Asianet Suvarna News Asianet Suvarna News

ರಾಮಲಲ್ಲಾ ಧರಿಸಿದ್ದ ಆಭರಣಗಳ ವಿಶೇಷತೆಗಳೇನು? ಇಲ್ಲಿದೆ ಡೀಟೇಲ್ಸ್‌!

ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಪ್ರಭು ಶ್ರೀರಾಮಚಂದ್ರ ಧರಿಸಿದ್ದ ಆಭರಣಗಳ ವಿಶೇಷತೆಗಳನ್ನು ಶ್ರೀರಾಮ ಜನ್ಮಬೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತನ್ನ ಟ್ವಿಟರ್‌ ಪೇಜ್‌ನಲ್ಲಿ ಹಂಚಿಕೊಂಡಿದೆ.

Shri Ram Janmbhoomi Teerth Kshetra Shares Ram Lalla divine ornaments know the specialty san
Author
First Published Jan 22, 2024, 8:56 PM IST

ಅಯೋಧ್ಯೆ (ಜ.22): ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ. ರಾಮಲಲ್ಲಾ ಈಗ ತನ್ನ ದಿವ್ಯ ಮತ್ತು ಭವ್ಯ ರೂಪದಲ್ಲಿ ಎಲ್ಲರ ಮುಂದೆ ಕಾಣುತ್ತಿದ್ದು, ಸರ್ವರಿಗೂ ದರ್ಶನ ನೀಡುತ್ತಿದ್ದಾರೆ. ಪುರಾಣಗಳಲ್ಲಿ ವಿವರಿಸಲಾದ ಅವರ ನೋಟವನ್ನು ಆಧರಿಸಿ ಭಗವಾನ್ ರಾಮಲಲ್ಲಾ ಅವರ ಮಗುವಿನ ರೂಪವನ್ನು ಅನೇಕ ದೈವಿಕ ಆಭರಣಗಳು ಮತ್ತು ವಸ್ತಗಳಿಂದ ಅಲಂಕರಿಸಲಾಗಿದೆ. ಅಧ್ಯಾತ್ಮ ರಾಮಾಯಣ, ಶ್ರೀಮದ್ವಾಲ್ಮೀಕಿ ರಾಮಾಯಣ, ರಾಮಚರಿತಮಾನಸ್‌ ಮತ್ತು ಆಳವಂದರ ಸ್ತೋತ್ರಗಳ ಸಂಶೋಧನೆ ಮತ್ತು ಅಧ್ಯಯನದ ನಂತರ ಮತ್ತು ಅವುಗಳಲ್ಲಿ ವಿವರಿಸಲಾದ ಶ್ರೀರಾಮನ ಗ್ರಂಥಾಧಾರಿತ ಸೌಂದರ್ಯದ ಪ್ರಕಾರ ಈ ದೈವಿಕ ಆಭರಣಗಳನ್ನು ಮಾಡಲಾಗಿದೆ. ಅಯೋಧ್ಯೆಯ ನಿವಾಸಿ, ಖ್ಯಾತ ಬರಹಗಾರ ಯತೀಂದ್ರ ಮಿಶ್ರಾ ಅವರು ಆಭರಣಗಳ ಪರಿಕಲ್ಪನೆ ಮತ್ತು ನಿರ್ದೇಶ ಮಾಡಿದ್ದಾರೆ. ಇದರ ಆಧಾರದ ಮೇಲೆ ಅಂಕುರ್ ಆನಂದ್ ಅವರ ಸಂಸ್ಥೆ ಲಕ್ನೋದ ಹರ್ಷಹೈಮಲ್ ಶ್ಯಾಮಲಾಲ್ ಜ್ಯುವೆಲರ್ಸ್ ಈ ಆಭರಣವನ್ನು ತಯಾರಿಸಿದ್ದಾರೆ.


