ಬೆಂಗಳೂರಿನಲ್ಲಿ 'ಲೈಗರ್' ಪ್ರಚಾರ; ಅಪ್ಪು ಸಮಾಧಿಗೆ ಭೇಟಿ ನೀಡಿದ ವಿಜಯ್ ದೇವರಕೊಂಡ-ಅನನ್ಯಾ ಪಾಂಡೆ

ವಿಜಯ್ ದೇವರಕೊಂಡ, ಪವರ್ ಸ್ಟಾರ್ ಪುನೀತ್ ರಾಜ್ ಸಮಾಧಿಗೆ ಭೇಟಿ ನೀಡಿದ್ದಾರೆ. ಬೆಂಗಳೂರಿಗೆ ಬಂದ ಬಳಿಕ ನಂತರ ಕಂಠೀರವ ಸ್ಟುಡಿಯೋ ಕಡೆ ತೆರಳಿದ ವಿಜಯ್ ದೇವರಕೊಂಡ ಅಪ್ಪು ಸಮಾಧಿಗೆ ಭೇಟಿ ಮಾಡಿ ನಮಿಸಿದರು..

Liger star vijay devarakonda and ananya panday visit to Puneeth rajkumar samadhi in bengaluru sgk

ತೆಲುಗು ಸ್ಟಾರ್ ವಿಜಯ್ ದೇವರಕೊಂಡ ಸದ್ಯ ಲೈಗರ್ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ದೇಶದಾದ್ಯಂತ ಸುತ್ತಾಡಿ ವಿಜಯ್, ಲೈಗರ್ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಉತ್ತರ ಭಾರತದ ಕಡೆ ಪ್ರಚಾರ ಮಾಡಿದ ಬಳಿಕ ವಿಜಯ್ ಇದೀಗ ದಕ್ಷಿಣ ಭಾರತದಲ್ಲಿ ಪ್ರಚಾರ ಪ್ರಾರಂಭಿಸಿದ್ದಾರೆ. ಇಂದು (ಆಗಸ್ಟ್ 19)ರಂದು ಬೆಂಗಳೂರಿಗೆ ಆಮಿಸಿರುವ ವಿಜಯ್ ದೇವರಕೊಂಡ ಲೈಗರ್ ಪ್ರಚಾರ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಇದಕ್ಕೂ ಮೊದಲೆ ವಿಜಯ್, ಪವರ್ ಸ್ಟಾರ್ ಪುನೀತ್ ರಾಜ್ ಸಮಾಧಿಗೆ ಭೇಟಿ ನೀಡಿದ್ದಾರೆ. ಬೆಂಗಳೂರಿಗೆ ಬಂದ ಬಳಿಕ ಕಂಠೀರವ ಸ್ಟುಡಿಯೋ ಕಡೆ ತೆರಳಿದ ವಿಜಯ್ ದೇವರಕೊಂಡ ಅಪ್ಪು ಸಮಾಧಿಗೆ ಭೇಟಿ ನೀಡಿದರು. ವಿಜಯ್ ದೇವರತಕೊಂಡಗೆ ಲೈಗರ್ ಸಿನಿಮಾದ ನಾಯಕಿ ಅನನ್ಯಾ ಪಾಂಡೆ ಸಾಥ್ ನೀಡಿದರು. 

ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಇಬ್ಬರೂ ಅಪ್ಪು ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಮಾಧಿಗೆ ಪ್ರದಕ್ಷಿಣೆ ಹಾಕಿ, ಬಳಿಕ ಆರತಿ ಬೆಳಗಿ ನಮಸ್ಕರಿಸಿದರು. ಅನನ್ಯಾ ಮತ್ತು ವಿಜಯ್ ದೇವರಕೊಂಡ ಅವರ ಪೂಜೆಯ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾವುದೇ ಸ್ಟಾರ್ ಬೆಂಗಳೂರಿಗೆ ಬಂದರೇ ಅಪ್ಪು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸುತ್ತಾರೆ. ಇದೀಗ ವಿಜಯ್ ಕೂಡ ಬೆಂಗಳೂರನಲ್ಲಿ ಪ್ರಚಾರ ಪ್ರಾರಂಭ ಮಾಡುವ ಮೊದಲು ಪುನೀತ್ ಸಮಾಧಿಗೆ ಭೇಟಿ ನೀಡಿದರು. ಪವರ್ ಸ್ಟಾರ್ ಪುನೀತ್ ರಾಜ್ ಎಲ್ಲಾ ಭಾಷೆಯ ಸ್ಟಾರ್‌ಗಳ ಜೊತೆಯೂ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದರು. ಹಾಗಾಗಿ ಅಪ್ಪು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಹಾಗಾಗಿ ಬೇರೆ ಭಾಷೆಯ ಕಲಾವಿದರು ಬೆಂಗಳೂರಿಗೆ ಬಂದಾಗ ಅಪ್ಪು ನೋಡಲು ಸಮಾಧಿಗೆ ತೆರಳುತ್ತಾರೆ. 

ವಿಜಯ್ ದೇವರಕೊಂಡ ಮನೆಯಲ್ಲಿ ಅನನ್ಯಾ ಪಾಂಡೆ; ವಿಶೇಷ ಪೂಜೆಯಲ್ಲಿ ಲೈಗರ್ ನಟಿ ಭಾಗಿ

ಲೈಗರ್ ಸಿನಿಮಾ ಬಗ್ಗೆ ಹೇಳುವುದಾರೆ, ಲೈಗರ್ ಸಿನಿಮಾ ಆಗಸ್ಟ್​ 25ರಂದು ಅದ್ದೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ. ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್​ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರು ಮೊದಲ ಬಾರಿ ಹೀರೋ ಆಗಿ ನಟಿಸಿದ ಅಪ್ಪು ಚಿತ್ರಕ್ಕೂ ಪುರಿ ಜಗನ್ನಾಥ್ ಆ್ಯಕ್ಷನ್​-ಕಟ್​ ಹೇಳಿದ್ದರು. ಪುರ್ ಜಗನ್ನಾಥ್ ಅವರಿಗೂ ಡಾ. ರಾಜ್​ಕುಮಾರ್​ ಕುಟುಂಬದ ಜೊತೆಗೆ ಒಡನಾಟ ಇದೆ. ಇದೀಗ ಅವರದ್ದೇ ಸಿನಿಮಾದ ಪ್ರಚಾರ ಕಾರ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ. 

ಜ್ಯೋತಿಷಿ ಮಾತು ಕೇಳಿ ವಿಜಯ್ ದೇವರಕೊಂಡ ಜೊತೆ ಬ್ರೇಕಪ್ ಮಾಡಿಕೊಂಡ್ರಾ ರಶ್ಮಿಕಾ?

ಲೈಗರ್ ಚಿತ್ರದಲ್ಲಿ ಚಿತ್ರದಲ್ಲಿ ವಿಜಯ್​ ದೇವರಕೊಂಡಗೆ ನಾಯಕಿಯಾಗಿ ಬಾಲಿವುಡ್ ಸ್ಟಾರ್ ಅನನ್ಯಾ ಪಾಂಡೆ ನಟಿಸಿದ್ದಾರೆ. ಬಾಕ್ಸರ್​ ಪಾತ್ರದಲ್ಲಿ ವಿಜಯ್​ ದೇವರಕೊಂಡ ಕಾಣಿಸಿಕೊಂಡಿದ್ದಾರೆ.  ತಾಯಿ ಪಾತ್ರಕ್ಕೆ ರಮ್ಯಾ ಕೃಷ್ಣ ಬಣ್ಣ ಹಚ್ಚಿದ್ದಾರೆ. ವಿಶ್ವ ವಿಖ್ಯಾತ ಬಾಕ್ಸರ್​ ಮೈಕ್​ ಟೈಸನ್​ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಟ್ರೇಲರ್​ ಮತ್ತು ಹಾಡುಗಳು ಸಿನಿಮಾದ ಮೇಲಿನ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಿಸಿವೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆ ಹೊಂದಿದೆ. 

Latest Videos
Follow Us:
Download App:
  • android
  • ios