ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪತಿಯೊಬ್ಬ, ಪತ್ನಿಯ ಸಮ್ಮುಖದಲ್ಲಿಯೇ ಮಲಗಿದ್ದ ಯುವಕನಿಗೆ ಮುತ್ತಿಕ್ಕಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಕೆರಳಿದ ಯುವಕ, ಆ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿದ್ದು, ಪತ್ನಿ ಕಾಲು ಬಿದ್ದು ಕ್ಷಮೆ ಕೋರಿದರೂ ಬಿಡಲಿಲ್ಲ.
'ಕಾಮಾತುರಂ ನ ಭಯಂ, ನ ಲಜ್ಜಾ' ಎನ್ನುವ ಮಾತಿದೆ. ಕಾಮಾತುರನಾದವನಿಗೆ ಭಯವೂ ಇರಲ್ಲ, ನಾಚಿಕೆಯೂ ಇರಲ್ಲ ಎಂದು ಇದರ ಅರ್ಥ. ಹಾಗೆಂದು ಕಂಡ ಕಂಡಲ್ಲಿ ತಮ್ಮ ಈ ಆತುರತೆಯನ್ನು ಬೇರೆಯವರ ಮೇಲೆ ತೋರಿಸಲು ಹೋದರೆ ಆದೀತೆ? ಕೆಲವು ಪುರುಷರಿಗೆ ಸಾರ್ವಜನಿಕ ಸ್ಥಳ ಆಗಲೀ, ರೈಲು-ಬಸ್ಸು ಏನೇ ಆಗಲಿ, ಅಲ್ಲಿ ಹೆಣ್ಣೊಬ್ಬಳು ಕಂಡರೆ ಏನೇನೋ ಆಗಿಬಿಡುತ್ತದೆ. ಕೊನೆಯ ಪಕ್ಷ ಒಮ್ಮೆ ಆಕೆಯನ್ನು ಮುಟ್ಟಿ ಚಟ ತೀರಿಸಿಕೊಳ್ಳಲು ಬಯಸುತ್ತಾರೆ. ಅದರಲ್ಲಿಯೂ ರಶ್ ಇದ್ದರಂತೂ ಮುಗಿದೇ ಹೋಯ್ತು. ಅಲ್ಲಿಯೇ ಸ್ವರ್ಗಸುಖ ಕಂಡುಬಿಡುತ್ತಾರೆ. ಆದರೆ ಗ್ರಹಚಾರ ಸರಿ ಇರಲಿಲ್ಲ ಎಂದರೆ, ಅವಳಿಂದ ಮಾತ್ರವಲ್ಲದೇ ಇದ್ದಬಿದ್ದ ಎಲ್ಲರಿಂದಲೂ ಧರ್ಮದೇಟು ಹಾಕಿಸಿಕೊಂಡು, ಜೀವನ ಪರ್ಯಂತ ಹೆಂಗಸರ ಸಹವಾಸ ಬೇಡ ಎನ್ನುವ ರೀತಿ ಆಗುವುದೂ ಇದೆ.
ಪುರುಷರೂ ಸೇಫಲ್ಲ!
ಇದು ಪುರುಷರು ಹೆಂಗಸರನ್ನು ಕಂಡಾಗ ತೀಟಿ ತೀರಿಸಿಕೊಳ್ಳುವ ಪರಿ ಆಯ್ತು. ಆದರೆ ಗಂಡಸರೂ ಸೇಫ್ ಅಲ್ಲ ಎನ್ನುವ ಮಾತಿನಂತೆ, ರೈಲಿನಲ್ಲಿ ಒಬ್ಬ ಸುಂದರ ಯುವಕನಿಗೆ ಕಿಸ್ ಕೊಟ್ಟು ತಗ್ಲಾಕ್ಕೊಂಡಿದ್ದಾನೆ ಒಬ್ಬ ಪುಣ್ಯಾತ್ಯ. ನಿಜ. ಯುವಕನಿಗೆ ಕಿಸ್ ಮಾಡಿದ್ದು ಹೆಣ್ಣು ಅಲ್ಲ ಮತ್ತೆ. ಪಕ್ಕದಲ್ಲಿಯೇ ಪತ್ನಿ ಇದ್ದರೂ, ಈ ಪತಿ ಮಹಾಶಯನಿಗೆ ಅಲ್ಲಿಯೇ ಸೀಟಿನಲ್ಲಿ ಮಲಗಿದ್ದ ಸುಂದರ ಯುವಕನ ಮೇಲೆ ಆಸೆಯಾಗಿಬಿಟ್ಟಿದೆ. ರಾತ್ರಿ ಎಲ್ಲರೂ ಮಲಗಿದ್ದಾಗ ತಡೆದುಕೊಳ್ಳಲು ಆಗದ ಈ ಪತಿ ಮಹಾಶಯ, ಮೆಲ್ಲನೆ ಹೋಗಿ ಆ ಯುವಕನ ಅಂಗಾಂಗ ಮುಟ್ಟಿ ಜೋರಾಗಿ ಕಿಸ್ ಮಾಡಿಯೇ ಬಿಟ್ಟಿದ್ದಾನೆ.
