- Home
- Life
- Relationship
- ಮದ್ವೆಗಾಗಿ ಆಕೆಯನ್ನು ಮೀಟ್ ಮಾಡಿದಾಗ್ಲೇ ನಾನು Gay ಅಂತ ಗೊತ್ತಾಯ್ತು! CA ನಿಖಿಲ್ ಓಪನ್ ಮಾತು
ಮದ್ವೆಗಾಗಿ ಆಕೆಯನ್ನು ಮೀಟ್ ಮಾಡಿದಾಗ್ಲೇ ನಾನು Gay ಅಂತ ಗೊತ್ತಾಯ್ತು! CA ನಿಖಿಲ್ ಓಪನ್ ಮಾತು
'ಮಿಸ್ಟರ್ ಗೇ ವರ್ಲ್ಡ್ ಇಂಡಿಯಾ 2025' ಕಿರೀಟಧಾರಿ ನಿಖಿಲ್ ಜೈನ್, ತಾವು ಸಲಿಂಗಿ ಎಂದು ಅರಿತ ಕ್ಷಣದ ಬಗ್ಗೆ ಮಾತನಾಡಿದ್ದಾರೆ. ಮದುವೆಯಾಗುವ ಹುಡುಗಿ ತನ್ನ ಹಿಂದಿನ ಪ್ರೀತಿಯ ಬಗ್ಗೆ ಹೇಳಿ, ನಿಮ್ಮ ಕ್ರಷ್ ಯಾರು ಎಂದು ಕೇಳಿದಾಗ, ಸತ್ಯದ ಅರಿವಾಯಿತು ಎಂದು ಅವರು ಬಹಿರಂಗಪಡಿಸಿದ್ದಾರೆ.

ಪ್ರಕೃತಿಯ ನಿಯಮ!
ಲೈಂಗಿಕ ಅಲ್ಪಸಂಖ್ಯಾತರು (LGBTQ+) ಸಮುದಾಯದಲ್ಲಿ ಹಲವಾರು ಬಗೆಗಳಿವೆ. ಅವರಲ್ಲಿ ಒಬ್ಬರು ಸಲಿಂಗಿಗಳು ಅರ್ಥಾತ್ ಗಂಡಿಗೆ ಗಂಡು ಮತ್ತು ಹೆಣ್ಣಿಗೆ ಹೆಣ್ಣು ಆಕರ್ಷಣೆಗೆ ಒಳಗಾಗುವವರು. ಆದರೆ ಅದೆಷ್ಟೋ ಮಂದಿಗೆ ಈ ಬಗ್ಗೆ ಅರಿವೇ ಇರುವುದಿಲ್ಲ. ಗಂಡಾಗಿದ್ದರೆ ತಮಗೆ ಹೆಣ್ಣಿನ ಮೇಲೆ ಅಥ್ವಾ ಹೆಣ್ಣಾಗಿದ್ದರೆ ಗಂಡಿನ ಮೇಲೆ ಆಕರ್ಷಣೆ ಬರುತ್ತಿಲ್ಲ ಎನ್ನುವುದು ತಿಳಿದಿದ್ದರೂ, ತಾವು ಗೇ ಎನ್ನುವುದು ಗೊತ್ತೇ ಆಗುವುದಿಲ್ಲ.
ಮಿಸ್ಟರ್ ಗೇ ವರ್ಲ್ಡ್ ಇಂಡಿಯಾ 2025
ಈ ಹಿನ್ನೆಲೆಯಲ್ಲಿ ಎಷ್ಟೋ ಮಂದಿ ಪುರುಷರು ಮದುವೆಯಾಗಿ ಸಂಸಾರ ಮಾಡಲು ಆಗದೇ ಹೆಣ್ಣಿನ ನೋವಿಗೆ ಕಾರಣವೂ ಆಗಿರುತ್ತಾರೆ. ಮತ್ತೆ ಕೆಲವರು ಆಕರ್ಷಣೆ ಇಲ್ಲದಿದ್ದರೂ ಹೆಣ್ಣಿನ ಜೊತೆ ದೈಹಿಕ ಸಂಪರ್ಕ ನಡೆಸುವ ಮೂಲಕ ಅಪ್ಪನೂ ಆದವರು ಇದ್ದಾರೆ. ಆದರೆ ಈ ಬಗ್ಗೆ ಇದೀಗ ಓಪನ್ ಆಗಿ ಮಾತನಾಡಿದ್ದಾರೆ 'ಮಿಸ್ಟರ್ ಗೇ ವರ್ಲ್ಡ್ ಇಂಡಿಯಾ 2025' (Mr Gay World India 2025) ಕಿರೀಟವನ್ನು ಮುಡಿಗೇರಿಸಿಕೊಂಡ ಚಾರ್ಟೆಡ್ ಅಕೌಂಟೆಂಟ್ ನಿಖಿಲ್ ಜೈನ್.
