Asianet Suvarna News Asianet Suvarna News

Covid Crisis: ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಮದುವೆ ರದ್ದು!

* ನ್ಯೂಜಿಲೆಂಡ್‌ನಲ್ಲಿ ಕೊರೋನಾ ಅಬ್ಬರ

* ನಿಯಮಗಳಿಗೆ ತಲೆಬಾಗಿ ಮದುವೆ ಕ್ಯಾನ್ಸಲ್ ಮಾಡಿದ ನ್ಯೂಜಿಲೆಂಡ್‌ ಪ್ರಧಾನಿ

New Zealand PM Cancels Wedding Reason: New Covid Rules pod
Author
Bangalore, First Published Jan 23, 2022, 11:13 AM IST

ವೆಲ್ಲಿಂಗ್ಟನ್(ಜ.23): ಕೊರೋನಾ ವೈರಸ್ ವಿಶ್ವಾದ್ಯಂತ ವೇಗವಾಗಿ ಹರಡುತ್ತಿದೆ. ನ್ಯೂಜಿಲೆಂಡ್ ಕೂಡ ಇದಕ್ಕೆ ಹೊರತಾಗಿಲ್ಲ. ಏತನ್ಮಧ್ಯೆ, ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ತಮ್ಮ ಮದುವೆಯನ್ನು ರದ್ದುಗೊಳಿಸಿದ್ದಾರೆ ಎಂಬ ವರದು ಸದ್ದು ಮಾಡುತ್ತಿದೆ. 

ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ನ್ಯೂಜಿಲೆಂಡ್‌ನಲ್ಲಿ ಮೂರನೇ ಅಲೆ ಆರಂಭವಾಗಿದೆ, ಈ ಅಲೆ ದಾಳಿ ಇಟ್ಟಾಗಿನಿಂದ ಜನರು ವೇಗವಾಗಿ ಸೋಂಕಿಗೆ ಒಳಗಾಗುತ್ತಿದ್ದಾರೆ, ಈ ಕಾರಣದಿಂದಾಗಿ ಕೊರೋನಾಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಭಾನುವಾರ ಜಾರಿಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಜಸಿಂಡಾ ಅರ್ಡೆರ್ನ್ ಕೂಡ ತಮ್ಮ ಮದುವೆಯನ್ನು ರದ್ದುಗೊಳಿಸಿದ್ದಾರೆ.

Covid Outbreak| ನ್ಯೂಜಿಲೆಂಡ್‌ನಲ್ಲಿ ಏಕಾಏಕಿ ಕೋವಿಡ್‌ ಸ್ಫೋಟ!

ಜಸಿಂಡಾ ಹೇಳಿದ್ದೇನು?

"ಈ ಸಾಂಕ್ರಾಮಿಕದ ಅನುಭವವನ್ನು ದೇಶದ ಸಹ ಪ್ರಜೆಗಳಂತೆ ನಾನೂ ಪಡೆಯುತ್ತಿದ್ದೇನೆ. ಇಂಥ ಪರಿಸ್ಥಿತಿಯಲ್ಲಿ ಯಾರಾದರೂ ಸಿಲುಕಿಕೊಂಡರೆ ಕ್ಷಮೆ ಇರಲಿ" ಎಂದು ಅವರು ಮನವಿ ಮಾಡಿದರು.

ವಿವಾಹ ಸಮಾರಂಭವೊಂದರಲ್ಲಿ ಪಾಲ್ಗೊಂಡ ಕುಟುಂಬವೊಂದರ ಎಂಟು ಮಂದಿಗೆ ಒಮೈಕ್ರಾನ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ವಿಮಾನದ ಸಹಾಯಕರೊಬ್ಬರಿಗೆ ಸೋಂಕು ತಗುಲಿದ ಬೆನ್ನಲ್ಲೇ ರವಿವಾರ ಮಧ್ಯರಾತ್ರಿಯಿಂದ ಜಾರಿಯಾಗುವಂತೆ "ರೆಡ್ ಸೆಟ್ಟಿಂಗ್" ನಿರ್ಬಂಧಗಳನ್ನು ನ್ಯೂಝಿಲೆಂಡ್ ಜಾರಿಗೊಳಿಸಿದೆ. ಜನರ ಸಂಖ್ಯೆಗೆ ಕಡಿವಾಣ ಹಾಕಿರುವ ಜತೆಗೆ ಸಾರ್ವಜನಿಕ ಸಾರಿಗೆ ಮತ್ತು ಅಂಗಡಿಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಪಡಿಸಲಾಗಿದೆ.

