Asianet Suvarna News Asianet Suvarna News

Heart attack ಆದಾಗ ಏನ್ಮಾಡ್ಬೇಕು ? ಐಕಿಯಾದಲ್ಲಿ ವ್ಯಕ್ತಿಯ ಪ್ರಾಣ ಉಳಿಸಿದ ಡಾಕ್ಟರ್‌ ಹೇಳಿದ್ದೇನು ?

ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗ್ತಿದೆ. ವೃದ್ಧರು ಮಕ್ಕಳು ಅನ್ನೋ ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಹಾರ್ಟ್‌ಅಟ್ಯಾಕ್‌ಗೆ ತುತ್ತಾಗುತ್ತಿದ್ದಾರೆ. ಹೀಗಿರುವಾಗ ನಾಗಸಂದ್ರದಲ್ಲಿ ಸಿಪಿಆರ್‌ ಮೂಲಕ ವ್ಯಕ್ತಿಯ ಪ್ರಾಣ ಉಳಿಸಿದ ನಂತರ ವೈದ್ಯರು ಹೃದಯಾಘಾತದ ಬಗ್ಗೆ ಕೆಲವು ಅಗತ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

Doctor who saved man at IKEA store in Bengaluru says about Heartattack Vin
Author
First Published Jan 5, 2023, 10:34 AM IST

ಬೆಂಗಳೂರಿನ ನಾಗಸಂದ್ರದಲ್ಲಿರುವ ಐಕಿಯಾ ಶಾಪಿಂಗ್ ಮಾಲ್‌ಗೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ದಿಢೀರ್ ಹೃದಯಾಘಾತ (Heartattack)ವಾಗಿದ್ದು, ಅಲ್ಲೇ ಇದ್ದ ವೈದ್ಯರೊಬ್ಬರು ಅವರಿಗೆ ಸಿಪಿಆರ್ ಮಾಡಿ ಜೀವ ಉಳಿಸಿದ್ದರು.  ಈ ವೈದ್ಯರು ಕೂಡ ಐಕಿಯಾಗೆ ಶಾಪಿಂಗ್ ಮಾಡುವ ಸಲುವಾಗಿ ಬಂದಿದ್ದಾಗ ಈ ಘಟನೆ ನಡೆದಿತ್ತು. ಮಧ್ಯಪ್ರದೇಶ ಮೂಲದ ವೈದ್ಯರು 10 ನಿಮಿಷಗಳಿಗೂ ಹೆಚ್ಚು ಕಾಲ ವ್ಯಕ್ತಿಗೆ ಸಿಪಿಆರ್ ಮಾಡಿ ಜೀವ ಉಳಿಸಿದರು. ವೈದ್ಯರ ತಕ್ಷಣದ ಜೀವ ಉಳಿಸುವ ಕಾರ್ಯಕ್ಕೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಸಹ ಆಗಿತ್ತು. 

