Asianet Suvarna News Asianet Suvarna News

ಉತ್ತರ ಪ್ರದೇಶ ಬಳಿಕ ಇದೀಗ ಎಂಪಿ ಸರದಿ, ನಸರುಲ್ಲಾಗಂಜ್ ಪಟ್ಟಣದ ಮರುನಾಮಕರಣ!

ಉತ್ತರ ಪ್ರದೇಶದಲ್ಲಿ ಪಟ್ಟಣ, ಸ್ಥಳದ ಹೆಸರು ಮರುನಾಮಕರಣ ಮಾಡಿ ಭಾರಿ ಸುದ್ದಿಯಾಗಿತ್ತು. ಇದೀಗ ಕಳೆದೆರಡು ವರ್ಷದಿಂದ ಮಧ್ಯಪ್ರದೇಶದಲ್ಲಿ ಇತಿಹಾಸದ ಪುಟ ಸೇರಿದ ಹೆಸರುಗಳು ಇದೀಗ ಮರುಕಳಿಸುತ್ತಿದೆ. ಇದೀಗ ಎರಡು ಪಟ್ಟಣದ ಹೆಸರು ಬದಾಲಾಯಿಸಲಾಗಿದೆ. ನಸರುಲ್ಲಾಂಗಂಜ್ ಹಾಗೂ ಹಿಶಂಗಬಾದ್ ಪಟ್ಟಣದ ಹೆಸರು ಬದಲಾಯಿಸಲಾಗಿದೆ.

Madhya Pradesh Govt renamed Nasrullaganj town as bairunda ahead of Assembly Election later this year ckm
Author
First Published Apr 2, 2023, 3:45 PM IST

ಭೋಪಾಲ್(ಏ.02): ಭಾರತದಲ್ಲಿ ಪಟ್ಟಣ, ನಗರ ಸೇರಿದಂತೆ ಪ್ರಮುಖ ಸ್ಥಳಗಳ ಹೆಸರು ಬದಲಾಯಿಸುವ ಪ್ರಕ್ರಿಯೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಭಾರಿ ಪರ ವಿರೋಧಕ್ಕೆ ಕಾರಣವಾಗಿತ್ತು. ಇದೀಗ ಯುಪಿ ಈ ವಿಚಾರದಲ್ಲಿ ತಣ್ಣಾಗಾಗಿದೆ. ಆದರೆ ಮಧ್ಯಪ್ರದೇಶ ಸರ್ಕಾರ ಕಳೆದೆರಡು ವರ್ಷದಿಂದ ಕೆಲ ಪಟ್ಟಣಗಳ ಹೆಸರು ಬದಲಾಯಿಸಿದೆ. ಇಂದು ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚವ್ಹಾಣ್ ಎರಡು ಪಟ್ಟಣದ ಹೆಸರನ್ನು ಮರುನಾಮಕರಣಗೊಳಿಸಿದ್ದಾರೆ. ನಸರುಲ್ಲಾಗಂಜ್ ಪಟ್ಟಣವನ್ನು ಬೈರುಂಡಾ ಎಂದು ಮರುನಾಮಕರಣ ಮಾಡಲಾಗಿದೆ. ಇತ್ತ ಹಿಶಂಗಬಾದ್ ಪಟ್ಟಣವನ್ನು ನರ್ಮದಾಪುರ ಎಂದು ಮರುನಾಮಕರಣ ಮಾಡಲಾಗಿದೆ.

ಕಳೆದ ವರ್ಷದ ಮಧ್ಯ ಪ್ರದೇಶ ಸರ್ಕಾರ ಎರಡು ಪಟ್ಟಣದ ಹೆಸರು ಬದಲಿಸಲು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದಿತ್ತು. ಇಂದು ಮಧ್ಯಪ್ರದೇಶ ಸರ್ಕಾರ ನೋಟಿಫಿಕೇಶನ್ ಹೊರಡಿಸಲಾಗಿದೆ. ಈ ವರ್ಷದ ಅಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯಲಿದೆ.

 

ಮುಂಬೈ ಪಾರ್ಕ್‌ಗೆ ಇಟ್ಟಿದ್ದ ಟಿಪ್ಪು ಹೆಸರು ಕಿತ್ತೆಸೆದ ಸಿಎಂ ಶಿಂಧೆ, ಸಿಹಿ ಹಂಚಿ ನಿವಾಸಿಗಳ ಸಂಭ್ರಮ!

