ಬ್ರಿಟಿಷರು ಭಾರತವನ್ನು ಆಳ್ವಿಕೆ ನಡೆಸುತ್ತಿದ್ದಾಗ ಭಾರತೀಯರಿಗೆ ನೀಡುತ್ತಿದ್ದ ಪಾಸ್‌ಪೋರ್ಟ್‌ ಫೋಟೋ ಹಂಚಿಕೊಂಡಿದ್ದರು. ತಮ್ಮ ತಾತನಿಗೆ 1931ರಲ್ಲಿ ನೀಡಿದ್ದ ಪಾಸ್‌ಪೋರ್ಟ್‌ ಫೋಟೋವನ್ನು ಟ್ವಿಟ್ಟರ್‌ ಬಳಕೆದಾರರೊಬ್ಬುರ ಹಂಚಿಕೊಂಡಿದ್ದರು. 

ಇತಿಹಾಸದ ಬಗ್ಗೆ ಸಾಮಾನ್ಯವಾಗಿ ಪುಸ್ತಕದಲ್ಲಿ ಓದಿರುತ್ತೀವಿ. ಆದರೆ, ಇತಿಹಾಸದ ಭಾಗವೊಂದನ್ನು ನಮ್ಮ ಕಣ್ಣಾರೆ ನೋಡಿದರೆ ನಮಗೆ ನಿಜಕ್ಕೂ ಅಚ್ಚರಿಯಾಗುತ್ತಲ್ಲವೇ. ಇದು ನಿತ್ಯ ಬಳಕೆಯ ವಸ್ತುವೇ ಆಗಿರಲಿ. ಅಥವಾ ಯಾವುದೇ ದಾಖಲೆಯೇ ಆಗಿರಲಿ. ಹಳೆಯ ಕಾಲದ ಅನೇಕ ವಸ್ತುಗಳು ಅನೇಕ ಜನರಿಗೆ ಅಚ್ಚರಿ ತರುತ್ತದೆ. ಇದೇ ರೀತಿ, ಇತ್ತೀಚೆಗೆ ಟ್ವಿಟ್ಟರ್‌ ಬಳಕೆದಾರ ಅನ್ಶುಮಾನ್‌ ಸಿಂಗ್ ಇತಿಹಾಸದ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದರು. ಬ್ರಿಟಿಷರು ಭಾರತವನ್ನು ಆಳ್ವಿಕೆ ನಡೆಸುತ್ತಿದ್ದಾಗ ಭಾರತೀಯರಿಗೆ ನೀಡುತ್ತಿದ್ದ ಪಾಸ್‌ಪೋರ್ಟ್‌ ಫೋಟೋ ಹಂಚಿಕೊಂಡಿದ್ದರು. ತಮ್ಮ ತಾತನಿಗೆ 1931ರಲ್ಲಿ ನೀಡಿದ್ದ ಪಾಸ್‌ಪೋರ್ಟ್‌ ಫೋಟೋವನ್ನು ಅವರು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದು, ಈ ಟ್ವೀಟ್‌ ಸಿಕ್ಕಾಪಟ್ಟೆ ವೈರಲ್‌ ಆಗಿದೆ. 

ನನ್ನ ತಾತನಿಗೆ (Grand Father) ಲಾಹೋರ್‌ನಲ್ಲಿ (Lahore) 1931ರಲ್ಲಿ ನೀಡಿದ ಬ್ರಿಟಿಷ್‌ ಭಾರತೀಯ ಪಾಸ್‌ಪೋರ್ಟ್‌ (British Indian Passport). ಆ ವೇಳೆಗೆ, ಅವರಿಗೆ 31 ವರ್ಷ ವಯಸ್ಸಾಗಿತ್ತು ಎಂದು ಟ್ವೀಟ್‌ನಲ್ಲಿ (Tweet) ಬರೆದುಕೊಂಡಿದ್ದು, ಅದರ ಫೋಟೋಗಳನ್ನು ಪೋಸ್ಟ್‌ (Post) ಮಾಡಿದ್ದಾರೆ. ಈ ಪೈಕಿ ಮೊದಲ ಫೋಟೋದಲ್ಲಿ ಬ್ರಿಟಿಷ್‌ ಇಂಡಿಯನ್‌ ಪಾಸ್‌ಪೋರ್ಟ್‌ ಎಂದು ಬರೆಯಲಾಗಿದ್ದು, ಅದು ಪಾಸ್‌ಪೋರ್ಟ್‌ನ ಕವರ್‌ ಪೇಜ್‌ ಆಗಿದೆ ಎಂದು ತಿಳಿದುಬರುತ್ತದೆ. ಅಲ್ಲದೆ, ಇಂಡಿಯನ್‌ ಎಂಪೈರ್‌ (Indian Empire) ಎಂದೂ ಕೆಳಗೆ ಪ್ರಿಂಟ್‌ ಮಾಡಲಾಗಿದೆ. ಅಲ್ಲದೆ, ಲಾಹೋರ್‌ನಲ್ಲಿ ಈ ಪಾಸ್‌ಪೋರ್ಟ್‌ ಅನ್ನು ನೀಡಲಾಗಿದೆ ಹಾಗೂ, ಇದಕ್ಕೆ ಭಾರತ (India) ಹಾಗೂ ಕೀನ್ಯಾದಲ್ಲಿ (Kenya) ಮಾತ್ರ ಮಾನ್ಯತೆ ಇದೆ ಎಂದೂ ಅವರು ಹಂಚಿಕೊಂಡಿರುವ ಪಾಸ್‌ಪೋರ್ಟ್‌ ಫೋಟೋದಲ್ಲಿ ಹಂಚಿಕೊಳ್ಳಲಾಗಿದೆ. 

