ಬೈಕ್‌ನಲ್ಲಿ ಹೋಗುತ್ತಾ ಯುವತಿಯರನ್ನು 'ಮಾಲ್ ಮಾಲ್' ಎಂದು ಚುಡಾಯಿಸುತ್ತಿದ್ದ ಇಬ್ಬರು ಯುವಕರನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಅವರಿಗೆ ವಿಶಿಷ್ಟ ರೀತಿಯಲ್ಲಿ ಶಿಕ್ಷೆ ನೀಡಿ, ಬೀದಿಯಲ್ಲಿ ಮೆರವಣಿಗೆ ಮಾಡಿಸಿ ಕ್ಷಮೆ ಕೇಳಿಸಿದ್ದು, ಈ ಘಟನೆಯ ವೀಡಿಯೋ ವೈರಲ್ ಆಗಿದೆ.

ಮಾಲ್ ಮಾಲ್ ಎಂದು ಕರೆದು ಚುಡಾಯಿಸುತ್ತಿದ್ದವರ ಹೆಡೆಮುರಿ ಕಟ್ಟಿದ ಪೊಲೀಸರು:

ಬೈಕ್‌ನಲ್ಲಿ ಸುತ್ತಾಡ್ತಾ ಮಾಲ್ ಮಾಲ್ ಎಂದು ಬೀದಿಯಲ್ಲಿ ಹೋಗುವ ಹೆಣ್ಣು ಮಕ್ಕಳನ್ನೆಲ್ಲಾ ಚುಡಾಯಿಸುತ್ತಿದ್ದ ಇಬ್ಬರು ಬೀದಿ ಕಾಮಣ್ಣರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ. ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಇಬ್ಬರು ಯುವಕರು ಬೈಕ್‌ನಲ್ಲಿ ಬೀದಿಯಲ್ಲಿ ಸಂಚರಿಸುತ್ತಿದ್ದು, ದಾರಿಯಲ್ಲಿ ಹೋಗುತ್ತಿರುವ ಕಾಲೇಜು ಯುವತಿಯರನ್ನೆಲ್ಲಾ ಮಾಲ್ ಮಾಲ್ ಎಂದು ಚುಡಾಯಿಸಲು ಶುರು ಮಾಡಿದ್ದಾರೆ. ಏ ಮಾಲ್ ಕೈಸಾ ಹೈ(ಈ ಮಾಲ್ ಹೇಗಿದೆ) ಎಂದೆಲ್ಲಾ ಕಾಮೆಂಟ್ ಮಾಡ್ತಾ ಬೀದಿಯಲ್ಲಿ ಈ ಪೋಲಿಗಳು ಸಾಗುತ್ತಿದ್ದಾರೆ. ಇವರ ಈ ಹುಚ್ಚುತನ ನೋಡಿ ಸಿಟ್ಟಿಗೆದ್ದ ಯಾರೋ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಪೊಲೀಸರು ಬಂದು ಅವರನ್ನು ಬಂಧಿಸಿ ಬೆಂಡೆತ್ತಿದ್ದು, ಆ ವೀಡಿಯೋ ಈಗ ವೈರಲ್ ಆಗುತ್ತಿದೆ.

ಅಂದಹಾಗೆ ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ನರಸಿಂಗ್‌ಪುರದ ಬಸ್ ನಿಲ್ದಾಣವೊಂದರಲ್ಲಿ. ಮಹಿಳೆಯರಿಗೆ ಅವಮಾನಕಾರಿಯಾಗಿ ಕಾಮೆಂಟ್ ಮಾಡ್ತಾ ಈ ಇಬ್ಬರು ಯುವಕರು ತಿರುಗಾಡಿದ್ದಾರೆ. ಅತ್ತಿತ್ತ ಓಡಾಡ್ತಿದ್ದ ಹೆಣ್ಣು ಮಕ್ಕಳಿಗೆ ಅವರು ಕಿರುಕುಳ ನೀಡ್ತಿರುವುದು ವೀಡಿಯೋದಲ್ಲಿ ಸೆರೆ ಆಗಿದೆ. ಆದರೆ ಮಧ್ಯಪ್ರದೇಶದ ಪೊಲೀಸರು ಈ ಪರಿಸ್ಥಿತಿಯನ್ನು ಬಹಳ ಸೊಗಸಾಗಿ ನಿಭಾಯಿಸಿದ್ದು, ಪೊಲೀಸರ ಕಾರ್ಯಕ್ಕೆ ತೀವ್ರ ಮೆಚ್ಚುಗೆ ವ್ಯಕ್ತವಾಗಿದೆ.

ಪೊಲೀಸರು ಮಾಡಿದ್ದೇನು?

