Asianet Suvarna News Asianet Suvarna News

ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ; ಮೊಬೈಲ್‌ ಟಾರ್ಚ್‌ನಲ್ಲಿ ಸಿಸೇರಿಯನ್ ಮಾಡಿದ ಡಾಕ್ಟರ್‌, ತಾಯಿ-ಮಗು ಸಾವು!

ವೈದ್ಯರು  ಟಾರ್ಚ್‌ಲೈಟ್‌ನಲ್ಲಿ ಮಹಿಳೆಗೆ ಸಿಸೇರಿಯನ್ ಮಾಡಿಸಿದ್ದು ಇದರಿಂದ ತಾಯಿ-ಮಗು ಇಬ್ಬರೂ ಸಾವನ್ನಪ್ಪಿರುವ ಘಟನೆ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯ ಸಂಬಂಧಿಕರು ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸಿದರು.

Mumbai Doctors Perform C-Section Under Torchlight, Deliver Dead Boy, Mother Passes Away Vin
Author
First Published May 3, 2024, 11:57 AM IST

ಮುಂಬೈ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು  ಟಾರ್ಚ್‌ಲೈಟ್‌ನಲ್ಲಿ ಮಹಿಳೆಗೆ ಸಿಸೇರಿಯನ್ ಮಾಡಿಸಿದ್ದು ಇದರಿಂದ ತಾಯಿ-ಮಗು ಇಬ್ಬರೂ ಸಾವನ್ನಪ್ಪಿರುವ ಘಟನೆ ನಡೆದಿದೆ. ಮುಂಬೈನ ಸಿಯಾನ್ ಆಸ್ಪತ್ರೆಯಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ಈ ಸಂದರ್ಭದಲ್ಲೇ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ವೈದ್ಯರ ತಂಡ ಮೊಬೈಲ್ ಫೋನ್‌ಗಳ ಬೆಳಕಿನಲ್ಲಿ ಸಿ-ಸೆಕ್ಷನ್ ಮಾಡಿದ್ದಾರೆ. ವೈದ್ಯರು ಹೆರಿಗೆ ಮಾಡಿದ ಕೆಲವೇ ಗಂಟೆಗಳಲ್ಲಿ ಮಹಿಳೆ ಸಾವನ್ನಪ್ಪಿದ್ದಾಳೆ. ಮಗುವೂ ಸಹ ಮೃತಪಟ್ಟಿದೆ. ಹೆಮರೇಜ್ (PPH) ಕಾರಣದಿಂದಾಗಿ ಮಹಿಳೆ ಹೆರಿಗೆಯ ನಂತರ ತೀವ್ರವಾದ ಯೋನಿ ರಕ್ತಸ್ರಾವವನ್ನು ಅನುಭವಿಸಿದರು ಎಂದು ತಿಳಿದುಬಂದಿದೆ.

ಮೃತ ಮಹಿಳೆಯನ್ನು ಮುಂಬೈನ ಭಾಂಡೂಪ್‌ನ ನಿವಾಸಿ ಸಹೀದುನ್ನಿಸ್ಸಾ ಅನ್ಸಾರಿ ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ಅಂಗವಿಕಲರಾಗಿದ್ದು, ಹೆರಿಗೆಗೆ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂದರ್ಭದಲ್ಲಿ ವೈದ್ಯರು ಸಾಮಾನ್ಯ ಹೆರಿಗೆ ಮಾಡುವ ಭರವಸೆ ನೀಡಿದ್ದರು. ಆದರೆ ಸೋಮವಾರ ಶಾಹಿದುನ್‌ಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಈ ಸಂದರ್ಭದಲ್ಲಿ ವೈದ್ಯರು ಸಾಮಾನ್ಯ ಹೆರಿಗೆ ಕಷ್ಟ ಎಂದು ಹೇಳಿ ಸಿಸೇರಿಯನ್ ಮಾಡಲು ಮುಂದಾಗಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೂ ಇಲ್ಲ, ಕರೆಂಟೂ ಇಲ್ಲ: ಮೊಬೈಲ್‌ ಟಾರ್ಚ್‌ನಲ್ಲೇ ನಡೆಯಿತು ಹೆರಿಗೆ...!

ಈ ಸಂದರ್ಭದಲ್ಲಿ ವಿದ್ಯುತ್ ಕಡಿತವಾಗಿತ್ತು. ಆಸ್ಪತ್ರೆಯಲ್ಲಿ ಜನರೇಟರ್ ಇರಲ್ಲಿಲ್ಲ. ಮಾತ್ರವಲ್ಲ ಆಮ್ಲಜನಕದ ವ್ಯವಸ್ಥೆಯೂ ಇರಲ್ಲಿಲ್ಲ ಎನ್ನಲಾಗ್ತಿದೆ. ಮಹಿಳೆಯ ಸಂಬಂಧಿಕರು ಮಂಗಳವಾರ ಮತ್ತು ಬುಧವಾರ ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸಿದರು. ಆಸ್ಪತ್ರೆಯ ಆರೋಗ್ಯ ಕೇಂದ್ರದಲ್ಲಿ ಆಮ್ಲಜನಕ ಸಿಲಿಂಡರ್‌ನಂತಹ ತುರ್ತು ಅಗತ್ಯ ಉಪಕರಣಗಳಿಲ್ಲ ಎಂದು ಮಹಿಳೆಯ ಸಂಬಂಧಿಕರು ಆರೋಪಿಸಿದ್ದಾರೆ.  ಮಾತ್ರವಲ್ಲ ತಾಯಿ-ಮಗು ಸಾವು ಆದ ನಂತರ ಅದೇ ಆಪರೇಷನ್ ಥಿಯೇಟರ್‌ನಲ್ಲಿ ಮೊಬೈಲ್‌ ಟಾರ್ಚ್‌ನಲ್ಲಿ ಮತ್ತೊಂದು ಹೆರಿಗೆ ಮಾಡಲಾಯಿತು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

ಘಟನೆಯ ನಂತರ, ಮುಂಬೈನ ನಾಗರಿಕ ಸಂಸ್ಥೆ, ಕ್ರಮಕ್ಕೆ ಧಾವಿಸಿತು. ಘಟನೆಯ ತನಿಖೆಗಾಗಿ 10 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಸರ್ಕಾರಿ ಆಸ್ಪತ್ರೆಯ ವೈದ್ಯರನ್ನೂ ಒಳಗೊಂಡಿತ್ತು.

ಡ್ರಗ್‌ ಅಮಲಲ್ಲಿ ಆಸ್ಪತ್ರೆಯಲ್ಲೇ ಬಟ್ಟೆ ಬಿಚ್ಚಿ ಬೆತ್ತಲಾಗಿ ಓಡಾಡಿದ ಡಾಕ್ಷರ್

Latest Videos
Follow Us:
Download App:
  • android
  • ios