ನೂತನ ಸಂಸತ್‌ ಭವನ ಉದ್ಘಾಟನೆ ಬೆನ್ನಲ್ಲೇ ವೀರ್‌ ಸಾವರ್ಕರ್‌ಗೆ ‘ನಮೋ’ ನಮನ

ಇಂದು ವೀರ್‌ ಸಾವರ್ಕರ್‌ ಅವರ ಜನ್ಮದಿನ ಹಿನ್ನೆಲೆ ಪ್ರಧಾನಿ ಮೋದಿ ಅವರಿಗೆ ನಮನ ಸಲ್ಲಿಸಿದ್ದಾರೆ. ನೂತನ ಸಂಸತ್‌ ಭವನದಲ್ಲಿ ಸಾವರ್ಕರ್‌ ಅವರ ಫೋಟೋಗೆ ಪುಷ್ಟ ನಮನ ಸಲ್ಲಿಕೆ ಮಾಡಲಾಯ್ತು.

pm modi pays tribute to veer savarkar on his birth anniversary at new parliament building ash

ನವದೆಹಲಿ (ಮೇ 28, 2023): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಿರ್ಮಾಣಗೊಂಡಿರೋ ನೂತನ ಸಂಸತ್‌ ಭವನವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ರು. ಇನ್ನು, ಇಮದು ವೀರ್‌ ಸಾವರ್ಕರ್‌ ಅವರ ಜನ್ಮದಿನ ಹಿನ್ನೆಲೆ ನೂತನ ಸಂಸತ್‌ ಭವನದಲ್ಲಿ ಪ್ರಧಾನಿ ಮೋದಿ ನಮನ ಸಲ್ಲಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಸಹ ಸಾವರ್ಕರ್‌ ಅವರಿಗೆ ನಮನ ಸಲ್ಲಿಸಿದ್ರು.

ಬೆಳಗ್ಗೆಯೇ ಗಣ ಹೋಮ ನಡೆಸಿದ ಪ್ರಧಾನಿ ಮೋದಿ, ಬಳಿಕ ಶೃಂಗೇರಿ ಶಾರದಾ ಪೀಠ ಪುರೋಹಿತರು ನಡೆಸಿದ್ದ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ರು. ಬಳಿಕ ಸಂಸತ್‌ ಭವನ ನಿರ್ಮಿಸಿದ ಶ್ರಮಿಕ ಯೋಗಿಗಳಿಗೆ ಸನ್ಮಾನ ಮಾಡಿದ್ರು. ನಂತರ, ಸರ್ವ ಧರ್ಮ ಗುರುಗಳು ಸರ್ವ ಧರ್ಮ ಪ್ರಾರ್ಥನೆ ನಡೆಸಿದ್ದು, ಈ ವೇಳೆಯೂ ಪ್ರಧಾನಿ ಮೋದಿ ಭಾಗಿಯಾಗಿದ್ರು. ಇನ್ನು, ವಿಶೇಷವಾಗಿ ಪೂಜಾ ಕೈಂಕರ್ಯದ ಬಳಿಕ ಪ್ರಧಾನಿ ಮೋದಿ ಅವರಿಗೆ ಐತಿಹಾಸಿಕ ರಾಜದಂಡ ಅಥವಾ ಚಿನ್ನದ ಸೆಂಗೋಲ್‌ ಅನ್ನು ಹಸ್ತಾಂತರ ಮಾಡಲಾಯ್ತು. ನಂತರ, ಅವರು ಅದನ್ನು ಪ್ರತಿಷ್ಠಾಪನೆ ಮಾಡಿದ್ರು. 

ಇದನ್ನು ಓದಿ: NEW PARLIAMENT BUILDING INAUGURATION: ನೂತನ ಸಂಸತ್‌ ಭವನ ನಿರ್ಮಾಣಕ್ಕೆ ಶ್ರಮಿಸಿದ 'ಶ್ರಮ ಯೋಗಿಗಳಿಗೆ' ಮೋದಿ ಸನ್ಮಾನ

ಈ ಕಾರ್ಯಕ್ರಮಗಳ ಬಳಿಕ, ಇಂದು ವೀರ್‌ ಸಾವರ್ಕರ್‌ ಅವರ ಜನ್ಮದಿನ ಹಿನ್ನೆಲೆ ಪ್ರಧಾನಿ ಮೋದಿ ಅವರಿಗೆ ನಮನ ಸಲ್ಲಿಸಿದ್ದಾರೆ. ನೂತನ ಸಂಸತ್‌ ಭವನದಲ್ಲಿ ಸಾವರ್ಕರ್‌ ಅವರ ಫೋಟೋಗೆ ಪುಷ್ಟ ನಮನ ಸಲ್ಲಿಕೆ ಮಾಡಲಾಯ್ತು. ಈ ವೇಳೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ಸಹ ನಮನ ಸಲ್ಲಿಸಿದ್ರು. 

