ಖ್ಯಾತ ನಿರ್ಮಾಪಕ ಕಳ್ಳತನ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದಾನೆ. ಇದು ಸಿನಿಮಾ ರಂಗದಲ್ಲಿ ಹೊಸ ಚರ್ಚೆಯನ್ನ ಹುಟ್ಟುಹಾಕಿದೆ. ಆ ನಿರ್ಮಾಪಕ ಕಳ್ಳತನಕ್ಕೆ ಇಳಿಯಲು ಕಾರಣವೇನು? ಆತನ ಬಾಳಲ್ಲಿ ಆಗಿದ್ದೇನು ಅನ್ನೋದ್ರ ವಿವರ ಇಲ್ಲಿದೆ.
ನವದೆಹಲಿ (ಅಕ್ಟೋಬರ್ 12) : ಸಿನಿಮಾ ನಿರ್ಮಾಪಕ ಅಂದ್ರೆ ದುಡ್ಡಿರೋನು! ಶ್ರೀಮಂತ! ಕಲಾವಿದರು ಕೇಳಿದ್ದನ್ನೆಲ್ಲ ನೀಡುವ ಭಾಗ್ಯವಂಥ ಎಂಬ ಕಲ್ಪನೆ ನಮ್ಮಲ್ಲಿ ಇದೆ. ಆದರೆ.. ಇಲ್ಲೊಬ್ಬ ನಿರ್ಮಾಪಕ ಕಳ್ಳತನ ಕೇಸ್‌ನಲ್ಲಿ (Theft case) ಅರೆಸ್ಟ್ ಆಗಿದ್ದಾನೆ.
ಕಾಜಾ ಹುಸೈನ್ (Kaja Hussain) ಬಂಧಿತ ನಿರ್ಮಾಪಕ. ನಿನ್ನೆಯ ದಿನ ಕೇರಳದಲ್ಲಿ ರೈಲ್ವೇ ಪೊಲೀಸರು ಅರೆಸ್ಟ್ ಮಾಡಲಾಗಿದೆ. ಆರೋಪ ಏನು ಅಂತಾ ನೋಡೋದಾದರೆ.. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಕಾಜಾ ಹುಸೈನ್ ಮೊಬೈಲ್ ಫೋನ್ (Mobile Phone) ಹಾಗೂ ಲ್ಯಾಪ್‌ಟಾಪ್‌ಗಳನ್ನ (Laptops) ಕದ್ದಿರುವ ಆರೋಪವನ್ನು ಹೊತ್ತುಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಮಂಗಳೂರು ಸೆಂಟ್ರಲ್ ಸಿಟಿ ಎಕ್ಸ್‌ಪ್ರೆಸ್‌ನಲ್ಲಿ (Mangaluru Central City Express) ಪ್ರಯಾಣಿಸುತ್ತಿದ್ದಾಗ ಘಟನೆ ನಡೆದಿದೆ ಎನ್ನಲಾಗಿದೆ.
ಯಾಕೆ ಈತ ಕಳ್ಳನತಕ್ಕೆ ಇಳಿದಿದ್ದ?
ಮಹಿಳಾ ಪ್ರಯಾಣಿಕರೊಬ್ಬರ ಮೊಬೈಲ್. ಆ ಮೊಬೈಲ್ ಬರೋಬ್ಬರಿ 80 ಸಾವಿರ ರೂಪಾಯಿ ಆಗಿತ್ತು ಎನ್ನಲಾಗಿದೆ. ಏಕಾಏಕಿ ಮೊಬೈಲ್ ಕದ್ದು ಕಾಜಾ ಅಲ್ಲಿಂದ ಪರಾರಿ ಆಗಿದ್ದ. ಅಂದಿನಿಂದ ಪೊಲೀಸರು (Police) ಆರೋಪಿಗಾಗಿ ಬಲೆ ಬೀಸಿದ್ದರು. ಕೊನೆಗೂ ಆತ ಸಿಕ್ಕಿಬಿದ್ದಿದ್ದಾನೆ. ಪೊಲೀಸ್ ತನಿಖೆ ವೇಳೆ ಪ್ರಮುಖ ವಿಚಾರಗಳು ಬಹಿರಂಗ ಆಗಿವೆ. ಕಾಜಾ ಹುಸೇನ್, ಶೋರ್ನೂರ್ ಪ್ರದೇಶದಲ್ಲಿ ಇಲ್ಲಿಯವರೆಗೆ ಎರಡು ಲ್ಯಾಪ್‌ಟಾಪ್‌ಗಳನ್ನೂ ಕದ್ದಿದ್ದಾನೆ. ಜೊತೆಗೆ ಕೋಝಿಕ್ಕೋಡ್‌ನಲ್ಲೂ ಎರಡು ಲ್ಯಾಪ್‌ಟಾಪ್‌ಗಳನ್ನ ಕದ್ದಿದ್ದಾನೆ ಎನ್ನಲಾಗಿದೆ. ಇದು ಸಿನಿಮಾ ರಂಗವನ್ನು ಆತಂಕಕ್ಕೆ ತಳ್ಳುವಂತೆ ಮಾಡಿದೆ.
