ರಾಮ ಮಂದಿರ ಪ್ರಾಣಪ್ರತಿಷ್ಠಾಪನೆ ದಿನ ರಜೆ ನಿರಾಕರಿಸಿದ ಮ್ಯಾನೇಜರ್, ರಾಜೀನಾಮೆ ನೀಡಿ ಹೊರಬಂದ ರಾಮಭಕ್ತ!
ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯನ್ನು ನೋಡುವ ಸಲುವಾಗಿ ರಜೆ ಕೇಳಿದ್ದ ವ್ಯಕ್ತಿಗೆ ಮ್ಯಾನೇಜರ್ ರಜೆ ನಿರಾಕರಿಸಿದ್ದಾನೆ. ಇದರ ಬೆನ್ನಲ್ಲಿಯೇ ವ್ಯಕ್ತಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬಂದಿರುವ ಟ್ವೀಟ್ ವೈರಲ್ ಆಗಿದೆ.
ನವದೆಹಲಿ (ಜ.22): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರದ ಭವ್ಯ ಉದ್ಘಾಟನೆ ಹಿನ್ನೆಲೆಯಲ್ಲಿ ಜನವರಿ 22 ರಂದು ಭಾರತದಾದ್ಯಂತ ಹಲವಾರು ರಾಜ್ಯಗಳು ಸಾರ್ವಜನಿಕ ರಜೆ ಘೋಷಿಸಿ ಕಚೇರಿಗಳು ಕೆಲಸದ ರಿಯಾಯಿತಿಗಳನ್ನು ಘೋಷಿಸಿದೆ. ಆದರೆ, ಕಾರ್ಯಕ್ರಮ ನೋಡುವ ಸಲುವಾಗಿ ರಜೆ ಕೇಳಿದ್ದ ವ್ಯಕ್ತಿಗೆ ರಜೆ ನಿರಾಕರಿಸಿರುವ ಟ್ವೀಟ್ ಸಾಕಷ್ಟು ವೈರಲ್ ಆಗಿದೆ. ಗಗನ್ ತಿವಾರಿ ಎಂಬ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತಾಗಿ ಪೋಸ್ಟ್ ಮಾಡಿದ್ದಾರೆ. ರಾಮ ಜನ್ಮಭೂಮಿಯಲ್ಲಿ ರಾಮ್ ಲಲ್ಲಾ ಅವರ ಪ್ರಾಣ ಪ್ರತಿಷ್ಠೆಯನ್ನು ನೋಡುವ ಸಲುವಾಗಿ ಸೋಮವಾರ ರಜೆ ಕೇಳಿದ್ದೆ. ಆದರೆ, ತಮ್ಮ ಜನರಲ್ ಮ್ಯಾನೇಜರ್‌ನಿಂದ ರಜೆ ನೀಡಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಐತಿಹಾಸಿಕ ದಿನದಂದು ರಜೆ ನಿರಾಕರಿಸಿದ್ದಕ್ಕೆ, ನನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದೇನೆ ಎಂದು ಆತ ಬರೆದುಕೊಂಡಿದ್ದಾನೆ. 'ನಾನು ನನ್ನ ಕೆಲಸವನ್ನು ತೊರೆದಿದ್ದೇನೆ. ನನ್ನ ಕಂಪನಿಯ ಜನರಲ್ ಮ್ಯಾನೇಜರ್ ಮುಸ್ಲಿಂ. ಆತ 22ಕ್ಕೆ ರಜೆ ನೀಡಲು ನಿರಾಕರಿಸಿದ್ದ' ಎಂದು ಬರೆದುಕೊಂಡಿದ್ದಾರೆ. ಆತನ ಈ ಟ್ವೀಟ್ ಬೆನ್ನಲ್ಲಿಯೇಸಾಕಷ್ಟು ಪರ ವಿರೋಧ ಚರ್ಚೆಗಳು ಆರಂಭವಾಗಿದೆ.
ರಜೆ ನಿರಾಕರಿಸಿದ ಕಾರಣಕ್ಕೆ ಕೆಲಸವನ್ನೇ ತೊರೆದಿರುವ ಗಗನ್ ತಿವಾರಿ ಅವರ ಪೋಸ್ಟ್‌ಗೆ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಭಗವಾನ್ ರಾಮನ ಭಕ್ತರು ಅವರ ನಿರ್ಧಾರವನ್ನು ಶ್ಲಾಘಿಸಿದರು ಮತ್ತು ಭಗವಂತನ ಆಶೀರ್ವಾದವು ಶೀಘ್ರದಲ್ಲೇ ಅವರಿಗೆ ಹೊಸ ಉದ್ಯೋಗವನ್ನು ನೀಡುವಂತೆ ಮಾಡುತ್ತದೆ ಎಂದು ಬರೆದಿದ್ದಾರೆ. ಇನ್ನೂ ಕೆಲವರು ಗಗನ್ ತಿವಾರಿಯನ್ನು "ಲೆಜೆಂಡ್" ಎಂದು ಸಹ ಪ್ರಶಂಸೆ ಮಾಡಿದ್ದಾರೆ.
ರಾಮಲಲ್ಲಾ ಧರಿಸಿದ್ದ ಆಭರಣಗಳ ವಿಶೇಷತೆಗಳೇನು? ಇಲ್ಲಿದೆ ಡೀಟೇಲ್ಸ್!
ಇನ್ನೂ ಕೆಲವರು ಆತುರದಲ್ಲಿ ಬಹಳ ಅಪಾಯಕಾರಿಯಾದ ನಿರ್ಧಾರ ಮಾಡಿದ್ದೀರಿ ಎಂದು ಎಚ್ಚರಿಸಿದ್ದಾರೆ. "ಭಾರತವು ಕೆಲವೊಮ್ಮೆ ನಂಬಿಕೆ ಮೀರಿ ನನ್ನನ್ನು ವಿಸ್ಮಯಗೊಳಿಸುತ್ತದೆ" ಎಂದು ಕೆಲವರು ಬರೆದಿದ್ದರೆ, ಮತ್ತೊಬ್ಬರು ಹೇಳಿದರು, ಸಿಕ್ ಲೀವ್ ತೆಗೆದುಕೊಂಡಿದ್ದರೆ ಆಗ್ತಿತ್ತು. ಕೆಲಸ ತೊರೆಯುವ ಅಗತ್ಯವೇ ಬರ್ತಿರಲಿಲ್ಲ ಎಂದಿದ್ದಾರೆ.
ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ, ಕೇಜ್ರಿವಾಲ್ ಜಾಣತನ, ಕಾಂಗ್ರೆಸ್ ಹಿಟ್‌ವಿಕೆಟ್!