ಲಕ್ನೋ(ಮೇ.04)ಉತ್ತರ ಪ್ರದೇಶದ ಇಟಾವಾ ಪೊಲೀಸ್ ಠಾಣೆಯ ವಿಚಿತ್ರ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ವ್ಯಕ್ತಿಯಯೊಬ್ಬ ಬಿಗ್‌ ಬಾಸ್‌ ಖ್ಯಾತಿಯ ಸಪ್ನಾ ಚೌಧರಿಯ ಪ್ರಸಿದ್ಧ ಹಾಡು ತೇರಿ ಆಂಖ್ಯಾ ಕಾ ಜೋ ಕಾಜಲ್ ಹಾಡಿಗೆ ಡಾನ್ಸ್‌ ಮಾಡುತ್ತಿರುವ ದೃಶ್ಯಗಳಿವೆ. 

ಟ್ವಿಟರ್ ಬಳಕೆದಾರ ಉಮರ್ ರಾಶಿದ್ ಈ ವಿಡಿಯೋವನ್ನುಟ್ವೀಟ್ ಮಾಡಿದ್ದಾರೆ. ಇದರಲ್ಲಿ ವ್ಯಕ್ತಿಯ ಸುತ್ತಲೂ ಪೊಲೀಸ್ ಸಿಬ್ಬಂದಿ ನಿಂತು ಡಾನ್ಸ್‌ ವೀಕ್ಷಿಸುತ್ತಿರುವುದನ್ನೂ ನೊಡಬಹುದಾಗಿದೆ. ಇನ್ನು ಲಾಕ್‌ಡೌನ್ ಉಲ್ಲಂಘಿಸಿದ ಕಾರಣ ಈ ವ್ಯಕ್ತಿಗೆ ಡಾನ್ಸ್ ಮಾಡುವ ಶಿಕ್ಷೆ ನಿಡಲಾಗಿತ್ತು ಎಂಬ ಅಂಶವೂ ಬೆಳಕಿಗೆ ಬಂದಿದೆ.

ಈ ವಿಡಿಯೋ ಶೇರ್ ಮಾಡಿರುವ ಉಮರ್ ರಾಶಿದ್ ಇದು ಉತ್ತರ ಪ್ರದೇಶದ ಒಂದು ಪೊಲೀಸ್ ಠಾಣೆ. ಇನ್ನು ಇಂತಹ ಶಿಕ್ಷೆ ನೀಡಿದ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂಬುವುದು ಇಟಾವಾ ಪೊಲೀಸ್ ಅಧಿಕಾರಿಗಳ ಮಾತಾಗಿದೆ ಎಂದೂ ಬರೆದಿದ್ದಾರೆ.

ವಿಡಿಯೋ ವೈರಲ್ ಆದ ಬಳಿ ಪೊಲೀಸ್ ಠಾಣೆಯ ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದೆ. ಇನ್ನು ವಿಡಿಯೋ ನೊಡಿದ ಅನೇಕರು ಪೊಲೀಸರಿಗೆ ಪ್ರಶ್ನಿಸಿದ್ದರೆ, ಇನ್ನು ಅನೇಕ ಮಂದಿ ವ್ಯಕ್ತಿ ಮಾಡಿದ ಡಾನ್ಸ್‌ ಚೆನ್ನಾಗಿದೆ ಎಂದು ಶ್ಲಾಘಿಸಿದ್ದಾರೆ.