ಮಹಾರಾಷ್ಟ್ರ ಜೈಲಿಂದ ಶೇ.50 ಕೈದಿಗಳಿಗೆ ಬಿಡುಗಡೆ ಭಾಗ್ಯ!

ಮುಂಬೈನ ಆರ್ತರ್‌ ರೋಡ್‌ ಜೈಲಿನ ಸುಮಾರು 185 ಕೈದಿಗಳು ಮತ್ತು ಸಿಬ್ಬಂದಿಗೆ ಕೊರೋನಾ | ಮಹಾರಾಷ್ಟ್ರ ಜೈಲಿಂದ ಶೇ.50 ಕೈದಿಗಳಿಗೆ ಬಿಡುಗಡೆ ಭಾಗ್ಯ

Maharashtra panel decides to release 50 percent prisoners After Virus Cases In Mumbai Jail

ಮುಂಬೈ(ಮೇ.13): ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜೈಲುಗಳಲ್ಲಿರುವ ಶೇ.50 ರಷ್ಟುಕೈದಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಲು ಮಹಾರಾಷ್ಟ್ರ ಸರ್ಕಾರದ ಉನ್ನತ ಮಟ್ಟದ ಸಮಿತಿ ತೀರ್ಮಾನಿಸಿದೆ.

ಮೋಕಾ, ಟಾಡಾ, ಅಕ್ರಮ ಹಣ ವರ್ಗಾವಣೆಯಂತಹ ಗಂಭೀರ ಅಪರಾಧಗಳ ಮೇಲೆ ಶಿಕ್ಷೆಗೊಳಗಾದ ಕೈದಿಗಳನ್ನು ಹೊರತುಪಡಿಸಿ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಿರುವ ಕೈದಿಗಳಿಗೆ ಮಾತ್ರ ತಾತ್ಕಾಲಿಕ ಜಾಮೀನು ಅಥವಾ ಪೆರೋಲ್‌ ನೀಡಲಾಗುತ್ತದೆ ಎಂದು ಸಮಿತಿ ಸ್ಪಷ್ಟಪಡಿಸಿದೆ.

ನ್ಯಾಯಾಂಗ ಬಂಧಿತರಿಗೆ ಕೋವಿಡ್‌ ಟೆಸ್ಟ್‌ ಕಡ್ಡಾಯ

ರಾಜ್ಯದಲ್ಲಿರುವ ಒಟ್ಟು 35,000 ಕೈದಿಗಳ ಪೈಕಿ, 17000 ಕೈದಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, 5000 ವಿಚಾರಣಾದೀನ ಕೈದಿಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.

ಕೇಂದ್ರ ಮುಂಬೈನ ಆರ್ತರ್‌ ರೋಡ್‌ ಜೈಲಿನ ಸುಮಾರು 185 ಕೈದಿಗಳು ಮತ್ತು ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಜನನಾಂಗ ಕತ್ತರಿಸಿ ಜೈಲಿನ ಶಿವನಿಗೆ ಅರ್ಪಿಸಿದ ಕೈದಿ!

ಕೊರೋನಾ ವೈರಸ್‌ ನಿಯಂತ್ರಣಕ್ಕೆ ದೇಶಾದ್ಯಂತ ಇರುವ ಜೈಲುಗಳ ಜನನಿಬಿಡತೆಯನ್ನು ಕಡಿಮೆ ಮಾಡುವಂತೆ ಸುಪ್ರೀಂಕೋರ್ಟ್‌ ಸೂಚಿಸಿದ ಬೆನ್ನಲ್ಲೇ ಮಾಚ್‌ರ್‍ನಲ್ಲಿ ಮಹಾರಾಷ್ಟ್ರ ಸರ್ಕಾರ ಈ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು.

Latest Videos
Follow Us:
Download App:
  • android
  • ios