ಫೆಬ್ರವರಿ ತಿಂಗಳಲ್ಲಿ ಮಧ್ಯಪ್ರದೇಶ ಸರ್ಕಾರ ಭಾರಿ ವಿರೋಧದ ನಡುವೆ ಇಸ್ಲಾಂನಗರ ಗ್ರಾಮವನ್ನು ಜಗದೀಶಪುರ ಎಂದು ಬದಲಾಯಿಸಿತ್ತು.ಭೋಪಾಲ್ ನಗರದಿಂದ 12 ಕಿಲೋಮೀಟರ್ ದೂರದಲ್ಲಿದ್ದ ಈ ಗ್ರಾಮ 308 ವರ್ಷಗಳ ಹಿಂದೆ ಇಸ್ಲಾಂ ದಾಳಿಗೆ ಒಳಪಟ್ಟಿತ್ತು. ಹೀಗಾಗಿ ದಾಳಿ ಬಳಿಕ ಜಗದೀಶಪುರ ಎಂಬ ಹೆಸರನ್ನು ಬದಲಾಯಿಸಿ ಇಸ್ಲಾಂ ನಗರ ಎಂದು ಹೆಸರಿಡಲಾಗಿತ್ತು. 

ನಗರ ಪಟ್ಟಣಗಳ ಹೆಸರು ಬದಲಾಯಿಸುವ ಕುರಿತು ಸುಪ್ರೀಂ ಕೋರ್ಟ್ ಈಗಾಗಲೇ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಕುರಿತು ದಾಖಲಾಗಿದ್ದ ಅರ್ಜಿ ವಜಾ ಮಾಡಿ ಸೂಚನೆ ನೀಡಿತ್ತು.

ನಗರಗಳ ಹೆಸರು ಬದಲಿಸಲು ಕೋರಿದ್ದ ಅರ್ಜಿ ವಜಾ
ಆಕ್ರಮಣಕಾರರ ಹೆಸರು ಇರುವ ಊರುಗಳು ಹಾಗೂ ಐತಿಹಾಸಿಕ ಸ್ಥಳಗಳ ಹೆಸರನ್ನು ಬದಲಿಸಿ ಮರುನಾಮಕರಣ ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಈಗಾಗಲೇ ವಜಾ ವಜಾಗೊಳಿಸಿದೆ.

ಅಟಲ್ ಸುರಂಗ ಹೆಸರು ಬದಲಿಸುವ ನಿರ್ಧಾರ ಕೈಬಿಟ್ಟ ಹಿಮಾಚಲ ಕಾಂಗ್ರೆಸ್!

‘ಕ್ರೂರ ವಿದೇಶಿ ಆಕ್ರಮಣಕಾರರ’ ಹೆಸರಿನ ’ಪ್ರಾಚೀನ ಐತಿಹಾಸಿಕ ಸಾಂಸ್ಕೃತಿಕ ಧಾರ್ಮಿಕ ಸ್ಥಳ’ಗಳ’ ಮೂಲ ಹೆಸರುಗಳನ್ನು ಕಂಡುಹಿಡಿಯಲು ‘ಮರುನಾಮಕರಣ ಆಯೋಗ’ ರಚಿಸಲು ಆದೇಶಿಸಬೇಕು ಎಂದು ಬಿಜೆಪಿ ನಾಯಕ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾ ಕೆ.ಎಂ.ಜೋಸೆಫ್‌ ಮತ್ತು ನ್ಯಾ ಬಿ.ವಿ.ನಾಗರತ್ನ ಅವರ ಪೀಠವು ಅರ್ಜಿದಾರರ ಮೇಲೆ ಕಿಡಿಕಾರಿ, ‘ಇಂಥ ವಿಷಯಗಳು ದೇಶ ಕುದಿಯುವಂತೆ ಮಾಡುತ್ತವೆ. ಸಮಸ್ಯೆಗಳನ್ನು ಜೀವಂತಗೊಳಿಸುತ್ತವೆ. ದೇಶದ ಇತಿಹಾಸವು ಅದರ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯನ್ನು ಕಾಡಬಾರದು’ ಎಂದು ಹೇಳಿತು. ‘ಹಿಂದೂ ಧರ್ಮವು ಒಂದು ಧರ್ಮವಲ್ಲ. ಆದರೆ ಒಂದು ಜೀವನ ವಿಧಾನವಾಗಿದೆ. ಹಿಂದೂ ಧರ್ಮದಲ್ಲಿ ಯಾವುದೇ ಮತಾಂಧತೆ ಇಲ್ಲ. ಕೇವಲ ಅಸೌಹಾರ್ದತೆ ಉಂಟುಮಾಡುವ ಹಿಂದಿನ ವಿಷಯಗಳನ್ನು ಕೆದಕಬೇಡಿ. ದೇಶವನ್ನು ಕುದಿಯಲು ಬಿಡಲಾಗದು’ ಎಂದಿತು.

Follow Us:
Download App:
  • android
  • ios