ಬದುಕಿರುವ ಕಾರ್ಮಿಕರು ಸತ್ತಿದ್ದಾರೆ ಎಂದು ಘೋಷಿಸುವ ಮೂಲಕ ಅವರ ಅಂತ್ಯಕ್ರಿಯೆಯ ಉದ್ದೇಶಕ್ಕಾಗಿ ಅಧಿಕಾರಿಗಳು ಸರ್ಕಾರದ ಹಣಕಾಸಿನ ನೆರವನ್ನು ದುರುಪಯೋಗಪಡಿಸಿಕೊಂಡ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ. 

ಭೋಪಾಲ್‌ (ಜೂ.22): ಹೆಣದ ಮೇಲೆ ರಾಜಕಾರಣ ಮಾಡಿರೋದನ್ನ ಕಂಡಿದ್ದೇವೆ. ಆದರೆ, ಬದುಕಿರುವ ಕಾರ್ಮಿಕರನ್ನು ಸತ್ತಿದ್ದಾರೆ ಎನ್ನುವ ಫೇಕ್‌ ಸರ್ಟಿಫಿಕೇಟ್‌ಅನ್ನು ರಚಿಸಿ, ಅವರ ಅಂತ್ಯಕ್ರಿಯೆಗೆ ಉದ್ದೇಶಕ್ಕಾಗಿ ಅಧಿಕಾರಿಗಳು ಸರ್ಕಾರದ ಹಣಕಾಸಿನ ನೆರವನ್ನು ದುರುಪಯೋಗಪಡಿಸಿಕೊಂಡ ಘಟನೆ ನಡೆದಿದೆ. ಮಧ್ಯಪ್ರದೇಶದ ಸರ್ಕಾರ, ಅಸಂಘಟಿತ ವಲಯದ ಕಾರ್ಮಿಕರು ನಿಧನರಾದಲ್ಲಿ ಅವರ ಅಂತ್ಯಕ್ರಿಯೆಯ ಉದ್ದೇಶಕ್ಕಾಗಿ ಹಣಕಾಸಿನ ನೆರವನ್ನು ನೀಡುತ್ತದೆ. ಪಂಚಾಯ್ತಿ ಅಧಿಕಾರಿಗಳು ಬರೋಬ್ಬರಿ 26 ಕಾರ್ಮಿಕರು ಶಿವಪುರಿಯಲ್ಲಿ ಸತ್ತಿದ್ದಾರೆ ಎನ್ನುವ ಫೇಕ್‌ ದಾಖಲೆ ಸೃಷ್ಟಿಸಿ ಅವರ ಅಂತ್ಯಕ್ರಿಯೆಯ ಖರ್ಚಿಗಾಗಿ ಅಂದಾಜು 1 ಕೋಟಿ ರೂಪಾಯಿ ಹಣವನ್ನು ಸರ್ಕಾರದಿಂದ ಪಡೆದು ಮೋಜುಮಸ್ತಿ ಮಾಡಿದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿವಪುರಿ ಜನಪದ್‌ ಪಂಚಾಯತ್‌ನ ಐವರು ಅಧಿಕಾರಿಗಳ ವಿರುದ್ಧ ಕೇಸ್‌ ದಾಖಲು ಮಾಡಲಾಗಿದೆ. ಮಧ್ಯಪ್ರದೇಶದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಿಂದ ನೋಂದಾಯಿತ ಕಾರ್ಮಿಕರಿಗೆ ನೀಡುವ ಅಂತ್ಯಕ್ರಿಯೆ ಹಣಕಾಸಿನ ನೆರವಿನಲ್ಲಿ ಅಕ್ರಮ ನಡೆದಿರುವುದು ಪತ್ತೆಯಾಗಿದೆ. ಜೀವಂತ ಕೂಲಿ ಕಾರ್ಮಿಕರು ಸತ್ತಿದ್ದಾರೆ ಎಂದು ದಾಖಲೆ ಸೃಷ್ಟಿಸಿ ಈ ಐವರು ಸರ್ಕಾರದ ನಿಧಿಯಿಂದ 93.56 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ.

ಜಿಲ್ಲಾ ಪಂಚಾಯಿತಿ ಸಿಇಒ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯ ತನಿಖಾ ವರದಿಯಲ್ಲಿ ಅಧಿಕಾರಿಗಳು 26 ಫಲಾನುಭವಿಗಳ ಹೆಸರುಗಳ ಪಟ್ಟಿಯನ್ನು ಇದರಲ್ಲಿ ಬಳಸಿಕೊಂಡಿರುವುದು ಬಯಲಾಗಿದೆ. ಜಿಲ್ಲೆಯ ಇಬ್ಬರು ಸಿಇಒಗಳ ಡಿಜಿಟಲ್ ಸಹಿ ಬಳಸಿ ಮೊತ್ತವನ್ನು ಸರ್ಕಾರದಿಂದ ಪಡೆಯಲಾಗಿದೆ. ಸಂಬಂಧಪಟ್ಟ ಶಾಖೆಯ ಇಬ್ಬರು ಮಹಿಳಾ ಗುಮಾಸ್ತರು ಸಹ ಈ ವಿಷಯದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.

PSI Scam: ಅಕ್ರಮವೆಸಗಿದ 52 ಆರೋಪಿಗಳಿಗೆ ಪೊಲೀಸ್‌ ನೇಮಕಾತಿಯಿಂದ ಶಾಶ್ವತ ನಿಷೇಧ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಟಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕಂಪ್ಯೂಟರ್ ಆಪರೇಟರ್, ಇಬ್ಬರು ಜಿಲ್ಲಾ ಸಿಇಒಗಳು ಮತ್ತು ಇಬ್ಬರು ಮಹಿಳಾ ಗುಮಾಸ್ತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಶಿವಪುರಿ ಜಿಲ್ಲೆಯ ಪ್ರಸ್ತುತ ಸಿಇಒ ಗಿರಿರಾಜ್ ಶರ್ಮಾ ಅವರು ಪೊಹ್ರಿ ಜಿಲ್ಲೆಯ ಸಿಇಒ ಗಗನ್ ಬಾಜ್‌ಪೇಯ್ ವಿರುದ್ಧ ಕೊತ್ವಾಲಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ, ಜೊತೆಗೆ ರಾಜೀವ್ ಮಿಶ್ರಾ (ಮುರಾರ್ ಗ್ವಾಲಿಯರ್‌ನಲ್ಲಿ ನಿಯೋಜನೆಗೊಂಡಿದ್ದಾರೆ), ಶೈಲೇಂದ್ರ ಪರ್ಮಾರ್, ಆಗಿನ ಕಂಪ್ಯೂಟರ್ ಆಪರೇಟರ್ ಮತ್ತು ಕ್ಲೆರಿಕಲ್ ವರ್ಗ-III ಸಾಧನಾ ಚೌಹಾಣ್ ಮತ್ತು ಲತಾ ದುಬೆ (ಬ್ರಾಂಚ್ ಇನ್‌ಚಾರ್ಜ್) ದೂರು ದಾಖಲಾಗಿದೆ.

‘ಹೆಣದ ಮೇಲೆ ಹಣ’ ಮಾಡಿ​ದ ಹಗರಣವೂ ತನಿಖೆಗೆ: ಸಚಿವ ಪ್ರಿಯಾಂಕ್‌ ಖರ್ಗೆ