ಬಾಂದ್ರಾ-ವೆರ್ಸೋವಾ ಸೀಲಿಂಕ್‌ಗೆ ವೀರ್‌ ಸಾವರ್ಕರ್‌ ಹೆಸರು, ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಘೋಷಣೆ!

ಮಹಾರಾಷ್ಟ್ರ ಸರ್ಕಾರ ಭಾನುವಾರ ಮಹತ್ವದ ಘೋಷಣೆ ಮಾಡಿದೆ. ಬಾಂದ್ರಾ-ವರ್ಸೋವಾ ಸೀ ಲಿಂಕ್‌ಗೆ ವೀರ್ ಸಾವರ್ಕರ್ ಅವರ ಹೆಸರನ್ನು ಇಡಲಾಗುವುದು ಎಂದು ವೀರ್ ಸಾವರ್ಕರ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಸಿಎಂ ಏಕನಾಥ್ ಶಿಂಧೆ ಘೋಷಣೆ ಮಾಡಿದ್ದಾರೆ.

eknath Shinde big announcement Bandra Versova sea link will be known as Veer Savarkar Setu san

ಮುಂಬೈ (ಮೇ. 28): ಸಾವರ್ಕರ್ ಜಯಂತಿಯಂದು ಭಾನುವಾರ  ಮಹಾರಾಷ್ಟ್ರ ಸರ್ಕಾರ ದೊಡ್ಡ ಘೋಷಣೆ ಮಾಡಿದೆ. ಬಾಂದ್ರಾ-ವರ್ಸೋವಾ ಸೀ ಲಿಂಕ್‌ಗೆ ವೀರ್ ಸಾವರ್ಕರ್ ಹೆಸರಿಡುವುದಾಗಿ ಸಿಎಂ ಏಕನಾಥ್ ಶಿಂಧೆ ಘೋಷಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ 140 ನೇ ಜನ್ಮದಿನವನ್ನು ಮೇ 28 ರ ಭಾನುವಾರದಂದು ಆಚರಿಸಲಾಗಿದೆ ಇದೇ ದಿನ ಲೀ ಲಿಂಕ್‌ಅನ್ನು ಇನ್ನು ಮುಂದೆ ವೀರ್‌ ಸಾವರ್ಕರ್‌ ಸೇತು ಎನ್ನುವ ಹೆಸರಿನಿಂದ ಕರೆಯಲಾಗುವುದು ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಬಾಂದ್ರಾ-ವರ್ಸೋವಾ ಸೀಲಿಂಕ್‌ ಹೆಸರನ್ನು ಬದಲಾಯಿಸುವ ಬಗ್ಗೆ ಏಕನಾಥ್‌ ಶಿಂಧೆ ಈ ಹಿಂದೆಯೇ ಮಾತನಾಡಿದ್ದರು. ಮಾಹಿತಿಯ ಪ್ರಕಾರ, ಬಾಂದ್ರಾ-ವರ್ಸೋವಾ ಲೀ ಲಿಂಕ್‌ಅನ್ನು ಇನ್ನು ಮುಂದೆ ವೀರ್ ಸಾವರ್ಕರ್ ಸೇತು ಎಂದು ಕರೆಯಲಾಗುತ್ತದೆ. ಬಾಂದ್ರಾ-ವರ್ಸೋವಾ ಸೀ-ಲಿಂಕ್ ಹೆಸರನ್ನು ರಾಜ್ಯ ಸರ್ಕಾರ ಬದಲಾಯಿಸಲಿದೆ ಎಂದು ಈಗಾಗಲೇ ಬಹಳ ದಿನಗಳಿಂದ ಚರ್ಚೆಯಾಗುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಈಗ ವೀರ ಸಾವರ್ಕರ್ ಜಯಂತಿಯಂದೇ ಈ ಸೀ-ಲಿಂಕ್‌ನ ಮರುನಾಮಕರಣ ಮಾಡಲಾಗಿದೆ.

ಪ್ರಧಾನಿ ಮೋದಿ ಅವರು ಹೊಸ ಸಂಸತ್ ಭವನವನ್ನು ಭಾನುವಾರ ಉದ್ಘಾಟನೆ ಮಾಡಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಗುರುವಾರ ಹೊಸ ಸಂಸತ್ ಭವನವನ್ನು "ನವ ಭಾರತದ ಸಂಕೇತ" ಎಂದು ಬಣ್ಣಿಸಿತ್ತಲ್ಲದೆ, ಹಿಂದುತ್ವ ಸಿದ್ಧಾಂತವಾದಿ ಸಾವರ್ಕರ್‌ ಜನ್ಮದಿನವಾದ ಮೇ 28 ರಂದೇ ಇದು ಅನಾವರಣ ಆಗುತ್ತಿರುವಯದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿತ್ತು.ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸುವ ಬದಲು ಭಾಗವಹಿಸುವಂತೆ ಪಕ್ಷವು ವಿರೋಧ ಪಕ್ಷಗಳನ್ನು ಒತ್ತಾಯಿಸಿತ್ತು.

