Asianet Suvarna News Asianet Suvarna News

ವಿರೋಧದ ನಡುವೆ ಅಹಮ್ಮದ್‌ನಗರ್ ಹೆಸರು ಬದಲಾವಣೆ, ಇನ್ಮುಂದೆ ಅಹಿಲ್ಯನಗರ!

ಮೊಘಲರು, ಸುಲ್ತಾನರ ದಾಳಿ ಬಳಿಕ ಬದಲಾಗಿದ್ದ ಗ್ರಾಮ, ನಗರಗಳನ್ನು ಹೆಸರುಗಳನ್ನು ಮರುನಾಮಕರಣ ಮಾಡಲಾಗುತ್ತಿದೆ. ಹಲವು ರಾಜ್ಯಗಳಲ್ಲಿ ಈಗಾಗಲೇ ಹೆಸರುಗಳು ಬದಲಾಗಿದೆ. ಇದೀಗ ಈ ಸಾಲಿಗೆ ಅಹಮ್ಮದ್‌ನಗರ ಸೇರಿಕೊಂಡಿದೆ. 
 

Maharashtra govt renamed Ahmednagar to Ahilya Nagar occasion of Ahilyabai Holkar  birth anniversary ckm
Author
First Published May 31, 2023, 8:43 PM IST

ಮುಂಬೈ(ಮೇ.31): ಅಹಮ್ಮದ್‌ನಗರದ ಹೆಸರು ಇನ್ಮುಂದೆ ಅಹಿಲ್ಯ ನಗರ. ಮಹಾರಾಷ್ಟ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಅಹಮ್ಮದ್‌ನಗರ ಜಿಲ್ಲೆಗೆ ವೀರ ವನಿತೆ ಅಹಿಲ್ಯ ಭಾಯಿ ಹೋಲ್ಕರ್ ಹೆಸರು ಇಡಲಾಗಿದೆ. ಅಹಿಲ್ಯ ಭಾಯಿ ಹೋಲ್ಕರ್ ಜಯಂತಿ ಪ್ರಯುಕ್ತ ಮುಖ್ಯಮಂತ್ರಿ ಎಕನಾಥ್ ಶಿಂಧೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಘೋಷಣೆ ಮಾಡಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಬಿಜೆಪಿ ಎಂಎಲ್‌ಸಿ ಗೋಪಿಚಂದ್ ಪಡಲ್ಕರ್ ಹೆಸರು ಬದಲಾವಣೆಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಈ ಕುರಿತು ಮಾತನಾಡಿದ ಸಿಎಂ ಏಕನಾಥ್ ಶಿಂಧೆ, ಜನರು ಅಹಮ್ಮದ್‌ನಗರ ಹೆಸರು ಬದಲಾಯಿಸಲು ಹಲವು ಪತ್ರ ಬರೆದಿದ್ದಾರೆ. ಜನರ ಆಶಯದಂತೆ ನಡೆದುಕೊಂಡಿದ್ದೇವೆ ಎಂದಿದ್ದಾರೆ.

ಉದ್ಧವ್ ಠಾಕ್ರೆ ಸರ್ಕಾರ ಪತನದ ಅಂಚಿನಲ್ಲಿ ಔರಂಗಬಾದ್ ಒಸ್ಮಾನಾಬಾದ್ ನಗರ ಹೆಸರು ಬದಲಾಯಿಸಿದ್ದರು. ಔರಂಗಬಾದ್ ನಗರವನ್ನು ಚತ್ರಪತಿ ಸಂಭಾಜಿನಗರ ಎಂದು ಬದಲಾಯಿಸಿದ್ದರೆ, ಒಸ್ಮಾನಾಬಾದ್ ನಗರವನ್ನು ಧಾರಾಶಿವ್ ಎಂದು ಬದಲಿಸಲಾಗಿತ್ತು. ಇದರ ಬೆನ್ನಲ್ಲೇ ಮಹಾರಾಷ್ಟ್ರದ ಹಲವು ನಗರ , ಪಟ್ಟಣ ಹಾಗೂ ಜಿಲ್ಲೆಗಳ ಹೆಸರು ಬದಲಾವಣೆ ಕೂಗು ಜೋರಾಗಿತ್ತು. 

ಉತ್ತರ ಪ್ರದೇಶ ಬಳಿಕ ಇದೀಗ ಎಂಪಿ ಸರದಿ, ನಸರುಲ್ಲಾಗಂಜ್ ಪಟ್ಟಣದ ಮರುನಾಮಕರಣ!

