ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ತಮ್ಮ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಸತಾರಾ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ತಮ್ಮ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತಮ್ಮ ಊರು ಸತಾರಾ ಜಿಲ್ಲೆಗೆ ಎರಡು ದಿನಗಳ ಭೇಟಿಗೆ ತೆರಳಿದ ಮಹಾರಾಷ್ಟ್ರ ಸಿಎಂ ಅಲ್ಲಿ ಸ್ಥಳೀಯ ರೈತರೊಂದಿಗೆ ಸಂವಾದ ನಡೆಸಿದ್ದಾರೆ. ಜೊತೆಗೆ ಹೊಲದಲ್ಲಿ ಕೆಲಸ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಅರಿಶಿನ ಬೆಳೆ ಇರುವ ಹೊಲದಲ್ಲಿ ಸಿಎಂ ಕೃಷಿ ಯಂತ್ರವೊಂದನ್ನು ತಳ್ಳುತ್ತಾ ಅರಿಶಿಣ ಗೀಡಗಳ ನಡುವೆ ಸಾಗುವುದನ್ನು ಕಾಣಬಹುದು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮ ಸ್ವಗ್ರಾಮ ಮಹಾಬಲೇಶ್ವರಕ್ಕೆ ತೆರಳಿದ ಸಿಎಂ ಅಲ್ಲಿ ತಮ್ಮ ಹೊಲದಲ್ಲಿನ ಬೆಳೆಯನ್ನು ಪರಿಶೀಲನೆ ಮಾಡಿದರು. ಸಿಎಂ ಶ್ರೀಗಂಧ, ಸ್ಟ್ರಾಬೆರಿ (strawberry) ಹಾಗೂ ಅರಿಶಿಣ (turmeric) ಬೆಳೆಯನ್ನು ಬೆಳೆಯುತ್ತಾರೆ. ದೀಪಾವಳಿ ಸಂದರ್ಭದಲ್ಲಿ ಮಾಹಾರಾಷ್ಟ್ರ ಸರ್ಕಾರದ ಸಿಎಂ ಏಕನಾಥ್ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಂದ ನಾಲ್ಕು ಕೋಟಿಗೂ ಅಧಿಕ ಜನರಿಗೆ ವೈಯಕ್ತಿಕ ದೀಪಾವಳಿ ವಿಡಿಯೋ ಸಂದೇಶವನ್ನು ಕಳುಹಿಸಿ ಸುದ್ದಿಯಾಗಿದ್ದರು. ದೆಹಲಿ ಮೂಲದ ಸಂಸ್ಥೆಯೊಂದು ಅಭಿವೃದ್ಧಿಪಡಿಸಿದ ಕೃತಕ ಇಂಟೆಲಿಜೆನ್ಸ್ (Artificial Intelligence) ಬಳಸಿ ಈ ಡಿಜಿಟಲ್ ಸಂದೇಶವನ್ನು ಕಳುಹಿಸಲಾಗಿದೆ. 

ಮಹಾರಾಷ್ಟ್ರದಲ್ಲಿ ಮತ್ತೆ ಉಂಟಾಗುತ್ತಾ ರಾಜಕೀಯ ಬಿಕ್ಕಟ್ಟು, ಹೊಸ ಬಾಂಬ್‌ ಸಿಡಿಸಿದ ಉದ್ಧವ್‌ ಠಾಕ್ರೆ!

ಈ ವರ್ಷ ಜೂನ್‌ನಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) (Maha Vikas Aghadi) ಮೈತ್ರಿ ವಿರುದ್ಧ ಬಂಡಾಯವೆದ್ದ ಏಕನಾಥ್ ಶಿಂಧೆ ಹಾಗೂ ಅವರ ಬಣದ ಶಾಸಕರು ನಂತರ ಬಿಜೆಪಿ ಜೊತೆ ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದ್ದರು. ಪರಿಣಾಮ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ನೇತೃತ್ವದ ಎಂವಿಎ ಸರ್ಕಾರವು ಪತನಗೊಂಡಿತು. ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಪ್ರಮಾಣ ವಚನ ಸ್ವೀಕರಿಸಿದರೆ, ಬಿಜೆಪಿಯ ದೇವೇಂದ್ರ ಫಡ್ನವೀಸ್ (Devendra Fadnavis) ಉಪಮುಖ್ಯಮಂತ್ರಿಯಾದರು. 

ರಾಮಮಂದಿರ ಸ್ಫೋಟಕ್ಕೆ PFI ಸಂಚು! ಮಹಾರಾಷ್ಟ್ರ ಉಗ್ರನಿಗ್ರಹ ದಳದಿಂದ ಸ್ಫೋಟಕ ಮಾಹಿತಿ

ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಹಳೆಯ ಸಮ್ಮಿಶ್ರ ಸರ್ಕಾರದಲ್ಲಿ ಏಕನಾಥ್ ಶಿಂಧೆ ಅವರು ನಗರ ವ್ಯವಹಾರಗಳ ಸಚಿವರಾಗಿ (Minister of Urban Affairs) ಸೇವೆ ಸಲ್ಲಿಸಿದರು.