ಜ್ಞಾನೋದಯದ ಬಯಕೆ: ಭೂ ಸಮಾಧಿಯಾಗಲು ಹೊರಟವನ ಕಂಬಿ ಹಿಂದೆ ಕಳಿಸಿದ ಪೊಲೀಸರು

ಸಮಾಧಿ ಮಾಡಿಕೊಂಡರೆ ಜ್ಞಾನೋದಯವಾಗುವುದು ಎಂದು ಆಧ್ಯಾತ್ಮಿಕ ಗುರುವೊಬ್ಬರು ನೀಡಿದ ಸಲಹೆಯಂತೆ ವ್ಯಕ್ತಿಯೊಬ್ಬ ಆರು ಅಡಿಗಳ ಗುಂಡಿ ತೋಡಿ ಸಮಾಧಿಯಾಗಲು ಯತ್ನಿಸಿದ್ದಾನೆ. ಉತ್ತರಪ್ರದೇಶದ ಉನ್ನವೋದಲ್ಲಿ ಈ ಘಟನೆ ನಡೆದಿದೆ. 

man arrested in Uttar Pradesh, after buries himself in 6 feet underground after advice of sadhu akb

ಲಕ್ನೋ: ಸಾಧುವೊಬ್ಬರ ಸಲಹೆಯಂತೆ ವ್ಯಕ್ತಿಯೊಬ್ಬ ಆರು ಅಡಿ ಹೊಂಡ ತೆಗೆದು ಭೂ ಸಮಾಧಿಯಾಗಲು ಹೊರಟ ವಿಚಿತ್ರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಸಮಾಧಿ ಮಾಡಿಕೊಂಡರೆ ಜ್ಞಾನೋದಯವಾಗುವುದು ಎಂದು ಆಧ್ಯಾತ್ಮಿಕ ಗುರುವೊಬ್ಬರು ನೀಡಿದ ಸಲಹೆಯಂತೆ ವ್ಯಕ್ತಿಯೊಬ್ಬ ಆರು ಅಡಿಗಳ ಗುಂಡಿ ತೋಡಿ ಸಮಾಧಿಯಾಗಲು ಯತ್ನಿಸಿದ್ದಾನೆ. ಉತ್ತರಪ್ರದೇಶದ ಉನ್ನವೋದಲ್ಲಿ ಈ ಘಟನೆ ನಡೆದಿದೆ. 

ತಾಜ್‌ಪುರ (Tajpur) ಗ್ರಾಮದ ಮೂವರು ಪುರೋಹಿತರು (priest) ನವರಾತ್ರಿಯ ಶುಭ ಸಂದರ್ಭದಲ್ಲಿ ವ್ಯಕ್ತಿಯೊಬ್ಬನಿಗೆ ಭೂಮಿಯಡಿ ಸಮಾಧಿ (Bhu samadhi) ಆಗುವಂತೆ ಮನವೊಲಿಸಿದ್ದಾರೆ. ಸಮಾಧಿ ಆದರೆ ಆಧ್ಯಾತ್ಮಿಕವಾಗಿ ಉನ್ನತ ಸ್ಥಾನಕ್ಕೆ (enlightenment) ಏರಬಹುದು ಎಂದು ಮನವೊಲಿಸಿದ್ದಾರೆ. ಇವರ ಮಾತಿಗೆ ಮರುಳಾಗಿ ಶುಭಂ ಗೋಸ್ವಾಮಿ (Shubha Goswami) ಎಂಬಾತ ಸಮಾಧಿಯಾಗಲು ಒಪ್ಪಿಗೆ ಸೂಚಿಸಿದ್ದಾರೆ. ನಂತರ ಭಾನುವಾರ ಸಂಜೆ 6 ಅಡಿಗಳ ಹೊಂಡ ತೋಡಿದ್ದು, ಅದರೊಳಗೆ ಇಳಿದಿದ್ದಾರೆ. ಇದನ್ನು ಸ್ಥಳೀಯರು ಗಮನಿಸಿದ್ದಾರೆ. ಅಲ್ಲದೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಗೋಸ್ವಾಮಿ ಅವರನ್ನು ರಕ್ಷಿಸಿದ್ದಾರೆ.  

Vishnuvardhan 72ನೇ ಹುಟ್ಟುಹಬ್ಬ:'ಯಜಮಾನೋತ್ಸವ' ಹೆಸರಲ್ಲಿ ಜನ್ಮದಿನ ಆಚರಣೆ‌

ಆತನನ್ನು ಹೊಂಡದಿಂದ ಮೇಲೆತ್ತಿದ್ದ ಬಳಿಕ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಪ್ರತಿಕ್ರಿಯಿಸಿದ ಗೋಸ್ವಾಮಿ ಅವರ ತಂದೆ ಇದಕ್ಕಾಗಿ ಹೊಂಡ ತೆಗೆಯುವ ಕೆಲಸದಲ್ಲಿ ತಾನು ಭಾಗಿಯಾಗಿದೆ ಎಂದು ಹೇಳಿದ್ದಾರೆ.  ಘಟನೆಗೆ ಸಂಬಂಧಿಸಿದಂತೆ ಹೊಂಡಕ್ಕೆ ಇಳಿದು ಜ್ಞಾನೋದಯ ಆಗಲು ಹೊರಟಿದ್ದ  ಗೋಸ್ವಾಮಿ ಹಾಗೂ ಈತನ ತಲೆ ಹಾಳು ಮಾಡಿದ ಮುನ್ನಲಾಲ್ (Munnalal) ಹಾಗೂ ಶಿವಕೇಶ್ ದೀಕ್ಷಿತ್ (Shivakesh Deekshith) ಎಂಬುವವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನು ಕೆಲವರು ಘಟನಾ ಸ್ಥಳದಿಂದ ಪರಾರಿ ಆಗಿದ್ದಾರೆ.

ಬೆಂಗಳೂರಿನಲ್ಲಿ 'ಲೈಗರ್' ಪ್ರಚಾರ; ಅಪ್ಪು ಸಮಾಧಿಗೆ ಭೇಟಿ ನೀಡಿದ ವಿಜಯ್ ದೇವರಕೊಂಡ-ಅನನ್ಯಾ ಪಾಂಡೆ

ಗೋಸ್ವಾಮಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ನಂತರ ಕೋರ್ಟ್‌ಗೆ (Court) ಹಾಜರುಪಡಿಸಲಾಗಿದ್ದು, ಬಳಿಕ ಆತನನ್ನು ಜೈಲಿಗಟ್ಟಲಾಗಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ. 
 

Latest Videos
Follow Us:
Download App:
  • android
  • ios