7 ತಿಂಗಳ ಶ್ರಮ: Googleನಲ್ಲಿ 2 ಕೋಟಿ ರೂ. ವೇತನದ ಉದ್ಯೋಗ ಪಡೆದ ಹಳ್ಳಿ ಪ್ರತಿಭೆ!
ಶಿಕ್ಷಣದ ಬಳಿಕ ಅತ್ಯುತ್ತಮ ಕಂಪನಿಯಲ್ಲಿ ಕೆಲಸ ಪಡೆಯುವುದು, ಉತ್ತಮ ಸಂಬಳ ಗಳಿಸುವುದು ಪ್ರತಿಯೊಬ್ಬ ಯುವಕರ ಕನಸಾಗಿರುತ್ತದೆ. ಹೀಗಂತ ತಾವಿಷ್ಟಪಟ್ಟ ಕೆಲಸ ಪಡೆಯುವ ಅದೃಷ್ಟ ಎಲ್ಲರಿಗೂ ಇರುವುದಿಲ್ಲ. ಆದರೆ ಹರಿಯಾಮಾದ ಚಾರ್ಖಿ-ದಾದ್ರಿ ನಿವಾಸಿ ಜಿತೇಂದ್ರ ಫೋಗಾಟ್ ಜೀವನದಲ್ಲಿ ಇಂತಹುದ್ದೊಂದು ಪವಾಡ ನಡೆದಿದೆ. ಹೌದು ಕಠಿಣ ಪರಿಶ್ರಮದಿಂದ ಅವರು ವಿಶ್ವದ ಅತಿದೊಡ್ಡ ಸರ್ಚ್ ಎಂಜಿನ್ ಗೂಗಲ್ ಕೆಲಸವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ವಾರ್ಷಿಕ ಆದಾಯ 1.8 ಕೋಟಿ ರೂಪಾಯಿ ಆಗಿದೆ. ಅಷ್ಟಕ್ಕೂ ಈ ಹಳ್ಳಿ ಪ್ರತಿಭೆಗೆ ಈ ಉದ್ಯೋಗ ಸಿಕ್ಕಿದ್ದು ಹೇಗೆ? ಇಲ್ಲಿದೆ ವಿವರ
ವಿಶ್ವದ ಅತಿದೊಡ್ಡ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದು ಹೀಗೆ: ವಾಸ್ತವವಾಗಿ, ಜಿತೇಂದ್ರ ಮೂಲತಃ ಚಾರ್ಖಿ ದಾದ್ರಿಯ ಸಮಸ್ಪುರ ಗ್ರಾಮದವರು. ಇನ್ನು ಇಂಗ್ಲೀಷ್ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದ ಜಿತೇಂದ್ರ ಅವರ ತಂದೆ ರಣವೀರ್ ಫೋಗಾಟ್ ಇತ್ತೀಚೆಗೆ ನಿವೃತ್ತರಾಗಿದ್ದರು. ಮಗನ ಸಾಧನೆ ಬಗ್ಗೆ ಮಾತನಾಡಿರುವ ತಂದೆ ಸುಮಾರು 7 ತಿಂಗಳ ಹಿಂದೆ ಗೂಗಲ್‌ನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದ, ಇತ್ತೀಚೆಗಷ್ಟೇ ಅಮೆರಿಕದ ಗೂಗಲ್ ಆಫೀಸ್‌ಗೆ ಸೇರಿಕೊಂಡಿದ್ದಾನೆ ಎಂದಿದ್ದಾರೆ.
ಫಲ ಕೊಟ್ಟಿತು ಏಳು ತಿಂಗಳ ಕಠಿಣ ಪರಿಶ್ರಮ: ಈ ಬಗ್ಗೆ ಮಾತನಾಡಿರುವ ಜೀತೇಂದ್ರ ಶಾಲಾ ಹೀಗುತ್ತಿದ್ದ ಸಂದರ್ಭದಲ್ಲೇ ನಾನು ಗೂಗಲ್‌ನಲ್ಲಿ ಕೆಲಸ ಮಾಡಬೇಕು ಎಂಬುದು ನನ್ನ ಕನಸಾಗಿತ್ತು. ಇಂದು ನನ್ನ ಹಲವಾರು ವರ್ಷಗಳ ಹಿಂದಿನ ಆ ಕನಸು ನನಸಾಗಿದೆ. ಜೊತೆಗೆ ಅಷ್ಟೊಂದು ಒಳ್ಳೆಯ ಪ್ಯಾಕೇಜ್ ಕೂಡಾ ಸಿಕ್ಕಿದೆ. ತನ್ನ ಈ ಯಶಸ್ಸಿನ ಶ್ರೇಯಸ್ಸು ಮಾರ್ಗದರ್ಶಕರು, ಕುಟುಂಬ ಮತ್ತು ಸ್ನೇಹಿತರಿಗೆ ಸಲ್ಲುತ್ತದೆ. ಇದಕ್ಕಾಗಿ ನಾನು 7 ತಿಂಗಳು ಹಗಲು ರಾತ್ರಿ ಶ್ರದ್ಧೆಯಿಂದ ತಯಾರಿರಾಗಿ ಬಳಿಕ ಕಂಪನಿಗೆ ಅರ್ಜಿ ಸಲ್ಲಿಸಿದ್ದೆ ಎಂದಿದ್ದಾರೆ.
ಹಳ್ಳಿಯಿಂದ ಕಲಿತು ಅಮೆರಿಕಾ ತಲುಪಿದ: ಜಿತೇಂದ್ರ ಕಲಿತದ್ದು ಚಾರ್ಕಿ ದಾದ್ರಿಯ ಕೆನ್ ಶಾಲೆಯಲ್ಲಿ. ಬಳಿಕ ಅವರು ಲಿಂಗಾಯತ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್‌ನಲ್ಲಿ ಬಿ.ಟೆಕ್ ಮಾಡಿದರು ಮತ್ತು ನಂತರ ಇನ್ಫೋಸಿಸ್ ಕಂಪನಿಯ ಚಂಡೀಢ ಕಚೇರಿಯಲ್ಲಿ ಕೆಲ ಸಮಯ ಕಾರ್ಯ ನಿರ್ವಹಿಸಿದ್ದಾರೆ.
ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋದ ಜಿತೇಂದ್ರ: ಜಿತೇಂದ್ರ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋಗಿದ್ದರು. ಇಲ್ಲಿನ ಟೆಕ್ಸಾಸ್ ವಿಶ್ವವಿದ್ಯಾಲಯಕ್ಕೆ ಸೇರಿ, ಅಲ್ಲಿ ಗೂಗಲ್‌ನಲ್ಲಿ ಕೆಲಸ ಪಡೆಯಲು ಸಂದರ್ಶನವೊಂದಕ್ಕೆ ತಯಾರಾಗಲು ದಿನಕ್ಕೆ ಎಂಟು ಗಂಟೆಗಳ ಕಾಲ ಕಲಿಯುತ್ತಿದ್ದರು.