ರಾಮಲಲ್ಲಾನ ಬಟ್ಟೆ: ಬನಾರಸಿ ಬಟ್ಟೆಯ ಹಳದಿ ಧೋತಿ ಮತ್ತು ಕೆಂಪು ಬಣ್ಣದ ಅಂಗವಸ್ತ್ರದಲ್ಲಿ ರಾಮಲಲ್ಲಾನ ಅಲಂಕರಿಸಲಾಗಿದೆ. ಈ ಬಟ್ಟೆಗಳನ್ನು ಶುದ್ಧ ಚಿನ್ನದ ಝರಿ ಮತ್ತು ನಕ್ಷತ್ರಗಳ ಕುಸಿರಿ ಕೆಲಸ ಮಾಡಲಾಗಿದೆ. ಅದರ ಮೇಲೆ ವೈಷ್ಣವ ಮಂಗಳಕರ ಚಿಹ್ನೆಗಳಾದ ಶಂಖ, ಪದ್ಮ, ಚಕ್ರ ಮತ್ತು ನವಿಲು ಕೆತ್ತಲಾಗಿದೆ. ಈ ಬಟ್ಟೆಗಳನ್ನು ದೆಹಲಿಯ ಜವಳಿ ತಯಾರಕ ಮನೀಶ್ ತ್ರಿಪಾಠಿ ಅವರು ಅಯೋಧ್ಯಾ ಧಾಮದಲ್ಲಿ ತಂಗಿದ್ದಾಗ ತಯಾರಿಸಿದ್ದಾರೆ.

ಆಭರಣಗಳ ಮಾಹಿತಿ: ಪೌರಾಣಿಕ ವಿವರಣೆಗಳ ಪ್ರಕಾರ, ರಾಮಲಲ್ಲಾ ತನ್ನ ತಲೆಯ ಮೇಲೆ ಕಿರೀಟವನ್ನು, ಕುತ್ತಿಗೆಗೆ ಹಾರವನ್ನು, ಕೌಸ್ತುಭಮಣಿ, ವೈಜಯಂತಿ ಅಥವಾ ವಿಜಯಮಾಲೆ ಅನ್ನು ಹೃದಯ ಭಾಗದಲ್ಲಿ, ಸೊಂಟಕ್ಕೆ ಕಂಚಿ ಅಥವಾ ಕವಚವನ್ನು ಧರಿಸುತ್ತಿದ್ದರು ಎನ್ನಲಾಗಿದೆ. ಅದೇ ರೀತಿ ಪ್ರತಿಯೊಂದು ಆಭರಣಗಳು ವಿಶೇಷತೆಯನ್ನು ಹೊಂದಿವೆ.

 

ತಲೆಯ ಮೇಲೆ ಕಿರೀಟ: ಉತ್ತರ ಭಾರತೀಯ ಸಂಪ್ರದಾಯದ ಪ್ರಕಾರ ಚಿನ್ನದಿಂದ ಮಾಡಲ್ಪಟ್ಟಿದೆ, ಇದರಲ್ಲಿ ಮಾಣಿಕ್ಯ, ಪಚ್ಚೆ ಮತ್ತು ವಜ್ರಗಳನ್ನು ಅಲಂಕರಿಸಲಾಗಿದೆ. ಸೂರ್ಯನನ್ನು ಕಿರೀಟದ ಮಧ್ಯದಲ್ಲಿ ಚಿತ್ರಿಸಲಾಗಿದೆ. ಕಿರೀಟದ ಬಲಭಾಗದಲ್ಲಿ ಮುತ್ತುಗಳನ್ನು ಚಿನ್ನದ ತಂತಿಗಳಿಂದ ಇಳಿಬಿಡಲಾಗಿದೆ.

ಕುಂಡಲಿ: ರಾಮಲಲ್ಲಾನ ಕಿವಿಯ ಆಭರಣಗಳನ್ನು ಮುಕುಟ ಅಥವಾ ಕಿರೀಟದ ಪ್ರಕಾರ ಮತ್ತು ಅದೇ ವಿನ್ಯಾಸದ ಅನುಕ್ರಮದಲ್ಲಿ ತಯಾರಿಸಲಾಗಿದೆ. ನವಿಲು ಆಕೃತಿಗಳನ್ನು ಹೊಂದಿದ್ದು, ಅದನ್ನು ಚಿನ್ನ, ವಜ್ರ, ಮಾಣಿಕ್ಯ ಮತ್ತು ಪಚ್ಚೆಗಳಿಂದ ಅಲಂಕರಿಸಲಾಗಿದೆ.

