Asianet Suvarna News Asianet Suvarna News

ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ, ಕೇಜ್ರಿವಾಲ್‌ ಜಾಣತನ, ಕಾಂಗ್ರೆಸ್‌ ಹಿಟ್‌ವಿಕೆಟ್‌!

ಬಿಜೆಪಿ ಪಾಲಿನ ರಾಜಕೀಯದ ದೊಡ್ಡ ದಾಳವಾಗಿದ್ದ ಅಯೋಧ್ಯೆಯ ಶ್ರೀರಾಮ ಮಂದಿರ ಈಗ ಈಡೇರಿದೆ. ಆದರೆ, ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತ್ರ ಬಿಜೆಪಿ ತನ್ನ ರಾಜಕೀಯ ತಂತ್ರಗಳನ್ನು ದೂರವಿಟ್ಟು ಜನರ ಭಾವನೆಗಳನ್ನು ಅರಿತು ಕಾರ್ಯಕ್ರಮ ನಡೆಸಿತು.
 

Ram Mandir Pran pratishtha What Congress Loss and Aap Gain san
Author
First Published Jan 22, 2024, 7:50 PM IST

ಬೆಂಗಳೂರು (ಜ.22): ಧರ್ಮದಿಂದ ದೇಶ, ರಾಮನಿಂದ ರಾಷ್ಟ್ರ ಎನ್ನುವ ಅರ್ಥದಲ್ಲಿ ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್‌ ಹಾಗೂ ಆರೆಸ್ಸೆಸ್‌ನ ಸರಸಂಘಚಾಲಕ್‌ ಮೋಹನ್‌ ಭಾಗ್ವತ್‌ ಮಾತನಾಡಿದರು. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡುತ್ತಿದ್ದ ಅತ್ಯಂತ ಪ್ರಮುಖ ವಿಚಾರವಾಗಿದ್ದ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ಇಂದು ಸಾಕಾರವಾಗಿದೆ. ಆದರೆ, ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ರಾಜಕೀಯಗೊಳಿಸುವ  ಎಲ್ಲಾ ಅವಕಾಶಗಳಿದ್ದವು. ಪ್ರಧಾನಿ ನರೇಂದ್ರ ಮೋದಿ ಇದ್ದ ಕಾರಣಕ್ಕೆ ರಾಜಕೀಯ ಚರ್ಚೆ ಶುರುವಾಗಿದ್ದರೂ, ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಬಿಜೆಪಿಯ ಮುಖ್ಯಮಂತ್ರಿಗಳು ಯಾರೂ ಸಮಾರಂಭದಲ್ಲಿ ಭಾಗವಹಿಸಲಿರಲಿಲ್ಲ. ಎಲ್ಲರೂ ತಾವಿದ್ದ ಸ್ಥಳದಿಂದಲೇ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದ್ದಾರೆ. ಸಮಾರಂಭಕ್ಕೆ ಸಾಧು ಸಂತರು, ವಿವಧ ಕ್ಷೇತ್ರಗಳ ಗಣ್ಯರು ಆಗಮಿಸಿದ್ದರು.  30 ವರ್ಷಗಳ ಹಿಂದೆ ಹೋರಾಟ ಆರಂಭವಾದಾಗ ಈ ರೀತಿಯ ಬೆಂಬಲ ವ್ಯಕ್ತವಾಗಿರಲಿಲ್ಲ. ಅಂದು ಬಿಜೆಪಿ ಹಾಗೂ ಸಂಘಪರಿವಾರ ಬೆಂಬಲಿತ ಸಂಸ್ಥೆಗಳ ಸದಸ್ಯರು ಮಾತ್ರವೇ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಆದರೆ, ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಮಾತ್ರ ಬಿಜೆಪಿ ಇದು ದೇಶದ ಪ್ರತಿ ಮನೆಯ ಕಾರ್ಯಕ್ರಮ ಎಂದು ಬಿಂಬಿಸಿದ್ದು ಮಾತ್ರವಲ್ಲದೆ, ಅದರಲ್ಲಿ ಯಶಸ್ವಿಯೂ ಆಗಿದೆ. ಅದಕ್ಕೆ ಕಾರಣ ಸೋಮವಾರದ ಮಂದಿರ ಪ್ರತಿಷ್ಠಾಪನೆ ವಿಚಾರವಾಗಿ ಇಡೀ ದೇಶಕ್ಕೆ ಇದ್ದ ಉತ್ಸಾಹ.

