ಮದುವೆಯಾಗಲು ನಿರಾಕರಿಸಿದ 19 ವರ್ಷದ ಯುವತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಯುವಕನ ಮನೆಯನ್ನು ಪೊಲೀಸರೇ ಬುಲ್ಡೋಜರ್ ತೆಗೆದುಕೊಂಡು ಹೋಗಿ ಸಂಪೂರ್ಣವಾಗಿ ನೆಲಸಮಗೊಳಿಸಿದ್ದಾರೆ.

ಭೋಪಾಲ್: ಮದುವೆಯಾಗಲು ನಿರಾಕರಿಸಿದ 19 ವರ್ಷದ ಯುವತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಯುವಕನ ಮನೆಯನ್ನು ಪೊಲೀಸರೇ ಬುಲ್ಡೋಜರ್ ತೆಗೆದುಕೊಂಡು ಹೋಗಿ ಸಂಪೂರ್ಣವಾಗಿ ನೆಲಸಮಗೊಳಿಸಿದ್ದಾರೆ. 24ರ ಹರೆಯದ ಪಂಕಜ್ ತ್ರಿಪಾಠಿ ಎಂಬಾತ ತನ್ನನ್ನು ಮದುವೆಯಾಗಲು ನಿರಾಕರಿಸಿದ ಯುವತಿಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದ ಆಕೆಗೆ ಕಪಾಳಮೋಕ್ಷ ಮಾಡಿದ್ದಲ್ಲದೇ ಆಕೆಯ ಕೂದಲನ್ನು ಹಿಡಿದು ಆಕೆಯನ್ನು ನೆಲಕ್ಕೆ ಎಳೆದು ಹಾಕಿ ಆಕೆಯ ಮೇಲೆ ರಾಕ್ಷಸನಂತೆ ಹಲ್ಲೆ ಮಾಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ ಪೊಲೀಸರು ಈಗ ಆತನ ಮನೆಯನ್ನು ಬುಲ್ಡೋಜರ್ ತೆಗೆದುಕೊಂಡು ಹೋಗಿ ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರೇ ಮಾಹಿತಿ ನೀಡಿದ್ದಾರೆ.

ಮಧ್ಯಪ್ರದೇಶದ (Madhya Pradesh) ರೇವಾ (Rewa) ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿತ್ತು. 24 ವರ್ಷದ ಯುವಕನೊಬ್ಬ (Boy Friend) ತನ್ನನ್ನು ಮದುವೆಯಾಗಲು (Marriage) ನಿರಾಕರಿಸಿದ್ದಕ್ಕೆ 19 ವರ್ಷದ ಯುವತಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದ. ಯುವಕನ ಗೆಳೆಯ ಘಟನೆಯ ಈ ವಿಡಿಯೋವನ್ನು ಚಿತ್ರೀಕರಿಸಿದ್ದು, ಇದು ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈರಲ್‌ ವಿಡಿಯೋದಲ್ಲಿ (Viral Video) ಯುವಕ ಹಾಗೂ ಯುವತಿ ಇಬ್ಬರೂ ಕೈ ಹಿಡಿದುಕೊಂಡು ನಡೆದಾಡುತ್ತಿರುವುದನ್ನು ತೋರಿಸಿದೆ. ನಂತರ ಇದ್ದಕ್ಕಿದ್ದಂತೆ ಯುವಕ ಆಕೆಗೆ ಕಪಾಳಮೋಕ್ಷ ಮಾಡಿ, ಆಕೆಯ ಕೂದಲನ್ನು ಹಿಡಿದು, ನೆಲದತ್ತ ತಳ್ಳಿದ್ದಾನೆ. ಅಷ್ಟೇ ಅಲ್ಲದೇ ರಾಕ್ಷಸನಂತೆ ಮುಖ ಮೂತಿ ನೋಡದೇ ಆಕೆಗೆ ಒದೆಯಲು ಶುರು ಮಾಡಿದ್ದಾನೆ. 

