿಸಿದೆ. 'ಕೊಲಂಬಿಯಾದ ಫುಟ್ಬಾಲಿಗ ಆಂಡ್ರೆಸ್ ಬಲಾಂಟ ಅವರು ನಿಧನರಾದರು ಎಂದು ತಿಳಿಸಲು ವಿಷಾಧಿಸುತ್ತೇವೆ. ಈ ಸಂಕಷ್ಟದ ಸಮಯದಲ್ಲಿ ಈ ದುಃಖ ಭರಿಸುವ ಶಕ್ತಿ ಅವರ ಕುಟುಂಬ ಹಾಗೂ ಸ್ನೇಹಿತರಿಗೆ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಅಥ್ಲೆಟಿಕೊ ಟುಕುಮನ್‌ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.

Scroll to load tweet…

ಕೆಲವು ಆಪ್ತ ಮೂಲಗಳ ಪ್ರಕಾರ, 22 ವರ್ಷದ ಆಂಡ್ರೆಸ್ ಬಲಾಂಟ ಅಭ್ಯಾಸ ನಡೆಸುತ್ತಿರುವಾಗಲೇ ದಿಢೀರ್ ಕುಸಿದು ಬಿದ್ದಿದ್ದಾರೆ. ಇದರ ಬೆನ್ನಲ್ಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆಸ್ಪತ್ರೆಯಲ್ಲೂ 40 ನಿಮಿಷ ಚಿಕಿತ್ಸೆ ನೀಡಲಾಯಿತಾದರೂ, ಅವರ ಹೃದಯ ಸ್ಪಂದಿಸಲಿಲ್ಲ. ಈ ಮೊದಲು 2019ರಲ್ಲಿಯೂ ಸಹಾ ಆಂಡ್ರೆಸ್ ಬಲಾಂಟ ಒಮ್ಮೆ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಆಗಲು ಸಹಾ ಅವರು ವೈದ್ಯಕೀಯ ತಪಾಸಣೆಗೊಳಗಾಗಿದ್ದರು.

FIFA World Cup ಜಪಾನ್‌ ಗನ್‌ಗೆ ಉರುಳಿದ ಸ್ಪೇನ್‌, ಮ್ಯಾಚ್‌ ನೋಡ್ತಿದ್ದ 4 ಬಾರಿ ಚಾಂಪಿಯನ್ ಜರ್ಮನಿ ಸ್ಟನ್‌!

Scroll to load tweet…

ಕೊಲಂಬಿಯಾದ ಮಿಡ್‌ಫೀಲ್ಡರ್ ಆಂಡ್ರೆಸ್ ಬಲಾಂಟ, ತಮ್ಮ ದೇಶದ ಪರ ಅಂಡರ್ 17, ಅಂಡರ್ 20 ಹಾಗೂ ಅಂಡರ್ 23 ಹಂತದಲ್ಲಿ ಕಣಕ್ಕಿಳಿದು ಗಮನ ಸೆಳೆದಿದ್ದರು. ಕೊಲಂಬಿಯಾದ ಭವಿಷ್ಯದ ತಾರೆ ಎಂದೇ ಬಿಂಬಿಸಲ್ಪಟ್ಟಿದ ಆಂಡ್ರೆಸ್ ಬಲಾಂಟ ಅವರ ಅಕಾಲಿಕ ಮರಣಕ್ಕೆ ಫುಟ್ಬಾಲ್ ಜಗತ್ತು ಕಂಬನಿ ಮಿಡಿದಿದೆ.

ಆಂಡ್ರೆಸ್ ಬಲಾಂಟ, ಜನವರಿ 18, 2000ನೇ ಇಸವಿಯಲ್ಲಿ ಜನಿಸಿದ್ದರು. ಇನ್ನು ಕಳೆದ ಜೂನ್ 2022ರಲ್ಲಿ ಆಂಡ್ರೆಸ್ ಬಲಾಂಟ, ಅಥ್ಲೆಟಿಕೊ ಟುಕುಮನ್‌ ಕ್ಲಬ್ ಸೇರಿಕೊಂಡಿದ್ದರು.