ಎಂಥಾ ಬ್ಯಾಲೆನ್ಸ್: ತಲೆ ಮೇಲೆ ದೊಡ್ಡ ಗಂಟು: ಸೈಕಲ್‌ನಲ್ಲಿ ಪಯಣ ಕೈ ಬಿಟ್ಟು
- ಹಳ್ಳಿ ಹೈದನ ವಿಡಿಯೋ ವೈರಲ್
- ಆನಂದ್ ಮಹೀಂದ್ರಾ ಗಮನ ಸೆಳೆದ ಹಳ್ಳಿಹೈದ
- ತಲೆ ಮೇಲೆ ದೊಡ್ಡ ಗಂಟು ಹೊತ್ತು ಸೈಕಲ್‌ನಲ್ಲಿ ಪಯಣ
ಮುಂಬೈ(ಮಾ.30): ಹಳ್ಳಿ ಹೈದನೊಬ್ಬನ ಅದ್ಭುತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಉದ್ಯಮಿ ಆನಂದ್ ಮಹೀಂದ್ರ ಅವರ ಗಮನವನ್ನು ಸೆಳೆದಿದೆ. ಯುವಕ ತಲೆಯ ಮೇಲೆ ದೊಡ್ಡದಾದ ಮೂಟೆಯೊಂದನ್ನು ಇರಿಸಿಕೊಂಡು ಹಲವು ತಿರುವುಗಳಿರುವ ಹಳ್ಳಿಯ ರಸ್ತೆಯಲ್ಲಿ ಸೈಕಲ್‌ನಲ್ಲಿ ಬರುತ್ತಾನೆ. ಸೈಕಲ್‌ನಲ್ಲಿ ಬರುವುದು ವಿಶೇಷವಲ್ಲ, ಆತ ಸೈಕಲ್‌ನ್ನು ಯಾವುದೇ ಕಾರಣಕ್ಕೂ ಕೈಗಳಲ್ಲಿ ಮುಟ್ಟುವುದಿಲ್ಲ. ಸೈಕಲ್‌ನ್ನು ತುಳಿಯುತ್ತಾ ಕಾಲಿನಲ್ಲೇ ಬ್ಯಾಲೆನ್ಸ್ ಮಾಡುತ್ತಾ ಬರುವ ಆತನ ಸ್ಟೈಲ್ ಎಂಥವರಿಗೂ ಒಂದು ಕ್ಷಣ ಸೋಜಿಗ ಉಂಟು ಮಾಡುತ್ತಿದೆ.
ಈ ವಿಡಿಯೋಗೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈತನ ಸೈಕಲ್ ಹಿಂದೆ ಬೇರೆ ವಾಹನದಲ್ಲಿ ಬರುತ್ತಿರುವ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ಸರೆ ಹಿಡಿದಿದ್ದಾರೆ. ವಿಡಿಯೋದಲ್ಲಿ ಹಳ್ಳಿ ಕಡೆಯ ತಿರುವು ಮುರುವುಗಳಿರುವ ರಸ್ತೆಯಲ್ಲಿ ಆತ ಸಖತ್ ಆಗಿ ಬ್ಯಾಲೆನ್ಸ್ ಮಾಡುತ್ತಾನೆ. ಸಾಮಾನ್ಯವಾಗಿ ಬಹುತೇಕರಿಗೆ ತಲೆಯ ಮೇಲೆ ಮೂಟೆಯೊಂದನ್ನು ಇರಿಸಿಕೊಂಡು ನೆಲದ ಮೇಲೆ ನಡೆಯುವುದೇ ಕಷ್ಟವಾಗುವುದು. ಆದರೆ ಇಲ್ಲೊಬ್ಬ ತಲೆಯ ಮೇಲೆ ಮೂಟೆಯನ್ನು ಇರಿಸಿಕೊಂಡು ಸೈಕಲ್ ಹ್ಯಾಂಡಲ್ ಹಿಡಿಯದೇ ಅದನ್ನು ಬ್ಯಾಲೆನ್ಸ್ ಮಾಡುತ್ತಾ ವೇಗವಾಗಿ ಸಾಗುತ್ತಾನೆ.
