ಸ್ಮೃತಿ, ಅಣ್ಣಾಮಲೈ, ಓಮರ್; ಲೋಕ ಕಣದಲ್ಲಿ ಘಟಾನುಘಟಿ ನಾಯಕರಿಗೆ ಸೋಲಿನ ಶಾಕ್, ಇಲ್ಲಿದೆ ಲಿಸ್ಟ್!

2024ರ ಲೋಕಸಭಾ ಚುನಾವಣೆ ಗೆದ್ದೇ ಗೆಲ್ಲುತ್ತಾರೆ ಎಂದೇ ಬಿಂಬಿತಗೊಂಡಿದ್ದ ಹಲವು ನಾಯಕರು ಮಕಾಡೆ ಮಲಗಿದ್ದಾರೆ. ಸ್ಮೃತಿ ಇರಾನಿ, ಅಣ್ಣಾಮಲೈ, ಒಮರ್ ಅಬ್ದುಲ್ಲಾ ಸೇರಿದಂತೆ ಚುನಾವಣೆಯಲ್ಲಿ ಸೋತ ಘಟಾನುಘಟಿ ನಾಯಕರ ಫುಲ್ ಲಿಸ್ಟ್ ಇಲ್ಲಿದೆ.

Smriti Irani t Annamalai Big leaders who lost Lok Sabha Election 2024 battle Full list ckm

ನವದೆಹಲಿ(ಜೂ.04)  ಲೋಕಸಭಾ ಚುನಾವಣೆ ಫಲಿತಾಂಶ ಹಲವರ ಲೆಕ್ಕಾಚಾರ ಉಲ್ಟಾ ಮಾಡಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟಕ್ಕೆ ಬಹುಮತ ಬರದೇ ಇರಬಹುದು. ಆದರೆ ಸಂಪೂರ್ಣ ಕ್ರೆಡಿಟ್ ಇಂಡಿಯಾ ಮೈತ್ರಿಗೆ ಸಲ್ಲಲಿದೆ. ಬಿಜೆಪಿ ಸೊರಗಿದರೆ, ಎನ್‌ಡಿಎ ಕುಗ್ಗಿಲ್ಲ ಅಷ್ಟೆ. ಈ ಬಾರಿಯ ಚುನಾವಣೆಯಲ್ಲಿ ಹಲವು ಘಟಾನುಘಟಿ ನಾಯಕರು ಸೋಲಿನ ಶಾಕ್ ಅನುಭವಿಸಿದ್ದಾರೆ. ಗೆದ್ದೇ ಗೆಲ್ತಾರೆ ಎಂದೇ ಬಿಂಬಿತವಾಗಿದ್ದ ಹಲವರು ಮಕಾಡೆ ಮಲಗಿದ್ದಾರೆ. ಈ ಪೈಕಿ ಬಿಜೆಪಿ ನಾಯಕರೇ ಹೆಚ್ಚಿದ್ದಾರೆ. ಸ್ಮೃತಿ ಇರಾನಿ, ಅಣ್ಣಾಮಲೈ, ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಹಲವು ನಾಯಕರು ಸೋಲು ಕಂಡಿದ್ದಾರೆ.

2019ರಲ್ಲಿ ರಾಹುಲ್ ಗಾಂಧಿ ವಿರುದ್ಧ ಅಮೇಠಿಯಲ್ಲಿ ಭಾರಿ ಅಂತರದಿಂದ ಗೆದ್ದ ಸ್ಮೃತಿ ಇರಾನಿ ಕೇಂದ್ರ ಸಚಿವೆಯಾಗಿದ್ದರು. ಆದರೆ ಈ ಬಾರಿ ಅಮೇಠಿಯಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಕಾಂಗ್ರೆಸ್ ನಾಯಕ ಕಿಶೋರ್ ಲಾಲ್ ಶರ್ಮಾ ವಿರುದ್ದ ಹಿನ್ನಡೆ ಅನುಭವಿಸಿದ್ದಾರೆ. ಸಂಜೆ ವೇಳೆ 1.4 ಲಕ್ಷ ಮತಗಳ ಹಿನ್ನಡೆ ಕಂಡಿದ್ದಾರೆ.