ಜೆಸಿಂಡಾ ಅರ್ಡೆರ್ನ್ ಅವರ ದೀರ್ಘಕಾಲದ ಸಂಗಾತಿ ಕ್ಲರ್ಕ್ ಗೇಫೋರ್ಡ್ ತಮ್ಮ ವಿವಾಹದ ದಿನಾಂಕವನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಮುಂದಿನ ಕೆಲ ವಾರಗಳಲ್ಲಿ ಇಬ್ಬರೂ ವಿವಾಹ ಬಂಧನಕ್ಕೆ ಒಳಗಾಗಲು ನಿರ್ಧರಿಸಿದ್ದರು ಎಂದು ಹೇಳಲಾಗಿದೆ. ಮುಂದಿನ ತಿಂಗಳ ಕೊನೆಯ ವರೆಗೂ ಹೊಸ ನಿರ್ಬಂಧಗಳು ಜಾರಿಯಲ್ಲಿರುತ್ತವೆ.

ಯೋಜಿತ ವಿವಾಹ ರದ್ದುಪಡಿಸಬೇಕಾದ ಪರಿಸ್ಥಿತಿ ಬಗ್ಗೆ ಕೇಳಿದಾಗ, "ಜೀವನವೇ ಹಾಗೆ" ಎಂದು ಅವರು ಉತ್ತರಿಸಿದರು. "ಕೋವಿಡ್‌ನಿಂದಾಗಿ ಆಘಾತಕಾರಿ ಪರಿಣಾಮಗಳನ್ನು ಎದುರಿಸಿದ ಸಹ ಪ್ರಜೆಗಳಿಗಿಂತ ನಾನೇನೂ ಭಿನ್ನವಲ್ಲ; ಕೆಲವೊಮ್ಮೆ ತೀವ್ರ ಅಸ್ವಸ್ಥ ಪರಿಸ್ಥಿತಿಯಲ್ಲಿ ಕೂಡಾ ಪ್ರೀತಿಪಾತ್ರರ ಜತೆಗೆ ಇರಲು ಅಸಾಧ್ಯವಾಗಿರುವ ನಿದರ್ಶನಗಳಿಗೆ ಹೋಲಿಸಿದರೆ ನನ್ನ ಬೇಸರ ಅಂಥದ್ದೇನೂ ದೊಡ್ಡದಲ್ಲ" ಎಂದು ಹೇಳಿದರು.

ನ್ಯೂಜಿಲೆಂಡ್ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಜಾಸಿಂಡ ಆರ್ಡೆರ್ನ್ ಪಕ್ಷಕ್ಕೆ ಭರ್ಜರಿ ಗೆಲುವು!

2017 ರಲ್ಲಿ ನ್ಯೂಜಿಲೆಂಡ್‌ನ ಪ್ರಧಾನ ಮಂತ್ರಿಯನ್ನು ಮಾಡಲಾಯಿತು

ಅರ್ಡೆರ್ನ್ 2017 ರಲ್ಲಿ ನ್ಯೂಜಿಲೆಂಡ್‌ನ ಪ್ರಧಾನ ಮಂತ್ರಿಯಾದರು. ಅಲ್ಲಿನ ಅತ್ಯಂತ ಕಿರಿಯ ಪ್ರಧಾನಿ ಆಕೆ. ವರದಿಯ ಪ್ರಕಾರ, ಜಸಿಂಡಾ ಅರ್ಡೆರ್ನ್ ದೀರ್ಘಕಾಲದ ಸ್ನೇಹಿತ ಕ್ಲಾರ್ಕ್ ಗೇಫೋರ್ಡ್ ಅವರೊಂದಿಗೆ ಮದುವೆಗೆ ತಯಾರಿ ನಡೆಸಲಿದ್ದಾರೆ.

Follow Us:
Download App:
  • android
  • ios