ಸಾವರ್ಕರ್ ಅವರು ಮಹಾರಾಷ್ಟ್ರದ ರಾಜಕೀಯದಲ್ಲಿ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದಾರೆ.  ಈ ಹಿಂದೆ ಭಾರತ್ ಜೋಡೋ ಯಾತ್ರೆ ವೇಳೆ ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗಳು ದೇಶಾದ್ಯಂತ ಸಂಚಲನ ಮೂಡಿಸಿತ್ತು, ಇದರ ಪರಿಣಾಮ ಮಹಾರಾಷ್ಟ್ರದ ರಾಜಕೀಯದಲ್ಲೂ ಕಾಣಿಸಿಕೊಂಡಿತ್ತು. ರಾಹುಲ್ ಗಾಂಧಿ ಹೇಳಿಕೆ ಬಳಿಕ ಸಿಎಂ ಏಕನಾಥ್ ಶಿಂಧೆ ಸಾವರ್ಕರ್ ಗೌರವ್ ಯಾತ್ರೆ ಕೈಗೊಳ್ಳುವುದಾಗಿ ಘೋಷಿಸಿದ್ದರು. ಇದನ್ನು ಏಪ್ರಿಲ್‌ನಲ್ಲಿ ಥಾಣೆಯಿಂದ ಪ್ರಾರಂಭಿಸಲಾಯಿತು. ರಾಜ್ಯದ 288 ಸ್ಥಾನಗಳಲ್ಲಿ ಈ ಯಾತ್ರೆ ಹಮ್ಮಿಕೊಳ್ಳುವುದಾಗಿ ಸಿಎಂ ಶಿಂಧೆ ಘೋಷಿಸಿದ್ದರು. ಇದನ್ನು ರಾಜ್ಯಾದ್ಯಂತ ಆಯೋಜಿಸಲಾಗಿತ್ತು.

ಗೂಗಲ್‌ ಮ್ಯಾಪ್‌ನಲ್ಲಿ ಸಣ್ಣ ಸೆಟ್ಟಿಂಗ್‌ ಮಿಸ್ ಮಾಡಿದ್ದಕ್ಕೆ ಜೈಲು ಪಾಲಾದ ಯುವಕ? ಏನಿದು ಕಥೆ!

ರಾಹುಲ್‌ಗೆ ಸುಮ್ಮನಿರುವಂತೆ ಹೇಳಿದ್ದ ಶರದ್‌ ಪವಾರ್‌: ರಾಹುಲ್‌ ಗಾಂಧಿ ಅವರ ಹೇಳಿಕೆ ಮಹಾರಾಷ್ಟ್ರದಲ್ಲಿ ಸಂಚಲನ ಮೂಡಿಸಿದ ಬೆನ್ನಲ್ಲಿಯೇ ಮಾತನಾಡಿದ್ದ ಎನ್‌ಸಿಪಿ ನಾಯಕ ಶರದ್‌ ಪವಾರ್‌, ಯಾವುದೇ ಹೇಳಿಕೆ ನೀಡದೇ ಸುಮ್ಮನೆ ಇರುವಂತೆ ಹೇಳಿದ್ದರು. ರಾಹುಲ್‌ ಗಾಂಧಿ ವೀರ್‌ ಸಾವರ್ಕರ್‌ ಕುರಿತಾಗಿ ಒಂದೊಂದು ಹೇಳಿಕೆ ನೀಡಿದಾಗಲೂ, ಅದೇ ಮಾತನ್ನು ಬಳಸಿಕೊಂಡು ಬಿಜೆಪಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಹಾಗೂ ಎನ್‌ಸಿಪಿಯ ಬೆವರಿಳಿಸಿತ್ತು. ಇದು ಶಿವಸೇನೆ ಹಾಗೂ ಕಾಂಗ್ರೆಸ್‌ ನೇತೃತ್ವದ ಮಹಾ ವಿಕಾಸ್‌ ಅಘಾಡಿ ಸರ್ಕಾರಕ್ಕೆ ಇರುಸುಮುರಿಸು ಉಂಟು ಮಾಡಿತ್ತು. ಈ ಸಮಯದಲ್ಲಿ ಮಾತನಾಡಿದ್ದ ಶರದ್ ಪವಾರ್, ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಸಾವರ್ಕರ್ ಅವರ ತ್ಯಾಗವನ್ನು ಯಾರೂ ನಿರ್ಲಕ್ಷಿಸಲು ಸಾಧ್ಯವಿಲ್ಲ, ಆದರೆ ಅವರ ಬಗ್ಗೆ ಭಿನ್ನಾಭಿಪ್ರಾಯವನ್ನು ಇಂದು ರಾಷ್ಟ್ರೀಯ ವಿಷಯವನ್ನಾಗಿ ಮಾಡಲು ಸಾಧ್ಯವಿಲ್ಲ ಎಂದಿದ್ದರು.

Mumbai Accident: ಬಾಂದ್ರಾ - ವರ್ಲಿ ಸೀ ಲಿಂಕ್‌ನಲ್ಲಿ ಭೀಕರ ಅಪಘಾತಕ್ಕೆ ಐವರ ಬಲಿ; ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ದೃಶ್ಯ

Latest Videos
Follow Us:
Download App:
  • android
  • ios