Asianet Suvarna News Asianet Suvarna News

ಅಟಲ್ ಸುರಂಗ ಹೆಸರು ಬದಲಿಸುವ ನಿರ್ಧಾರ ಕೈಬಿಟ್ಟ ಹಿಮಾಚಲ ಕಾಂಗ್ರೆಸ್!

ಅಟಲ್ ಸುರಂಗ ಹೆಸರು ಬದಲಿಸುವ ನಿರ್ಧಾರವನ್ನು ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ. ಬಿಜೆಪಿ ತೀವ್ರ ವಿರೋಧದ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

We are not renaming Atal Tunnel says Himachal Pradesh Cm Sukhwinder Singh Sukhu after huge protest from BJP ckm
Author
First Published Dec 15, 2022, 4:35 PM IST

ಶಿಮ್ಲಾ(ಡಿ.15):  ಹಿಮಾಚಲ ಪ್ರದೇಶದಲ್ಲಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ಮಹತ್ವದ ನಿರ್ಧಾರಕ್ಕೆ ಹಿನ್ನಡೆಯಾಗಿದೆ. ನೆನೆಗುದಿಗೆ ಬಿದ್ದಿದ್ದ ಮನಾಲಿ-ಲೇಹ್‌ ನಡುವಿನ ಸುರಂಗ ಮಾರ್ಗವನ್ನು ಪೂರ್ಣಗೊಳಿಸಿದ ಮೋದಿ ಸರ್ಕಾರ ಅಟಲ್ ಸುರಂಗ ಎಂದು ಹೆಸರಿಟ್ಟಿತ್ತು. ಇದೀಗ ಈ ಹೆಸರು ಬದಲಿಸಿ ಸೋನಿಯಾ ಗಾಂಧಿ ಹೆಸರಿಡಲು ಕಾಂಗ್ರೆಸ್ ಮುಂದಾಗಿತ್ತು. ಆದರೆ ಬಿಜೆಪಿ ಸೇರಿದಂತೆ ಹಲವರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಈ ನಿರ್ಧಾರವನ್ನು ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ. ಇದೇ ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಗೌರವವಿದೆ. ಅಟಲ್ ಸುರಂಗದ ಹೆಸರು ಬದಲಿಸುವ ಯಾವುದೇ ಪ್ರಸ್ತಾಪ ಕಾಂಗ್ರೆಸ್ ಸರ್ಕಾರದ ಮುಂದಿಲ್ಲ. ಆದರೆ ಈ ಸುರಂಗ ಮಾರ್ಗಕ್ಕೆ ಸೋನಿಯಾ ಗಾಂಧಿ ಅಡಿಗಲ್ಲು ಹಾಕಿದ್ದರು. ಕಾಂಗ್ರೆಸ್ ಸರ್ಕಾರ ಈ ಯೋಜನೆಯ ರೂಪುರೇಶೆ ಸಿದ್ದಪಡಿಸಿತ್ತು. ಆದರೆ ಬಿಜೆಪಿ ಎಲ್ಲಾ ಕ್ರೆಡಿಟ್ ಪಡೆಯುತ್ತಿದೆ ಎಂದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ.

ಅಟಲ್ ಸುರಂಗ ಮಾರ್ಗಕ್ಕೆ ಸೋನಿಯಾ ಗಾಂಧಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಆದರೆ ಸೋನಿಯಾ ಗಾಂಧಿ ಹೆಸರಿದ್ದ ಅಡಿಗಲ್ಲುನ್ನು ಬಿಜೆಪಿ ಕಿತ್ತು ಹಾಕಿದೆ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಹಜವಾಗಿ ಆಕ್ರೋಶ ಹೆಚ್ಚಾಗಿದೆ. ಸೋನಿಯಾ ಗಾಂಧಿ ಹೆಸರಿಡಲು ಕಾರ್ಯಕರ್ತರು ಆಗ್ರಹಿಸಿದ್ದಾರೆ. ಸೋನಿಯಾ ಗಾಂಧಿ ಸೇವೆಯನ್ನು ಬಿಜೆಪಿ ಮರೆತಿದೆ ಎಂದು ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ.

ವಿಶ್ವದ ಅತೀ ಎತ್ತರದ ಅಟಲ್‌ ಟನಲ್‌ನ ಎಂಟು ವಿಶೇಷತೆಗಳಿವು!