ಇದನ್ನು ಓದಿ: ಸೀರೆ ಉಟ್ಕೊಂಡೇ ಜಿಮ್‌ನಲ್ಲಿ ವರ್ಕೌಟ್‌ ಮಾಡಿದ ಮಹಿಳೆ: ವಿಡಿಯೋ ವೈರಲ್

ಈ ಟ್ವೀಟ್‌ ನಿಮ್ಮನ್ನು ಕೂಡ ಅಚ್ಚರಿಗೊಳಗಾಗಬಹುದು ನೋಡಿ..

Scroll to load tweet…

ಈ ಫೋಸ್ಟ್‌ ಅನ್ನು ಜನವರಿ 7, 2023 ರಂದು ಅಂದರೆ 2 ದಿನಗಳ ವಿರುದ್ಧ ಶೇರ್‌ ಮಾಡಲಾಗಿದೆ. ಈ ಟ್ವೀಟ್‌ ಮಾಡಿದಾಗಿನಿಂದ ಈ ಟ್ವೀಟ್‌ ಅನ್ನು ಈವರೆಗೆ 1 ಲಕ್ಷ 35 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ಟ್ವೀಟ್‌ಗೆ 1,700 ಕ್ಕೂ ಅಧಿಕ ಲೈಕ್ಸ್‌ಗಳು ದೊರೆತಿದ್ದು, ಹಲವು ನೆಟ್ಟಿಗರು ವಿಭಿನ್ನವಾದ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಅಲ್ಲದೆ, ಅದನ್ನು ಮ್ಯೂಸಿಯಂನಲ್ಲಿ ಇಡುವಷ್ಟು ಮುಖ್ಯವಾಗಿದೆ ಎಂದೂ ಕೆಲವರು ಸಲಹೆ ಮಾಡಿದ್ದಾರೆ. 

ಇದನ್ನೂ ಓದಿ: ತಂಗಿ ಸೈಕಲ್‌ನಿಂದ ಕೆಳಕ್ಕೆ ಬೀಳದಿರಲೆಂದು ಅಣ್ಣನ ಪ್ರಯತ್ನ ನೋಡಿ: ವಿಡಿಯೋ ವೈರಲ್‌..!

ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ ನೋಡಿ.. 

ವಾವ್‌, ನಿಮ್ಮ ಸ್ವಾಧೀನದಲ್ಲಿ ದೊಡ್ಡ ಇತಿಹಾಸದ ಭಾಗ ಇದೆ ಎಂದು ಟ್ವಿಟ್ಟರ್‌ ಬಳಕೆದಾರರೊಬ್ಬರು ಹೇಳಿದ್ದಾರೆ. ಅಲ್ಲದೆ, ಮತ್ತೊಬ್ಬರು, ವಾವ್‌, ಇದನ್ನು ಶೇರ್‌ ಮಾಡಿದ್ದಕ್ಕೆ ಧನ್ಯವಾದಗಳು. ಇದು ಮ್ಯೂಸಿಯಂನಲ್ಲಿ ಇಡಲೇಬೇಕಾದ ವಸ್ತು ಎಂದು ಮತ್ತೊಬ್ಬರು ಹೇಳಿಕೊಂಡಿದ್ದಾರೆ. ಹಾಗೂ, ಅಂತಹ ಅಮೂಲ್ಯ ದಾಖಲೆ ನಿಮ್ಮ ಬಳಿಕ ಹೇಗೆ ದೊರೆತಿದೆ ಎಂದೂ ಇನ್ನೊಬ್ಬರು ವ್ಯಕ್ತಿ ಹೇಳಿದ್ದಾರೆ. ಇದಕ್ಕೆ ಉತ್ತರ ನೀಡಿದ ಅನ್ಶುಮಾನ್‌ ಸಿಂಗ್, ನನ್ನ ಅಂಕಲ್‌ ಬಳಿ ಇತ್ತು. ಅವರು ಸಾಯುವ ಕೆಲ ವರ್ಷಗಳ ಮುನ್ನ ನನಗೆ ನೀಡಿದ್ದರು ಎಂದು ಹೇಳಿದ್ದಾರೆ.

ಇದನ್ನು, ಮ್ಯೂಸಿಯಂಗೆ ಮಾರಾಟ ಮಾಡಿ ಎಂದೂ ಮತ್ತೊಬ್ಬ ಟ್ವೀಟಿಗ ಸಲಹೆ ಕೊಟ್ಟಿದ್ದಾರೆ. ಈ ಟ್ವೀಟ್‌ಗೂ ಅನ್ಶುಮಾನ್‌ ಸಿಂಗ್ ಉತ್ತರಿಸಿದ್ದು, ಇಲ್ಲ ಜೀ ಅದು ಎಂದಿಗೂ ಸಾಧ್ಯವಿಲ್ಲ. ನನ್ನ ತಾತ ನನಗೆ ಹೀರೋ ಆಗಿದ್ದರು ಎಂದೂ ಅನ್ಶುಮಾನ್‌ ಸಿಂಗ್ ಹೇಳಿದ್ದಾರೆ. 

ಇದನ್ನೂ ಓದಿ: ಸರ್ಕಸ್ ತರಬೇತುದಾರನ ಮೇಲೆ ಹುಲಿಯ ದಾಳಿ; ಕುತ್ತಿಗೆ ಕಚ್ಚಿದ ವ್ಯಾಘ್ರ: ವಿಡಿಯೋದಲ್ಲಿ ಸೆರೆ..!