ಮದುವೆಗೆ ನಿರಾಕರಿಸಿದ ಯುವತಿ: ಅಮಾನುಷವಾಗಿ ಹಲ್ಲೆ ಮಾಡಿದ ಬಾಯ್‌ಫ್ರೆಂಡ್‌; ಕ್ಯಾಮೆರಾದಲ್ಲಿ ಸೆರೆ


ನಿನ್ನೆ ಅಂದರೆ ಶನಿವಾರ ಮಧ್ಯಾಹ್ನದ ವೇಳೆ ಈ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ನೋಡಿ ದೂರು ದಾಖಲಿಸಿಕೊಂಡ ಪೊಲೀಸರು ನಂತರ ಅದೇ ದಿನ ರಾತ್ರಿ ಉತ್ತರ ಪ್ರದೇಶದ (Uttar Pradesh) ಮಿರ್ಜಾಪುರದಲ್ಲಿ (Mirzapur) ಆರೋಪಿ ಪಂಕಜ್ ತ್ರಿಪಾಠಿಯನ್ನು ಬಂಧಿಸಿದ್ದಾರೆ. ಇಂದು ಆತನ ಮನೆಯನ್ನು ಭಾರಿ ಪೊಲೀಸ್ ಭದ್ರತೆಯೊಂದಿಗೆ ಬುಲ್ಡೋಜರ್‌ನೊಂದಿಗೆ (bulldozer) ಸ್ಥಳಕ್ಕೆ ತೆರಳಿ ಆತನ ಮನೆಯನ್ನು ಸಂಪೂರ್ಣ ನೆಲಸಮ ಮಾಡಲಾಗಿದೆ. ಆರೋಪಿ ತ್ರಿಪಾಠಿ ವಾಹನ ಚಲಾಯಿಸಿಕೊಂಡು ಜೀವನ ಸಾಗಿಸುತ್ತಿದ್ದ. ಇದೀಗ ಆತನ ವಾಹನ ಪರವಾನಗಿಯನ್ನು ಕೂಡ ರದ್ದುಗೊಳಿಸಲಾಗಿದೆ. ಇದಕ್ಕೂ ಮೊದಲು ತ್ರಿಪಾಠಿ ವಿರುದ್ಧ ಸರಿಯಾದ ಸಮಯಕ್ಕೆ ಕ್ರಮ ಕೈಗೊಳ್ಳದ ಸ್ಥಳೀಯ ಕೆಲ ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

Tunisha Sharma 20 ವರ್ಷಕ್ಕೆ ಬದುಕು ಅಂತ್ಯಗೊಳಿಸಿದ ನಟಿ, ಕಾರಣ ನಿಗೂಢ!

ಇತ್ತ ಈತನಿಂದ ಭಯಾನಕವಾಗಿ ಹಲ್ಲೆಗೊಳಗಾದ ಯುವತಿ ಪ್ರಜ್ಞಾಹೀನಳಾಗಿ ಬಿದ್ದಿದ್ದಳು, ಘಟನೆಯ ಬಳಿಕ ಆಕೆಯನ್ನು ಬಿಟ್ಟು ಆರೋಪಿ ಅಲ್ಲಿಂದ ತೆರಳಿದ್ದ. ರಸ್ತೆ ಬದಿಯಲ್ಲಿ ಗಂಟೆಗಟ್ಟಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಆಕೆಯನ್ನು ಯಾರೋ ಸ್ಥಳೀಯರು ಗಮನಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆತನನ್ನು ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಯುವತಿ ಮೇಲೆ ಆತ ಅಮಾನುಷವಾಗಿ ಹಲ್ಲೆ ಮಾಡಿದ್ದಾನೆ ಎಂದು ಎಂದು ಪೊಲೀಸರು ಹೇಳಿದ್ದಾರೆ.

Scroll to load tweet…