ರಾಮ ಮಂದಿರ ವಿಚಾರವನ್ನು ಆರಂಭದಿಂದಲೂ ಕಾಂಗ್ರೆಸ್‌ ರಾಜಕೀಯ ವಿಚಾರವಾಗಿಯೇ ಕಂಡಿತ್ತು. ಈ ಕಾರ್ಯಕ್ರಮವನ್ನೂ ಕೂಡ ಅದೇ ರೀತಿಯಾಗಿ ಕರೆದಿತ್ತು. ಆದರೆ, ದೇಶದ ಜನರಿಗೆ ಇಂದಿನ ಕಾರ್ಯಕ್ರಮದಲ್ಲಿ ಬಿಜೆಪಿಯಾಗಲಿ, ಸಂಘಪರಿವಾರವಾಗಲಿ ಕಂಡಿರಲಿಲ್ಲ. ಅಲ್ಲಿದ್ದದ್ದು ರಾಮ ಮಾತ್ರ. ಇಲ್ಲಿ 500 ವರ್ಷಗಳ ಹಿಂದೆ ಧ್ವಂಸ ಮಾಡಲಾಗಿದ್ದ ಮಂದಿರವನ್ನು ಮತ್ತೆ ಕಟ್ಟಲಾಗಿದೆ ಎನ್ನುವ ಅಂಶ ಮಾತ್ರವೇ ಕಾಣುತ್ತಿದೆ. ಬಾಬರ್‌ ಇಲ್ಲಿದ್ದ ದೇವಸ್ಥಾನವನ್ನು ಕೆಡವಿ ಮಸೀದಿ ಕಟ್ಟಿದ್ದ. ಅದೇ ಸ್ಥಳದಲ್ಲೀಗ ನಾವು ಮಂದಿರ ಕಟ್ಟಿದ್ದೇವೆ ಎನ್ನುವ ಅಂಶ ಮಾತ್ರವೇ ಇಲ್ಲಿ ಕಾಣುತ್ತಿದೆ.

ಆ ಲೆಕ್ಕಾಚಾರದಲ್ಲಿ ನೋಡುವುದಾದರೆ, 30 ವರ್ಷಗಳ ಹಿಂದೆ ನಡೆದಿದ್ದ ಘಟನೆಗಳಲ್ಲಿ ರಾಜಕೀಯ ಉದ್ದೇಶ ಕಾಣಿಸಿತ್ತು. ಆದರೆ, ಇಂದಿನ ಕಾರ್ಯಕ್ರಮದಲ್ಲಿ ಅಂಥ ಯಾವುದೇ ಅಂಶಗಳಿರಲಿಲ್ಲ. ಪ್ರಧಾನಿ ಮೋದಿ ಕೂಡ ಎಲ್ಲೂ ತಮ್ಮ ಭಾಷಣದಲ್ಲಿ ರಾಜಕೀಯ ವಿಚಾರವನ್ನು ಮಾತನಾಡಲು ಹೋಗಿಲ್ಲ. ರಾಮಮಂದಿರ ವಿರೋಧಿಗಳಿಗೂ ಒಮ್ಮೆ ಬಂದು ಮಂದಿರ ವೀಕ್ಷಿಸಿ, ನಿಮ್ಮ ಯೋಚನೆಗಳು ಬದಲಾಗಬಹುದು ಎನ್ನುವ ಮಾತನ್ನಷ್ಟೇ ಹೇಳಿದ್ದರು.

ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್‌ ಇದ್ದ ಕಾರಣಕ್ಕೆ ರಾಜಕೀಯವಾಗಿ ಕಂಡರು ನೋಡುವ ಜನರಿಗೆ ಇದು ಹೆಚ್ಚು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮವಾಗಿಯೇ ಕಂಡಿತ್ತು. ಆದರೆ, ಕಾಂಗ್ರೆಸ್‌ ಇದನ್ನು ಅರ್ಥ ಮಾಡಿಕೊಳ್ಳದೇ, ರಾಜಕೀಯ ಕಾರ್ಯಕ್ರಮವಾಗಬಹುದು ಎನ್ನುವ ಲೆಕ್ಕಾಚಾರದಲ್ಲಿ ಬಹಿಷ್ಕಾರ ಹಾಕಿತ್ತು. ಸೋನಿಯಾ ಗಾಂಧಿ, ಖರ್ಗೆ ಹೋಗದೇ ಇದ್ದರೂ, ಕಾಂಗ್ರೆಸ್‌ ತನ್ನ ನಾಯಕರ ಒಂದು ನಿಯೋಗವನ್ನು ಕಳಿಸಿಕೊಡಲು ಯಾವುದೇ ಅಡ್ಡಿ ಇದ್ದಿರಲಿಲ್ಲ. ಹಾಗೇನಾದರೂ ಮಾಡಿದ್ದಿದ್ದರೆ, ಕಾಂಗ್ರೆಸ್‌ ಈ ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ ಎನ್ನುವ ಅನಗತ್ಯ ಚರ್ಚೆಗಳೇ ಇಂದು ಆಗುತ್ತಿರಲಿಲ್ಲ. ಇದನ್ನು ಕಾಂಗ್ರೆಸ್‌ ಊಹಿಸಿರಲಿಲ್ಲ. ಕಳೆದ 8-10 ದಿನಗಳಿಂದ ರಾಮ ಮಂದಿರ ವಿಚಾರವಾಗಿ ವ್ಯಾಪಕ ಉತ್ಸಾಹ ವ್ಯಕ್ತವಾಗಿತ್ತು. ಕರ್ನಾಟಕದಲ್ಲೂ ದೊಡ್ಡ ಪ್ರಮಾಣದಲ್ಲಿ ಇದನ್ನು ಆಚರಿಸಲಾಗಿದೆ. ಈ ನಾಡಿಮಿಡಿತವನ್ನು ಹಿಡಿಯುವಲ್ಲಿಯೇ ವಿರೋಧ ಪಕ್ಷಗಳು ವಿಫಲವಾಗಿದೆ.

ಸೂರ್ಯ ವಂಶದ ಶ್ರೀರಾಮನ ನೆನಪಿಗೆ 'ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ' ಘೋಷಣೆ ಮಾಡಿದ ಮೋದಿ!

ಈ ವಿಚಾರದಲ್ಲಿ ಆಮ್‌ ಆದ್ಮಿ ಪಾರ್ಟಿಯ ಅರವಿಂದ್‌ ಕೇಜ್ರಿವಾಲ್‌ ಜಾಣತನ ತೋರಿದ್ದಾರೆ. ಅಯೋಧ್ಯೆಗೆ ನಾನು ಹೋಗುತ್ತಿಲ್ಲ. ನನಗೆ ಆಹ್ವಾನ ಬಂದಿಲ್ಲ. ಆದರೆ, ನನ್ನ ತಂದೆ ತಾಯಿ ಈ ಕಾರ್ಯಕ್ರಮದ ಬಗ್ಗೆ ಉತ್ಸುಕರಾಗಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಮನೆಯವರನ್ನೆಲ್ಲಾ  ಕರೆದುಕೊಂಡು ಅಯೋಧ್ಯೆಗೆ ಹೇಳಿದ್ದಾರೆ. ಬಹುಶಃ ಕಾಂಗ್ರೆಸ್‌ನ ಹಿರಿಯ ನಾಯಕರು ಇದೇ ರೀತಿಯ ಕೆಲವೊಂದಿಷ್ಟು ಹೇಳಿಕೆ ನೀಡಿದ್ದರೆ, ಇಂದು ಕಾಂಗ್ರೆಸ್‌ ಪಕ್ಷ ಯಾಕೆ ಕಾರ್ಯಕ್ರಮಕ್ಕೆ ಬಂದಿರಲಿಲ್ಲ ಎನ್ನುವ ಚರ್ಚೆಗಳು ಮುನ್ನೆಲೆಗೆ ಬರುತ್ತಿರಲಿಲ್ಲ.

ಟೆಂಟ್ ಅಲ್ಲ, ಭವ್ಯ ಮಂದಿರದಲ್ಲಿ ಶ್ರೀರಾಮನ ದರ್ಶನ, ಮಂದಿರ ಲೋಕಾರ್ಪಣೆಗೊಳಿಸಿ ಮೋದಿ ಭಾಷಣ!

Latest Videos
Follow Us:
Download App:
  • android
  • ios