ಅಟಲ್ ಸುರಂಗ ಹೆಸರನ್ನು ಬದಲಿಸುವ ಮಾತುಗಳು ಕೇಳಿಬಂದ ಬೆನ್ನಲ್ಲೇ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಅಟಲ್ ಸುರಂಗ ಮಾರ್ಗವನ್ನು ಕಾಂಗ್ರೆಸ್ ಸರ್ಕಾರ ನಿರ್ಲಕ್ಷಿಸಿತ್ತು. ಸೋನಿಯಾ ಗಾಂಧಿ ಭೂಮಿ ಪೂಜೆ ಮಾಡಿದ್ದಾರೆ ನಿಜ. ಅದು ಬಿಟ್ಟು ಇನ್ನೇನು ಮಾಡಿದ್ದಾರೆ. ಭೂಮಿ ಪೂಜೆ ಬಳಿಕ ಯೋಜನೆ ಕಡೆ ತಿರುಗಿ ನೋಡಿಲ್ಲ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಈ ಯೋಜನೆಗೆ ಮತ್ತೆ ಚಾಲನೆ ನೀಡಲಾಯಿತು. ಬಳಿಕ ಯುಪಿಎ  ಸರ್ಕಾರ ಬಂದ ಬಳಿಕ ಯೋಜನೆ ಪೂರ್ಣಗೊಳಿಸುವ ಕಾಲಾವಧಿ ಹಾಗೂ ಅವಕಾಶ ಎಲ್ಲವೂ ಇತ್ತು. ಆದರೆ ಕಾಂಗ್ರೆಸ್ ಯೋಜನೆ ಪೂರ್ಣಗೊಳಿಸುವ ಗೋಜಿಗೆ ಹೋಗಿಲ್ಲ. ಇದೀಗ ಅಡಿಗಲ್ಲು ಹಾಕಿದ್ದೇವೆ ಎಂದು ಇಡೀ ಸುರಂಗ ಕ್ರೆಡಿಟ್ ತೆಗೆದುಕೊಳ್ಳಲು ಬಯಸುತ್ತಿದೆ ಎಂದು ಬಿಜೆಪಿ ಹೇಳಿತ್ತು. 

2005ರ ಅಂದಾಜಿನ ಪ್ರಕಾರ ಒಂಬತ್ತೂವರೆ ಕೋಟಿ ರು.ಗಳಲ್ಲಿ ಸುರಂಗ ಕಾಮಗಾರಿ ಮುಗಿಯಬೇಕಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಕಾಲ ಕಾಲಕ್ಕೆ ಹಣ  ಬಿಡುಗಡೆ ಮಾಡಿ ಗುಳುಂ ಮಾಡಿದೆ. ಆದರೆ ಕಾಮಾಗಾರಿ ಮಾಡಲೇ ಇಲ್ಲ. ವಾಜಪೇಯಿ ಪ್ರಯತ್ನದಿಂದ ಕೆಲಸಗಳು ಚುರುಕುಗೊಂಡಿತ್ತು. ಆದರೆ ವಾಜಪೇಯಿ ಸರ್ಕಾರದ ಬಳಿಕ ಕಾಂಗ್ರೆಸ್ ಏನೂ ಮಾಡಿಲ್ಲ. ಹೀಗಾಗಿ  2013-14ರವ​ರೆಗೆ ಕೇವಲ 1300 ಮೀ. ಕಾಮ​ಗಾರಿ ಮುಗಿ​ದಿತ್ತು. ಮೋದಿ ಸರ್ಕಾರ 2014ರಲ್ಲಿ ಈ ಯೋಜನೆಗೆ ಚುರುಕು ನೀಡಿತು. ವರ್ಷ​ಕ್ಕೆ 300 ಮೀ. ನಡೆ​ಯು​ತ್ತಿದ್ದ ನಿರ್ಮಾ​ಣ​ವ​ನ್ನು 1400 ಮೀ.ಗೆ ಹೆಚ್ಚಿ​ಸಿತು. ಈ ಕಾರಣ 2020ಕ್ಕೇ ಯೋಜನೆ ಮುಗಿ​ಸಿತು. 3200 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಾಗಾರಿ ಪೂರ್ಣಗೊಂಡಿತು. 

ಅಟಲ್ ಕನಸಿನ ಯೋಜನೆ, ವಿಶ್ವದ ಅತಿ ದೊಡ್ಡ ಸುರಂಗ ಮಾರ್ಗ ಉದ್ಘಾಟಿಸಿದ ಮೋದಿ!

ಸಮುದ್ರಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿ ನಿರ್ಮಾಣವಾದ ‘ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ’ ಎಂಬ ಹಿರಿಮೆಗೆ ಪಾತ್ರವಾಗಿರುವ 9.02 ಕಿ.ಮೀ ಉದ್ದದ ಮನಾಲಿ-ಲೇಹ್‌ ನಡುವಿನ ‘ಅ​ಟಲ್‌ ಸುರಂಗ ಮಾರ್ಗ’ವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದರು. ಅಟಲ್ ಸುರಂಗ ಎಂದು ಹೆಸರಿಡಲಾಗಿದೆ. 
 

Follow Us:
Download App:
  • android
  • ios