ವೇಶ್ಯಾಗೃಹದಲ್ಲಿದ್ರಂತೆ ಮೃಣಾಲ್ ಠಾಕೂರ್, ಆ ನಿರ್ದೇಶಕನಿಂದ ಹೊಸ ಬದುಕು ಸಿಕ್ತೆಂದ ನಟಿ!
ಮೃಣಾಲ್ ಠಾಕೂರ್ ಬಹು ಬೇಡಿಕೆಯ ನಟಿ. ಈಕೆ ವೇಶ್ಯಾಗೃಹದಲ್ಲಿದ್ದರಂತೆ. ಆ ನಿರ್ದೇಶಕ ಬಂದು ಕಾಪಾಡದಿದ್ರೆ ನನ್ನ ಬದುಕು ಹೇಗಿರ್ತಿತ್ತೋ ಅಂತಿದ್ದಾರೆ ಈ ಸೀತಾರಾಮ ಸಿನಿಮಾ ಖ್ಯಾತಿಯ ನಟಿ.
ಮೃಣಾಲ್ ಠಾಕೂರ್ ಹಲವರ ಫೇವರಿಟ್ ನಟಿ. ಈಕೆಗೆ ನಟನೆ ಅನ್ನೋದು ನೀರು ಕುಡಿದಷ್ಟೇ ಸಲೀಸು. ಕೊಂಚ ದಪ್ಪ ದನಿ, ಚೆಂದದ ಕಣ್ಣುಗಳು, ಯುನೀಕ್ ಅನಿಸುವ ಸುಂದರ ನಟನೆ ಈ ನಟಿಯ ಪ್ಲಸ್ ಪಾಯಿಂಟ್. ಅಂದಹಾಗೆ ಈ ನಟಿ ವೇಶ್ಯಾಗೃಹದಲ್ಲಿದ್ದದ್ದು, ಆಕೆಯ ಬದುಕಿನ ಅತೀ ಘೋರ ದಿನಗಳು ಅಂತ ಈಕೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಂಥದ್ದಾದೊಂದು ದುಃಸ್ವಪ್ನದಿಂದ ಅವರನ್ನು ಆಚೆ ಕರೆತಂದದ್ದು ಒಬ್ಬ ನಿರ್ದೇಶಕರಂತೆ. ಅಷ್ಟಕ್ಕೂ ಈ ನಟಿ ವೇಶ್ಯಾಗೃಹದಲ್ಲಿ ಯಾಕಿದ್ರು? ಈಕೆಯ ಹಿನ್ನೆಲೆ ಏನು? ಈಕೆಯ ಮಾತಲ್ಲೇ ಹೇಳೋದಾದ್ರೆ ಇವರಿಗೆ ಹೊಸ ಬದುಕು ತಂದುಕೊಟ್ಟ ಆ ನಿರ್ದೇಶಕ ಯಾರು? ಆತನೊಂದಿಗೆ ಈಕೆಯ ಸಂಬಂಧ ಏನು? ಅನ್ನೋ ಪ್ರಶ್ನೆ ಮನಸ್ಸಿಗೆ ಬರಬಹುದು. ಇದಕ್ಕೆಲ್ಲ ಮೃಣಾಲ್ ಡೀಟೇಲಾಗಿ ಉತ್ತರ ನೀಡಿದ್ದಾರೆ.
ಅಂದಹಾಗೆ ಮೂವತ್ತೊಂದು ವರ್ಷದ ಮರಾಠಿ ಕುಟುಂಬದಿಂದ ಬಂದ ಈ ನಟಿ ಮುಂಬೈಯಲ್ಲೇ ಪ್ರೈಮರಿ ಹಾಗೂ ಸೆಕೆಂಡರಿ ಎಜುಕೇಶನ್ ಮುಗಿಸ್ತಾರೆ. ಮುಂದೆ ಕಾಲೇಜ್ ಓದಬೇಕಾದರೆ ಸೀರಿಯಲ್‌ನಿಂದ ಆಫರ್ ಬರುತ್ತೆ. ಅದಕ್ಕಾಗಿ ಕಾಲೇಜ್‌ಗೆ ಗೋಲಿ ಹೊಡೆದ ಈಕೆ 'ಮುಝೆ ಕುಚ್ ಕೆಹ್ತಿ' ಅನ್ನೋ ಸೀರಿಯಲ್ ಮೂಲಕ ಮನರಂಜನಾ ಕ್ಷೇತ್ರಕ್ಕೆ ಬರ್ತಾರೆ, ಇದರಲ್ಲಿನ ನಟನೆಯ ಇಂಡಿಯನ್ ಟಿವಿ ಅವಾರ್ಡ್ ಕೂಡ ಈಕೆಗೆ ಸಿಗುತ್ತೆ. ಲವ್ ಸೋನಿಯಾ ಅನ್ನೋ ಸಿನಿಮಾದಿಂದ ಬಾಲಿವುಡ್‌ಗೆ ಎಂಟ್ರಿ ಕೊಡೋ ಈಕೆ ಆಮೇಲೆ ಬೆಳೆದದ್ದು ಎಲ್ಲರಿಗೂ ಗೊತ್ತಿರುವ ಕಥೆ.
ನಿಜಕ್ಕೂ ಈ ಹಾಟ್ ಬ್ಯೂಟಿ ಅದೇ ಜಾಹೀರಾತಿನ ಬಾಲಕಿನಾ? ಊಹಿಸಲು ಸಾಧ್ಯವೇ ಇಲ್ಲ ನೋಡಿ..!