ಸಲಿಂಗಿಗಳ ಬಗ್ಗೆ ಓಪನ್ ಅಪ್
ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ತಮ್ಮ ಸಲಿಂಗಿ ಜೀವನದ ಬಗ್ಗೆ ಸಾಕಷ್ಟು ಓಪನ್ ಅಪ್ ಆಗಿರುವ ನಿಖಿಲ್ ಅವರು, ತಾವು ಸಲಿಂಗಿ ಎಂದು ತಿಳಿದದ್ದು ಯಾವಾಗ ಎನ್ನುವ ಬಗ್ಗೆ ಹೇಳಿದ್ದಾರೆ.
ಆಕರ್ಷಣೆನೇ ಬೇರೆ
ನನಗೆ ಮೊದಲಿನಿಂದಲೂ ಹೆಣ್ಣುಮಕ್ಕಳ ಬಗ್ಗೆ ಆಕರ್ಷಣೆ ಇರಲೇ ಇಲ್ಲ. ಆದರೆ ಇದರ ಬಗ್ಗೆ ನಾನು ಅಷ್ಟೊಂದು ಗಮನ ಕೊಡುತ್ತಿರಲಿಲ್ಲ. ಕಾಲೇಜಿನಲ್ಲಿ ಒಬ್ಬಳು ಹುಡುಗಿ ಇದ್ದಳು. ಅವಳನ್ನು ಟೀಸ್ ಮಾಡುತ್ತಿದ್ದೆ ಅಷ್ಟೇ. ಆದರೆ ಆಕರ್ಷಣೆ ಅಂತೇನೂ ಬರಲಿಲ್ಲ. ಹುಡುಗರ ಬಗ್ಗೆ ಆಕರ್ಷಣೆ ಇದ್ದರೂ ನನ್ನ ಬಗ್ಗೆ ನನಗೆ ತಿಳಿದಿರಲಿಲ್ಲ ಎಂದು ಎಷ್ಟೋ ಜನರಿಗೆ ಆಗುವ ಅನುಭವಗಳ ಬಗ್ಗೆ ಮಾತನಾಡಿದ್ದಾರೆ ನಿಖಿಲ್.
ಮದ್ವೆಗೆ ಹುಡುಗಿ ಬಳಿ ಹೋದಾಗ
ಆ ಬಳಿಕ ಮದುವೆಯಾಗುವ ಬಗ್ಗೆ ಮಾತುಕತೆ ನಡೆಯಿತು. ಮದುವೆಯಾಗುವ ಹುಡುಗಿಯ ಬಳಿ ಹೋದೆ. ಅವಳು ತನ್ನ ಪಾಸ್ಟ್ ಕ್ರಷ್, ಲವ್ ಬಗ್ಗೆ ಎಲ್ಲಾ ಓಪನ್ ಆಗಿ ಮಾತನಾಡಿದಳು. ಕೊನೆಗೆ ನಿಮಗೆ ಯಾರೂ ಕ್ರಷ್ ಇರಲಿಲ್ವಾ ಎಂದು ಕೇಳಿದಳು. ಒಂದು ಕ್ಷಣ ಶಾಕ್ ಆಯ್ತು, ಹೌದಲ್ವಾ ಎನ್ನಿಸಿತು. ಯಾರೂ ಇಲ್ಲ ಎಂದೆ.
ಆಗಲೇ ಸತ್ಯ ತಿಳಿದದ್ದು
ಅವಳು ನಂಬಲಿಲ್ಲ. ಇಷ್ಟೊಂದು ಹ್ಯಾಂಡ್ಸಮ್ ಇರುವಾಗ ಒಬ್ಬಳೂ ಕ್ರಷ್ ಇಲ್ಲ, ಲವ್ ವಿಷ್ಯ ಇಲ್ಲ ಎಂದರೆ ನಂಬಲು ಆಗಲ್ಲ ಎಂದಳು. ಆಗಲೇ ನನಗೆ ಯೋಚನೆ ಬಂದದ್ದು. ನನಗೆ ಯಾವ ಹುಡುಗಿಯ ಮೇಲೂ ಏಕೆ ಕ್ರಷ್ ಆಗಲಿಲ್ಲ, ಯಾರೂ ಏಕೆ ಇಷ್ಟವಾಗಲಿಲ್ಲ ಎಂದು. ಯೋಚನೆ ಮಾಡಿದಾಗ, ನನಗೆ ಹುಡುಗರ ಮೇಲಷ್ಟೇ ಇಷ್ಟ ಆಗ್ತಿರೋದು ತಿಳಿಯಿತು. ಆಗಲೇ ನಾನು ಸಲಿಂಗಿ ಎನ್ನುವುದು ತಿಳಿಯಿತು ಎಂದಿದ್ದಾರೆ ನಿಖಿಲ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

