ವರ್ಸೋವಾ - ಬಾಂದ್ರಾ ಸೀ ಲಿಂಕ್‌ಗೆ ವೀರ್ ಸಾವರ್ಕರ್ ಸೇತು ಎಂದು ಮರುನಾಮಕರಣ: ಮಹಾರಾಷ್ಟ್ರ ಕ್ಯಾಬಿನೆಟ್‌ ನಿರ್ಧಾರ

ಬಾಂದ್ರಾ - ವರ್ಸೋವಾ ಸೀ ಲಿಂಕ್‌ ಇನ್ನೂ ನಿರ್ಮಾಣ ಹಂತದಲ್ಲಿದ್ದು, ಇದಕ್ಕೆ ಹಿಂದುತ್ವ ಸಿದ್ಧಾಂತವಾದಿ ದಿವಂಗತ ವಿ.ಡಿ. ಸಾವರ್ಕರ್ ಅವರ ಹೆಸರನ್ನು ಇಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕಳೆದ ತಿಂಗಳು ಘೋಷಿಸಿದ್ದರು.

maharashtra versova bandra sea link renamed veer savarkar setu ash

ಮುಂಬೈ (ಜೂನ್ 28, 2023): ಮಹಾರಾಷ್ಟ್ರ ಸರ್ಕಾರವು ವರ್ಸೋವಾ - ಬಾಂದ್ರಾ ಸೀ ಲಿಂಕ್ ಅನ್ನು ವೀರ್ ಸಾವರ್ಕರ್ ಸೇತು ಎಂದು ಮರುನಾಮಕರಣ ಮಾಡಿದೆ. ಮಹಾರಾಷ್ಟ್ರದ ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆ ಬಣ ಹಾಘೂ ಬಿಜೆಪಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇದರ ಜತೆಗೆ, ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಅನ್ನು ಅಟಲ್ ಬಿಹಾರಿ ವಾಜಪೇಯಿ ಸ್ಮೃತಿ ನ್ಹವ ಶೇವಾ ಅಟಲ್ ಸೇತು ಎಂದೂ ಮರುನಾಮಕರಣ ಮಾಡಲಾಗಿದೆ ಎಂದು ವರದಿಯಾಗಿದೆ.

ಬಾಂದ್ರಾ - ವರ್ಸೋವಾ ಸೀ ಲಿಂಕ್‌ ಇನ್ನೂ ನಿರ್ಮಾಣ ಹಂತದಲ್ಲಿದ್ದು, ಇದಕ್ಕೆ ಹಿಂದುತ್ವ ಸಿದ್ಧಾಂತವಾದಿ ದಿವಂಗತ ವಿ.ಡಿ. ಸಾವರ್ಕರ್ ಅವರ ಹೆಸರನ್ನು ಇಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕಳೆದ ತಿಂಗಳು ಘೋಷಿಸಿದ್ದರು. ಈ ಬಗ್ಗೆ ಇಂದಿನ ಕ್ಯಾಬಿನೆಟ್‌ ಸಭೆಯಲ್ಲಿ ಬಿಜೆಪಿ - ಶಿವಸೇನಾ ಮೈತ್ರಿ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದೂ ತಿಳಿದುಬಂದಿದೆ.  

ಇದನ್ನು ಓದಿ: ಬಾಂದ್ರಾ-ವೆರ್ಸೋವಾ ಸೀಲಿಂಕ್‌ಗೆ ವೀರ್‌ ಸಾವರ್ಕರ್‌ ಹೆಸರು, ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಘೋಷಣೆ!

ಇನ್ನು, ಕೇಂದ್ರ ಸರ್ಕಾರ ನೀಡುವಂತೆಯೇ ರಾಜ್ಯ ಮಟ್ಟದ ಶೌರ್ಯ ಪ್ರಶಸ್ತಿಗೂ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಇಡಲಾಗುವುದು ಎಂದೂ ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಹೇಳಿದರು. ಮೇ 28 ರಂದು ಸಾವರ್ಕರ್ ಅವರ ಜನ್ಮದಿನದ ಸಂದರ್ಭದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ, “ಮುಂಬರುವ ಬಾಂದ್ರಾ-ವರ್ಸೋವಾ ಸೀಲಿಂಕ್‌ಗೆ ಸ್ವಾತಂತ್ರ್ಯವೀರ್ ಸಾವರ್ಕರ್ ಹೆಸರನ್ನು ಇಡಲಾಗುವುದು. ಹಾಗೂ, ಕೇಂದ್ರ ಸರ್ಕಾರದ ಶೌರ್ಯ ಪ್ರಶಸ್ತಿಗಳ ಮಾದರಿಯಲ್ಲಿ, ಮಹಾರಾಷ್ಟ್ರ ಸರ್ಕಾರವು ಸ್ವಾತಂತ್ರ್ಯವೀರ್ ಸಾವರ್ಕರ್ ಶೌರ್ಯ ಪ್ರಶಸ್ತಿಗಳನ್ನು ನೀಡುತ್ತದೆ’’ ಎಂದೂ ಅವರು ತಿಳಿಸಿದ್ದರು. 

