ಮುಳ್ಳನ್ನು ಮುಳ್ಳಿನಿಂದಲೇ ತೆಗಿ ಎಂಬ ಒಂದು ಗಾದೆ ಮಾತಿದೆ. ಅದರಂತೆ ಸಾರ್ವಜನಿಕರ ಕಿವಿಗೆ ಪೀಪೀ ಊದಿ ಕ್ವಾಟ್ಲೆ ಕೊಡ್ತಿದ್ದ ಯುವಕರಿಗೆ ಮಧ್ಯಪ್ರದೇಶ ಪೊಲೀಸರು ತಕ್ಕ ಶಿಕ್ಷೆ ನೀಡಿದ್ದಾರೆ. ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭೋಪಾಲ್: ಬೈಕ್‌ನಲ್ಲಿ ಸಾಗುವ ಕೆಲ ಕಿಡಿಗೇಡಿಗಳು ನಡೆದುಕೊಂಡು ಹೋಗುತ್ತಿರುವವರಿಗೆ ಸಣ್ಣಪುಟ್ಟ ತರಲೆ ಮಾಡಿ ಅವರನ್ನು ಕಕ್ಕಾಬಿಕ್ಕಿಯಾಗಿಸಿ ಮಜಾ ತೆಗೆದುಕೊಳ್ಳುವ ಹಲವು ಘಟನೆಗಳನ್ನು ನೋಡಿದ್ದೇವೆ. ಕೆಲವು ವಾಹನ ಸವಾರರು ಉದ್ದೇಶಪೂರ್ವಕವಾಗಿ ಕೆಸರು ನೀರಿನ ಮೇಲೆ ವೇಗವಾಗಿ ಸಾಗುವ ಮೂಲಕ ರಸ್ತೆ ಬದಿ ನಡೆದುಕೊಂಡು ಹೋಗುವವರ ಮೇಲೆ ಕೆಸರು ನೀರು ರಾಚುವಂತೆ ಮಾಡಿ ಮಜಾ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರು ಬೈಕ್‌ನ ಸೈಲೆನ್ಸರ್‌ಗೆ ಕರ್ಕಶವಾದ ಸದ್ದು ಬರುವಂತಹ ಧ್ವನಿವರ್ಧಕವನ್ನು ಕಟ್ಟಿ ರಸ್ತೆಗಳಲ್ಲಿ ಸಾಗುವವರನ್ನು ಬೆಚ್ಚಿ ಬೀಳಿಸುತ್ತಾರೆ. ಇನ್ನು ಕೆಲವರು ಜಾತ್ರೆಯಲ್ಲಿ ಸಿಗುವ ಪೀಪೀಗಳನ್ನು ತೆಗೆದುಕೊಂಡು ಬಂದು ರಸ್ತೆಯಲ್ಲಿ ತಮ್ಮಷ್ಟಕ್ಕೆ ಸಾಗುವ ಜನರ ಕಿವಿಯ ಸಮೀಪ ಜೋರಾಗಿ ಊದುವ ಮೂಲಕ ಬೆಚ್ಚಿ ಬೀಳಿಸುತ್ತಾರೆ.
ಇಂತಹ ಕಿಡಿಗೇಡಿಗಳ ಸೆರೆ ಹಿಡಿದ ಮಧ್ಯಪ್ರದೇಶ ಪೊಲೀಸರು ಸಖತ್ ಆಗಿ ಪನಿಶ್‌ಮೆಂಟ್ ಕೊಟ್ಟಿದ್ದಾರೆ. ಅದರ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಳ್ಳನ್ನು ಮುಳ್ಳಿನಿಂದಲೇ ತೆಗಿ (tit-for-tat) ಎಂಬ ಒಂದು ಗಾದೆ ಮಾತಿದೆ. ಅದರಂತೆ ಪೊಲೀಸರು ಇಲ್ಲಿ ತಾವು ಮಾಡುವ ಪೀಪಿಯ ಕಿತಾಪತಿಯಿಂದ ಸಾರ್ವಜನಿಕರಿಗೆ, ದಾರಿಯಲ್ಲಿ ನಡೆದು ಹೋಗುವವರಿಗೆ ಎಂಥಹಾ ಕಿರಿಕಿರಿ ಆಗುತ್ತದೆ ಎಂಬುದನ್ನು ಈ ಕಿಡಿಗೇಡಿಗಳ ಕಿವಿಗೆ ಪೀಪಿ ಊದುವ ಮೂಲಕ ತೋರಿಸಿ ಕೊಟ್ಟಿದ್ದಾರೆ.