ಬಿಸಿರಕ್ತದ ಯುವಕ, ಬಿಟ್ಟಾನೆಯೆ?
ಒಮ್ಮೇಲೆ ಬೆಚ್ಚಿಬಿದ್ದ ಯುವಕ, ಯಾರಪ್ಪಾ ಹೀಗೆ ಮಾಡುವವರು ಎಂದು ನೋಡಿದಾಗ ಅಲ್ಲಿ ಪುರುಷನನ್ನು ಕಂಡು ಹೌಹಾರಿ ಹೋಗಿದ್ದಾನೆ. ಪುರುಷನೊಬ್ಬ ಹೀಗೆ ಮಾಡಿದ್ರೆ ಆ ಬಿಸಿ ರಕ್ತದ ಯುವಕ ಸುಮ್ಮನೇ ಬಿಡ್ತಾನಾ? ಮಧ್ಯರಾತ್ರಿಯೇ ಆ ವ್ಯಕ್ತಿಯ ಗ್ರಹಚಾರ ಬಿಡಿಸಿದ್ದಾನೆ. ಪತಿಯ ಕಿತಾಪತಿ ಪತ್ನಿಗೂ ಗೊತ್ತಾಗಿದೆ. ಆದರೆ ಪಾಪ ಅವಳೇನು ಮಾಡಿಯಾಳು? ಪತಿಯೇ ಪರದೈವ ಎನ್ನುವ ಹೆಣ್ಣು ಇರಬೇಕು ಅವಳು. ತಪ್ಪಾಯ್ತು ಗಂಡನನ್ನು ಬಿಟ್ಟುಬಿಡಿ ಎಂದು ಗೋಗರೆದಿದ್ದಾಳೆ. ಮೊದಲೇ ಕುದಿಯುವ ರಕ್ತ. ನಿಮ್ಮ ಮೇಲೆ ಯಾರಾದ್ರೂ ಹೀಗೆ ಎರಗಿದ್ರೆ ಏನು ಮಾಡ್ತಿದ್ರಿ ಎಂದು ಆ ಮಹಿಳೆಯನ್ನು ಯುವಕ ಪ್ರಶ್ನಿಸಿದ್ದು, ಇದೇ ಪ್ರಶ್ನೆಯನ್ನು ಆ ವ್ಯಕ್ತಿಗೂ ಕೇಳಿದ್ದಾನೆ. ಆಗ ವ್ಯಕ್ತಿಗೆ ಮಾತೇ ಹೊರಡಲಿಲ್ಲ.
ಕಾಲು ಬಿದ್ದು ಕ್ಷಮೆ ಕೋರಿದ್ರೂ ಬಿಡಲಿಲ್ಲ
ನಿನ್ನನ್ನು ಸುಮ್ಮನೇ ಬಿಟ್ಟರೆ ಆಗಲ್ಲ ಎಂದು ಆ ವ್ಯಕ್ತಿಯ ಕಾಲರ್ ಹಿಡಿದು ದರದರ ಎಳೆದಾಗ, ಪತ್ನಿ ಆ ಯುವಕನ ಕಾಲಿಗೆ ಬಿದ್ದು ಕ್ಷಮೆ ಕೋರಿದ್ದಾಳೆ. ನನ್ನ ಗಂಡನಿಗೆ ಏನೂ ಮಾಡಬೇಡಿ ಎಂದಿದ್ದಾಳೆ. ಆ ಪತಿಯೂ ಬಿಟ್ಟುಬಿಡಿ. ಮತ್ತೆ ಮಾಡಲ್ಲ, ತಪ್ಪಾಯ್ತು ಎಂದರೂ ಯುವಕನಿಗೆ ಅದೇನು ಸಿಟ್ಟಿತ್ತೋ ಗೊತ್ತಿಲ್ಲ, ಅಥವಾ ಆತ ಅವನಿಗೆ ಏನೇನು ಮಾಡಿದ್ನೋ ಗೊತ್ತಿಲ್ಲ, ಕಾಲರ್ ಹಿಡಿದು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಕೊಡುವುದಾಗಿ ಹೇಳಿದ್ದಾನೆ. ಸಹ ಪ್ರಯಾಣಿಕರು ಯಾರೂ ಇಬ್ಬರ ಸಹಾಯಕ್ಕೂ ಬರಲಿಲ್ಲ. ಯುವಕ ಮುಂದೆ ಏನು ಮಾಡಿದ ಎನ್ನುವುದು ಗೊತ್ತಿಲ್ಲ. ಬಹುಶಃ ಪೊಲೀಸರಿಗೆ ಹಿಡಿದು ಕೊಟ್ಟಿರಬಹುದು. ನೆಟ್ಟಿಗರು ಮಾತ್ರ ಸಕತ್ ಖುಷಿಯಾಗಿದ್ದಾರೆ. ಯುವಕನಿಗೆ ಶಹಬ್ಬಾಸ್ ಎನ್ನುತ್ತಿದ್ದಾರೆ. bharat.broadcast ಹಂಚಿಕೊಂಡ ವಿಡಿಯೋ ಇಲ್ಲಿದೆ ನೋಡಿ


