Asianet Suvarna News Asianet Suvarna News

ಸೀರೆ ಉಟ್ಕೊಂಡೇ ಜಿಮ್‌ನಲ್ಲಿ ವರ್ಕೌಟ್‌ ಮಾಡಿದ ಮಹಿಳೆ: ವಿಡಿಯೋ ವೈರಲ್

ಆಗಾಗ್ಗೆ ತನ್ನ  ಖಾತೆಯಲ್ಲಿ ವ್ಯಾಯಾಮಕ್ಕೆ ಸಂಬಂಧಿಸಿದ ವಿಷಯವನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇದೇ ರೀತಿ, ಈಗ ಸೀರೆ ಉಟ್ಟುಕೊಂಡು ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೋ ಪೋಸ್ಟ್‌ ಮಾಡಿದ್ದಾರೆ.

viral video of woman working out at gym in saree leaves internet divided ash
Author
First Published Jan 8, 2023, 7:29 PM IST

ಮಹಿಳೆಯೊಬ್ಬರು (Women) ಸೀರೆ (Saree) ಉಟ್ಟುಕೊಂಡು ಜಿಮ್‌ನಲ್ಲಿ (Gym) ವರ್ಕೌಟ್ (Workout) ಮಾಡುತ್ತಿರುವ ವಿಡಿಯೋ (Video) ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿದ್ದು, ಇದು ಇಂಟರ್ನೆಟ್ ಬಳಕೆದಾರರನ್ನು (Internet User) ಆಕರ್ಷಿಸುತ್ತಿದೆ. ಫಿಟ್‌ನೆಸ್ ಫ್ರೀಕ್ (Fitness Freak) ಆಗಿರುವ ರೀನಾ ಸಿಂಗ್ (Reena Singh) ಎಂಬ ಸಾಮಾಜಿಕ ಬಳಕೆದಾರರು ಈ ವಿಡಿಯೋ ಕ್ಲಿಪ್‌ ಅನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅವರು ಆಗಾಗ್ಗೆ ತನ್ನ  ಖಾತೆಯಲ್ಲಿ ವ್ಯಾಯಾಮಕ್ಕೆ ಸಂಬಂಧಿಸಿದ ವಿಷಯವನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇದೇ ರೀತಿ, ಈಗ ಸೀರೆ ಉಟ್ಟುಕೊಂಡು ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೋ ಪೋಸ್ಟ್‌ ಮಾಡಿದ್ದಾರೆ.

ಈ ವಿಡಿಯೋವನ್ನು ಈವರೆಗೆ 33 ಮಿಲಿಯನ್‌ಗೂ ಹೆಚ್ಚು ಜನರು ವೀಕ್ಷಿಸಿದ್ದು, ಇದಕ್ಕೆ 9 ಲಕ್ಷ 82 ಸಾವಿರದ 306 ಲೈಕ್ಸ್‌ ಸಹ ಸಿಕ್ಕಿದೆ. ಇನ್ನು, ಈ ವಿಡಿಯೋಗೆ "ಇದು ಕೇವಲ ಪ್ರಾರಂಭ" ಎಂಬ ಕ್ಯಾಪ್ಷನ್‌ ನೀಡಿದ್ದಾರೆ ರೀನಾ ಸಿಂಗ್. ಲ್ಯಾಟ್‌ ಪುಲ್‌ಡೌನ್‌ ಸೇರಿ ಅನೇಕ ವ್ಯಾಯಾಮ, ಕಸರತ್ತುಗಳನ್ನು ಸೀರೆ ಉಟ್ಟುಕೊಂಡೇ ಮಾಡುತ್ತಿದ್ದಾರೆ. ಸ್ಕ್ವಾಟ್‌ಗಳನ್ನು ನಿರ್ವಹಿಸುವಾಗ ಆಕೆ ಜಿಗಿಯುವುದು ಮತ್ತು ಬೃಹತ್ ಟೈರ್ ಅನ್ನು ಎತ್ತುವುದನ್ನು ಸಹ ಕಾಣಬಹುದು.