ಮಧ್ಯಪ್ರದೇಶದ (Madhya Pradesh) ಜಬಲ್‌ಪುರದಲ್ಲಿ (Jabalpur) ಈ ಘಟನೆ ನಡೆದಿದೆ. ಕ್ರೀಡಾಂಗಣದಲ್ಲಿ ಪಂದ್ಯಗಳ ವೇಳೆ ಮೋಜು ಮಾಡಲು ಬಳಸುವ ಹಾರ್ನ್‌ಗಳನ್ನು (trumpets) ತಂದು ದಾರಿಯಲ್ಲಿ ಸಾಗುವವರ ಕಿವಿಗೆ ಊದುವ ಮೂಲಕ ದಾರಿಹೋಕರಿಗೆ ತೊಂದರೆ ನೀಡಿದ ಕೆಲ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ. ಈ ಕಿಡಿಗೇಡಿಗಳು (miscreants) ದಾರಿಹೋಕರಿಗೆ (passersby) ಹೇಗೆ ಕಿರುಕುಳ ನೀಡಿದರೋ ಅದೇ ರೀತಿ ಪೊಲೀಸರು ಇವರಿಗೆ ಪೀಪೀ ಊದಿ ಶಿಕ್ಷೆ ನೀಡಿದ್ದಾರೆ. ಈ ವೇಳೆ ಎಲ್ಲರೂ ಸದ್ದು ಕೇಳಲಾಗದೇ ಕಿವಿಯನ್ನು ಮುಚ್ಚಿಕೊಂಡು ಕುಣಿದಾಡಿದ್ದಾರೆ. ಈ ವಿಡಿಯೋವನ್ನು ಸುದ್ದಿಸಂಸ್ಥೆ ಎಎನ್ಐ ಪೋಸ್ಟ್ ಮಾಡಿದ್ದು, ಇದರಲ್ಲಿ ಇಬ್ಬರು ಆರೋಪಿಗಳಲ್ಲಿ ಒಬ್ಬ ಮತ್ತೊಬ್ಬನ ಕಿವಿಗೆ ಪೀಪಿ ಊದುತ್ತಿದ್ದರೆ, ಪೊಲೀಸರು ಅವರ ಇನ್ನೊಂದು ಕಿವಿಯನ್ನು ಮುಚ್ಚಿ ಹಿಡಿದಿದ್ದಾರೆ. ಅಲ್ಲದೇ ನಂತರ ಸರಿಯಾಗಿ ಬಸ್ಕಿ ಹೊಡೆಸಿದ್ದಾರೆ.
ಲಾಕ್‌ಡೌನ್ ಉಲ್ಲಂಘಿಸಿದವನಿಗೆ ಸಪ್ನಾ ಹಾಡಿಗೆ ಕುಣಿಯುವ ಶಿಕ್ಷೆ, ವಿಡಿಯೋ ವೈರಲ್!
ಈ ಎಳೆಯ ಯುವಕರು ದಾರಿಹೋಕರ ಕಿವಿಗೆ ತುತ್ತೂರಿ ಊದಿದ್ದಾರೆ ಎನ್ನಲಾಗಿದೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆದೇಶ ಬಂದ ಹಿನ್ನೆಲೆಯಲ್ಲಿ ನಾವು ಅವರ ತುತ್ತೂರಿಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದ್ದು, 18 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ವಿಭಿನ್ನವಾದ ಶಿಕ್ಷೆ ಚೆನ್ನಾಗಿದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರಿಗೆ ಅವರದೇ ಭಾಷೆಯಲ್ಲಿ ಕಲಿಸಿದ ಪಾಠ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಪೊಲೀಸರು ಹೀಗೆಯೇ ಕೆಲಸ ಮಾಡಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಪೊಲೀಸರು ಸಮಯೋಚಿತವಾದ ಕ್ರಮ ಕೈಗೊಂಡಿದ್ದಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಲಾಕ್‌ಡೌನ್ ಮೀರಿ ರಸ್ತೆಗೆ ಬಂದವರಿಗೆ ಪೊಲೀಸರಿಂದ ಮತ್ತೊಂದು ವಿಭಿನ್ನ ಶಿಕ್ಷೆ