Viral Video: ನಡುರಸ್ತೆಯಲ್ಲೇ ವ್ಯಕ್ತಿಗೆ ಹೃದಯಾಘಾತ, ಸಿಪಿಆರ್‌ ನೀಡಿ ಬದುಕಿಸಿದ ಟ್ರಾಫಿಕ್‌ ಪೊಲೀಸ್‌!

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 2 ನಿಮಿಷದ 3 ಸೆಕೆಂಡುಗಳ ವೀಡಿಯೊ ಕ್ಲಿಪ್‌ನಲ್ಲಿ, ಟ್ರಾಫಿಕ್ ಪೋಲೀಸ್ ರಾಜಶೇಖರ್ ಅವರು ನಡುರಸ್ತೆಯಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿದ್ದ ಬಾಲರಾಜು ಎವ ವ್ಯಕ್ತಿಗೆ ಸಿಪಿಆರ್‌ ನೀಡುವ ಮೂಲಕ ಜೀವ ಉಳಿಸಿದ್ದಾರೆ.
 

Man Collapses After Heart Attack Traffic Police Constable Saves His Life By Giving CPR in Cyberabad san

ಸೈಬರಾಬಾದ್‌ (ಫೆ.24): ನಡುರಸ್ತೆಯಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬನಿಗೆ ತಕ್ಷಣವೇ ಸಿಪಿಆರ್‌ ನೀಡುವ ಮೂಲಕ ಟ್ರಾಫಿಕ್‌ ಪೊಲೀಸ್‌ ಒಬ್ಬರು ಅವರ ಜೀವವನ್ನು ಉಳಿಸಿದ ಘಟನೆ ತೆಲಂಗಾಣದಲ್ಲಿ ನಡೆಯಲಿದೆ. ಸೈಬರಾಬಾದ್‌ನ ರಾಜೇಂದ್ರನಗರ ಟ್ರಾಫಿಕ್‌ ಪೊಲೀಸ್‌ ಠಾಣೆಯ ಕಾನ್ಸ್‌ಟೇಬಲ್‌ ರಾಜೀಂದರ್‌, ರಸ್ತೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಬಾಲರಾಜು ಎನ್ನುವ ವ್ಯಕ್ತಿಗೆ ಸಿಪಿಆರ್‌ ನೀಡಿದ್ದರು. ಈ ವಿಡಿಯೋವಿಗ ವೈರಲ್‌ ಆಗಿದ್ದು, ತೆಲಂಗಾಣದ ಆರೋಗ್ಯ ಸಚಿವ ಟಿ.ಹರೀಶ್‌ ರಾವ್‌ ಸೇರಿದಂತೆ ಇತರ ವ್ಯಕ್ತಿಗಳು ಇದನ್ನು ಶೇರ್‌ ಮಾಡಿದ್ದಾರೆ. ಎಂದಿನಂತೆ ಶುಕ್ರವಾರವೂ ಅರ್ಮಘರ್‌ ಪ್ರದೇಶದಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ರಾಜಶೇಖರ್‌, ಈ ವೇಳೆ ಎಲ್‌ಬಿ ನಗರದ ನಿವಾಸಿ ಬಾಲರಾಜು ಎನ್ನುವವರು ಸಡನ್‌ ಆಗಿ ಕುಸಿದು ಬಿದ್ದಿದ್ದನ್ನು ಕಂಡಿದ್ದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ರಾಜಶೇಖರ್‌ ಅವರಿಗೆ ಹೃದಯಾಘಾತವಾಗಿದೆ ಎನ್ನುವುದನ್ನು ಅರಿತುಕೊಂಡು ತಕ್ಷಣವೇ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ ಅನ್ನು ನೀಡಿ ಅವರ ಜೀವವನ್ನು ರಕ್ಷಣೆ ಮಾಡಿದರು.  ಕಾನ್ಸ್‌ಟೇಬಲ್‌ನ ಸಮಯೋಚಿತ ಸಿಪಿಆರ್‌ನಿಂದಾಗಿ ಬಾಲರಾಜು ಅವರು ಬದುಕುಳಿದಿದ್ದಾರೆ.