ಇದನ್ನು ಓದಿ: ಸೀರೆಯಲ್ಲಿ ಮೋಡಿ ಮಾಡಿದ 'ಮಹಾನಟಿ'; ಕೀರ್ತಿ ಸುರೇಶ್ ಫೋಟೋಗೆ ಫ್ಯಾನ್ಸ್ ಫಿದಾ

ಇನ್ನು, ಇಂಟರ್ನೆಟ್ ಬಳಕೆದಾರರು ಈ ಮಹಿಳೆಯ ವಿಡಿಯೋಗೆ ಹಲವರು ಕಮೆಂಟ್‌ ಮಾಡಿದ್ದಾರೆ. ಕೆಲವರು ರೀನಾ ಸಿಂಗ್ ಅವರ ವಿಶಿಷ್ಟ ವ್ಯಾಯಾಮದ ಉಡುಪನ್ನು ಶ್ಲಾಘಿಸಿದರೆ, ಇತರರು ಜಿಮ್‌ನಲ್ಲಿ ವ್ಯಾಯಾಮ ಮಾಡಲು ಅಥ್ಲೀಟ್‌ ಉಡುಪುಗಳ ಬದಲಿಗೆ ಸೀರೆಯನ್ನು ಧರಿಸುವುದು ಸರಿಯೇ ಎಂದು ಹಲವರು ವಾದಿಸಿದ್ದಾರೆ. 

"ನಿಮಗೆ ಆಗಬಹುದಾದ ಗಾಯದ ಪ್ರಮಾಣವನ್ನು ಸಹ ವಿವರಿಸಲಾಗುವುದಿಲ್ಲ. ಹೌದು, ಸೀರೆ ಧರಿಸಿ ... ಆದರೆ ತೂಕ, ಮಷಿನ್ಸ್‌, ಕ್ರಾಸ್ ಫಿಟ್ ಮಾಡಲು ಆರಾಮದಾಯಕ ಜಿಮ್ ಉಡುಗೆ ಅಗತ್ಯವಿದೆ. ಸುರಕ್ಷಿತವಾಗಿರಿ!" ಎಂದು ಒಬ್ಬರು ಇನ್ಸ್ಟಾಗ್ರಾಮ್‌ ಬಳಕೆದಾರರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ; Saree Fall Trend: ಸೀರೆ ಫಾಲ್ ಟ್ರೆಂಡ್ ಶುರುವಾಗಿದ್ದು ಯಾವಾಗ ಗೊತ್ತಾ?

ಅದೇ ರೀತಿ, ಮತ್ತೊಬ್ಬರು, ‘’ಸೀರೆ ಪರವಾಗಿಲ್ಲ. ಆದರೆ ಗಾಯಗಳನ್ನು ತಪ್ಪಿಸಲು ಜಿಮ್ ಉಡುಗೆ ಧರಿಸಲು ಅವರನ್ನು ಪ್ರೋತ್ಸಾಹಿಸಿ. ಕೆಲವು ವ್ಯಾಯಾಮಗಳನ್ನು ಮಾಡಬಹುದು ಆದರೆ ಎಲ್ಲವನ್ನೂ ಮಾಡಲಾಗುವುದಿಲ್ಲ, ಉದಾಹರಣೆಗೆ ಮೊದಲನೆಯ ವ್ಯಾಯಾಮದಂತೆ. ಆದ್ದರಿಂದ, ಗಾಯವನ್ನು ತಪ್ಪಿಸಲು ಸರಿಯಾದ ಬಟ್ಟೆಗಳನ್ನು ಧರಿಸಲು ನೀವು ಅವರನ್ನು ಪ್ರೋತ್ಸಾಹಿಸಬೇಕು ಎಂದು ನಾನು ಭಾವಿಸುತ್ತೇನೆ." ಎಂದೂ ಪ್ರತಿಕ್ರಿಯೆ ನೀಡಿದ್ದಾರೆ.

ದಯವಿಟ್ಟು ಅಂತಹ ವೀಡಿಯೊಗಳನ್ನು ಪ್ರಚಾರ ಮಾಡಬೇಡಿ... ಜನರು ಅದರಿಂದ ಪ್ರೇರಿತರಾಗಿ ಅಂತಹ ಉಡುಪನ್ನು ಧರಿಸಲು ಪ್ರಯತ್ನಿಸಿದರೆ, ಅದು ತುಂಬಾ ಅಪಾಯಕಾರಿ" ಎಂದು ಇನ್ನೊಬ್ಬರು ಬಳಕೆದಾರರು ಕಮೆಂಟ್‌ ಮಾಡಿದ್ದಾರೆ. 

