Asianet Suvarna News Asianet Suvarna News

ಸೆಕೆಂಡ್‌ನಲ್ಲಿ ಸಾವಿನ ದವಡೆಯಿಂದ ಪಾರಾದ ವ್ಯಕ್ತಿ... ಭಯಾನಕ ವಿಡಿಯೋ ವೈರಲ್

  • ರೈಲ್ವೆ ಟ್ರ್ಯಾಕ್‌ನಲ್ಲಿ ಮಲಗಿದ್ದ ವ್ಯಕ್ತಿಯ ರಕ್ಷಣೆ
  • ಸಮಯಪ್ರಜ್ಞೆ ಮೆರೆದ ಲೋಕೋ ಪೈಲಟ್‌
  • ಮುಂಬೈನ ಶಿವ್ಡಿ ರೈಲ್ವೆ ನಿಲ್ದಾಣದಲ್ಲಿ ಘಟನೆ
Man escapes death by seconds at Shivdi station in Mumbai
Author
Bangalore, First Published Jan 3, 2022, 7:13 PM IST
  • Facebook
  • Twitter
  • Whatsapp

ಮುಂಬೈ: ರೈಲ್ವೆ ಟ್ರ್ಯಾಕ್‌ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬ ಸಾವಿನ ದವಡೆಯಿಂದ ಕ್ಷಣದಲ್ಲಿ ಪಾರಾದ ಘಟನೆ ಮುಂಬೈನ (Mumbai) ಶಿವ್ದಿ ರೈಲ್ವೆ ನಿಲ್ದಾಣ (Shivdi station) ದಲ್ಲಿ ನಡೆದಿದೆ. ಈ ಘಟನೆಯ ದೃಶ್ಯಾವಳಿ ಸ್ಥಳೀಯ ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ ವೈರಲ್‌ ಆಗಿದೆ. ಈ ಶಾಕಿಂಗ್‌ ವಿಡಿಯೋವನ್ನು ರೈಲ್ವೆ ಸಚಿವಾಲಯವೂ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿತ್ತು. ರೈಲ್ವೆ ಚಾಲಕ ತುರ್ತು ಪರಿಸ್ಥಿತಿಯಲ್ಲಿ ಬಳಸುವ ಬ್ರೇಕ್‌ನ್ನು ಒತ್ತಿದ ಪರಿಣಾಮ ಈ ವ್ಯಕ್ತಿ ಬದುಕುಳಿದಿದ್ದಾನೆ. 

ಈ ವಿಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿಯೊಬ್ಬ ರೈಲ್ವೇ ಹಳಿಗಳ ಮೇಲೆ ಆಕಸ್ಮಿಕವಾಗಿ ಮಲಗಿರುತ್ತಾನೆ. ವೀಡಿಯೊ ಮುಂದುವರೆದಂತೆ ಮತ್ತು ರೈಲು ಸಮೀಪಿಸುತ್ತಿದ್ದಂತೆ, ವ್ಯಕ್ತಿ ಇದ್ದಕ್ಕಿದ್ದಂತೆ ಹಳಿಗಳ ಮೇಲೆ ಮಲಗಿದ್ದಾನೆ. ಆದಾಗ್ಯೂ, ರೈಲಿನ ಲೊಕೊ ಪೈಲಟ್ ತುರ್ತು ಬ್ರೇಕ್‌ (emergency brakes)ಗಳನ್ನು ಎಳೆದ ನಂತರ ರೈಲು ತಕ್ಷಣವೇ ಹಳಿಗಳ ಮೇಲೆ ನಿಲ್ಲುತ್ತದೆ. ಬಳಿಕ ಕೆಲವು ಆರ್‌ಪಿಎಫ್ ಸಿಬ್ಬಂದಿ ಓಡಿ ಬಂದು ಆ ವ್ಯಕ್ತಿಯನ್ನು ಸುರಕ್ಷಿತವಾಗಿ ಕರೆದೊಯ್ಯಲು ಅವನ ಕಡೆಗೆ ಧಾವಿಸುತ್ತಿರುವುದನ್ನು ಕಾಣಬಹುದು. ದೃಶ್ಯಾವಳಿಯಲ್ಲಿ ತೋರಿಸಿರುವ ಸಮಯದ ಮುದ್ರೆಯ ಪ್ರಕಾರ, ಘಟನೆಯು ಬೆಳಗ್ಗೆ 11:45 ರ ಸುಮಾರಿಗೆ ನಡೆದಿದೆ.