ಕಾಜಾ ಹುಸೇನ್ 'ಕಲ್ಲನ್ಮಾರುಡೆ ವಿಡು' ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದಾನೆ. ಈ ಚಿತ್ರವು 2024ರಲ್ಲಿ ಬಿಡುಗಡೆ ಆಗಿತ್ತು. ಕೇರಳದ ಪಾಲಕ್ಕಾಡ್ ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಬಿಎನ್‌ಎಸ್ ಸೆಕ್ಷನ್ 305 (ವಾಸಸ್ಥಳ, ಸಾರಿಗೆ ಪೂಜಾ ಸ್ಥಳದಲ್ಲಿನ ಕಳ್ಳತನ) ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ. ಆದರೆ ಅವರು ನಿರ್ಮಾಣ ಮಾಡಿದ ಚಿತ್ರಗಳು ಹಣ ಗಳಿಸುವಲ್ಲಿ ವಿಫಲವಾದವು. ಅದರಿಂದ ಆರ್ಥಿಕ ನಷ್ಟ ಅನುಭವಿಸಿದರು. ಇದರಿಂದ ದಿನೇ ದಿನೇ ಆರ್ಥಿಕ ಪರಿಸ್ಥಿತಿ ಹದಗೆಡುತ್ತ ಹೋಗಿದೆ. ಇದರಿಂದ ಆತ ಹಣ ಗಳಿಸಲು ರೈಲ್ವೇ ನಿಲ್ದಾಣ, ರೈಲು, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಕಳ್ಳತನಕ್ಕೆ ಇಳಿದಿದ್ದ ಎನ್ನಲಾಗಿದೆ.
ಕಾಜಾ ಹುಸೇನ್ ಕಲ್ಲನ್ಮಾರುಡೆ ವಿಡು ಚಿತ್ರ ನಿರ್ಮಾಣ ಮಾಡಿದ್ದರು. ಈ ವೇಳೆ ಚಿತ್ರ ತಂಡದಲ್ಲಿ ಕೆಲವು ಬೆಳವಣಿಗೆಗಳು ಆಗಿದ್ವಂತೆ. ಈ ಹಿನ್ನೆಲೆಯಲ್ಲಿ ನಾಯಕ ಬಿಜು ಕುಟ್ಟನ್ ಚಿತ್ರದ ಪ್ರಚಾರಕ್ಕೆ ಬಂದಿರಲಿಲ್ಲ. ಹೀರೋ ಚಿತ್ರದ ಪ್ರಚಾರಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಚಿತ್ರ ಹಣಗಳಿಸುವಲ್ಲಿ ವಿಫಲವಾಗಿದೆ. ಹೀರೋ ಪ್ರಚಾರದಲ್ಲಿ ತೊಡಗದೇ ಇರೋದ್ರಿಂದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಚಿತ್ರ ವಿಫಲವಾಯಿತು ಎಂದು ಹೇಳಲಾಗುತ್ತಿದೆ. ಒಟ್ಟಾರೆ ಸಿನಿಮಾ ನಿರ್ಮಾಪಕನೊಬ್ಬ ಕಳ್ಳತನಕ್ಕೆ ಇಳಿದು ಪೊಲೀಸರ ಅತಿಥಿ ಆಗಿರೋದು ಮಲಯಾಳಂ ಚಿತ್ರರಂಗದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಅದೆಷ್ಟೋ ನಿರ್ಮಾಪಕರು ಸಿನಿಮಾಗಾಗಿ ಬಂಡವಾಳ ಹಾಕಿ ಮನೆ ಮಠಗಳನ್ನು ಕಳೆದುಕೊಂಡ ಉದಾಹರಣೆಗಳಿವೆ. ಆದರೆ ಇವರು, ಕಳ್ಳತನಕ್ಕೆ ಇಳಿದಿರೋದು ಸೋಚನೀಯ ಸಂಗತಿ ಆಗಿದೆ.