ವ್ಯಕ್ತಿಗೆ ಸಿಪಿಆರ್‌ ನೀಡಿ ಬದುಕಿಸಿದ ಟ್ರಾಫಿಕ್‌ ಪೊಲೀಸ್‌ ರಾಜಶೇಖರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಸಮಯಪ್ರಜ್ಞೆಯಿಂದ ಯುವಕನ ಜೀವವನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ಕೂಡ ರಾಜಶೇಖರ್ ಅವರನ್ನು  ಹೊಗಳಿದ್ದಾರೆ. ಇನ್ನು ಹಿರಿಯ ಪೊಲೀಸ್‌ ಅಧಿಕಾರಿಗಳು  ಕೂಡ ರಾಜಶೇಖರ್‌ ಅವರ ಸಮಯಪ್ರಜ್ಞೆಯನ್ನು ಮನಸಾರೆ ಹೊಗಳಿದ್ದಾರೆ. ಅದಲ್ಲದೆ, ಸೈಬರಾಬಾದ್ ಸಿಪಿ ಸ್ಟೀಫನ್ ರವೀಂದ್ರ (ಸೈಬರಾಬಾದ್ ಸಿಪಿ ಸ್ಟೀಫನ್ ರವೀಂದ್ರ)... ಕಾನ್ ಸ್ಟೇಬಲ್ ಅವರ ಸಮಯಪ್ರಜ್ಞೆಯನ್ನು ಮೆಚ್ಚಿ ಬಹುಮಾನ ನೀಡಿದರು. ಸೈಬರಾಬಾದ್ ಟ್ರಾಫಿಕ್ ಡಿಸಿಪಿ ಹರ್ಷವರ್ಧನ್, ಶಂಶಾಬಾದ್ ಟ್ರಾಫಿಕ್ ಎಸಿಪಿ ಶ್ರೀನಿವಾಸನಾಯ್ಡು, ರಾಜೇಂದ್ರನಗರ ಸಂಚಾರ ನಿರೀಕ್ಷಕ ಶ್ಯಾಮಸುಂದರ್ ರೆಡ್ಡಿ ರಾಜಶೇಖರ್ ಕೂಡ ಪೇದೆಯನ್ನು ಅಭಿನಂದಿಸಿದ್ದಾರೆ. ಕಾನ್‌ಸ್ಟೆಬಲ್ ರಾಜಶೇಖರ್ ಕೂಡ ತಮ್ಮ ಕಾರ್ಯದಿಂದ ವ್ಯಕ್ತಿಯ ಜೀವ ಉಳಿದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

Health Tips: ಹೃದಯ ಸ್ತಂಭನವಾದಾಗ ಹೀಗೆ ಮಾಡಿದ್ರೆ ವ್ಯಕ್ತಿ ಬದುಕೋ ಚಾನ್ಸ್‌ ಹೆಚ್ಚು

ಕ್ರವಾರ ಬೆಳಗ್ಗೆ ಎಲ್‌ಬಿ ನಗರದ ನಿವಾಸಿಯಾಗಿರುವ ಬಾಲರಾಜು, ರಾಜೇಂದ್ರ ನಗರ ಸರ್ಕಲ್‌ ಪ್ರದೇಶದಲ್ಲಿ ಹೃದಯಾಘಾತದಿಂದಾಗಿ ಕುಸಿದು ಬಿದ್ದಿದ್ದರು. ಇದನ್ನು ಗಮನಿಸಿದ ರಾಜಶೇಖರ್‌, ತಕ್ಷಣವೇ ಅವರು ಕುಸಿದು ಬಿದ್ದ ಪ್ರದೇಶಕ್ಕೆ ಓಡಿ ಬಂದಿದ್ದರು. ಹೃದಯಾಘಾತವಾಗಿದೆ ಎನ್ನುವುದನ್ನು ಅರಿತುಕೊಂಡ ರಾಜಶೇಖರ್‌, ಮೊದಲಿಗೆ ಅವರ ಎದೆಯ ಭಾಗದಲ್ಲಿ ಕೈ ಇರಿಸಿದ್ದರು. ಹೃದಯಬಡಿತ ಇಲ್ಲದೇ ಇರುವುದನ್ನು ಗಮನಿಸಿದ ರಾಜಶೇಖರ್‌ ತಕ್ಷಣವೇ ಸಿಪಿಆರ್‌ ಮಾಡಲು ಆರಂಭಿಸಿದರು. ಎದೆಯ ಭಾಗದಲ್ಲಿ ಜೋರಾಗಿ ಒತ್ತುವ ಮೂಲಕ ಉಸಿರು ತುಂಬುವ ಪ್ರಯತ್ನ ಮಾಡಿದರು. ಕೆಲ ನಿಮಿಷದಲ್ಲಿಯೇ ಹೃದಯಾಘಾತವಾಗಿ ಬಿದ್ದಿದ್ದ ವ್ಯಕ್ತಿ, ಉಸಿರಾಡಲು ಆರಂಭಿಸಿದ್ದರು.

Heart attack ಆದಾಗ ಏನ್ಮಾಡ್ಬೇಕು ? ಐಕಿಯಾದಲ್ಲಿ ವ್ಯಕ್ತಿಯ ಪ್ರಾಣ ಉಳಿಸಿದ ಡಾಕ್ಟರ್‌ ಹೇಳಿದ್ದೇನು ?

ಆ ಬಳಿಕ ತಮ್ಮ ಮೇಲಧಿಕಾರಿಗಳಿಗೆ ವಿಷಯ ತಿಳಿಸಿದ ರಾಜಶೇಖರ್‌, ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ತಕ್ಷಣವೇ ದಾಖಲು ಮಾಡಿ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದರು. ಪ್ರಸ್ತುತ ಬಾಲರಾಜ್‌ ಅವರ ಆರೋಗ್ಯ ಕ್ಷೇಮವಾಗಿದೆ.  ಯುವಕ ಕೆಳಗೆ ಬಿದ್ದ ತಕ್ಷಣ ಸಕಾಲದಲ್ಲಿ ಸಿಪಿಆರ್ ಮಾಡಿ ಪ್ರಾಣ ಉಳಿಸಿದ ಕಾನ್ ಸ್ಟೇಬಲ್ ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

Latest Videos
Follow Us:
Download App:
  • android
  • ios