ವಿಡಿಯೋದಲ್ಲಿ ಕಾಣಿಸುವಂತೆ ಐಕಿಯಾ ಫರ್ನಿಚರ್ ಸ್ಟೋರ್‌ನಲ್ಲಿ(furniture store) ವ್ಯಕ್ತಿಯೊಬ್ಬರು ನಿಶ್ಚಲರಾಗಿ ಮಲಗಿದ್ದು, ವೈದ್ಯರು ಹೃಯಘಾತದಿಂದ ಪ್ರಜ್ಞೆ ತಪ್ಪಿದ ವ್ಯಕ್ತಿಯನ್ನು ಕೆಳಗೆ ಮಲಗಿಸಿ ಸಿಪಿಆರ್ ಮಾಡುವುದನ್ನು ಕಾಣಬಹುದು. ಇದೇ ವೇಳೆ ಸುತ್ತಲು ಜನರು ಸೇರಿರುವುದನ್ನು ನೋಡಬಹುದು. ಪ್ರಜ್ಞೆ ತಪ್ಪಿದ ವ್ಯಕ್ತಿ ಸಿಪಿಆರ್ ನಂತರ ಎಚ್ಚರವಾಗಿದ್ದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಮಧ್ಯಪ್ರದೇಶದ ನಿಮೂಚ್‌ನ ವೈದ್ಯರಾದ ರಮೇಶ್ ದಕ್‌ ಈ ಕೆಲಸ ಮಾಡಿದ್ದು, ಅವರ ಮಗ ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದರು. ವೈದ್ಯರ ಕಾರ್ಯಕ್ಕೆ ಹಲವರು ಕಾಮೆಂಟ್ ಮಾಡಿ ಮೆಚ್ಚುಗೆ (Compliment) ಸೂಚಿಸಿದ್ದರು. ಅನೇಕರು ಸಿಪಿಆರ್(PCR) ಬಗ್ಗೆ ಶಿಕ್ಷಣ ಸಂಸ್ಥೆಗಳಲ್ಲಿ ತರಬೇತಿ (Training) ನೀಡಬೇಕು. ಜನ ಸಾಮಾನ್ಯರಿಗೆ ಅದರ ಅರಿವಿರಬೇಕು ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದರು.

Exercise ಅತಿಯಾದ್ರೆ ಹಾರ್ಟ್ ಅಟ್ಯಾಕ್ ಗ್ಯಾರಂಟಿ, ಅತಿಯಾಗ್ತಿದೆ ಅಂತ ತಿಳ್ಕೊಳ್ಳೋದು ಹೇಗೆ ?

ನಾಗಸಂದ್ರದಲ್ಲಿ ಸಿಪಿಆರ್‌ ಮೂಲಕ ವ್ಯಕ್ತಿಯ ಪ್ರಾಣ ಉಳಿಸಿದ ನಂತರ ವೈದ್ಯರು ಹೃದಯಾಘಾತದ ಬಗ್ಗೆ ಕೆಲವು ಅಗತ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ವ್ಯಕ್ತಿಗೆ ಹೃದಯಾಘಾತವಾದ ಜೀವ ಉಳಿಸಲು ಏನು ಮಾಡಬಹುದು ? ಸಿಪಿಆರ್‌ ಮಾಡುವುದು ಹೇಗೆ ಮೊದಲಾದ ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ.

ಪ್ರತಿ ನಿಮಿಷವೂ ನಿರ್ಣಾಯಕ: ಹೃದಯಾಘಾತವಾದ ಸಂದರ್ಭದಲ್ಲಿ ಪ್ರತಿ ನಿಮಿಷವೂ ನಿರ್ಣಾಯಕವಾಗಿರುತ್ತದೆ ಎಂದು ಡಾ.ರಮೇಶ್ ದಕ್‌ ಹೇಳಿದ್ದಾರೆ. ಐಕಿಯಾದಲ್ಲಿ ನಾನು ವ್ಯಕ್ತಿಗೆ ಹತ್ತು ನಿಮಿಷ ತಡವಾಗಿ ವ್ಯಕ್ತಿಗೆ ಸಿಪಿಆರ್ ಚಿಕಿತ್ಸೆ (Treatment) ನೀಡಿದರೂ ಜೀವವೇ ಹೋಗಿರುತ್ತಿತ್ತು ಎಂದು ಅವರು ಹೇಳಿದ್ದಾರೆ. ಹೆಚ್ಚಿನ 'ವೈದ್ಯರಿಗೆ ಹೃದಯಾಘಾತದ ಸಂದರ್ಭದಲ್ಲಿ ವ್ಯಕ್ತಿಗೆ ಸಿಪಿಆರ್‌ ನೀಡಲು ತಿಳಿದಿದ್ದರೂ ಅವರು ಆ ಚಿಕಿತ್ಸೆ ನೀಡಲು ಹಿಂಜರಿಯುತ್ತಾರೆ. ಯಾಕೆಂದರೆ ಈ ರೀತಿ ಮಾಡುವುದರಿಂದ ಚಿಕಿತ್ಸೆ ಫಲಕಾರಿಯಾಗದಿದ್ದರೆ, ವ್ಯಕ್ತಿಯ ಜೀವ ಹೋಗಿದ್ದಕ್ಕೆ ತಾವೇ ಹೊಣೆಯಾಗುತ್ತೇವೆ ಎಂದು ಅವರು ಭಾವಿಸುತ್ತಾರೆ' ಎಂದು ಡಾ.ರಮೇಶ್ ದಕ್‌ ಹೇಳಿದ್ದಾರೆ.

