ಮುಂಬೈ ಪಾರ್ಕ್‌ಗೆ ಇಟ್ಟಿದ್ದ ಟಿಪ್ಪು ಹೆಸರು ಕಿತ್ತೆಸೆದ ಸಿಎಂ ಶಿಂಧೆ, ಸಿಹಿ ಹಂಚಿ ನಿವಾಸಿಗಳ ಸಂಭ್ರಮ!
ಮಹಾರಾಷ್ಟ್ರದಲ್ಲಿ ಈ ಹಿಂದಿನ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಮಲಾಡ್ ಪಾರ್ಕ್‌ಗೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರನ್ನು ಬಿಜೆಪಿ ಶಿವಸೇನೆ ಮೈತ್ರಿ ಸರ್ಕಾರ ಕಿತ್ತೆಸೆದಿದೆ. ಇದರಿಂದ ಮುಂಬೈ ಪಾರ್ಕ್‌ಗೆ ಇದ್ದ ಟಿಪ್ಪು ಹೆಸರು ಅಳಿಸಿಹೋಗಿದೆ.
ಮುಂಬೈ(ಜ.27): ಕರ್ನಾಟಕದಲ್ಲಿ ಟಿಪ್ಪು ವಿವಾದ ಸದ್ಯಕ್ಕೆ ತಣ್ಣಗಾಗಿದೆ. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಾದ ಮತ್ತೆ ಭುಗಿಲೇಳುವ ಎಲ್ಲಾ ಸಾಧ್ಯತೆ ಇದೆ. ಟಿಪ್ಪು ಜಯಂತಿ,ಟಿಪ್ಪು ಪಠ್ಯ, ಟಿಪ್ಪು ಪ್ರತಿಮೆ ಸೇರಿದಂತೆ ಹಲವು ವಿಚಾರಗಳು ಭಾರಿ ಕೋಲಾಹಲ ಎಬ್ಬಿಸಿದೆ. ಇದೀಗ ಮಹಾರಾಷ್ಟ್ರದಲ್ಲಿ ಎದ್ದಿದ್ದ ತಿಪ್ಪು ವಿವಾದಕ್ಕೆ ತಾರ್ಕಿಕ ಅಂತ್ಯ ನೀಡಲಾಗಿದೆ. ಕಾಂಗ್ರೆಸ್, ಎನ್‌ಸಿಪಿ ಹಾಗೂ ಶಿವಸೇನೇ ನೇೃತ್ವದ ಮೈತ್ರಿ ಸರ್ಕಾರ ಮುಂಬೈನ ಮಲಾಡ್ ಪಾರ್ಕ್‌ಗೆ ಟಿಪ್ಪು ಹೆಸರಿಟ್ಟಿತ್ತು. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಸರ್ಕಾರ ಪತನಗೊಂಡು ಬಿಜೆಪಿ ಶಿವಸೇನೆ ಮೈತ್ರಿ ಸರ್ಕಾರ ರಚನೆಯಾದರೂ ಪ್ರತಿಭಟನೆ ನಡೆಯುತ್ತಲೇ ಇತ್ತು. ಇದೀಗ ಮುಖ್ಯಮಂತ್ರಿ ಎಕನಾಥ್ ಶಿಂಧೆ ಮಹತ್ವದ ಸಭೆ ನಡೆಸಿ ಮಲಾಡ್ ಪಾರ್ಕ್‌ಗೆ ಇಟ್ಟಿದ್ದ ಟಿಪ್ಪು ಹೆಸರನ್ನು ಕಿತ್ತು ಹಾಕಿದೆ.
ಮಲಾಡ್ ವಲಯದಲ್ಲಿನ ಸುಂದರ ಪಾರ್ಕ್‌ಗೆ ಅಘಾಡಿ ಸರ್ಕಾರ ಟಿಪ್ಪು ಹೆಸರಿಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು. ಈ ಸೂಚನೆಯಂತೆ ಜಿಲ್ಲಾಡಳಿತ ಮಲಾಡ್ ಪಾರ್ಕ್‌ಗೆ ಯಾವುದೇ ಸಂಬಂಧವಿಲ್ಲದ ಟಿಪ್ಪು ಹೆಸರಿಟ್ಟಿತ್ತು. ಇದರ ವಿರುದ್ಧ ಸಕಲ ಹಿಂದೂ ಸಮಾಜ ಸೇರಿದಂತೆ ಹಲವು ಸಂಘಟನೆಗಳು ತೀವ್ರ ಪ್ರತಿಭಟನೆ ಮಾಡಿತ್ತು.
ಟಿಪ್ಪು ನಿಜ ಕನಸುಗಳು ಪುಸ್ತಕ ಮೇಲಿದ್ದ ತಡೆಯಾಜ್ಞೆ ತೆರವು, ಕೋರ್ಟ್‌ನಲ್ಲಿ ಕಾರ್ಯಪ್ಪಗೆ ಬೃಹತ್ ಗೆಲುವು!
ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಈ ಪ್ರತಿಭಟನೆಗೆ ಸೊಪ್ಪು ಹಾಕದೆ ಮುನ್ನುಗ್ಗಿತು. ಉದ್ಧವ್ ಠಾಕ್ರೆ ಸರ್ಕಾರ ಪತನಗೊಂಡು ಶಿವಸೇನೆ ಹಾಗೂ ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹಿಂದೂ ಸಂಘಟನೆಗಳ ನಿಯೋಗ ಮುಖ್ಯಮಂತ್ರಿ ಏಕನಾಥ್ ಶಿಂಧೆ ಭೇಟಿಯಾಗಿ ಮನವಿ ಸಲ್ಲಿಸಿತ್ತು.
ಈ ಮನವಿಗೆ ಸ್ಪಂದಿಸಿದ ಏಕನಾಥ್ ಶಿಂಧೆ, ಮಹತ್ವದ ಸಭೆ ಕರೆದು ಮಲಾಡ್ ವಲಯದಲ್ಲಿ ಪಾರ್ಕ್‌ಗೆ ಇಟ್ಟಿದ್ದ ಟಿಪ್ಪು ಹೆಸರನ್ನು ಕಿತ್ತೆಸೆದಿದ್ದಾರೆ. ಇದೀಗ ಈ ಪಾರ್ಕ್‌ಗೆ ಹೊಸ ಹೆಸರು ಸೂಚಿಸಲು ಮನವಿ ಮಾಡಿದ್ದಾರೆ. ಈಗಾಗಲೇ ಬಿಜೆಪಿ ಡಾ.ಬಿಆರ್ ಅಂಬೇಡ್ಕರ್ ಹಾಗೂ ಅಶ್ಫಾಖುಲ್ಲಾ ಖಾನ್ ಹೆಸರನ್ನು ಸೂಚಿಸಿದೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಹೊಸ ಹೆಸರು ಇಡುವುದಾಗಿ ಶಿಂಧೆ ಹೇಳಿದ್ದಾರೆ.
ಬಿಜೆಪಿ ಜಿಲ್ಲಾ ಉಸ್ತುವಾರಿ ಸಚಿವ ಮಂಗಲ್ ಪ್ರಭಾತ್ ಲೋಧ ಇದೀಗ ಈ ಪಾರ್ಕ್‌ಗೆ ಹಾಕಿದ್ದ ಟಿಪ್ಪು ನಾಮಫಲಕವನ್ನು ತೆಗಿದ್ದಾರೆ. ಹೊಸ ಹೆಸರಿಗಾಗಿ ಹೊಸ ನಾಮಪಲಕ ರೆಡಿ ಮಾಡಿದ್ದಾರೆ. ಈ ಮೂಲಕ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ.
ಈಗ ಟಿಪ್ಪು ಸುಲ್ತಾನ್ ಪ್ರತಿಮೆ ರಾಜಕೀಯ: ತನ್ವೀರ್ ಹೇಳಿಕೆಗೆ ಪರ-ವಿರೋಧ
ಕರ್ನಾಟಕದಲ್ಲಿ ಟಿಪ್ಪು ಹೆಸರು ಭಾರಿ ಕೋಲಾಹಲವನ್ನೇ ಸೃಷ್ಟಿಸಿದೆ. ಇತ್ತೀಚೆಗೆ ರಂಗಾಣಯ ಟಿಪ್ಪ ನಿಜಕನಸುಗಳು ನಾಟಕ ಪ್ರದರ್ಶನ ಮಾಡಿತ್ತು. ಜೊತೆಗೆ ಪುಸ್ತಕ ಬಿಡುಗಡೆ ಮಾಡಿತ್ತು. ಇದು ಭಾರಿ ವಿವಾದ ಸೃಷ್ಟಿಸಿತ್ತು. ಇದಕ್ಕೂ ಮೊದಲು ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಒಡೆಯರ್ ಎಕ್ಸ್‌ಪ್ರೆಸ್ ಎಂದು ಬದಲಿಸಲಾಗಿತ್ತು. ಇದು ಭಾರಿ ಕೋಲಾಹಲ ಸೃಷ್ಟಿಸಿತ್ತು. ಕರ್ನಾಟಕದಲ್ಲಿ ಟಿಪ್ಪು ವಿಚಾರ ಪ್ರತಿ ತಿಂಗಳು ಮುನ್ನಲೆಗೆ ಬರುತ್ತಲೇ ಇವೆ. ಚುನಾವಣೆ ಕಾರಣ ಟಿಪ್ಪು ಪ್ರಸ್ತಾಪ ಹಾಗೂ ವಿವಾದ ಹೆಚ್ಚಾಗುವ ಸಾಧ್ಯತೆ ಇದೆ.