ಭಾರತದ ಮೇಲೆ ದಾಳಿ ಇಲ್ಲಿ ಸಾಮ್ರಾಜ್ಯ ಸ್ಥಾಪಿಸಿದ ಅಹಮ್ಮದ್ ನಿಜಾಮ್ ಶಾ ಅಹಮ್ಮದ್‌ನಗರ ಹೆಸರಿಟ್ಟಿದ್ದರು. ಅಹಮ್ಮದ್‌ ಶಾ ಸುಲ್ತಾನ್ ಆಡಳಿತಕ್ಕೆ ಒಳಪಟ್ಟ ಈ ನಗರವನ್ನು ಅಹಮ್ಮದ್‌ನಗರ ಎಂದು ಮರುನಾಮಕರಣ ಮಾಡಲಾಗಿತ್ತು. ಇದೀಗ ಈ ಜಿಲ್ಲೆಯ ಹೆಸರನ್ನು ಇದೇ ಜಿಲ್ಲೆಯ ಮಾಲ್ವಾದಲ್ಲಿ ಹುಟಿದ್ದ ಅಹಿಲ್ಯ ಭಾಯಿ ಹೋಲ್ಕರ್  ಮಾಲ್ವಾ ರಾಣಿಯಾಗಿ ಮರೆದಿದ್ದರು. ಸುಲ್ತಾನರು, ಮೊಘಲರ ದಾಳಿಯನ್ನು ಹಿಮ್ಮೆಟ್ಟಿಸಿದ ಕೀರ್ತಿಗೆ ಅಹಿಲ್ಯ ಭಾಯಿಗೆ ಸಲ್ಲಲಿದೆ. 

ಮಹಾರಾಷ್ಟ್ರದ ಔರಂಗಾಬಾದ್‌ ನಗರವನ್ನು ‘ಛತ್ರಪತಿ ಸಂಭಾಜಿನಗರ’ ಹಾಗೂ ಒಸ್ಮನಾಬಾದ್‌ ಅನ್ನು ‘ಧಾರಾಶಿವ’ ಎಂದು ಮರುನಾಮಕರಣ ಮಾಡುವ ಪ್ರಸ್ತಾಪಕ್ಕೆ ಇತ್ತೀಚೆಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿತ್ತು. ಈ ಕುರಿತು ಡಿಸಿಎಂ ದೇವೇಂದ್ರ ಫಡ್ನವೀಸ್‌ ತಮ್ಮ ಟ್ವೀಟ್‌ ಮೂಲಕ ಸಂತಸ ವ್ಯಕ್ತಪಡಿಸಿದ್ದರು. ಮೊಘಲ್‌ ಚಕ್ರವರ್ತಿ ಔರಂಗಾಜೇಬ್‌ನಿಂದ ನಗರವು ಔರಂಗಬಾದ್‌ ಎಂಬ ಹೆಸರು ಪಡೆದುಕೊಂಡಿತ್ತು. ಛತ್ರಪತಿ ಸಂಭಾಜಿ, ಛತ್ರಪತಿ ಶಿವಾಜಿ ಮಹಾರಾಜ್‌ರ ಹಿರಿಯ ಮಗನಾಗಿದ್ದು ಮರಾಠ ಸಾಮ್ರಾಜ್ಯದ ಎರಡನೇ ಆಡಳಿತಗಾರನಾಗಿದ್ದ. 20ನೇ ಶತಮಾನದ ಹೈದರಾಬಾದ್‌ ಪ್ರದೇಶದ ಆಡಳಿತಗಾರನಿಂದ ನಗರಕ್ಕೆ ಒಸ್ಮಾನಾಬಾದ್‌ ಎಂಬ ಹೆಸರು ಇಡಲಾಗಿತ್ತು. ಧಾರಾಶಿವ ಎಂಬುದು ಒಸ್ಮಾನಾಬಾದ್‌ ಬಳಿಯ 8ನೇ ಶತಮಾನದ ಗುಹೆ ಎಂದು ಹೇಳಲಾಗುತ್ತದೆ.

 

 

ಟಿಪ್ಪು ಎಕ್ಸ್‌ಪ್ರೆಸ್ ಇನ್ಮುಂದೆ ಒಡೆಯರ್ ಎಕ್ಸ್‌ಪ್ರೆಸ್ ರೈಲು, ಹೆಸರು ಬದಲಿಸಿ ಕೇಂದ್ರದ ಆದೇಶ!

Follow Us:
Download App:
  • android
  • ios