ಮದುವೆಗೆ ನಿರಾಕರಿಸಿದ ಯುವತಿ: ಅಮಾನುಷವಾಗಿ ಹಲ್ಲೆ ಮಾಡಿದ ಬಾಯ್‌ಫ್ರೆಂಡ್; ಕ್ಯಾಮೆರಾದಲ್ಲಿ ಸೆರೆ
ಈ ವೈರಲ್ ವಿಡಿಯೋದಲ್ಲಿ ಯುವಕ ಹಾಗೂ ಯುವತಿ ಇಬ್ಬರೂ ಕೈ ಹಿಡಿದುಕೊಂಡು ನಡೆದಾಡುತ್ತಿರುವುದನ್ನು ತೋರಿಸಿದೆ. ಆಗ ಇದ್ದಕ್ಕಿದ್ದಂತೆ ಯುವಕ ತನ್ನ ಗರ್ಲ್‌ಫ್ರೆಂಡ್ ಅನ್ನು ಕಪಾಳಮೋಕ್ಷ ಮಾಡಿ, ಆಕೆಯ ಕೂದಲನ್ನು ಹಿಡಿದು, ನೆಲಕ್ಕೆ ಬಲವಾಗಿ ಹೊಡೆದಿದ್ದಾನೆ.
ಮಧ್ಯಪ್ರದೇಶದ (Madhya Pradesh) ರೇವಾ (Rewa) ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, 24 ವರ್ಷದ ಯುವಕನೊಬ್ಬ (Boy Friend) ತನ್ನನ್ನು ಮದುವೆಯಾಗಲು (Marriage) ನಿರಾಕರಿಸಿದ ಆರೋಪದ ಮೇಲೆ 19 ವರ್ಷದ ಯುವತಿಯ (Girl Friend) ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಯುವಕನ ಗೆಳೆಯ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದ್ದು, ಇದು ವೈರಲ್ ಆಗಿದೆ. ಈ ವೈರಲ್ ವಿಡಿಯೋದಲ್ಲಿ (Viral Video) ಯುವಕ ಹಾಗೂ ಯುವತಿ ಇಬ್ಬರೂ ಕೈ ಹಿಡಿದುಕೊಂಡು ನಡೆದಾಡುತ್ತಿರುವುದನ್ನು ತೋರಿಸಿದೆ. ಆಗ ಇದ್ದಕ್ಕಿದ್ದಂತೆ ಯುವಕ ತನ್ನ ಗರ್ಲ್‌ಫ್ರೆಂಡ್ ಅನ್ನು ಕಪಾಳಮೋಕ್ಷ ಮಾಡಿ, ಆಕೆಯ ಕೂದಲನ್ನು ಹಿಡಿದು, ನೆಲಕ್ಕೆ ಬಲವಾಗಿ ಹೊಡೆದಿದ್ದಾನೆ (Beaten).
ನಂತರ ಅವನು ನಿರ್ದಯವಾಗಿ ಯುವತಿಯ ಮುಖದ ಮೇಲೆ ಮತ್ತು ಅವಳ ದೇಹದ ಹಲವೆಡೆ ಪೂರ್ಣ ಬಲದಿಂದ ಹೊಡೆದಿದ್ದಾನೆ. ಯುವಕನ ಈ ದಾಳಿಯಿಂದ ಯುವತಿಯು ಪ್ರಜ್ಞಾಹೀನಳಾಗಿದ್ದಾಳೆ ಎಂದು ಕಂಡುಬಂದಿದೆ. ಈ ಹಿನ್ನೆಲೆ ಆಕೆಯನ್ನು ಸ್ಥಿರವಾ ಗಿಹಿಡಿಯಲು ಯುವಕ ಪ್ರಯತ್ನಿಸಿದ್ದಾನೆ. ಇನ್ನು, ಈ ವಿಡಿಯೋವನ್ನು ಯುವಕನ ಗೆಳೆಯ ರೆಕಾರ್ಡ್ ಮಾಡುತ್ತಿದ್ದ ಎನ್ನಲಾಗಿದ್ದು, ಈ ಫೂಟೇಜ್ ಡಿಲೀಟ್ ಮಾಡುವಂತೆಯೂ ಹೇಳಿದ್ದಾನೆ. ನಂತರ, ಯುವತಿ ರಸ್ತೆ ಬದಿಯಲ್ಲಿ ಗಂಟೆಗಟ್ಟಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ ಎಂದೂ ತಿಳಿದುಬಂದಿದೆ.