ಇದನ್ನೂ ಓದಿ: ಬುಲೆಟ್ ಏರಿ ಸಾರಿಯುಟ್ಟ ನಾರಿಯರ ಜಬರ್‌ದಸ್ತ್ ಸವಾರಿ: ವೈರಲ್ ವಿಡಿಯೋ

ಆದರೆ, ಇನ್ನೊಬ್ಬರು, ಯಾಕೆ..? ಎಂದು ಕೇಳುವ ಜನರಿಗೆ ನೀವೇ ಕೇಳಿಕೊಳ್ಳಿ. ಇನ್ಸ್ಟಾಗ್ರಾಮ್‌ನಲ್ಲಿ ಗಮನಕ್ಕೆ ಬರಲು ನೀವು ಸಾಮಾನ್ಯ / ರೂಢಿಯನ್ನು ಮೀರಿ ಹೋಗಬೇಕಾದ ಹಂತಕ್ಕೆ ತಲುಪಿದೆ. ಪ್ರಭಾವಿ/ಕಲಾವಿದ ಅಥವಾ ಯಾರಾದರೂ ಅವರು ಸಾಮಾನ್ಯವಾಗಿ ಪೋಸ್ಟ್‌ ಮಾಡಿದರೆ ಯಾವುದೇ ವೀಕ್ಷಣೆಗಳು ಅಥವಾ ಕಮೆಂಟ್‌ಗಳನ್ನು ಪಡೆಯುವುದಿಲ್ಲ. ಇದೇ ರೀತಿ, ಸೀರೆಯನ್ನು ಧರಿಸಿ ಜಿಮ್‌ನಲ್ಲಿರುವ ಕಾರಣ ಈ ಪೋಸ್ಟ್ ಗೋಚರಿಸಿದೆ. ಆದ್ದರಿಂದ, ಅದು ವರ್ಕ್ ಆಗಿದೆ..! ಮತ್ತು ಅವರು ಇದನ್ನು ರೀಲ್‌ಗಾಗಿ ಮಾಡಿದ್ದೇನೆ ಎಂದು ಸ್ವತಃ ಹೇಳಿದ್ದಾರೆ, ಆದ್ದರಿಂದ ಕುಡೋಸ್‌’’ ಎಂದು ಕಮೆಂಟ್‌ ಮಾಡಿದ್ದಾರೆ.

ಈ ಹಿಂದೆಯೂ ಇದೇ ರೀತಿಯ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿತ್ತು. ಈ ವಿಡಿಯೋದಲ್ಲಿ ಚೆನ್ನೈನ 56 ವರ್ಷದ ಮಹಿಳೆಯೊಬ್ಬರು ಸೀರೆ ಧರಿಸಿ ವರ್ಕೌಟ್‌ ಮಾಡುತ್ತಿರುವುದು ಕಂಡುಬಂದಿತ್ತು. ಈ ವಿಡಿಯೋವನ್ನು ಹ್ಯೂಮನ್ಸ್ ಆಫ್ ಮದ್ರಾಸ್ ಮತ್ತು ಮದ್ರಾಸ್ ಬಾರ್ಬೆಲ್ ಜಂಟಿಯಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಮಹಿಳೆಯು ಸೀರೆಯನ್ನು ಧರಿಸಿರುವಾಗ ಭಾರವಾದ ತೂಕ ಮತ್ತು ಡಂಬ್ಬೆಲ್ಸ್ ಅಥವಾ ಇತರ ಜಿಮ್ ಯಂತ್ರಗಳು ಹಾಗೂ ಸಲಕರಣೆಗಳನ್ನು ಎತ್ತುತ್ತಿರುವುದನ್ನು ಅದು ತೋರಿಸಿತ್ತು.

ಇದನ್ನೂ ಓದಿ: ದೀಪಾವಳಿ ಸಂಭ್ರಮದಲ್ಲಿ ತಮನ್ನಾ; ಡೀಪ್ ನೆಕ್ ಬ್ಲೌಸ್ ಸೀರೆಯಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ

Follow Us:
Download App:
  • android
  • ios