ಚಳಿಗಾಲದಲ್ಲಿ ಬೆಳಗ್ಗೆ ಹೃದಯಾಘಾತದ ಅಪಾಯ ಹೆಚ್ಚು, ತಪ್ಪಿಸಲು ಏನ್ ಮಾಡ್ಬೇಕು ?

ಆದರೆ, ನೀವು ಸ್ವಲ್ಪ ಬಲದಿಂದ CPR ಅನ್ನು ನಿರ್ವಹಿಸುತ್ತಿದ್ದರೂ ಅದು ಪರವಾಗಿಲ್ಲ, ಪ್ರಕ್ರಿಯೆಯಲ್ಲಿ ಪಕ್ಕೆಲುಬುಗಳು ಮುರಿದರೂ ಸಹ, ಅವು ಮೂರರಿಂದ ನಾಲ್ಕು ವಾರಗಳಲ್ಲಿ ಗುಣವಾಗುತ್ತವೆ. ಆದ್ರೆ ಸಿಪಿಆರ್ ಮಾಡುವಾಗ ಒತ್ತಡವನ್ನು ಹೇರಬೇಕು ಮತ್ತು ಒಬ್ಬರು 8-10 ನಿಮಿಷಗಳ ಕಾಲ ಈ ಚಿಕಿತ್ಸೆಯನ್ನು ಪ್ರಯತ್ನಿಸಬೇಕು ಎಂದು ಡಾ.ರಮೇಶ್ ದಕ್‌ ಮಾಹಿತಿ ನೀಡಿದ್ದಾರೆ.

ಸಿಪಿಆರ್ ತರಬೇತಿ ಪಡೆದುಕೊಳ್ಳುವುದು ಸೂಕ್ತ: ವಿಮಾನ ನಿಲ್ದಾಣಗಳು, ಶಾಲೆಗಳು, ಕಾಲೇಜುಗಳು ಮತ್ತು ರೈಲ್ವೆ ನಿಲ್ದಾಣಗಳು ಸೇರಿದಂತೆ ದೊಡ್ಡ ಜಾಗಗಳಲ್ಲಿ ಕನಿಷ್ಠ 2% ಉದ್ಯೋಗಿಗಳು ಸಿಪಿಆರ್ ಚಿಕಿತ್ಸೆಯ ತರಬೇತಿ ಪಡೆಯುವುದು ಉತ್ತಮವಾಗಿದೆ ಎಂದು ವೈದ್ಯರು ಹೇಳಿದರು. ವಿಮಾನ ನಿಲ್ದಾಣಗಳ ಮಾಲ್‌ಗಳು ಡಿಫಿಬ್ರಿಲೇಟರ್ ಮತ್ತು ತುರ್ತು ಚುಚ್ಚುಮದ್ದುಗಳಾದ ಅಟ್ರೋಪಿನ್ ಅನ್ನು ಅಂತಹ ಸಂದರ್ಭಗಳಲ್ಲಿ ಸೂಕ್ತವಾಗಿ ಇಟ್ಟುಕೊಳ್ಳಬೇಕು ಎಂದು ಅವರು ತಿಳಿಸಿದರು.

Follow Us:
Download App:
  • android
  • ios