ಮುಂಬೈನ ಶಿವ್ಡಿ ರೈಲ್ವೆ ನಿಲ್ದಾಣದಲ್ಲಿ ಮೋಟರ್‌ ಮ್ಯಾನ್‌ನಿಂದ ಶ್ಲಾಘನೀಯ ಕಾರ್ಯ,  ರೈಲ್ವೆ ಟ್ರ್ಯಾಕ್‌ ಮೇಲೆ ವ್ಯಕ್ತಿ ಮಲಗಿರುವುದನ್ನು ಗಮನಿಸಿದ ಮೋಟಾರ್‌ಮ್ಯಾನ್‌ ತ್ವರಿತವಾಗಿ ಹಾಗೂ ಸಮಯ ಪ್ರಜ್ಞೆಯಿಂದ ತುರ್ತು ಬ್ರೇಕ್‌ ಎಳೆಯುವ ಮೂಲಕ ವ್ಯಕ್ತಿಯೊಬ್ಬನ ಜೀವವನ್ನು ಉಳಿಸಿದ್ದಾನೆ. ನಿಮ್ಮ ಜೀವನ ತುಂಬಾ ಅಮೂಲ್ಯವಾದುದು. ನಿಮಗಾಗಿ ಕೆಲವರು ಮನೆಯಲ್ಲಿ ಕಾಯುತ್ತಿರಬಹುದು ಎಂದು ಬರೆದು ರೈಲ್ವೆ ಸಚಿವಾಲಯ (Ministry of Railway)ಈ ಪೋಸ್ಟ್‌ ಮಾಡಿದೆ. 

Operation Divyanshi : ಕೊಳವೆಬಾವಿಗೆ ಬಿದ್ದ 15 ತಿಂಗಳ ಮಗುವಿನ ರಕ್ಷಣೆ!

ರೈಲ್ವೇ ಹಳಿ ಮೇಲೆ ಮಲಗಿದ್ದ ಶ್ವಾನಗಳನ್ನು ರಕ್ಷಿಸಿದ ಯುವಕ!
ಇತ್ತೀಚೆಗೆ ರೈಲ್ವೇ ಹಳಿ (Railway Track) ಮೇಲೆ ಸಿಲುಕಿದ್ದ ಶ್ವಾನದ (Dog) ರಕ್ಷಣೆಗೆ ಮುಂದಾದ ವ್ಯಕ್ತಿ, ತನ್ನ ಜೀವವನ್ನೂ ಲೆಕ್ಕಿಸದೇ, ಶ್ವಾನವನ್ನು ರಕ್ಷಿಸಿದ್ದರು. 2 ನಾಯಿ ಮರಿಗಳು ರೈಲ್ವೇ ಹಳಿ ಮೇಲೆ ಮಲಗಿದ್ದವು. ರೈಲು ಇನ್ನೇನು ಹರಿದೇ ಬಿಡ್ತು ಎನ್ನುವಾಗ, ಕೂಡಲೇ ಧಾವಿಸಿದ ಯುವಕ ಶ್ವಾನಗಳನ್ನು ಬಚಾವ್ ಮಾಡಿದ್ದಾನೆ. ಈ ದೃಶ್ಯ ಮೈ ಜುಂ ಎನಿಸುತ್ತದೆ.  ಇಲ್ಲಿ ಸ್ವಲ್ಪ ತಡವಾಗಿದ್ದರೂ ಯುವಕ ಹಾಗೂ ನಾಯಿ ಇಬ್ಬರ ಪ್ರಾಣಕ್ಕೂ ಅಪಾಯವಾಗುತ್ತಿತ್ತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

Viral News: ಜೀವದ ಹಂಗು ತೊರೆದು, ರೈಲ್ವೇ ಹಳಿ ಮೇಲೆ ಮಲಗಿದ್ದ ಶ್ವಾನಗಳನ್ನು ರಕ್ಷಿಸಿದ ಯುವಕ!

"

Follow Us:
Download App:
  • android
  • ios