Asianet Suvarna News Asianet Suvarna News

ಕರೆಂಟ್ ವೈರ್ ಮೈಮೇಲೆ ಬಿದ್ದು ದೂರ ಚಿಮ್ಮಿದ ವ್ಯಕ್ತಿ: ಭಯಾನಕ ವಿಡಿಯೋ

ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಮಾತನಾಡುತ್ತಾ ನಿಂತಿದ್ದ ವ್ಯಕ್ತಿಗಳಿಬ್ಬರ ಮೇಲೆ ವಿದ್ಯುತ್ ಹರಿಯುತ್ತಿದ್ದ ಕರೆಂಟ್ ವೈರೊಂದು ತುಂಡಾಗಿ ಬಿದ್ದ ಪರಿಣಾಮ ಅವರಿಬ್ಬರಿಗೆ ಕರೆಂಟ್ ಶಾಕ್ ತಗುಲಿ ಒದ್ದಾಡಿದ ಘಟನೆ ನಡೆದಿದೆ.

Man jumps away as current wire falls on him, watch Horrifying video of kharagpur railway station akb
Author
First Published Dec 8, 2022, 2:48 PM IST

ಖರಗ್ಪುರ: ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಮಾತನಾಡುತ್ತಾ ನಿಂತಿದ್ದ ವ್ಯಕ್ತಿಗಳಿಬ್ಬರ ಮೇಲೆ ವಿದ್ಯುತ್ ಹರಿಯುತ್ತಿದ್ದ ಕರೆಂಟ್ ವೈರೊಂದು ತುಂಡಾಗಿ ಬಿದ್ದ ಪರಿಣಾಮ ಅವರಿಬ್ಬರಿಗೆ ಕರೆಂಟ್ ಶಾಕ್ ತಗುಲಿ ಒದ್ದಾಡಿದ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಖರಗ್ಪುರ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬರು ವ್ಯಕ್ತಿ ಹಾಗೂ ರೈಲ್ವೆಯ ಟಿಕೆಟ್ ಪರೀಕ್ಷಕರು (TTE)ಗಂಭೀರವಾಗಿ ಗಾಯಗೊಂಡಿದ್ದಾರೆ. 

ಈ ಆಘಾತಕಾರಿ ಘಟನೆಯ ದೃಶ್ಯಾವಳಿಗಳು ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಭಯ ಮೂಡಿಸುವಂತಿದೆ. ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಇಬ್ಬರು ನಿಂತುಕೊಂಡು ಮಾತನಾಡುತ್ತಿರುತ್ತಾರೆ. ಅಷ್ಟರಲ್ಲಿ ಕರೆಂಟ್ ವಯರ್ ಒಮ್ಮೆಲೇ ಕಟ್ ಆಗಿ ಇವರ ಮೇಲೆ ಬಿದ್ದಿದೆ. ಕರೆಂಟ್ ವಯರ್ ಮೈಮೇಲೆ ಬಿದ್ದು ಸೆಳೆದ ರಭಸಕ್ಕೆ ಒಬ್ಬರು ಅಲ್ಲಿಂದ ದೂರ ರಟ್ಟಿ ರೈಲು ಹಳಿಯ ಮೇಲೆ ಬಿದ್ದಿದ್ದಾರೆ. ಮತ್ತೊಬ್ಬರು ಅಲ್ಲಿಂದ ಹಿಂದಕ್ಕೆ ಸರಿದು ಪಾರಾಗಿದ್ದಾರೆ. ಬಹುತೇಕ ನಿಸ್ತೇಜ ಸ್ಥಿತಿಯಲ್ಲಿ ಅವರು ಬಿದ್ದಿರುವುದು ವಿಡಿಯೋದಲ್ಲಿ ಸೆರೆ ಆಗಿದೆ. 

ಕೂಡಲೇ ಅಲ್ಲಿದ್ದ ಜನರೆಲ್ಲಾ ಓಡಿ ಹೋಗಿ ವ್ಯಕ್ತಿಯ ರಕ್ಷಣೆಗೆ ಧಾವಿಸುತ್ತಾರೆ. ಈ ಅವಘಡದಲ್ಲಿ ವಿದ್ಯುತ್ ತಗುಲಿರುವ ವ್ಯಕ್ತಿ ಜೀವಾಪಾಯದಿಂದ ಪಾರಾಗಿದ್ದಾರೆ. ಆದರೆ ಅವರ ದೇಹದ ಮೇಲ್ಭಾಗದಲ್ಲಿ ಸುಟ್ಟ ಗಾಯಗಳಾಗಿವೆ. ಅವರನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮೆರವಣಿಗೆ ವೇಳೆ ಕರೆಂಟ್ ಶಾಕ್: ತನ್ನ ಮೇಲಿದ್ದವರ ಕೆಳಗುರುಳಿಸಿ ಆನೆ ಎಸ್ಕೇಪ್

ನಡೆದುಕೊಂಡು ಬರ್ತಿದ್ದ ಬಾಲಕನಿಗೆ ಕರೆಂಟ್ ಶಾಕ್‌ : ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ

Follow Us:
Download App:
  • android
  • ios