ಆಧುನೀಕರಣದತ್ತ ದಾಪುಗಾಲು ಹಾಕುತ್ತಿರುವ ನವ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ತುಂಬಿದ ಬೆನ್ನಲ್ಲೇ ಆಧುನಿಕ ಸ್ಪರ್ಶದೊಂದಿಗೆ ಹೊಸ ಸಂಸತ್‌ ಭವನ ಲೋಕಾರ್ಪಣೆಯಾಗಿದೆ. ಬೆಳಗ್ಗೆ 7.25ರ ಸುಮಾರಿಗೆ ಪ್ರಧಾನಿ ಮೋದಿ ನೂತನ ಸಂಸತ್‌ ಭವನಕ್ಕೆ ಆಗಮಿಸಿದ್ದು ,ಪೂಜಾ ಕೈಂಕರ್ಯ ನಡೆಸಿದ್ದಾರೆ.

ಇದನ್ನೂ ಓದಿ: New Parliament Building Inauguration: ಪ್ರಧಾನಿ ಮೋದಿಯಿಂದ ರಾಜದಂಡ ಪ್ರತಿಷ್ಠಾಪನೆ; ಸಂಸತ್‌ ಭವನದಲ್ಲಿ ಸರ್ವಧರ್ಮ ಪ್ರಾರ್ಥನೆ

ಮಧ್ಯಾಹ್ನದವರೆಗೂ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ನೂತನ ಸಂಸತ್‌ ಭವನದ ಉದ್ಘಾಟನಾ ಕಾರ್ಯಕ್ರಮ ಅದ್ಧೂರಿಯಾಗಿ ಹಾಗೂ ಪೂಜಾ ಕೈಂಕರ್ಯಗಳೊಂದಿಗೆ ಸಾಂಸ್ಕೃತಿಕವಾಗಿ ನಡೆಯಲಿದೆ. ಅಲ್ಲದೆ, ಪ್ರಧಾನಿ ಮೋದಿ ಸೆಂಗೋಲ್‌ ಅನ್ನು ಪಡೆದು, ಬಳಿಕ ಅದಕ್ಕೆ ವಿಶೇಷ ಪೂಜೆ ನಡೆಸಿ, ನಂತರ ಸೆಂಗೋಲ್‌ ಅಥವಾ ಚಿನ್ನದ ರಾಜದಂಡವನ್ನು ಸಂಸತ್‌ ಭವನದಲ್ಲಿ ಪ್ರತಿಷ್ಠಾಪನೆ ಮಾಡಲಾಯ್ತು.

ಪ್ರಧಾನಿ ನರೇಂದ್ರ ಮೋದಿ ಅವರು ಈ ಹೊಸ ಕಟ್ಟಡವನ್ನು ಉದ್ಘಾಟನೆ ಮಾಡಿದ್ದು, ಮುಂದಿನ ಮುಂಗಾರು ಅಧಿವೇಶನ ಇದೇ ಕಟ್ಟಡದಲ್ಲಿ ನಡೆಯಲಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರವಾದ ಭಾರತ, ಜಗತ್ತಿನ ಅತಿ ಉತ್ತಮ ವಾಸ್ತುಶಿಲ್ಪ ರಚನೆಯನ್ನು ಹೊಂದಿರುವ ಸಂಸತ್‌ ಭವನವನ್ನು ಹೊಂದಿದ್ದರೂ ಸಹ ಆ ಕಟ್ಟಡ ಬರೋಬ್ಬರಿ 96 ವರ್ಷಗಳ ಹಳೆಯದ್ದಾದ ಕಾರಣ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. 

ಇದನ್ನೂ ಓದಿ: ನೂತನ ಸಂಸತ್‌ ಭವನ ಲೋಕಾರ್ಪಣೆ: ಶೃಂಗೇರಿ ಶಾರದಾ ಪೀಠದ ಪುರೋಹಿತರಿಂದ ಪೂಜಾ ಕೈಂಕರ್ಯ

Latest Videos
Follow Us:
Download App:
  • android
  • ios