ಸದ್ಯ ಬಾಲಿವುಡ್‌ನ ಪ್ರಬುದ್ಧ ನಟಿಯರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿರುವ ಈಕೆ ಸದ್ಯಕ್ಕೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಹಾಗೂ ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿರುವ ನಟಿಗೆ ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆ. ತೆಲುಗಿಗೆ ಎಂಟ್ರಿ ಕೊಡುವುದಕ್ಕಿಂತ ಮೊದಲು ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಇವರಿಗೆ ಅದ್ಭುತ ಎನ್ನುವಂತಹ ಯಶಸ್ಸು ಸಿಕ್ಕಿರಲಿಲ್ಲ. ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ಸಕ್ಸಸ್ ಕೂಡ ಇವರನ್ನು ಹಿಂಬಾಲಿಸಿಕೊಂಡು ಬಂದಿತ್ತು. ಸದ್ಯ ಟಾಲಿವುಡ್‌ನ ಟಾಪ್ ನಟಿಯರಲ್ಲಿ ಮೃಣಾಲ್ ಠಾಕೂರ್ ಕೂಡ ಒಬ್ಬರಾಗಿದ್ದಾರೆ.
ಈ ನಟಿ ಸಿನಿಮಾವೊಂದರ ಪಾತ್ರಕ್ಕಾಗಿ ವೇಶ್ಯಾಗೃಹಕ್ಕೆ ಎರಡು ತಿಂಗಳು ವಾಸ್ತವ್ಯ ಹೂಡಿದ್ದರು. ಅಲ್ಲಾದ ಅನುಭವ ಈಕೆಯನ್ನು ಖಿನ್ನತೆಗೆ (Depression) ದೂಡಿತ್ತಂತೆ. 2018ರಲ್ಲಿ ಮೃಣಾಲ್ ಠಾಕೂರ್ 'ಲವ್ ಸೋನಿಯಾ' ಎಂಬ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ನಟಿಯ ಪಾತ್ರ ತನ್ನ ತಂಗಿಯನ್ನು ಮಹಿಳಾ ಕಳ್ಳಸಾಗಣೆಯಿಂದ ರಕ್ಷಿಸುವುದಾಗಿತ್ತು. ಈ ಸಿನಿಮಾ ಶೂಟಿಂಗ್ ವೇಳೆ ತಮ್ಮ ಪಾತ್ರದಲ್ಲಿ ನೈಜತೆ ಇರಬೇಕೆಂಬ ಉದ್ದೇಶದಿಂದ ಎರಡು ತಿಂಗಳು ವೇಶ್ಯಾಗೃಹದಲ್ಲಿ (Brothel) ಇದ್ದಿದ್ದಾಗಿ ಹೇಳಿಕೊಂಡಿದ್ದಾರೆ. ಇದರಿಂದ ಮೃಣಾಲ್ ಠಾಕೂರ್ ಖಿನ್ನತೆಗೆ ಒಳಗಾಗಿದ್ದರಂತೆ.
ಪ್ರಿಯಾಂಕಾ ಚೋಪ್ರಾ ಮಾತ್ರವಲ್ಲ ಈ ನಟಿಯರೂ ಮದ್ವೆಯಾಗಿದ್ದೂ ಕಿರಿಯ ವಯಸ್ಸಿನವರನ್ನೇ!
ಈ ಡಿಪ್ರೆಶನ್ ಬಹಳ ಕಾಲ ಅವರನ್ನು ಕಾಡಿತ್ತಂತೆ. ಆವೇಳೆ 'ಲವ್ ಸೋನಿಯಾ' ಸಿನಿಮಾ ನಿರ್ದೇಶಕ (director) ತಬ್ರೇಜ್ ನೂರಾನಿ ಈಕೆಯ ಬೆಂಬಲಕ್ಕೆ ನಿಂತರಂತೆ. ಅವರಿಂದಾಗಿ ತಾನು ಆ ಖಿನ್ನತೆಯಿಂದ (depression) ಹೊರಬರುವ ಹಾಗಾಯ್ತು. ಇಲ್ಲವಾದರೆ ತನ್ನ ಬದುಕು ಯಾವ ರೀತಿ ಆಗುತ್ತಿತ್ತೋ ಊಹಿಸಲೂ ಸಾಧ್ಯವಿಲ್ಲ ಎಂದು ಮೃಣಾಲ್ ಹೇಳುತ್ತಾರೆ.
ಸದ್ಯ ಮೃಣಾಲ್ ಠಾಕೂರ್ ಬಾಲಿವುಡ್ (Bollywood) ಹಾಗೂ ತೆಲುಗು ಸಿನಿಮಾಗಳಲ್ಲಿ (Kollywood) ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ 'ಪೂಜಾ ಮೇರಿ ಜಾನ್' ಅನ್ನೋ ಸಿನಿಮಾದಲ್ಲಿ ನಟಿಸಿದ್ದು, ಅದು ಸದ್ಯಕ್ಕೀಗ ಪೋಸ್ಟ್ ಪ್ರೊಡಕ್ಷನ್ (post production) ಹಂತದಲ್ಲಿದೆ. ಸದ್ಯ ಈ ನಟಿ ತನ್ನ ಬದುಕಿನ ಘೋರ ಅನುಭವ ಹಂಚಿಕೊಂಡಿದ್ದು ವೇಶ್ಯೆಯರ ನಿತ್ಯ ನರಕದ ಬದುಕಿಗೆ ಕೈಲಾದ ಸಹಾಯ ಮಾಡುತ್ತೀನಿ ಎಂದಿದ್ದಾರೆ.