ಘಟನೆಯ ಬಳಿಕ ಆ ಯುವಕರನ್ನು ಬಂಧಿಸಿದ ಪೊಲೀಸರು ಅವರಿಗೆ ತಲೆ ತುಂಬಾ ಸಣ್ಣ ಸಣ್ಣ ಜುಟ್ಟು ಹಾಕಿದ್ದು, ಅವರನ್ನು ಬೀದಿಯಲ್ಲಿ ಮೆರವಣಿಗೆ ಮಾಡಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಯೇ ಅವರನ್ನು ಬೀದಿಯಲ್ಲಿ ಕರೆದುಕೊಂಡು ಹೋಗುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದ್ದು, ನಂತರ ಅವರಿಗೆ ಬೀದಿಯಲ್ಲೇ ಕೂರಿಸಿ ಅವರ ಕೈನಿಂದ ಕ್ಷಮೆ ಕೇಳಿಸಲಾಗಿದೆ. ವೈರಲ್ ಆದ ವೀಡಿಯೋದಲ್ಲಿ ಆರೋಪಿಗಳು, ನಾವು ಹೆಣ್ಣು ಮಕ್ಕಳ ಬಗ್ಗೆ ಕೆಟ್ಟ ಕಾಮೆಂಟ್ ಮಾಡಿ ವೀಡಿಯೋ ಮಾಡಿದ್ದೆವು. ನಮ್ಮಿಂದ ತಪ್ಪಾಗಿದ್ದು, ಈ ಬಗ್ಗೆ ನಾವು ಕ್ಷಮೆ ಕೇಳುತ್ತೇವೆ ಇನ್ನು ಮುಂದೆ ನಾವು ಹೀಗೆ ಮಾಡುವುದಿಲ್ಲ ಎಂದು ಅವರು ಕೈ ಮುಗಿದ್ದು ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ: ತಾಯಿಯ ಸಾವಿಗೂ ಬರಲಾಗದಷ್ಟು ಬ್ಯುಸಿಯಾದ ಮಗ: ವೀಡಿಯೋ ಕರೆಯಲ್ಲೇ ಅಂತಿಮ ದರ್ಶನ

ವೀಡಿಯೋ ನೋಡಿದ ಅನೇಕರು ಪೊಲೀಸರ ಕ್ರಮಕ್ಕೆ ಬಹಳ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋ ನೋಡಿ ನಮಗೆ ಸಮಾಧಾನ ಆಯ್ತು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಕೊನೆಯಲ್ಲಿ ಆರೋಪಿಗಳಿಗೆ ಪೊಲೀಸರು ಮಾಡಿದ ಹೇರ್ ಸ್ಟೈಲ್ ಚೆನ್ನಾಗಿತ್ತು ಎಂದು ಇನ್ನೂ ಕೆಲವರು ಕಾಮೆಂಟ್ ಮಾಡಿದ್ದಾರೆ. ಕ್ಯಾಮರಾ ಮುಂದೆ ಇಷ್ಟು ಮಾಡಿರುವ ಪೊಲೀಸರು ಕ್ಯಾಮರಾ ಹಿಂದೆ ಇನ್ನು ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿರ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: 2ನೇ ಮದ್ವೆ ಸುದ್ದಿಯ ನಡುವೆ ಇಬ್ಬರು ಮಕ್ಕಳ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಧನುಷ್

ಬಹುತೇಕ ಕಡೆಗಳಲ್ಲಿ ವಿಶೇಷವಾಗಿ ಸಣ್ಣಪುಟ್ಟ ನಗರಗಳಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಅನೇಕ ಪುರುಷರು ಚುಡಾಯಿಸುವುದು ತಮಾಷೆಯ ಭಾಗವೆಂದೇ ಭಾವಿಸಿದ್ದಾರೆ. ಆದರೆ ಅವರ ಮನೆಯ ಹೆಣ್ಣು ಮಕ್ಕಳಿಗೆ ಈ ರೀತಿ ಆದಾಗ ಅವರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ. ಮಾಲ್ ಮಾಲ್ ಎಂದು ಕರೆದು ಛೇಡಿಸುವುದಕ್ಕೆ ಹೆಣ್ಣುಮಕ್ಕಳೇನು ವಸ್ತುಗಳೇ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ವೀಡಿಯೋ ಈಗ ಭಾರಿ ವೈರಲ್ ಆಗಿದ್ದು, ಪೊಲೀಸರ ಕಾರ್ಯಕ್ಕೆ ಸ್ಪಂದನೆ ವ್ಯಕ್ತವಾಗಿದೆ.

View post on Instagram