ಕುತ್ತಿಗೆ ಕಟ್ಟಿರುವ ಸರ: ಅರ್ಧ ಚಂದ್ರನ ಆಕಾರದ ರತ್ನಗಳಿಂದ ಹೊದಿಸಿದ ಹಾರದಿಂದ ಕುತ್ತಿಗೆಯನ್ನು ಅಲಂಕರಿಸಲಾಗಿದೆ. ಅದರಲ್ಲಿ ಮಂಗಳಕರವಾದ ಹೂವುಗಳನ್ನು ಚಿತ್ರಿಸಲಾಗಿದ್ದು, ಮಧ್ಯದಲ್ಲಿ ಸೂರ್ಯ ದೇವರ ಚಿತ್ರಣವಿದೆ. ಚಿನ್ನದಿಂದ ಮಾಡಿದ ಕುತ್ತಿಗೆಯ ಸರವನ್ನು ವಜ್ರಗಳು, ಮಾಣಿಕ್ಯಗಳು ಮತ್ತು ಪಚ್ಚೆಗಳಿಂದ ಅಲಂಕರಿಸಲಾಗಿದೆ. ಕುತ್ತಿಗೆಯ ಕೆಳಗೆ ಪಚ್ಚೆಗಳ ಸರವನ್ನು ಹಾಕಲಾಗಿದೆ.

ಕೌಸ್ತುಭಮಣಿ: ಕೌಸ್ತುಭಮಣಿಯನ್ನು ಭಗವಂತನ ಹೃದಯ ಭಾಗದಲ್ಲಿ ಇರಲಾಗಿದೆ. ಇದು ದೊಡ್ಡ ಮಾಣಿಕ್ಯ ಮತ್ತು ವಜ್ರಗಳಿಂದ ಅಲಂಕರಿಸಲ್ಪಟ್ಟಿದೆ. ಭಗವಾನ್ ವಿಷ್ಣು ಮತ್ತು ಅವನ ಅವತಾರಗಳು ತಮ್ಮ ಹೃದಯದಲ್ಲಿ ಕೌಸ್ತುಭಮಣಿಯನ್ನು ಧರಿಸುತ್ತಿದ್ದ ಎಂದು ಪುರಾಣಗಳು ಹೇಳಿವೆ.

ವೈಜಯಂತಿ ಅಥವಾ ವಿಜಯಮಾಲೆ: ಇದು ಚಿನ್ನದಿಂದ ಮಾಡಿದ ಮತ್ತು ಭಗವಂತ ಧರಿಸಿರುವ ಮೂರನೇ ಮತ್ತು ಉದ್ದನೆಯ ಹಾರವಾಗಿದೆ. ಕೆಲವು ಸ್ಥಳಗಳಲ್ಲಿ ಮಾಣಿಕ್ಯಗಳನ್ನು ಸೇರಿಸಲಾಗಿದ್ದು, ಇದನ್ನು ವಿಜಯದ ಸಂಕೇತವಾಗಿ ಧರಿಸಲಾಗುತ್ತದೆ, ಇದರಲ್ಲಿ ವೈಷ್ಣವ ಸಂಪ್ರದಾಯದ ಎಲ್ಲಾ ಮಂಗಳಕರ ಚಿಹ್ನೆಗಳಾದ ಸುದರ್ಶನ ಚಕ್ರ, ಪದ್ಮಪುಷ್ಪ, ಶಂಖ ಮತ್ತು ಮಂಗಳ-ಕಲಶವನ್ನು ಚಿತ್ರಿಸಲಾಗಿದೆ. ಇದು ಕಮಲ, ಚಂಪಾ, ಪಾರಿಜಾತ, ಕುಂಡ ಮತ್ತು ತುಳಸಿ ಎಂಬ ಐದು ವಿಧದ ಹೂವುಗಳಿಂದ ಅಲಂಕರಿಸಲ್ಪಟ್ಟಿದೆ.

ಕಂಚಿ ಅಥವಾ ಸೊಂಟದಲ್ಲಿನ ಕವಚ: ರತ್ನಗಳಿಂದ ಕೂಡಿದ ಭಗವಂತನ ಸೊಂಟದ ಕವಚವನ್ನು ಹಾಕಲಾಗಿದೆ. ಇದು ಚಿನ್ನದಿಂದ ಮಾಡಲ್ಪಟ್ಟಿದೆ. ವಜ್ರಗಳು, ಮಾಣಿಕ್ಯಗಳು, ಮುತ್ತುಗಳು ಮತ್ತು ಪಚ್ಚೆಗಳಿಂದ ಅಲಂಕರಿಸಲ್ಪಟ್ಟಿದೆ. ಶುದ್ಧತೆಯ ಭಾವನೆಯನ್ನು ನೀಡಲು ಐದು ಸಣ್ಣ ಗಂಟೆಗಳನ್ನು ಸಹ ಸ್ಥಾಪಿಸಲಾಗಿದೆ. ಮುತ್ತುಗಳು, ಮಾಣಿಕ್ಯಗಳು ಮತ್ತು ಪಚ್ಚೆಗಳಿಂದ ಅಲಂಕೃತವಾದ ಸರಗಳನ್ನು ನೇತುಬಿಡಲಾಗಿದೆ.