ಸಾವರ್ಕರ್ ಅವರು ಮಹಾರಾಷ್ಟ್ರದ ರಾಜಕೀಯದಲ್ಲಿ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದಾರೆ.  ಈ ಹಿಂದೆ ಭಾರತ್ ಜೋಡೋ ಯಾತ್ರೆ ವೇಳೆ ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗಳು ದೇಶಾದ್ಯಂತ ಸಂಚಲನ ಮೂಡಿಸಿತ್ತು, ಇದರ ಪರಿಣಾಮ ಮಹಾರಾಷ್ಟ್ರದ ರಾಜಕೀಯದಲ್ಲೂ ಕಾಣಿಸಿಕೊಂಡಿತ್ತು. ರಾಹುಲ್ ಗಾಂಧಿ ಹೇಳಿಕೆ ಬಳಿಕ ಸಿಎಂ ಏಕನಾಥ್ ಶಿಂಧೆ ಸಾವರ್ಕರ್ ಗೌರವ್ ಯಾತ್ರೆ ಕೈಗೊಳ್ಳುವುದಾಗಿ ಘೋಷಿಸಿದ್ದರು. ಇದನ್ನು ಏಪ್ರಿಲ್‌ನಲ್ಲಿ ಥಾಣೆಯಿಂದ ಪ್ರಾರಂಭಿಸಲಾಯಿತು. ರಾಜ್ಯದ 288 ಸ್ಥಾನಗಳಲ್ಲಿ ಈ ಯಾತ್ರೆ ಹಮ್ಮಿಕೊಳ್ಳುವುದಾಗಿ ಸಿಎಂ ಶಿಂಧೆ ಘೋಷಿಸಿದ್ದರು. ಇದನ್ನು ರಾಜ್ಯಾದ್ಯಂತ ಆಯೋಜಿಸಲಾಗಿತ್ತು.

ಇದನ್ನೂ ಓದಿ: Mann Ki Baat: ವೀರ್ ಸಾವರ್ಕರ್, ಎನ್‌ಟಿ ರಾಮರಾವ್ ಅವರಿಗೆ ಮೋದಿ ನಮನ

ಅಲ್ಲದೆ, ಕಳೆದ ತಿಂಗಳು ಪ್ರಧಾನಿ ಮೋದಿ ಸಾವರ್ಕರ್‌ ಜನ್ಮ ದಿನದಂದೇನೂತನ ಸಂಸತ್‌ ಭವನ ಉದ್ಘಾಟಿಸಿದ್ದರು. ವೀರ್‌ ಸಾವರ್ಕರ್‌ ಅವರ ಜನ್ಮದಿನ ಹಿನ್ನೆಲೆ ನೂತನ ಸಂಸತ್‌ ಭವನದಲ್ಲಿ ಪ್ರಧಾನಿ ಮೋದಿ ನಮನವನ್ನೂ ಸಲ್ಲಿಸಿದ್ರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಸಹ ಸಾವರ್ಕರ್‌ ಅವರಿಗೆ ನಮನ ಸಲ್ಲಿಸಿದ್ರು. ನೂತನ ಸಂಸತ್‌ ಭವನದಲ್ಲಿ ಸಾವರ್ಕರ್‌ ಅವರ ಫೋಟೋಗೆ ಪುಷ್ಟ ನಮನ ಸಲ್ಲಿಕೆ ಮಾಡಲಾಯ್ತು.

ಹಾಗೂ, ಅದೇ ದಿನ ಪ್ರಸಾರವಾದ ಮನ್‌ ಕೀ ಬಾತ್‌ನಲ್ಲೂ ವೀರ್‌ ಸಾವರ್ಕರ್‌ ಹಾಗೂ ಎನ್‌ಟಿಆರ್‌ ಅವರಿಗೆ ನಮನ ಸಲ್ಲಿಕೆ ಮಾಡಲಾಗಿತ್ತು.  

ಇದನ್ನೂ ಓದಿ: ನೂತನ ಸಂಸತ್‌ ಭವನ ಉದ್ಘಾಟನೆ ಬೆನ್ನಲ್ಲೇ ವೀರ್‌ ಸಾವರ್ಕರ್‌ಗೆ ‘ನಮೋ’ ನಮನ

Latest Videos
Follow Us:
Download App:
  • android
  • ios