ಇದನ್ನು ಓದಿ: Viral Video: ಕವಿತೆಯಂತೆ ವಿಮಾನದ ಘೋಷಣೆ ಮಾಡಿ ಪ್ರಯಾಣಿಕರ ಮನಗೆದ್ದ ಪೈಲೆಟ್ !
ಮಧ್ಯ ಪ್ರದೇಶದ ರೇವಾದ ಮೌಗಂಜ್ ಪ್ರದೇಶದಲ್ಲಿ ಬುಧವಾರ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಎಚ್ಚೆತ್ತುಕೊಂಡ ಪೊಲೀಸರು ಇಬ್ಬರ ವಿರುದ್ಧ ಐಟಿ ಕಾಯ್ದೆ ಸೇರಿದಂತೆ ಕಾನೂನಿನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಯುವತಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ಆರೋಪಿ ಪಂಕಜ್ ತ್ರಿಪಾಠಿ ಮತ್ತು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಘಟನೆ ನಡೆದ ಬಳಿಕ ಪಂಕಜ್ ತ್ರಿಪಾಠಿ, ಹಲವು ದಿನಗಳಿಂದ ನಾಪತ್ತೆಯಾಗಿದ್ದು, ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಸಿಕ್ಕಿಬಿದ್ದಿದ್ದಾನೆ. ಇದೀಗ ಪೊಲೀಸರು ಇಬ್ಬರನ್ನೂ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ..?
ಯುವತಿಯ ಕುಟುಂಬ ಒಪ್ಪದ ಕಾರಣ ಮದುವೆಯಾಗಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಪಂಕಜ್ ಈ ರೀತಿ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ನಂತರ, ರಸ್ತೆ ಬದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಸ್ಥಳೀಯ ಪೊಲೀಸರು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪಂದ್ಯದ ನಡುವೆ ಪತ್ನಿಯ ಮೇಕಪ್‌ಗೆ ಸಹಾಯ ಮಾಡಿದ ಪತಿ, ನೆಟ್ಟಿಗರಿಂದ ವರ್ಷದ ಗಂಡ ಪ್ರಶಸ್ತಿ!
ಈ ಘಟನೆಗೆ ಸಂಬಂಧಪಟ್ಟಂತೆ ಮಾಹಿತಿ ನೀಡಿದ ರೇವಾದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಸೋನ್ಕರ್ ಅವರು ಆರೋಪಿ ಯುವಕ ಮೌಗಂಜ್ ಪಟ್ಟಣದ ಧೇರಾ ಗ್ರಾಮದ ನಿವಾಸಿಯಾಗಿದ್ದು, ಹುಡುಗಿ ಬೇರೆ ಗ್ರಾಮದವಳಾಗಿದ್ದಾಳೆ ಎಂದಿದ್ದಾರೆ. "ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಜಗಳವಾಗಿದ್ದು, ವ್ಯಕ್ತಿ ಮಹಿಳೆಗೆ ಥಳಿಸಿದ್ದಾರೆ. ಸ್ಥಳದಲ್ಲಿದ್ದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ನಾವು ಸ್ಥಳಕ್ಕೆ ತಲುಪಿ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳಿಸಿದ್ದೇವೆ ಎಂದು ಸೋಂಕರ್ ಹೇಳಿದ್ದಾರೆ. ನಂತರ, ಪೊಲೀಸ್ ಠಾಣೆಗೆ ತಲುಪಿದ ಮಹಿಳೆಯ ತಾಯಿ ಆರೋಪಿ ವಿರುದ್ಧ ಯಾವುದೇ ಕ್ರಮಕ್ಕೆ ಸೂಚಿಸಿರಲಿಲ್ಲ ಹಾಗೂ ಕೇಸ್ ದಾಖಲಿಸಿರಲಿಲ್ಲ ಎಂದೂ ಅವರು ಹೇಳಿದರು.
ಆದರೆ, ವೈರಲ್ ಆಗಿರುವ ವಿಡಿಯೋ ಆಧರಿಸಿ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಗೂ, ವಿಡಿಯೋ ಚಿತ್ರೀಕರಿಸಿ ಪ್ರಸಾರ ಮಾಡಿದ ವ್ಯಕ್ತಿಯ ವಿರುದ್ಧ ಸಂತ್ರಸ್ತೆ ದೂರು ದಾಖಲಿಸಿದ್ದು, ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಪಾರ್ಕ್‌ನಲ್ಲಿ ನಾಯಿ ಜೊತೆ ಸೆಕ್ಸ್, ವಿಡಿಯೋ ವೈರಲ್ ಬೆನ್ನಲ್ಲೇ 40 ವರ್ಷದ ವ್ಯಕ್ತಿ ಅರೆಸ್ಟ್!