ಭುಜಬಂಧ ಅಥವಾ ಅಂಗದ: ಚಿನ್ನ ಮತ್ತು ರತ್ನಗಳಿಂದ ಹೊದಿಸಿದ ಭುಜಬಂಧವನ್ನು ಭಗವಂತನ ಎರಡೂ ತೋಳುಗಳಲ್ಲಿ ಹಾಕಲಾಗಿದೆ.

ಬಳೆಗಳು: ರತ್ನಗಳಿಂದ ಕೂಡಿದ ಸುಂದರವಾದ ಬಳೆಗಳನ್ನು ಎರಡೂ ಕೈಗಳಿಗೆ ಧರಿಸಲಾಗಿದೆ.

ಉಂಗುರಗಳು: ಎಡ ಮತ್ತು ಬಲ ಎರಡೂ ಕೈಗಳ ಉಂಗುರಗಳು ರತ್ನದ ಉಂಗುರಗಳಿಂದ ಅಲಂಕರಿಸಲ್ಪಟ್ಟಿವೆ, ಅವುಗಳಿಂದ ಮುತ್ತಿನ ಸರಗಳು ನೇತು ಬಿದ್ದಿವೆ.

ಕಾಲುಗೆಜ್ಜೆ: ಕಾಲುಗಳಲ್ಲಿ ಚಿನ್ನದ ಗೆಜ್ಜೆಗಳನ್ನು ಧರಿಸಲಾಗಿದೆ. ಅಲ್ಲದೆ, ಚಿನ್ನದ ಕಿವಿಯೋಲೆಗಳನ್ನು ಹಾಕಲಾಗಿದೆ.

ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ, ಕೇಜ್ರಿವಾಲ್‌ ಜಾಣತನ, ಕಾಂಗ್ರೆಸ್‌ ಹಿಟ್‌ವಿಕೆಟ್‌!

ಎಡಗೈಯಲ್ಲಿ ಚಿನ್ನದ ಬಿಲ್ಲು ಮತ್ತು ಕೊರಳಲ್ಲಿ ಮಾಲೆ: ಭಗವಂತನ ಎಡಗೈಯಲ್ಲಿ ಮುತ್ತುಗಳು, ಮಾಣಿಕ್ಯಗಳು ಮತ್ತು ಪಚ್ಚೆಗಳು ನೇತಾಡುವ ಚಿನ್ನದ ಬಿಲ್ಲು ಇದೆ. ಅಂತೆಯೇ, ಬಲಗೈಯಲ್ಲಿ ಚಿನ್ನದ ಬಾಣವನ್ನು ಇರಿಸಲಾಗಿದೆ. ಕರಕುಶಲ ವಸ್ತುಗಳಿಗೆ ಮೀಸಲಾಗಿರುವ ಶಿಲ್ಪಮಂಜರಿ ಸಂಸ್ಥೆಯು ತಯಾರಿಸಿರುವ ಭಗವಂತನ ಕೊರಳಿಗೆ ಬಣ್ಣಬಣ್ಣದ ಹೂವಿನ ಮಾಲೆಯನ್ನು ಧರಿಸಲಾಗಿದೆ. ಅವನ ಹಣೆಯ ಮೇಲೆ ದೇವರ ಸಾಂಪ್ರದಾಯಿಕ ಮಂಗಲ-ತಿಲಕವನ್ನು ವಜ್ರಗಳು ಮತ್ತು ಮಾಣಿಕ್ಯಗಳಿಂದ ಮಾಡಲಾಗಿದೆ. ಭಗವಂತನ ಪಾದದ ಕೆಳಗೆ ಇರಿಸಲಾಗಿರುವ ಕಮಲದ ಕೆಳಗೆ ಚಿನ್ನದ ಹಾರವನ್ನು ಅಲಂಕರಿಸಲಾಗಿದೆ.

ಸೂರ್ಯ ವಂಶದ ಶ್ರೀರಾಮನ ನೆನಪಿಗೆ 'ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ' ಘೋಷಣೆ ಮಾಡಿದ ಮೋದಿ!

Follow Us:
Download App:
  • android
  • ios