ಬಹುಮತ ಪಡೆಯದ ಬಿಜೆಪಿಗೆ ಶಾಕ್ ನೀಡಿ ಸರ್ಕಾರ ರಚಿಸುತ್ತಾ ಇಂಡಿಯಾ ಒಕ್ಕೂಟ?

ತಮಿಳುನಾಡಿನಲ್ಲಿ ಬಿಜೆಪಿಗೆ ಹೊಸ ಹುರುಪಿನ ಜೊತೆಗೆ ಹೊಸ ವಿಶ್ವಾಸ ನೀಡಿದ್ದ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಮುಗ್ಗರಿಸಿದ್ದಾರೆ. ಕೊಂಬಯತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಣ್ಣಾಮಲೈ, ಡಿಎಂಕೆ ಅಭ್ಯರ್ಥಿ ಗಣಪತಿ ರಾಜ್‌ಕುಮಾರ್ ಪಿ ವಿರುದ್ಧ ಹಿನ್ನಡೆ ಕಂಡಿದ್ದಾರೆ.96626 ಮತಗಳ ಅಂತರದಲ್ಲಿ ಹಿನ್ನಡೆ ಕಂಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ವಿದರ್ಭ ಸಿಂಗ್ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಸೋಲು ಕಂಡಿದ್ದಾರೆ. ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ, ನಟಿ ಕಂಗನಾ ರಣಾವತ್ ವಿರುದ್ಧ ಮುಗ್ಗರಿಸಿದ್ದಾರೆ. ವಿಕ್ರಮಾದಿತ್ಯ ಸಿಂಗ್ ಹಾಲಿ ಸಂಸದೆ ಪ್ರತಿಭಾ ಸಿಂಗ್ ಪುತ್ರ.

ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ನಾಯಕ, ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಕೂಡ ಸೋಲು ಕಂಡಿದ್ದಾರೆ. ಪಕ್ಷೇತ್ರ ಅಭ್ಯರ್ಥಿ, ಜೈಲಿನಿಂದ ಸ್ಪರ್ಧಿಸಿದ್ದ ಅಬ್ದುಲ್ ರಶೀದ್ ಶೇಕ್ ವಿರುದ್ದ ಓಮರ್ ಸೋಲು ಕಂಡಿದ್ದಾರೆ. ಮತ್ತೊರ್ವ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮುಗ್ಗರಿಸಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮಿಯಾನ್ ಅಲ್ತಾಫ್ ಅಹಮ್ಮದ್ ವಿರುದ್ದ ಮುಗ್ಗರಿಸಿದ್ದಾರೆ. 

3ನೇ ಅವಧಿಯಲ್ಲಿ ದೊಡ್ಡ ನಿರ್ಧಾರ ಜಾರಿ, ಮಹತ್ವದ ಸುಳಿವು ನೀಡಿದ ಪ್ರಧಾನಿ ಮೋದಿ!

ಕೇರಳದ ತಿರುವನಂತಪುರಂ ದೇಶದ ಗಮನಸೆಳೆದಿತ್ತು. ಕಾರಣ ಕೇಂದ್ರ ಸಚಿವ, ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಹಾಗೂ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಶಶಿ ತರೂರ್ ನಡುವಿನ ಜಿದ್ದಾಜಿದ್ದಿನ ಹಣಾಹಣಿ ಎರ್ಪಟ್ಟಿತ್ತು. ಆದರೆ ರಾಜೀವ್ ಚಂದ್ರಶೇಖರ್ ಕೇವಲ 16,000 ಮತಗಳ ಅಂತರದಲ್ಲಿ ಮುಗ್ಗರಿಸಿದ್ದಾರೆ. ಇತ್ತ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಸುರೇಂದ್ರನ್ ಮುಗ್ಗರಿಸಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ಸುರೇಂದ್ರನ್ ಭಾರಿ ಅಂತರದ ಸೋಲು ಕಂಡಿದ್ದಾರೆ.
 

Latest Videos
Follow Us:
Download App:
  • android
  • ios