1971 ರ ಬಾಲಿವುಡ್ ಸಿನಿಮಾ ಅಂದಾಜ್ ಗಾಗಿ (Andaz) ಕಿಶೋರ್ ಕುಮಾರ್ (Kishore Kumar) ಹಾಡಿದ ಹಿಂದಿ ಹಾಡು ಜಿಂದಗಿ ಏಕ್ ಸಫರ್ ಹೈ ಸುಹಾನಾ ಹಾಡು ಈ ವಿಡಿಯೋದ ಹಿನ್ನೆಲೆಯಲ್ಲಿ ಕೇಳಿ ಬರುತ್ತಿದೆ. ಈ ಹಾಡು ವಿಡಿಯೋಗೆ ಮತ್ತಷ್ಟು ರಂಗು ನೀಡುತ್ತಿದೆ. ಮೂಲ ಹಾಡಿನಲ್ಲಿ ನಟರಾದ ರಾಜೇಶ್ ಖನ್ನಾ (Rajesh Khanna) ಮತ್ತು ಹೇಮಾ ಮಾಲಿನಿ (Hema Malini) ಮೋಟಾರು ಬೈಕ್‌ನಲ್ಲಿ (motorbike) ಸವಾರಿ ಮಾಡುವುದನ್ನು ನೋಡಬಹುದು.
ಟೇಬಲ್ ಇಲ್ಲದಿದ್ದರೇನಂತೆ... ಇಟ್ಟಿಗೆ ಜೋಡಿಸಿ ಸ್ನೂಕರ್ ಆಡುವ ಪುಟ್ಟ ಬಾಲಕ.... ವಿಡಿಯೋ ವೈರಲ್
ಇನ್‌ಸ್ಟಾಗ್ರಾಮ್‌ನಲ್ಲಿ ಸರ್ಕಾಸ್ಟಿಕ್ ಸ್ಕೂಲ್ (sarcasticschool) ಎಂಬ ಹೆಸರಿರುವ ಖಾತೆಯಿಂದ ಈ ವಿಡಿಯೋ ಪೋಸ್ಟ್ ಆಗಿದೆ. 'ಯಾರಿಗೆ ಸೂಪರ್ ಹೀರೋಗಳು ಬೇಕು' ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಮೂರು ದಿನಗಳ ಹಿಂದೆ ಶೇರ್ ಮಾಡಲಾದ ಈ ಸಣ್ಣ ವಿಡಿಯೋವನ್ನು ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಇದನ್ನು ಟ್ವಿಟ್ಟರ್‌ನಲ್ಲಿ (Twitter) ಕೂಡ ಪೋಸ್ಟ್ ಮಾಡಲಾಗಿದೆ. ಅಲ್ಲಿ ಪ್ರಫುಲ್ ಎಂಬಿಎ ಚಾಯ್ ವಾಲಾ ಎಂಬವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಇದು ಉದ್ಯಮಿ ಆನಂದ್ ಮಹೀಂದ್ರಾ (Anand Mahindra) ಅವರ ಗಮನವನ್ನೂ ಸೆಳೆದಿದೆ.
7 ತಿಂಗಳ ಶ್ರಮ: Googleನಲ್ಲಿ 2 ಕೋಟಿ ರೂ. ವೇತನದ ಉದ್ಯೋಗ ಪಡೆದ ಹಳ್ಳಿ ಪ್ರತಿಭೆ!
ಈ ಮನುಷ್ಯ ಮಾನವ ಸೈಕಲ್, ಅವನ ದೇಹದಲ್ಲಿ ಅಂತರ್ನಿರ್ಮಿತ ಗೈರೊಸ್ಕೋಪ್ ಇದೆ! ಈತನ ಸಮತೋಲನ ನಂಬಲಾಗದ ಪ್ರಜ್ಞೆ. ಆದಾಗ್ಯೂ, ನನಗೆ ನೋವಿನ ಸಂಗತಿಯೆಂದರೆ, ನಮ್ಮ ದೇಶದಲ್ಲಿ ಈತನಂತಹ ಅನೇಕರು ತೆರೆಮರೆಯ ಪ್ರತಿಭೆಗಳು ಪ್ರತಿಭಾನ್ವಿತ ಜಿಮ್ನಾಸ್ಟ್‌ಗಳು, ಕ್ರೀಡಾಪಟುಗಳು ಆಗಬಹುದು. ಆದರೆ ಅವರು ಗುರುತಿಸಲ್ಪಡುವುದಿಲ್ಲ ಅಥವಾ ತರಬೇತಿ ಪಡೆಯುವುದಿಲ್ಲ ಎಂದು ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.